ರಜತೋತ್ಸವ ಸುಜ್ಞಾನನಿಧಿ ಶಿಷ್ಯವೇತನ ಯೋಜನೆಯ ಮಾಹಿತಿ ಪತ್ರ ( 2020-21)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ).ಯ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ, ಯೋಜನೆಯ ಪಾಲುದಾರ ಕುಟುಂಬದ ಸ್ವಸಹಾಯ/ ಪ್ರಗತಿಬಂಧು ಸಂಘಗಳ, ಸದಸ್ಯರ ಆರ್ಥಿಕವಾಗಿ ಹಿಂದುಳಿದ ಸದಸ್ಯರ ಮಕ್ಕಳ ತಾಂತ್ರಿಕ ಮತ್ತು ವೃತ್ತೀಪರ ಶಿಕ್ಷಣಕ್ಕೆ ನೆರವಾಗಲು ಅಂದಿನ ಉಪರಾಷ್ಟ್ರಪತಿ ಶ್ರೀ ಬೈರೋನ್ ಸಿಂಗ್ ಶೇಖಾವತ್ ರವರು 2007ರಲ್ಲಿ ಸುಜ್ಞಾನನಿಧಿ  ಶಿಷ್ಯವೇತನ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

        ಎರಡು  ಮತ್ತು  ಮೂರು ವರ್ಷದ ಅವಧಿಯ  ತಾಂತ್ರಿಕ (ಡಿಪ್ಲೋಮ, ಪ್ಯಾರಮೆಡಿಕಲ್ ಸಂಬಂಧಿತ ಮೂರು ವರ್ಷಕ್ಕೆ ಮೇಲ್ಪಟ್ಟ ಅವಧಿಯ ಕೋರ್ಸ್ ಗಳು  ಸೇರಿ) ಮತ್ತು ವೃತ್ತೀಪರ ಶಿಕ್ಷಣಗಳಿಗೆ (ಕಾನೂನು ಹಾಗೂ ನರ್ಸಿಂಗ್ ಶಿಕ್ಷಣ ಸೇರಿ) ಶಿಷ್ಯವೇತನ  ರೂ.400/-ರಂತೆಯೂ, ಮೂರು ವರ್ಷಗಳಿಗೂ ಮೇಲ್ಪಟ್ಟ (ನಾಲ್ಕು ವರ್ಷಗಳ ಡಿಪ್ಲೋಮ, ಎಲ್ ಎಲ್.ಬಿ, ಬಿ.ಎಸ್ಸಿ.ನರ್ಸಿಂಗ್ ಸಂಬಂಧಿತ ಕೋರ್ಸ್ ಹೊರತು ಪಡಿಸಿ) ಅವಧಿಗೆ ಮಾಸಿಕ ರೂ.1,000/- ದಂತೆಯೂ ಶಿಷ್ಯವೇತನವನ್ನು ಪಾವತಿಸಲಾಗುತ್ತಿದೆ.

ಕರ್ನಾಟಕ ರಾಜ್ಯಾದ್ಯಂತ ಇದುವರೆಗೂ 39,584 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡಿರುತ್ತಾರೆ. ಸದ್ರಿ ವಿದ್ಯಾರ್ಥಿಗಳಿಗೆ ರೂ. 50.17 ಕೋಟಿ ಶಿಷ್ಯವೇತನವನ್ನು  ಈವರೆಗೆ ವಿತರಿಸಲಾಗಿದೆ.

 

                ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು Website:www.skdrdpindia.org ನಲ್ಲಿ online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಬೇರೆ ಯಾವುದೇ ಕಡೆಗಳಲ್ಲಿ ಈ ಅರ್ಜಿಗಳು ಲಭ್ಯವಿರುವುದಿಲ್ಲ. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಪ್ರಥಮ ವರ್ಷದಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಅರ್ಜಿ ಸಲ್ಲಿಸುವ ಮೊದಲು  ಈ  ಮಾಹಿತಿ ಪತ್ರವನ್ನು ಸರಿಯಾಗಿ ಓದಿಕೊಂಡು ಅಗತ್ಯವಾದ ಮಾಹಿತಿಯನ್ನು ಹಾಗೂ ದಾಖಲಾತಿಗಳನ್ನು ಸಂಗ್ರಹಿಸಿಕೊಂಡ ನಂತರವೇ ಅರ್ಜಿ ಸಲ್ಲಿಸಬಹುದಾಗಿದೆ.

