success storyUncategorized

ತೊಟ್ಟಿಲು ತೂಗುವ ಕೋಮಲ ಕೈ, ತಬಲಾ ತಯಾರಿಯಲ್ಲಿಯೂ ಸೈ

smt Renuka_MJVTI_150213

‘ನಾದಿರ ದಿನ್ ನಾದಿರ್ ಥಿನ’ ಎಂಬ ತಬಲಾ ನಾದ ಕೇಳಲು ಮನಸ್ಸಿಗೆ ಬಲು ಮುದ. ಪ್ರತಿಯೊಂದು ಸಭೆ ಸಮಾರಂಭದಲ್ಲಿ ಪ್ರಾರಂಭದಲ್ಲಿ ತಬಲಾವಾದ್ಯ ಒಂದು ನವ ಉಲ್ಲಾಸವನ್ನು ತಂದು ಕೊಡುವ ಸಂಗೀತ ವಾದ್ಯಗಳ ರಾಣಿ ಎಂದೆ ಅನ್ನಬಹುದು. ನಿಜ ಸಂಗೀತ ಸಪ್ತ ಸ್ವರಗಳ ಹೊರ ಹೊಮ್ಮಿಸುವಲ್ಲಿ ತಬಲಾ ಪ್ರಭಾವಶಾಲಿ ತಾಳವಾದ್ಯವಾಗಿದೆ. ವೇದ ಉಪನಿಷತ್ತು ಅವಧಿಯಲ್ಲಿಯೇ ಬಂದಂತಹ ತಬಲಾ ವಾದ್ಯಗಳು ಮುಂದೆ 1210-47ನೇ ಶತಮಾನದ ಅವಧಿಯ ಯಾಧವ ಆಳ್ವಿಕೆಯಲ್ಲಿ ಜನಪ್ರಿಯವಾದ ಇತಿಹಾಸ ಹೊಂದಿರುವ ಸುಶೃವ ವಾದ್ಯ ಸ್ವರೂಪಗಳಾಗಿವೆ. ತಬಲಾವು ದಯಾನ್ ಮತ್ತು ಬಯಾನ್ ಎಂಬ ಎರಡು ವಾದ್ಯಗಳ ಜೋಡಿಯಾಗಿದೆ. ತಬಲಾ ವಾದ್ಯದ ತಯಾರಿಯಲ್ಲಿ ಕೆಲವೇ ಕೆಲವು ಜನ ಮತ್ತು ಪಂಗಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ವೃತ್ತಿ ಕಸುಬಾಗಿದ್ದು, ವಂಶ ಪಾರಂಪಾರಿಕವಾಗಿಯೂ ಕೂಡಾ ಮೂಢಿ ಬಂದಿರುವುದು.
ತಬಲಾ ನಾದ ಸ್ವರದ ಹಿಂದೆ ಹಲವು ಪರಿಶ್ರಮವಿರುವುದು. ಮತ್ತು ಸಾಮಾಗ್ರಿಗಳ ಸಂಗ್ರಹವಿರುವುದು. ಮುಖ್ಯವಾಗಿ ಕಟ್ಟಿಗೆ, ತಾಮ್ರದ ಪ್ಲೇಟು, ಚರ್ಮ, ಅಕ್ಕಿ ಮತ್ತು ಕಬ್ಬಿಣ ಪುಡಿಯ(ಬದಲಾಗಿ 1 ಕೆ.ಜಿಗೆ ರೂ.2000/- ಮೌಲ್ಯದ ಮ್ಯಾಗನೀಸ್ ಪುಡಿ ಮತ್ತು ಮೆನೆನಿಕ್ಸಗಳ ಬೆರೆಕೆ) ಅಗತ್ಯ ಸಾಮಾಗ್ರಿಗಳು ಬೇಕಾಗುವುದು. ಮತ್ತು ಚರ್ಮದ ಹದದೊಂದಿಗೆ ಪರಿಶ್ರಮದ ಜೋಡಿಸುವಿಕೆಯಲ್ಲಿ ಅಳವಡಿಸಬೇಕಾದ ಕೌಶಲ್ಯಗಳು ಮತ್ತು ಮಧ್ಯದ ಕಪ್ಪು ವೃತ್ತದ ಲೇಪವನ್ನು ಸರಿಯಾದ ಪ್ರಮಾಣದಲ್ಲಿ ಲೇಪಿಸುವುದಕ್ಕಾಗಿ ನುರಿತ ತಿಳುವಳಿಕೆಯ ಜ್ಞಾನವು ಕೂಡಾ ಅಗತ್ಯವಿರುವುದು. ಹೀಗೆಯೆ ವೃತ್ತಿ ಕಸುಬು ಆ ಕುಟುಂಬದ ಜೀವನಕ್ಕೆ ಆಧಾರವಾಗಿರುವುದು ಮತ್ತು ದೀಪದಿಂದ ದೀಪ ಹಚ್ಚೋ ಜ್ಞಾನದೀವಿಗೆಯ ಬೆಳಕಾಗಿ ಹರಡುತ್ತಿರುವುದು ನಿಜಕ್ಕೂ ಅಪೇಕ್ಷಿಣೀಯ.
ತಬಲಾ ತಯಾರಿಕೆಯು ವರ್ಷದಲ್ಲಿ ಎರಡುಸಲ ಮಾತ್ರ ಬೇಡಿಕೆಯನ್ನು ಹೊಂದಿದ್ದು, ಕನಿಷ್ಠ 50 ಸಾವಿರ ಬಂಡವಾಳದ ಅಗತ್ಯತೆ ಇದ್ದು, ಶ್ರಾವಣ ಮಾಸದಿಂದ ಪ್ರಾರಂಭವಾಗಿ, ಗಣೇಶ ಚತುಥರ್ಿ, ದಸರಾ ಹಬ್ಬದೊಂದಿಗೆ ಮುಗಿಯುವುದು. ಮಧ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಜಾತ್ರೆ, ಮಕ್ಕಳ ಶಾಲೆಗಳ ವಾಷರ್ಿಕ ದಿನೋತ್ಸವ, ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ಬಹು ಬೇಡಿಕೆಯ ವಾದ್ಯ ವಸ್ತುವಾಗಿರುವುದು. ಈ ವೃತ್ತಿಯಲ್ಲಿ ತಬಲಾ, ಮೃದಂಗಾ, ಡಗ್ಗಾ. ಡೊಳ್ಳು, ನಗಾರಿ, ಇಂತಹ ಹಲವಾರು ವಾದ್ಯಗಳ ತಯಾರಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಈ ಕಸುಬಲ್ಲಿ ಸುಮಾರು 25 ವರ್ಷದಿಂದಲೂ ತೊಡಗಿಸಿಕೊಂಡ 46 ವರ್ಷ ಪ್ರಾಯದ ಶ್ರೀಮತಿ ರೇಣುಕಾ ಇವರು ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ದೇಶಪಾಂಡೆ ನಗರದ ಆಶ್ರಯ ಕಾಲನಿಯಲ್ಲಿ ನಿವಾಸಿಯಾಗಿರುವರು. ಮೂಲತ: ಕೊಪ್ಪಳ ಜಿಲ್ಲೆಯವರಾದ ಇವರು ಹಿಂದುಳಿದ ಜಾತಿಗೆ ಸೇರಿದ ಅಲೆಮಾರಿ ಜೀವನದ ಬದುಕಾಗಿತ್ತು. ಕಷ್ಠದಲ್ಲಿ ನಿರ್ವಹಿಸುತ್ತಿದ್ದ ಈ ಕುಟುಂಬದಲ್ಲಿ ಶ್ರೀಮತಿ ರೇಣುಕಾ ಇವರು ಕನಿಷ್ಠ ವಿದ್ಯೆಯಿಂದಲೂ ವಂಚಿತರಾಗಿದ್ದರು. ತಾವು ವಿದ್ಯೆಯಿಂದ ವಂಚಿತರಾದರೂ ಕೂಡಾ ಕುಲಕಸುಬಿನ ವಿದ್ಯೆಯು ನನ್ನ ಜೀವನಾಧಾರವಾಯಿತೆಂದು ಶ್ರೀಮತಿ ರೇಣುಕಾವರು ಹೇಳಿದ್ದು ಹೀಗೆ, ನಮ್ಮ ಜೀವನ ಅಲಮಾರಿ ಜೀವನ. ಆಗ ವಿದ್ಯೆ ಕಲಿಯಾಕ ಬಿಡ್ತಿರಲಿಲ್ಲ. ಇಂತಹ ಸಮಯದಾಗ ನನ್ನ 19-20 ನೇ ವಯಸ್ನಾಗ ಮದ್ವಿ ಆಗಿ ಮುಂದೆ 4 ವರ್ಷದೊಳ್ಗ ಗಂಡನ ಕಳಕೊಂಡು ಎರಡು ಮಕ್ಳ ತಾಯಿಯಾದಾಗ ಇನ್ನೂ ನನ್ನ ಜವಾಬ್ದಾರಿ ಹೆಚ್ಚಾಯ್ತು. ಈ ಮದ್ಯೆ ನಂಗ 21 ವರ್ಷ ವಿದ್ದಾಗ ನನ್ನ ಅಜ್ಜ ನಂಗ ತಬಲಾ ತಯಾರಿ ಹೆಂಗ ಮಾಡೋದು ಅಂತಾ ತಿಳಿಸಿಕೊಟ್ರು. ನಂಗ ಗಂಡನ ಮನ್ಯಾಗ ನನ್ನ ಅತ್ತಿ ಮಾವ ಈ ಕಸುಬನ್ನು ಮಾಡಾಕ ಪ್ರೋತ್ಸಾಹ ನೀಡಿದ್ರು. ಎಂದು ಸಹಕರಿಸಿದ ಕುಟುಂಬಕ್ಕೆ ಧನ್ಯತಾ ಭಾವದಿಂದ ನುಡಿದರು. ಸುಮಾರು ವರ್ಷದಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರಿಂದ, ಕೌಶಲ್ಯದ ಕೆಲಸವಾಗಿರುವುದರಿಂದ ಮೊದಲಿನಿಂದಲೂ ತಬಲಾ ರಿಪೇರಿ, ಖರೀದಿಸುವ ಗಿರಾಕಿಗಳು ನಮ್ಮನ್ನೆ ಹುಡುಕಿಕೊಂಡು ಸೇವೆಯನ್ನು ಪಡೆಯುತ್ತಿದ್ದಾರೆ. ಈ ವಾದ್ಯಗಳು ಉಪಯೋಗಿಸಿ ಸವಕಳಿ ಬಂದಂತಹವುಗಳು ರಿಪೇರಿ ಕೂಡಾ ನಮ್ಮಲ್ಲಿ ಬರುತ್ತವೆ. ಹೀಗೆ ಜೀವನ ಸಾಗಲು ಮುಂದೆ ಹೋಗಲು ವಿದ್ಯೆಯ ಜೊತೆಗೆ ಆಥರ್ಿಕ ಸಹಕಾರದ ಅಗತ್ಯತೆ, ಧೈರ್ಯದ ಕೊರತೆಯನ್ನು ನೀಗಿಸಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೆಂದು ಶ್ರೀಮತಿ ರೇಣುಕಾವರು ಹೇಳುವುದು ಹೀಗೆ ನಮ್ಗ ವಿದ್ಯೆ ಇದ್ದರೂ ವ್ಯವಹಾರಕ್ಕೆ ಬಾಳ ಅಡತಡೆ ಬತರ್ಿತ್ತು. ಹಿಂತಹ ಸಂದರ್ಭದಾಗ ಧರ್ಮಸ್ಥಳ ಸಂಘ ನಮ್ಮೂರಿಗೆ ಬಂತು. ನಾನು ಮೂಕಾಂಬಿಕಾ ಸ್ವ ಸಹಾಯ ಸಂಘದ ಸದಸ್ಯೆಯಾಗಿದ್ದು, ಸಾಲದ ರೂಪದಲ್ಲಿ ಹಣದ ಕೊರತೆ ಕಡ್ಮಿ ಮಾಡಿತು ಎಂದು ಉಪಕಾರವನ್ನು ಮರೆಯದ ಮಾತೃತ್ವ ಹೃದಯದ ಮನದಾಳದ ಮಾತಿನಿಂದ ತಿಳಿಸಿದರು ಶ್ರೀಮತಿ ರೇಣುಕಾ.
ಹೌದು ದಿ.10.06.2006ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯೆಯಾದ ಶ್ರೀಮತಿ ರೇಣುಕಾ, ಸಣ್ಣ ಪ್ರಾಯದಿಂದಲೇ ಅಲೆಮಾರಿ ಜೀವನದ ಪ್ರಯಾಣದ ಸಂಕಷ್ಟ, ತಂದೆ ತಾಯಿಯ ನಿಷ್ಕಾಳಜಿ, ಗಂಡನ ಮನೆಯಲ್ಲಿಯೂ ಸಂಕಷ್ಠ ಅನುಭವ ನಂತರ 22ನೇ ವಯಸ್ಸಿನಲ್ಲಿಯೇ ಈ ವಿದ್ಯೆಯನ್ನು ಅಜ್ಜನಿಂದ (ತಾಯಿಯ ತಂದೆಯಿಂದ) ಪಡೆದಿದ್ದು, ಮೊಮ್ಮಗಳ ಭಾವಿ ಜೀವನಕ್ಕೆ ಸಹಕಾರವಾಗಬೇಕೆಂದು ಆಸೆಯೊಂದಿಗೆ ಈ ವಿದ್ಯೆಯ ಧಾರೆ ಎರೆದು ನೀಡಿರುವುದು ಒಳಿತೆ ಆಯಿತು. ಏಕೆಂದರೆ ಮುಂದೆ ಕೆಲವೇ ವರ್ಷಗಳಲ್ಲಿ ಎರಡು ಮಕ್ಕಳ ಬಾಗ್ಯ ಪಡೆದ ಶ್ರೀಮತಿ ರೇಣುಕಾ ಮಕ್ಕಳು ಅಪ್ಪನನ್ನು ಗುರುತಿಸುವ ಮೊದಲೆ ವಿಧಿವಶವಾಗಿ, ಅಜ್ಜ ಕಲಿಸಿದ ವಿದ್ಯೆಗೆ ಶರಣಾಗಬೇಕಾಯಿತು. ಇದರೊಟ್ಟಿಗೆ ಆಥರ್ಿಕ ಬೆನ್ನೆಲುಬಾಗಿ ಧೈರ್ಯ ತಂದಿರುವುದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘ ಎಂದು ಅವಿನಾಭವ ಸಂಬಂಧವನ್ನು ಒತ್ತಿ ತಿಳಿಸಿದರು. ಮೊದಲು ಸ್ವ ಸಹಾಯ ಸಂಘದಲ್ಲಿ ಬಂಡವಾಳಕ್ಕಾಗಿ 5 ಸಾವಿರ, ನಂತರ 15 ಸಾವಿರ ಮತ್ತು ಆಶ್ರಯ ಮನೆಯ ಖರೀದಿಗಾಗಿ, ಶೌಚಾಲಯವನ್ನು ಕಟ್ಟಿಸುವುದಕ್ಕಾಗಿ 25 ಸಾವಿರ ರೂಪಾಯಿ ಹಾಗೂ ಇತ್ತೀಚೆಗೆ ಮತ್ತೆ ಬಂಡವಾಳಕ್ಕೆ 20 ಸಾವಿರ ರೂಪಾಯಿಗಳನ್ನು ಪಡೆದು ಹಂತ ಹಂತವಾಗಿ ಆಥರ್ಿಕ ಅಭಿವೃದ್ಧಿಗೆ ಪ್ರೇರಣೆಯನ್ನು ತಂದಿರುವುದು ಎಂದು ತಮ್ಮ ಮಾತಿನಲ್ಲಿಯೇ ತಿಳಿಸುತ್ತಾರೆ. ಸಾಕಷ್ಟು ಪರಿಶ್ರಮದ ಈ ಕೆಲಸದಲ್ಲಿ ಆರೋಗ್ಯ ತೊಂದರೆಯನ್ನು ಅನುಭವಿಸುತ್ತಿದ್ದರೂ ತನ್ನ ಕುಟುಂಬವನ್ನು ಗಟ್ಟಿಗೊಳಿಸುವಲ್ಲಿ ಶ್ರೀ ಮಂಜುನಾಥನ ಅನುಗ್ರಹವೆ ದಾರಿದೀಪವೆಂದು ದೈಹಿಕವಾಗಿ ಅಶಕ್ತರಾದ ಶ್ರೀಮತಿ ರೇಣುಕಾ ಚೈತನ್ಯಮಯವಾಗಿ ನುಡಿಯುತ್ತಾರೆ.
ನ್ಯಾಷನಲ್ ಸ್ಟ್ರೆಂಥ್ ಅ್ಯಂಡ್ ಕಂಡಿಷನರ್ ಅಸೊಸಿಯೇಷನ್ ಪ್ರಕಾರ ಪುರುಷರು ಉತ್ಪಾದಿಸುವ ಒಟ್ಟು ಸಾಮಥ್ರ್ಯದ 2/3 ಅಂಶದ ಸಾಮಥ್ರ್ಯವನ್ನು ಮಹಿಳೆಯು ಹೊಂದಿರುತ್ತಾರೆ ಎಂಬ ವಿಷಯ ಸಂಶೋಧನಾತ್ಮಕವಾಗಿ ಕಂಡುಕೊಂಡಂತೆ, ಈ ವೃತ್ತಿಯಲ್ಲಿ ಚರ್ಮದ ಹದ ಮತ್ತು ತಬಲದ ಸುತ್ತು ಬಿಗಿಯಾಗಿ ಎಳೆಯುವಾಗ ಪುರುಷರ ಸರಿಸಮಾನ ಸಾಮಥ್ರ್ಯವನ್ನು ದೈಹಿಕವಾಗಿ ಈ ವೃತ್ತಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತಿರುವ ಅನಿವಾರ್ಯತೆಯು ಶ್ರೀಮತಿ ರೇಣುಕಾ ಇವರಿಗೆ ಇರುವುದು. ಸಧ್ಯದ ಪರಿಸ್ಥಿತಿಯಲ್ಲಿ ಮಗ ಮತ್ತು ಮಗಳು ಬೆಳೆದು ನಿಂತಿದ್ದು, ಮಗನು ಶಿಕ್ಷಣದಿಂದ ವಂಚಿತನಾಗಿದ್ದು, ವಾಹನ ಚಾಲನ ಹುದ್ದೆಯಲ್ಲಿ ತೊಡಗಿಸಿಕೊಂಡಿದ್ದು, ತಬಲಾ ವಾದ್ಯಗಳ ಮಾರುಕಟ್ಟೆಯಲ್ಲಿ ಪರೋಕ್ಷವಾಗಿ ತಾಯಿಗೆ ಸಹಾಯಮಾಡುತ್ತಿರುವನು. ಮಗಳಿಗೆ 7ನೇ ವರ್ಗದವರಿಗೆ ಶಾಲೆಗೆ ಕಲಿಸಿದ್ದು, ಈಗ 23 ವರ್ಷ ಪ್ರಾಯದವಳಿಗೆ ಮದುವೆಯ ತಯಾರಿಯ ಜವಾಬ್ದಾರಿಯು ನನ್ನ ಮೇಲೆ ಇರುವುದು ಎಂದು ತಿಳಿಸಿದರು. ಆದರೆ ಈ ವಿದ್ಯೆಯ ಮುಂದುವರೆಸುವಲ್ಲಿ ನನ್ನ ಸೊಸೆಯು ನನ್ನ ಜೊತೆ ಕೈ ಜೋಡಿಸುತ್ತಿರುವ ಬಗ್ಗೆ ತಿಳಿಸಿದರು.
ದೈಹಿಕವಾಗಿ ಸೋತ ಶ್ರೀಮತಿ ರೇಣುಕಾರವರಲ್ಲಿ ಎಲ್ಲೊ ಒಂದು ಕಡೆ ಆತ್ಮವಿಶ್ವಾಸದ ಚೇತನದ ನುಡಿಗಳನ್ನು ಕೇಳುವಾಗ ತೃಪ್ತಿ ಮನೋಭಾವನೆಯನ್ನು ಅವಳ ಮುಖದಲ್ಲಿ ಕಾಣಲು ಸಾಧ್ಯವಾಯಿತು. ಶ್ರೀಮತಿ ರೇಣುಕಾ ಈ ವ್ಯವಹಾರದಲ್ಲಿ ಪ್ರತಿ 50 ಸಾವಿರ ಬಂಡವಾಳಕ್ಕೆ ರೂ.30 ಸಾವಿರ ಲಾಭಾಂಶವನ್ನು ಒಂದು ವರ್ಷದಲ್ಲಿ ತೆಗೆಯುತ್ತಿದ್ದು, ಈಗಾಗಲೇ ಬಂದಂತಹ ಲಾಭದಿಂದ ಒಟ್ಟು ಹಂತ ಹಂತವಾಗಿ 4 ಬಾರಿ ಪಡೆದ ಒಟ್ಟು 65 ಸಾವಿರ ಸಾಲದಲ್ಲಿ ಕೊನೆಯ ಸಾಲದಲ್ಲಿ ಮಾತ್ರ ಕೇವಲ ರೂ.8 ಸಾವಿರ ಬಾಕಿ ಉಳಿದಿರುವುದು ಬಗ್ಗೆ ತಿಳಿಸಿದರು. ಮಧ್ಯದಲ್ಲಿ ಮಗನ ಮದುವೆ ಖಚರ್ು, ಮನೆ ಖರೀದಿ ರಿಜಿಸ್ಟ್ರೇಷನ್ ವೆಚ್ಚ, ಶೌಚಾಲಯ ರಚನೆಯ ಮೂಲ ಸೌಕರ್ಯಗಳ ವೆಚ್ಚ, ಕಾಲಕಾಲಕ್ಕೆ ತೊಂದರೆ ಇಲ್ಲದೇ ದೊರೆತಿರುವ ಕುರಿತು ಸಂತೋಷವನ್ನು ವ್ಯಕ್ತಪಡಿಸುತ್ತಾ ಉತ್ತಮ ಜೀವನ ಸಾಗಿಸಿದ ಸಂತೃಪ್ತಿ ಭಾವನೆಯನ್ನು ಕಾಣಬಹುದಾಗಿದೆ. ಈ ವರ್ಷದ ಅವಧಿಯಲ್ಲಿ 8 ಸಾವಿರ ಬಾಕಿ ಸಾಲವನ್ನು ಕೂಡಾ ಮರುಪಾವತಿಸುವ ಕುರಿತು ತಿಳಿಸಿದರು. ಇದರೊಟ್ಟಿಗೆ ನಬಾರ್ಡ ಸಂಸ್ಥೆಯಿಂದಲೂ ಇತ್ತೀಚೆಗೆಯೂ ಕೂಡಾ 50ಸಾವಿರ ಹಣಕಾಸಿನ ನೆರವನ್ನು ಪಡೆದಿದ್ದು, ಈ ವೃತ್ತಿಯನ್ನು ಸಣ್ಣ ಪ್ರಮಾಣದಲ್ಲಿ ಮನೆಯಲ್ಲಿಯೇ ಮಾಡುತ್ತಿರುವ ಇವರು ಸರಕಾರದಿಂದ ಅಂಗಡಿಗೆ ಸಹಕಾರ ಸಿಕ್ಕರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೇಡಿಕೆಯಿಂದ ಜನರಿಗೆ ತಲುಪಿಸುವಲ್ಲಿ ಸನ್ನದ್ಧರಾಗಿದ್ದಾರೆ.
ದೀಪದಿಂದ ದೀಪ ಹಚ್ಚುವ ಈ ವೃತ್ತಿ ವಿದ್ಯೆಯು ಹೆಣ್ಣುಮಗಳಿಂದ ಹೆಣ್ಣಿಗೆ, ರವಾನೆಯಾಗುವಲ್ಲಿ ಕುಟುಂಬದವರ ಸಹಕಾರವು ಕೂಡಾ ಮೆಚ್ಚುವಂತಹುದೆ. ಇಲ್ಲಿ ರೇಣುಕಾರವರ ಈ ವೃತ್ತಿ ಸೇವೆಗೆ ಅವಳ ಅತ್ತೆ ನೀಡಿದ ಸಹಕಾರ, ತನ್ನ ಸೊಸೆಗೆ ಧಾರೆ ಎರೆಯುವಲ್ಲಿ ‘ ಜುಟ್ಟು ಜುಟ್ಟು ಸೇರಬಹುದು ಜಡೆ ಜಡೆ ಸೇರೋದಿಲ್ಲ ಎಂಬ ಗಾದೆ ಮಾತನ್ನು ಸುಳ್ಳು ಮಾಡಿರುವುದು ನಾವು ಒಪ್ಪಲೇ ಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ)ಯ ಅಧ್ಯಕ್ಷರಾದ ಪರಮ ಪೂಜ್ಯ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಜನರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಖ್ಯವಾಗಿ ಕಿರು ಆಥರ್ಿಕ ವ್ಯವಹಾರದ ಸ್ವ ಸಹಾಯ ಸಂಘಗಳ ಕಾರ್ಯಕ್ರಮದ ಜೊತೆಜೊತೆಗೆ ಸಾಮಾಜಿಕ ತಿಳುವಳಿಕೆಯನ್ನು ತುಂಬುವಲ್ಲಿ ಮಹಿಳೆಗೆ ಆತ್ಮವಿಶ್ವಾಸ ತರುವಂತಹ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವನ್ನು ಕೂಡಾ ತಂದಿರುವುದು ಅಭಿವೃದ್ಧಿಯ ಸಂಕೇತವೇ ಸರಿ. ‘ಅಭಿವೃದ್ಧಿಯಾಗಬೇಕಾದರೆ ಕೇವಲ ಆಥರ್ಿಕವಾಗಿ ಸಾಧ್ಯವಿಲ್ಲ ಸಾಮಾಜಿಕ ಅಭಿವೃದ್ಧಿಯು ಜೊತೆಗೆ ಬೇಕು’ ಎನ್ನುವಂತೆ ನಿರಂತರ ಮಾರ್ಗದರ್ಶನದೊಂದಿಗೆ ಪೂಜ್ಯರ ಧರ್ಮಪತ್ನಿಯವರಾದ ಮಾತೃಶ್ರೀ ಹೇಮಾವತಿ ಹೆಗ್ಗಡೆ ಇವರು ಕೂಡಾ ತಮ್ಮನ್ನು ಇದಕ್ಕಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.

ಮಾರ್ಚ 8, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸನ್ನದ್ದರಲ್ಲಿರುವ ನಾವು ಮಹಿಳಾ ಸಬಲೀಕರಣಕ್ಕೆ ಸ್ತ್ರೀವಾದಿಗಳ ಮಹಿಳಾ ಹಕ್ಕುಗಳ, ಸಮಾನತೆಯ ಘೋಷಣೆಗಳು ಎಲ್ಲಡೆ ಕೇಳಿಬರುವ ಇಂತಹ ದಿನಗಳಲ್ಲಿ ಮಹಿಳೆಯ ಮೂಲತ: ಬುನಾದಿಯಲ್ಲಿ ಜ್ಞಾನದ ಕೊರತೆಯ ಅರಿವನ್ನು ಅರಿತು ಮಹಿಳೆಯರಿಗೆ ಕನಿಷ್ಠ ಜ್ಞಾನಾರ್ಜನೆಗೆ ಅಗತ್ಯವಿರುವ ವಿಷಯಗಳಾದ ಕೌಟುಂಬಿಕ ಸಾಮರಸ್ಯ, ಆರೋಗ್ಯ-ನೈರ್ಮಲ್ಯ, ಶಿಕ್ಷಣ, ಕಾನೂನು, ಸರಕಾರಿ ಸೌಲಭ್ಯಗಳು, ಸ್ವ ಉದ್ಯೋಗ ಕುರಿತಂತೆ ಹಲವಾರು ಮಾಹಿತಿಗಳನ್ನು ಗ್ರಾಮೀಣ ಮಹಿಳೆಯರಲ್ಲಿ ತಲುಪಿಸುವಲ್ಲಿ ವಿಶೇಷ ತರಬೇತಿಗಳನ್ನು ತರಬೇತಿ ಸಂಸ್ಥೆಯ ಮೂಲಕ ಉಚಿತವಾಗಿ ಹಮ್ಮಿಕೊಳ್ಳುತ್ತಿರುವುದು. ಈಗಾಗಲೇ ಕನರ್ಾಟಕದ 25 ಜಿಲ್ಲೆಗಳಲ್ಲೂ ವಿಸ್ತರಣೆಗೊಂಡಿರುವ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ತಲುಪಿಸುವಲ್ಲಿ ಪ್ರತಿ ತಾಲ್ಲೂಕಿಗೆ 25 ಸ್ಥಳೀಯ ಸದಸ್ಯರಿಗೆ ಗೌರವಧನದೊಂದಿಗೆ ನೀಡಿ, ಇದರ ಪ್ರಯೋಜನವನ್ನು ಗ್ರಾಮೀಣ ಪ್ರದೇಶದ ಪ್ರಾಥಮಿಕ ಮಟ್ಟದ ಮಹಿಳೆಯರಿಗೆ ಕುಟುಂಬಗಳಿಗೆ ತಲುಪಿಸುವುದಾಗಿರುತ್ತದೆ. ಇವರಿಗೆ ಮಾರ್ಗದರ್ಶನ ನೀಡುವಲ್ಲಿ ಪ್ರಾದೇಶಿಕ ಮತ್ತು ಜಿಲ್ಲೆಯ ನಿದರ್ೇಶಕರು, ತಾಲ್ಲೂಕಿನ ಯೋಜನಾಧಿಕಾರಿಗಳು ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ಪ್ರೇರಣೆಯನ್ನು ತರುವವಾಗಿರುತ್ತಾರೆ. ತನ್ಮೋಲಕ ‘ಜನಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರ ಅಭಿವೃದ್ಧಿಯಾದರೆ, ಕುಟುಂಬದ ಅಭಿವೃದ್ಧಿ, ಹೀಗೆ ಕುಟುಂಬದಿಂದ ದೇಶದ ಅಭಿವೃದ್ಧಿ ಸಾಧ್ಯ’ ಎಂಬ ವಿಚಾರದಂತೆ ಈ ಕುರಿತು ಹಲವಾರು ಚಿಂತನೆ-ಮಂಥನೆ, ಮಹಿಳಾ ಘೋಷ್ಠಿ, ಮಾಹಿಳಾ ಕಾರ್ಯಗಾರ, ತರಬೇತಿಗಳ ಆಯೋಜನೆಗಳು ಕಾರ್ಯಕ್ಷೇತ್ರದಲ್ಲಿ ಹಮ್ಮಿಕೊಳ್ಳುತ್ತಿರುವುದು ಅಷ್ಠೇ ವಿಶೇಷ.
ಇಲ್ಲಿ ಹಳ್ಯಾಳದ ಒಬ್ಬ ಮಹಿಳೆ ಶ್ರೀಮತಿ ರೇಣುಕಾ ಒಂದು ಉದಾಹರಣೆಯು ಮಾತ್ರ. ಇದೇ ರೀತಿ ಹಲವಾರು ಮಹಿಳೆಯರು ದಾಂಡೇಲಿ ಹಳ್ಯಾಳಗಳ ತಾಲ್ಲೂಕುಗಳನ್ನು ಒಟ್ಟು ಗೂಡಿಸಿ ಒಟ್ಟು 286 ಸ್ವ ಉದ್ಯೋಗದಲ್ಲಿ ತೊಡಗಿದ ಮಹಿಳೆಯರೇ ಸಾಕ್ಷಿ, ಇವರಲ್ಲಿ ಸೇವಾ ವಲಯದಲ್ಲಿ ತೊಡಗಿಸಿಕೊಂಡ ಕುಟುಂಬದ ವಿವರ ಹೀಗಿದೆ. ವೇದ ಜ್ಯೋತಿಷಿ ಸೇವೆಯಲ್ಲಿ-1, ಗಿರಣಿ-5, ಬ್ಯೂಟಿಸಿಯನ್ ಸೇವೆ-12, ಹೂವಿನ ವ್ಯಾಪಾರ-8, ಬಳೆ ವ್ಯಾಪಾರ-8, ಬಟ್ಟೆ ವ್ಯಾಪಾರ-12, ಸಂಚಾರಿ ಆಹಾರ ಮಾರಾಟ-4, ತರಕಾರಿ ಮಾರಾಟ-18, ಕಿರಾಣಿ ದಿನಸಿ ಅಂಗಡಿ-9, ಪೆಂಡಾಲ್ ಸೇವೆ-4, ಮೀನ ವ್ಯಾಪಾರ-6, ಹೂವಿನ ವ್ಯಾಪಾರ-8, ಛಾಯಾಚಿತ್ರ-01, ಹೈನುಗಾರಿಕೆಯಲ್ಲಿ-88.. ಅದೆ ರೀತಿ ಉತ್ಪಾದನಾ ವಲಯದಲ್ಲಿ ಪೀನಾಯಿಲ್ ತಯಾರಿಕೆ-1, ಬ್ಯಾಗ ತಯಾರಿಕೆ -6, ಗೊಂಬೆ ತಯಾರಿಕೆ-8, ಅಗರಭತ್ತಿ-16, ಅಲಂಕಾರಿಕ ವಸ್ತುಗಳ ತಯಾರಿ-8, ಸಿಹಿತಿಂಡಿ ವ್ಯಾಪಾರ-5, ಟೇಲರಿಂಗ್-45, ತಬಲಾ ತಯಾರಿಕಾ-1 ಕುಟುಂಬ ಗಳಿರುತ್ತವೆ. ಇದರಂತೆ ಯೋಜನೆಯ ಅನುಷ್ಠಾನಗೊಂಡ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಕೂಡಾ ಅಳವಡಿಸುತ್ತಿದ್ದು, ಪ್ರದೇಶ, ಸಂಪನ್ಮೂಲಗಳ ಲಭ್ಯತೆಗಳಿಗೆ ವ್ಯತ್ಯಾಸಗಳಿದ್ದು, ಒಟ್ಟಿನಲ್ಲಿ ಹನಿ ಹನಿ ಆಥರ್ಿಕ ಬಲ ಹೆಮ್ಮೆರವಾಗುವಲ್ಲಿ ಸಂದೇಹವೆ ಇಲ್ಲ. ಇದಕ್ಕೆ ಪೂರಕವಾಗಿ ಯೋಜನೆಯ ಬೇರೆ ಬೇರೆ ಸಂಘಟನಾ ಕಾರ್ಯಕ್ರಮಗಳಲ್ಲಿಯೂ ಕೂಡಾ ಸಣ್ಣ ಪ್ರಮಾಣದ ಮಾರುಕಟ್ಟೆಗೆ ಅವಕಾಶ, ಜನಸಂಘಟನೆಯ ಸಹಕಾರಕ್ಕೂ ಕೂಡಾ ಪ್ರೇರಣಾತ್ಮಕವಾಗಿರುವುದು.
ಹೀಗೆ ಆಥರ್ಿಕವಾಗಿ ಸಹಾಯವನ್ನು ಪಡೆದುಕೊಂಡಿದ್ದು, ಜೊತೆಗೆ ಮಾರುