ಒರ್ವ ಕೃಷಿಕ ಇದ್ದ ಜಮೀನಿನಲ್ಲಿ ಒಂದೇ ಬೆಳೆಯನ್ನು ಅನುಷ್ಠಾನ ಮಾಡಿದಲ್ಲಿ ಖಚರ್ು ವೆಚ್ಚಗಳನ್ನು ನಿಭಾಯಿಸಲು ಕಷ್ಟ ಸಾಧ್ಯ ಇದ್ದ ಅತ್ಯಲ್ಪ ಜಾಗದಲ್ಲಿ ಯಶಸ್ವಿ ಕೃಷಿ ಅನುಷ್ಠಾನ ಬಗ್ಗೆ ತಾಂತ್ರಿಕ ಮಾಹಿತಿ ಪಡೆದು ಸಮಗ್ರ ಕೃಷಿ ಅಳವಡಿಕೆ ಮಾಡಿದಲ್ಲಿ ಕೃಷಿಯಲ್ಲಿ ಆಗುವ ಕಷ್ಟ-ನಷ್ಟಗಳನ್ನು ಸುಧಾರಿಸುವ ಜೊತೆಗೆ ಜೀವನಕ್ಕೂ ಖುಷಿ ಕೊಡುತ್ತದೆ ಎಂದು ಅನುಭವಿ ಕೃಷಿಕ ಸಮಾಜ ಸೇವಕ ಶ್ರೀ.ಎಸ್. ನಾಗರಾಜ್ ಕುಂಸಿಯವರು ಶ್ರೀಯುತರು ಕಳೆದ 55 ವರ್ಷಗಳಿಂದ ಭತ್ತ, ಅಡಿಕೆ ಕೃಷಿಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದು ಪ್ರತೀ ಅಳವಡಿಕೆ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದು ಕಳೆದ 7 ವರ್ಷಗಳಿಂದ ಅಲ್ಪಾವಧಿ ಹಾಗೂ ದೀಘರ್ಾವಧಿ ಕೃಷಿಗಳನ್ನು ಅನುಷ್ಠಾನ ಮಾಡುತ್ತಾ ಬಂದಿದ್ದು ಉತ್ತಮ ಆದಾಯ ಪಡೆಯುವುದರ ಜೊತೆಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಶ್ರೀ ನಾಗರಾಜ್ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಶಾಸ್ತ್ರ ಪ್ರಗತಿಬಂಧು ಸದಸ್ಯರಾಗಿ ಸೇರ್ಪಡೆಗೊಂಡು ವಾರದ ಶ್ರಮ ವಿನಿಮಯದಲ್ಲಿ ತೊಡಗಿಸಿ ತನ್ನ ಕೃಷಿ ಕಾರ್ಯಗಳನ್ನು ಅನುಷ್ಠಾನ ಮಾಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಒಕ್ಕೂಟದ ಅಧ್ಯಕ್ಷ, ವಲಯಾಧ್ಯಕ್ಷರಾಗಿ ಆಯ್ಕೆಗೊಂಡು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶ್ರೀಯುತರಿಗೆ ಒಟ್ಟು 5ಳಿ ಜಮೀನಿದ್ದು ಭತ್ತ 1ಳಿ ಎಕ್ರೆ, 2 ಎಕ್ರೆ ಅಡಿಕೆ, 2 ಎಕ್ರೆ ಜೋಳ ಹಾಗೂ ಅಡಿಕೆ ತೋಟದ ಮಧ್ಯೆ 100 ಗುಲಾಬಿಗಿಡ, 100 ಗಿಡ ಕಾಕಡ ಮತ್ತು ಮಲ್ಲಿಗೆ ಗಿಡಗಳನ್ನು ನಾಟಿ ಮಾಡಿದ್ದು ಸಮಗ್ರಕೃಷಿಯಿಂದ ವಾಷರ್ಿಕ ಆದಾಯ ರೂ. 1,75,000/- ನ್ನು ಪಡೆಯುತ್ತಾರೆ. ಸಮಗ್ರ ಕೃಷಿ ಅಳವಡಿಕೆಗಾಗಿ ಯೋಜನೆಯಿಂದ ಕೊಳವೆ ಬಾವಿ ರಚನೆಗೆ 20 ಸಾವಿರ ಹಾಗೂ ಹೊಸ ಮನೆ ರಚನೆಗಾಗಿ ರೂ.1,95,000/- ಪ್ರಗತಿನಿಧಿ ಸಾಲ ಪಡೆದು ಪ್ರತೀ ವಾರದ ಸಾಲದ ಕಂತು ರೂ.2,000/- ಗುಲಾಬಿ ಹೂ ಮಾರಾಟದಿಂದ ಬಂದ ಆದಾಯದಿಂದ ಸಾಲ ಮರುಪಾವತಿ ಮಾಡುತ್ತಾ ಬಂದಿರುತ್ತಾರೆ ಹಾಗೂ 2 ಹಾಲುಕರೆಯುವ ಹಸು ಸಾಕಣೆ ಮಾಡುತ್ತಿದ್ದು, ವಾಷರ್ಿಕ ಆದಾಯ ರೂ.15,000/- ಸಂಪಾದನೆ ಮಾಡುತ್ತಾರೆ.
ಆರೋಗ್ಯ ಭದ್ರತೆಗಾಗಿ ಸಂಪೂರ್ಣ ಸುರಕ್ಷಾ ವಿಮೆ ನೋಂದಾಯಿಸಿದ್ದು ಜೀವನ ಭದ್ರತೆಗಾಗಿ ಜೀವನ ಮಧುರ ವಿಮೆ ಪಾಲಿಸಿ ನೋಂದಾಯಿಸಿದ್ದು ಜೀವನದ ಭದ್ರತೆಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತನ್ನ ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ನೋಂದಾವಣೆ ಮಾಡಿರುತ್ತಾರೆ. ನಾಗರಾಜ್ರ ಅತ್ತಿಗೆ ಅಸೌಖ್ಯದಿಂದ ಮರಣ ಹೊಂದಿದ್ದು ಜೀವನ ಮಧುರ ವಿಮೆ ರೂ.18,200/- ಹಾಗೂ ಸುರಕ್ಷಾ ಕಾರ್ಯಕ್ರಮದಿಂದ ಅನಾರೋಗ್ಯಕ್ಕೆ ಔಷಧಿ ವೆಚ್ಚ ರೂ.37,000/- ಸಹಾಯಧನ ಪಡೆದಿರುತ್ತಾರೆ. ಇಷ್ಟೇಲ್ಲಾ ಸಾಧನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಕಾರಣ ಎಂದು ನಾಗರಾಜ್ರವರು ಮನದಾಳದಿಂದ ನುಡಿಯುತ್ತಾರೆ.