2020-21ನೇ ಸಾಲಿಗೆ ಸುಜ್ಞಾನನಿಧಿ ಶಿಷ್ಯವೇತನವನ್ನು ಪಡೆದುಕೊಳ್ಳಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

 

 1. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.), ಪ್ರಾಯೋಜಿಸುತ್ತಿರುವ ಪ್ರಗತಿಬಂಧು/ ಸ್ವಸಹಾಯ ತಂಡಗಳಲ್ಲಿ 30.06.2019 ಕ್ಕಿಂತ ಮೊದಲು ಪ್ರಾರಂಭಿಸಲಾದ ಸಂಘದ ಸದಸ್ಯರಾಗಿದ್ದು, ವ್ಯವಹಾರದಲ್ಲಿ ಎಸ್/ಎ/ಬಿ ಶ್ರೇಣಿಯಲ್ಲಿರುವ ಗುಂಪುಗಳ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು. (ತಂದೆ, ತಾಯಿ ಅಥವಾ ಒಂದೇ ಮನೆಯಲ್ಲಿ ವಾಸ ಮಾಡುವ ಯಾವುದೇ ಸದಸ್ಯರು ಕಡ್ಡಾಯವಾಗಿ ಸಂಘದ ಸದಸ್ಯರಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ)
 2. ವಿದ್ಯಾರ್ಹತೆ: ಅರ್ಹ ಮಕ್ಕಳು ಎಸ್.ಎಸ್.ಎಲ್.ಸಿ / ಪಿಯುಸಿ ಅಥವಾ ಅರ್ಹ ಕೋರ್ಸಿನ ಸೇರ್ಪಡೆಗೆ ನಿಗಧಿಪಡಿಸಿದ ಪರೀಕ್ಷೆಗಳಲ್ಲಿ ತೇರ್ಗಡೆಹೊಂದಿರಬೇಕು.
 3. ಪ್ರಥಮ ವರ್ಷದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. (ವಿದ್ಯಾರ್ಥಿಯು ಸಂಬಂಧಿಸಿದ ಕೋರ್ಸಿಗೆ 2020ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆಅಥವಾ ಮೊದಲನೆಯ ಸೆಮಿಸ್ಟರ್ ಗೆ ಸೇರ್ಪಡೆಗೊಂಡಿರಬೇಕು.)
 4. ಒಂದು ಕುಟುಂಬದಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಲಾಗುವುದು.
 5. ಆಯ್ಕೆಯಾದ ವಿದ್ಯಾರ್ಥಿ/ನಿಯು ರಾಷ್ಟ್ರೀಕೃತ ಬ್ಯಾಂಕಿನ ಉಳಿತಾಯ ಖಾತೆಯನ್ನು ಹೊಂದಿರಬೇಕು. (ಸುಜ್ಞಾನನಿಧಿ websiteನಲ್ಲಿದಾಖಲಾಗಿರುವ ಬ್ಯಾಂಕ್ ಗಳಲ್ಲಿ ಪಾಸ್ ಪುಸ್ತಕ ಹೊಂದಿದವರಿಗೆ ಮಾತ್ರ ಅವಕಾಶ.) upload  ಮಾಡುವ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಸಹಿ ಮತ್ತ್ತು ಮುದ್ರೆ ಕಡ್ಡಾಯವಾಗಿ ಇರಬೇಕು. Account Number, IFSC code, ಪ್ರಸ್ತುತ ಮೂರು ತಿಂಗಳಿನಿಂದ ಬದಲಾವಣೆಯಾಗಿದೆಯೇ ಎಂದು ಖಾತ್ರಿ ಪಡಿಸಿಕೊಂಡು, ಬದಲಾವಣೆಯಾಗಿದ್ದಲ್ಲಿ ಸರಿಪಡಿಸಿದ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಿಂದ  ದೃಢೀಕರಣ ಪಡೆದುಕೊಳ್ಳುವುದು. ಸದ್ರಿ ಖಾತೆಯಲ್ಲಿ ವ್ಯವಹಾರಗಳು ಪ್ರಸ್ತುತ ಮೂರು ತಿಂಗಳಿನಿಂದ ಚಾಲ್ತಿಯಲ್ಲಿರಬೇಕು.
 6. ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆಯ್ಕೆ ಮಾಡಬಹುದಾದ ಕೋರ್ಸ್ ಗಳು:

BE,  B.TECH  MBBS  BAMS, BDS, BHMS, BVA,  BNYS, BVSC, MBA, D.Ed,B.Ed NURSING(General), Bsc.NURSING, ITI,LABTECHNICIAN, DIPLOMA & DIPLOMA UNDER COURSES, LLB, PARAMEDICAL SCIENCE, Bsc.HORTICULTURE Bsc.AGRI. BSc.FORESTRY, BSC.FISHERIES, PHARM.D, PHYSIOTHERAPY, DIPLOMA AGRI, DIPLOMA ARCHITECTURE, B.PHARM, D.PHARM

 

ಅನರ್ಹತೆ:

ಶಿಷ್ಯವೇತನ ಪಡೆದ ನಂತರ ವಿನಾಕಾರಣ ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡು ಮುಂದಿನ ತರಗತಿಗೆ ಹೋಗಲು ಅರ್ಹವಿಲ್ಲದ, ಅಂತೆಯೇ ಶಿಕ್ಷಣವನ್ನು ಮಧ್ಯದಲ್ಲೇ ಕೈಬಿಟ್ಟು ಬೇರೆ ಶಿಕ್ಷಣಕ್ಕಾಗಲಿ, ಬೇರೆ ವೃತ್ತಿಗಾಗಲಿ ಸೇರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿಯನ್ನು ಮುಂದುವರಿಸಲಾಗುವುದಿಲ್ಲ. ಹಾಗೂ ಇವರು ಈಗಾಗಲೇ ಪಡಕೊಂಡ ಸುಜ್ಞಾನನಿಧಿ ಶಿಷ್ಯವೇತನವನ್ನು ಮರಳಿಸಲು ಬದ್ಧರಾಗಿರಬೇಕು.

 1. ಯೋಜನೆಯ ಕಾರ್ಯಕರ್ತರ ಮಕ್ಕಳಿಗೆಸುಜ್ಞಾನನಿಧಿ ಶಿಷ್ಯವೇತನ ಲಭ್ಯವಿರುವುದಿಲ್ಲ.
 2. ಸುಜ್ಞಾನನಿಧಿ ಶಿಷ್ಯವೇತನವು ಪಿಯುಸಿ, ಪದವಿ, ಬಿಬಿಎಂ, ಬಿಸಿಎ, ಇತ್ಯಾದಿ ಶಿಕ್ಷಣಗಳಿಗೆ ಅನ್ವಯವಾಗುವುದಿಲ್ಲ. ಈ ಮೇಲೆ ತಿಳಿಸಿರುವ ಕೋರ್ಸ್ ಗಳಿಗೆ ಮಾತ್ರ ಅವಕಾಶ.
 3. ತಾಂತ್ರಿಕ, ವೃತ್ತೀಪರ ಕೋರ್ಸಿಗೆ ಒಂದು ಬಾರಿ ಶಿಷ್ಯವೇತನ ಪಡೆದವರು ಎರಡನೇ ಬಾರಿಗೆ ಇತರ ಕೋರ್ಸ್ ಗಳ ಅಧ್ಯಯನಕ್ಕೆ ಶಿಷ್ಯವೇತನಪಡೆಯಲು ಅರ್ಹರಾಗಿರುವುದಿಲ್ಲ. (ಉದಾ: ಡಿ.ಇಡ್. ಪಡೆದು ಬಿ.ಇಡ್ ಶಿಷ್ಯವೇತನ ಪಡೆಯಲು ಅವಕಾಶವಿರುವುದಿಲ್ಲ. ಡಿಪ್ಲೋಮಕ್ಕೆ  ಶಿಷ್ಯವೇತನ ಪಡೆದು ಬಿ.ಇ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ. (ನೇರವಾಗಿ 2 ನೇ ವರ್ಷಕ್ಕೆ ಸೇರ್ಪಡೆಗೊಳ್ಳುವುದರಿಂದ).
 4. ಅಂಚೆ ತೆರಪಿನ ಮೂಲಕ ಶಿಕ್ಷಣ ಪಡೆಯುವ ವಿದ್ಯಾರ್ಥಿ/ನಿಗಳಿಗೆ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ.

 

 1. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಷನ್ ಟ್ರಸ್ಟ್ ನೀಡುವ ಶಿಷ್ಯವೇತನ ಪಡೆಯುವ ವಿದ್ಯಾರ್ಥಿ/ನಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ಪಡೆಯಲು ಅವಕಾಶ ಇರುವುದಿಲ್ಲ.
 2. ವಿದ್ಯಾರ್ಥಿ/ನಿಗಳು ಅರ್ಜಿಯನ್ನು ಭರ್ತಿ ಮಾಡಿ ಈ ಕೆಳಗೆ ನಮೂದಿಸಿದ ದಿನಾಂಕದ ಒಳಗೆ Website ನಲ್ಲಿಅರ್ಜಿಯನ್ನು ಸಲ್ಲಿಸತಕ್ಕದ್ದು. ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

 

Websiteನಲ್ಲಿ  ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭ ಗಮನಿಸಬೇಕಾದ ಅಂಶಗಳು:

  ಸುಜ್ಞಾನನಿಧಿ ಶಿಷ್ಯವೇತನ ಪಡೆಯ ಬಯಸುವ ವಿದ್ಯಾರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬೇಕಾಗಿರುವುದರಿಂದ, Websiteನಲ್ಲಿ ಕೆಲವೊಂದು ದಾಖಲೆಗಳನ್ನು ಅಫ್ ಲೋಡ್ ಮಾಡುವ ಅವಶ್ಯಕತೆ ಇದ್ದು, ದಾಖಲಾತಿಗಳ ಮೂಲ ಪ್ರತಿಯನ್ನು (Original copy) scan ಮಾಡಿಕೊಂಡು ವಿವರಗಳನ್ನು ಗಮನಿಸಿಕೊಂಡ ನಂತರವೇ Submit ಮಾಡುವುದು. Upload ಮಾಡುವ ದಾಖಲಾತಿಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ಅರ್ಜಿ ಭರ್ತಿಗೊಳಿಸಿದ ನಂತರ ಎಲ್ಲಾ ದಾಖಲಾತಿಗಳು ಸರಿಯಾಗಿದೆಯೇ? ಎಂದು ಖಾತ್ರಿ ಪಡಿಸಿಕೊಂಡು ಕಳುಹಿಸಿಕೊಡುವುದು. ಯಾವುದೇ ತಪಾವತುಗಳು ಬಾರದ ರೀತಿಯಲ್ಲಿ ಅರ್ಜಿಯನ್ನು ಭರ್ತಿಗೊಳಿಸುವುದು.  ಒಮ್ಮೆ Online ನಲ್ಲಿ ಎಂಟ್ರಿ ಮಾಡಿ Upload ಮಾಡಿದ ನಂತರ ಮತ್ತೆ ಕರೆಕ್ಷನ್ ಮಾಡಲು ಅವಕಾಶ ಇರುವುದಿಲ್ಲ.

ನಮ್ಮ Websiteನಲ್ಲಿ ಈ ಕೆಳಕಂಡ ಕ್ರಮ ಸಂಖ್ಯೆಗಳಂತೆ (ಕ್ರ.ಸಂ) ಅರ್ಜಿ ನಮೂನೆ ಇದ್ದು, ವಿವರಗಳನ್ನು ಭರ್ತಿಗೊಳಿಸುವಾಗ ಸದ್ರಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಮಾಹಿತಿಗಳನ್ನು ಭರ್ತಿಗೊಳಿಸುವುದು. ಹಾಗೂ ವಿದ್ಯಾರ್ಥಿಯು ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು Capital ಅಕ್ಷರಗಳಲ್ಲಿ ಭರ್ತಿಗೊಳಿಸುವುದು.

             ಕ್ರ.ಸಂ.01ರಲ್ಲಿ ವಿದ್ಯಾರ್ಥಿಯ ಹೆಸರು. 02) ಲಿಂಗ 03) ಜಾತಿ 04) ತಂದೆಯ ಹೆಸರು.

             ಕ್ರ.ಸಂ.05ರಲ್ಲಿ ವಿದ್ಯಾರ್ಥಿಯ ಪೋಷಕರು ಇರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಂಪಿನ ಹೆಸರನ್ನು ಭರ್ತಿಗೊಳಿಸುವುದು.

             ಕ್ರ.ಸಂ.06ರಲ್ಲಿ ವಿದ್ಯಾರ್ಥಿಯ ಪೋಷಕರು ಇರುವ  ಗುಂಪಿನ ಸಂಖ್ಯೆಯನ್ನು (Group ID) ಭರ್ತಿಗೊಳಿಸುವುದು. ಗುಂಪಿನ ID ಭರ್ತಿಗೊಳಿಸುವಾಗ ಮೊದಲು ಯೋಜನಾಕಛೇರಿಯಿಂದ ನೀಡಿದ ದೃಢೀಕರಣದಲ್ಲಿರುವ ಗುಂಪಿನ ಸಂಖ್ಯೆಯನ್ನು ಸರಿಯಾಗಿ ಗಮನಿಸಿ ನಂತರ ಭರ್ತಿಗೊಳಿಸುವುದು.

             ಕ್ರ.ಸಂ.7ರಲ್ಲಿ ವಿದ್ಯಾರ್ಥಿಯ ಪೋಷಕರು ಇರುವ ಗುಂಪಿನ ಸದಸ್ಯತ್ವ ಸಂಖ್ಯೆಯನ್ನು (Member ID) ಭರ್ತಿಗೊಳಿಸುವುದು. ಸದಸ್ಯತ್ವ ಸಂಖ್ಯೆಯನ್ನು ಭರ್ತಿಗೊಳಿಸುವ ಮೊದಲು ಯೋಜನಾಕಛೇರಿಯಿಂದ ನೀಡಿದ ದೃಢೀಕರಣದಲ್ಲಿರುವಂತೆಯೇ ಪೋಷಕರ ಸದಸ್ಯತ್ವ ಸಂಖ್ಯೆಯನ್ನು  ಭರ್ತಿಗೊಳಿಸುವುದು .

             ಕ್ರ.ಸಂ.8ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯ ಹೆಸರನ್ನು ಭರ್ತಿಗೊಳಿಸಲಿದ್ದು,  ಕೆಲವೊಂದು ತಾಲೂಕಿನಲ್ಲಿ ಒಂದಕ್ಕಿಂತ ಹೆಚ್ಚು ಯೋಜನಾಕಛೇರಿಗಳಿರುತ್ತದೆ. ವಿದ್ಯಾರ್ಥಿ/ನಿಯು ಈ ಬಗ್ಗೆ ಯೋಜನಾಕಛೇರಿಯಿಂದ ನೀಡಿದ ದೃಢೀಕರಣದಲ್ಲಿ ಮೊಹರಿನಲ್ಲಿ ಇದ್ದ ಯೋಜನಾಕಛೇರಿಯ ಹೆಸರನ್ನು ನೋಡಿಕೊಂಡೇ, ಯಾವ ಯೋಜನಾಕಛೇರಿಗೆ ಸಂಬಂಧಪಟ್ಟವರು ಎಂದು ಯೋಜನಾಕಛೇರಿಯ  ಹೆಸರನ್ನು ಭರ್ತಿಗೊಳಿಸುವುದು.

             ಕ್ರ.ಸಂ.9ರಲ್ಲಿ  ವಿದ್ಯಾರ್ಥಿಯ ಖಾಯಂ ವಿಳಾಸ. 10) ಗ್ರಾಮ. 11) ತಾಲೂಕು 12)ಜಿಲ್ಲೆ  13) ಪಿನ್ ಕೋಡ್.

             ಕ್ರ.ಸಂ.14ರಲ್ಲಿ ವಿದ್ಯಾರ್ಥಿಯು ತನ್ನ ದೂರವಾಣಿ ಸಂಖ್ಯೆಯನ್ನು ಭರ್ತಿಗೊಳಿಸುವಾಗ ಚಾಲ್ತಿಯಲ್ಲಿರುವ ಸಂಖ್ಯೆಯನ್ನೇ ಭರ್ತಿಗೊಳಿಸುವುದು ಹಾಗೂ ಸುಜ್ಞಾನನಿಧಿ ಶಿಷ್ಯವೇತನಕ್ಕೆ ಆಯ್ಕೆಯಾದ ನಂತರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

             ಕ್ರ.ಸಂ.15ರಲ್ಲಿ ವಿದ್ಯಾರ್ಥಿಯ Email.ID ಭರ್ತಿಗೊಳಿಸುವುದು. (ಕಡ್ಡಾಯವಿರುವುದಿಲ್ಲ)

             ಕ್ರ.ಸಂ.16ರಲ್ಲಿ ವಿದ್ಯಾರ್ಥಿಯು ತಮ್ಮ ವಿದ್ಯಾರ್ಹತೆಯನ್ನು ನಮೂದಿಸುವುದು. (ಉದಾ: ವಿದ್ಯಾರ್ಥಿಯು ಆಯ್ಕೆ ಮಾಡಿದ ಕೋರ್ಸ್ ಬಿ.ಇ. ಆಗಿದ್ದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಎರಡನ್ನು ಆಯ್ಕೆ ಮಾಡುವುದು.)

             ಕ್ರ.ಸಂ.17ರಲ್ಲಿ ವಿದ್ಯಾರ್ಥಿಯು ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಶೇಕಡಾವಾರು ಅಂಕ ನಮೂದಿಸುವುದು. (ಉದಾ: ವಿದ್ಯಾರ್ಥಿಯು ಆಯ್ಕೆ  ಮಾಡಿದ ಕೋರ್ಸ್ ಬಿ.ಇ. ಆಗಿದ್ದಲ್ಲಿ, ಪಿ.ಯು.ಸಿಯಲ್ಲಿ ಗಳಿಸಿದ ಅಂಕದ ಶೇಕಡಾವಾರು ಅಂಕ ಹಾಕುವುದು.)

             ಕ್ರ.ಸಂ.18ರಲ್ಲಿ ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ನಂಬ್ರ (SSLC MARKS CARD REGISTER NO)  ಕಡ್ಡಾಯವಾಗಿರುತ್ತದೆ. ಒಮ್ಮೆ ಎಂಟ್ರಿ ಮಾಡಿ Submit  ಆದ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ.

             ಕ್ರ.ಸಂ.19ರಲ್ಲಿ ಕೋರ್ಸಿನ ಹೆಸರು  20) ಶಿಕ್ಷಣ ಸಂಸ್ಥೆಯ ಹೆಸರು 21) ವಿದ್ಯಾರ್ಥಿಯ ಬ್ಯಾಂಕ್ ಖಾತೆ ಸಂಖ್ಯೆ 22) ಬ್ಯಾಂಕಿನ ಹೆಸರು

23) ಬ್ಯಾಂಕಿನ ಬ್ರಾಂಚ್‌ ಹೆಸರು 24) ಬ್ಯಾಂಕ್ IFSC Code 25) ಕೋರ್ಸಿನ ಅವಧಿ 26) ಕೋರ್ಸ್ ಪ್ರಾರಂಭವಾಗುವ ವರ್ಷ 27) ಕೋರ್ಸ್ ಮುಕ್ತಾಯವಾಗುವ ವರ್ಷ.

ವಿದ್ಯಾರ್ಥಿಯು Websiteನಲ್ಲಿ Upload ಮಾಡಬೇಕಾದ ದಾಖಲಾತಿಗಳ ಬಗ್ಗೆ:

1.ಎಸ್.ಎಸ್.ಎಲ್.ಸಿ ಪರೀಕ್ಷೆಯ ಅಂಕಪಟ್ಟಿಯ ಪ್ರತಿ: ವಿಶ್ವವಿದ್ಯಾನಿಲಯದಿಂದ ನೀಡಿದ ಅಂಕಪಟ್ಟಿಯನ್ನೇ Upload ಮಾಡುವುದು. SSLC MARKS CARD NO ಸ್ಪಷ್ಟವಾಗಿ ಕಾಣುವಂತಿರಬೇಕು. ಅಂಕಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಇರಬಾರದು.

