ದಿನಾಂಕ 01/02/15 ರಂದು ತರೀಕೆರೆ ಸಮೀಪದ ಲಕ್ಕವಳ್ಳಿಯ ಎಂ ಎನ್ ಕ್ಯಾಂಪ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯಡಿ ಜ್ಞಾನವಿಕಾಸ ಮಹಿಳಾ ಸಮಾವೇಶ ಹಾಗೂ ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಭವಾನಿ ವಹಿಸಿದ್ಧರು. ಉದ್ಘಾಟನೆಯನ್ನು ನರೆವೇರಿಸಿದ ಲಕ್ಕವಳ್ಳಿಯ ಭದ್ರಾ ಶಾಲೆಯ ಶಿಕ್ಷಕರಾದ ಶ್ರೀ ತಮ್ಮಣ್ಣನವರು ಯೋಜನೆಯ ಕಾರ್ಯಕ್ರಮದ ಬಗ್ಗೆ ಪ್ರಶಂಶಿಸುತ್ತಾ, ಮಹಿಳೆಯರಿಗೆ ವ್ಯವಹಾರಿಕ ಜ್ಞಾನವಲ್ಲದೆ, ಸಾಮಾಜಿಕ ಜ್ಞಾನವನ್ನು ನೀಡುತ್ತಿದೆ. ಪೂಜ್ಯ ಡಾ|| ಡಿ.ವೀರೇಂದ್ರ ಹೆಗ್ಗಡೆಯವರು ನಮ್ಮ ರಾಜ್ಯದ್ಯಾಂತ ಜಾತಿ,ಮತ, ಬೇಧವಿಲ್ಲದೇ ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಬನೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೋರ್ವ ಶಿಕ್ಷಕಿಯರಾದ ನಾಗರತ್ನರವರು ಸಂಸ್ಕ್ರೃತಿ,ಸಂಸ್ಕಾರದ ಕುರಿತು ಮಾತನಾಡುತ್ತಾ ಹಬ್ಬಗಳನ್ನು ಆಚರಿಸುವುದರಿಂದ ನಮ್ಮ ಮನೆ ಸ್ವಚ್ಚವಾಗುತ್ತದೆ ಹಾಗೂ ಎಲ್ಲರೂ ಕೂಡಿ ಊಟ ಮಾಡುವುದರಿಂದ ಭಾಂದವ್ಯ ಬೆಳೆಯುತ್ತದೆ. ಪೂಜೆ ಮಾಡುವುದು, ದೇವರ ನಾಮ ಸ್ಮರಣೆ ಮಾಡುವುದು, ಮನೆಯಲ್ಲಿನ ಹಿರಿಯರಿಗೆ ಗೌರವ ನೀಡುವುದರಿಂದ ಮಕ್ಕಳು ಅನುಕರಣೆ ಮಾಡುತ್ತಾರೆ. ಹಾಗೂ ಮಹಿಳೆಯರ ವೇಷ ಭೂಷಣ ಕೈಮುಗಿಯುವಂತಿರಬೇಕು, ಕೈ ಎತ್ತಿ ಎಳೆಯಬಾರದಂತಿರಬಾರದು ಎಂದು ತಿಳಿಸಿದರು.
ಯೋಜನೆಯ ಯೋಜನಾಧಿಕಾರಿ ಶ್ರೀ ಮಹೇಶ್ ಎಂ ಡಿ ರವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಹಾಗೂ ಜ್ಞಾನವಿಕಾಸದ ಕುರಿತು ಮಾತನಾಡಿದರು.
ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಉಪಸ್ಥಿತರಿದ್ದ ಗಣ್ಯರಿಂದ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ನಂದಕುಮಾರ್ ಹಾಗೂ ಟೈಲರಿಂಗ್ ತರಬೇತಿ ನೀಡಿದ ಶಿಕ್ಷಕಿ ಸುಮತಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಲ್ಲಮ್ಮ, ಸೇವಾಪ್ರತಿನಿಧಿಗಳಾದ ನಾಗವೇಣಿ, ಸಂಗಮ್ಮ, ಮಮತ ಮತ್ತಿತರರಿದ್ದರು