ಮನಸ್ಸಿದ್ದರೆ ಮಾರ್ಗ ಎಂಬಂತೆ ಮಹಿಳೆ ಸ್ವ ಉದ್ಯೋಗಕ್ಕೆ ವಾಲುತ್ತಿದ್ದಾರೆ. ಇದರಲ್ಲಿ ಹೇಮಾವತಿಯವರು ಒಬ್ಬರು. ಸೊರಬ ತಾಲೂಕು ಮಾವಲಿ ವಲಯದ ಹೆಗ್ಗೋಡು ವಿಭಾಗದ ಕುಂಬತ್ತಿ ಗ್ರಾಮದ ಹೇಮಾವತಿ ಕೋಂ ಬಂಗಾರ ಶೆಟ್ರು ಇವರು ಜಗಜ್ಯೋತಿ ಸ್ವ.ಸ.ಸ. ಎಂಬ ಸಂಘವನ್ನು ಮಾಡಿಕೊಂಡು ರೂ. 10.00 ಉಳಿತಾಯದಿಂದ ಪ್ರಾರಂಭ ಮಾಡಿ ಉತ್ತಮವಾಗಿ ಸಂಘ ನಡೆಸಿಕೊಂಡು ಬಂದಿರುತ್ತಾರೆ.
ಇವರು ಹೈನುಗಾರಿಕೆ ಮಾಡುವ ಬಗ್ಗೆ ಆಸಕ್ತಿ ತೋರಿದರು. ಇವರಿಗೆ ಯೋಜನೆಯ ಹೈನುಗಾರಿಕಾಧಿಕಾರಿಗಳ ಮೂಲಕ ಮಾಹಿತಿ ತರಬೇತಿಯನ್ನು ಪಡಕೊಂಡು ಸಂಘದಲ್ಲಿ ಪ್ರಥಮವಾಗಿ ರೂ. 20000.00 ಪ್ರಗತಿನಿಧಿ ಪಡೆದುಕೊಂಡು ದಿನಕ್ಕೆ 10 ಲೀಟರ್ ಹಾಲು ಕೊಡುವ ಹೆಚ್.ಎಫ್. ಹಸು ಖರೀದಿ ಮಾಡಿದರು. ಇದರಿಂದ 1 ವರ್ಷದಲ್ಲಿ ಒಂದು ಹೆಣ್ಣು ಕರು ಪಡೆದುಕೊಂಡರು 1 ವರ್ಷದಲ್ಲಿ ಪ್ರಗತಿನಿಧಿ ಮರುಪಾವತಿ ಮಾಡಿದರು.
ಎರಡನೇ ಹಂತದಲ್ಲಿ ರೂ. 35000.00 ಪ್ರಗತಿನಿಧಿ ಪಡೆದುಕೊಂಡು ಜೆ.ಆರ್. ಹಸು ಖರೀದಿ ಮಾಡಿ ದಿನಕ್ಕೆ 14 ಲೀ ಹಾಲು ಕೊಡುವ ಹಸು ಒಟ್ಟು ದಿನಕ್ಕೆ 25 ಲೀ ಹಾಲು ಸಂಗ್ರಹಣೆ ಮಾಡುತ್ತಾರೆ. ಇದರಿಂದ ಇವರು ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಬಂದಿರುತ್ತದೆ. ಪ್ರತಿ ವರ್ಷಕ್ಕೆ ಒಂದು ಹಸು ಖರೀದಿ ಮಾಡುತ್ತಾ ಈಗ ಇವರಲ್ಲಿ 4 ಹಸುಗಳು 1 ಹೆಣ್ಣು ಕರು ಸಾಕಾಣಿಕೆ ಮಾಡುತ್ತಿದ್ದಾರೆ.
ಇವರು ಮಾದರಿಯಾಗಿ ಕೊಟ್ಟಿಗೆ ಹಟ್ಟಿ ರಚನೆ ಹಸುಗಳಿಗೆ ವಿಮೆ, ಅಜೋಲಾ, ಹಸಿರು ಹುಲ್ಲು ನಾಟಿ ಮಾಡಿಕೊಂಡಿರುತ್ತಾರೆ. ಪ್ರಸ್ತುತ ವರ್ಷದಲ್ಲಿ ಗೋಬರ್ ಗ್ಯಾಸ್ ರಚನೆ ಮಾಡಿ ಕೊಂಡಿರುತ್ತಾರೆ. ಇವರು ಸಂಘದಿಂದ ಅಭಿವೃದ್ಧಿ ಆಗಿದ್ದು ಎಂದು ಇನ್ನೊಬ್ಬರಿಗೆ ಮಾಹಿತಿ ನೀಡುತ್ತಾರೆ. ಗ್ರಾಮದಲ್ಲಿ ಇವರು ಹೈನುಗಾರಿಕೆಯಲ್ಲಿ ಮಾದರಿಯಾಗಿದ್ದಾರೆ.