 1. ಆಯ್ದ ಶಿಕ್ಷಣಕ್ಕೆ ಅಗತ್ಯವಿರುವ ಅರ್ಹತಾ ಪರೀಕ್ಷೆಯ ಅಂಕ ಪಟ್ಟಿಯ ಪ್ರತಿ (ವಿಶ್ವವಿದ್ಯಾನಿಲಯದಿಂದ ನೀಡಿದ ಅಂಕಪಟ್ಟಿಯನ್ನೇ ನೀಡತಕ್ಕದ್ದು): (ಉದಾ : ವಿದ್ಯಾರ್ಥಿಯು ಆಯ್ಕೆ ಮಾಡಿದ ಕೋರ್ಸ್ ಬಿ.ಇ. ಆಗಿದ್ದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಎರಡು ತರಗತಿಗಳ ಅಂಕಪಟ್ಟಿಯನ್ನು Upload ಮಾಡುವುದು. ವಿದ್ಯಾರ್ಥಿಯು ಆಯ್ಕೆ ಮಾಡಿದ  ಕೋರ್ಸ್ ಎಂ.ಬಿ.ಎ. ಎಲ್.ಎಲ್.ಬಿ, ಬಿ.ಇಡಿ ಆಗಿದ್ದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಡಿಗ್ರಿಯ ಅಂಕಪಟ್ಟಿಯನ್ನು  Upload  ಮಾಡುವುದು.)
 2. ದಾಖಲಾದ ಶಿಕ್ಷಣ ಸಂಸ್ಥೆಯ ಶುಲ್ಕ ಪಾವತಿ ರಶೀದಿಯ ಪ್ರತಿ (FEES Receipt): 2020 ನೇ ಸಾಲಿನಲ್ಲಿ ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡು ಕಾಲೇಜಿಗೆ ಫೀಸ್ ಕಟ್ಟಿದ ರಶೀದಿಯ ಪ್ರತಿಯನ್ನು Upload ಮಾಡುವುದು. ಶುಲ್ಕ ಪಾವತಿ ರಶೀದಿಯಲ್ಲಿ ವಿದ್ಯಾರ್ಥಿಯು ಕಲಿಯುತ್ತಿರುವ ವರ್ಷ, ಹೆಸರು, ಪಾವತಿಸಿದ ಮೊತ್ತ ಸ್ಪಷ್ಟವಾಗಿ ಕಾಣುವಂತ್ತಿರಬೇಕು. ವಿದ್ಯಾರ್ಥಿಗಳು ಕಾಲೇಜಿಗೆ Admission ಆಗುವ ಸಂದರ್ಭ ಕಾಲೇಜಿನಲ್ಲಿ ನೀಡಿದ FEES Structure, Fees Expenditure ಅನ್ವಯವಾಗುವುದಿಲ್ಲ. CET ಯಲ್ಲಿ seat ಸಿಕ್ಕಿದ ವಿದ್ಯಾರ್ಥಿಗಳು, Admission ಆದ ಕಾಲೇಜಿನ Fees Rceipt Upload ಮಾಡುವುದು. Online ನಲ್ಲಿ ಪಾವತಿಸಿದ್ದಲ್ಲಿ ಕಾಲೇಜಿನ ಪ್ರಾಂಶುಪಾಲರ ಶಿಫಾರಸ್ಸು ಮಾಡಿಯೇ Upload ಮಾಡುವುದು.
 3. ವಿದ್ಯಾರ್ಥಿ/ನಿಯ ರಾಷ್ಟೀಕೃತ ಬ್ಯಾಂಕಿನ ಉಳಿತಾಯ ಖಾತೆ ಪುಸ್ತಕದ ಪ್ರತಿ (Nationalised Bank Pass book Copy): ವಿದ್ಯಾರ್ಥಿಯು Pass book ಪ್ರತಿಯನ್ನು Upload ಮಾಡುವಾಗ Account Number,Student name,IFsc code,Bank Branch Name ಸ್ಪಷ್ಟವಾಗಿ ಕಾಣುವಂತ್ತಿರಬೇಕು. ಸರಿಯಾಗಿ ಕಾಣದೇ ಇದ್ದಲ್ಲಿ, Reject ಮಾಡಲಾಗುವುದು. Upload ಮಾಡಿದ ಬ್ಯಾಂಕ್  ಖಾತೆಯ ವ್ಯವಹಾರಗಳು ಪ್ರಸ್ತುತ ಮೂರು ತಿಂಗಳಿನಿಂದ ಚಾಲ್ತಿಯಲ್ಲಿರಬೇಕು. ಬ್ಯಾಂಕ್ ಪಾಸ್ ಪುಸ್ತಕವನ್ನು ತಿದ್ದುಪಡಿ ಅಥವಾ ಕೈಯಿಂದ ಬರೆಯುವುದಾಗಲಿ ಮಾಡಬಾರದು. Upload   ಮಾಡುವ ಬ್ಯಾಂಕ್ ಪಾಸ್ ಪುಸ್ತಕದಲ್ಲಿ ಬ್ಯಾಂಕ್ ವ್ಯವಸ್ಫಾಪಕರ ಸಹಿ ಮತ್ತು ಮುದ್ರೆ ಕಡ್ಡಾಯವಾಗಿ ಇರಬೇಕು. ಈಗಾಗಲೇ ವಿಜಯಬ್ಯಾಂಕ್ ಹಾಗೂ ಇನ್ನೀತರ ಕೆಲವೊಂದು ಬ್ಯಾಂಕ್ ಗಳು ಬೇರೊಂದು ಬ್ಯಾಂಕಿಗೆ ವಿಲೀನಗೊಂಡಿರುತ್ತದೆ. ಈ  ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಬ್ಯಾಂಕ್ IFSC Code ಬದಲಾವಣೆಯಾಗಿದ್ದಲ್ಲಿ ಸರಿಪಡಿಸಿ ವ್ಯವಸ್ಥಾಪಕರ ಸಹಿ ಹಾಕಿಸಿ Upload  ಮಾಡುವುದು.
 4. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಶಿಫಾರಸ್ಸು ಪತ್ರ (Study Certificate): ಪ್ರಸ್ತುತ 2020ನೇ ಸಾಲಿನಲ್ಲಿ ಆಯ್ದ ಕೋರ್ಸಿಗೆವಿದ್ಯಾರ್ಥಿ/ನಿ ಸೇರ್ಪಡೆಗೊಂಡ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ‘Study Certificate Upload ಮಾಡುವುದು. ಕಾಲೇಜಿನಲ್ಲಿ ‘Study Certificate’ ನೀಡಲು ನಿರಾಕರಿಸಿದ್ದಲ್ಲಿ  ಈ ಕೆಳಗೆ ‘ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ದೃಢಪತ್ರʼ  ನಮೂನೆ ನೀಡಿರುತ್ತೇವೆ. ಈ ಅರ್ಜಿಯನ್ನು ಭರ್ತಿಗೊಳಿಸಿ, ಕಾಲೇಜಿನ  ಪ್ರಾಂಶುಪಾಲರ ದೃಢೀಕರಣದೊಂದಿಗೆ Upload ಮಾಡಬಹುದು.
 5. ಯೋಜನಾಧಿಕಾರಿಗಳ ಶಿಫಾರಸ್ಸು: ವಿದ್ಯಾರ್ಥಿಗಳ ಪಾಲಕರು ಧರ್ಮಸ್ಥಳ ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿದ್ದಾರೆ ಎಂದು ದೃಢೀಕರಿಸಲುನಾವು ನೀಡಿದ ಶಿಫಾರಸ್ಸು ಪತ್ರಕ್ಕೆ ಯೋಜನಾಕಛೇರಿಯಲ್ಲಿ ಯೋಜನಾಧಿಕಾರಿಗಳು\ ಪ್ರಬಂಧಕರು\ಸಹಾಯಕ ಪ್ರಬಂಧಕರು  ಈ ಮೂವರ ಪೈಕಿ ಒಬ್ಬರ ಸಹಿ ಮತ್ತು ಮೊಹರು ಕಡ್ಡಾಯವಾಗಿರುತ್ತದೆ. ಶಿಫಾರಸ್ಸು ಪತ್ರದಲ್ಲಿ ನೀಡಿದ ಎಲ್ಲಾ ಅಂಶಗಳನ್ನು ಸರಿಯಾಗಿ ಓದಿಕೊಂಡು ಶಿಫಾರಸ್ಸು ಪತ್ರವನ್ನು ಭರ್ತಿ ಮಾಡಿಕೊಂಡು ಯೋಜನಾಕಛೇರಿಯ ದೃಢೀಕರಣ ಆದ ನಂತರ ಅರ್ಜಿಯೊಂದಿಗೆ online ನಲ್ಲಿ  Upload ಮಾಡುವುದು.

  ಈ ಮೇಲ್ಕಂಡ  ಎಲ್ಲಾ ದಾಖಲಾತಿಗಳ ಮೂಲ ಪ್ರತಿಯನ್ನು (Original Copy)  Scan ಮಾಡಿಕೊಂಡು Upload  ಮಾಡುವುದು.

 

 ವಿಶೇಷ ಸೂಚನೆ:

 1. ಈ ಮೇಲೆ ತಿಳಿಸಿರುವ ಮಾಹಿತಿ, ಸೂಚನೆಗಳಿಗೆ ಅನುಗುಣವಾಗಿ ಅರ್ಜಿಯನ್ನು ಸಲ್ಲಿಸುವುದು. ಅಸಮರ್ಪಕ ಅರ್ಜಿಗಳನ್ನು ಖeರಿeಛಿಣ ಮಾಡಲಾಗುವುದು. ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆದ್ಯತೆ ನೀಡಲಾಗುವುದು. ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿಗಳಿಂದ ಅರ್ಜಿ ಸಮುದಾಯ ವಿಭಾಗಕ್ಕೆ ಬಂದ ದಿನಾಂಕದಿಂದ ಶಿಷ್ಯವೇತನ ಪಾವತಿಸಲಾಗುವುದು. ಅರಿಯರ್ಸ್ ಮೊತ್ತ ಪಾವತಿಸಲು ಅವಕಾಶ ಇರುವುದಿಲ್ಲ.
 2. ನವೀಕರಣ ಮಾಡಲು ಬಾಕಿ ಉಳಿದಿರುವ ಹಾಗೂ ಹೊಸ ಅರ್ಜಿಗಳನ್ನುಸಲ್ಲಿಸಲು ಕೊನೆಯ ದಿನಾಂಕ 28-02-2021

                           

      *ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ದೂ: 9591770660

study certificate copy Download here ⇒ Click Here

Project office confirmation copy Download here

Click here for online application ⇐ಸುಜ್ಞಾನನಿಧಿ ಶಿಷ್ಯವೇತನ ಹೊಸ ಅರ್ಜಿಯ ಬಗ್ಗೆ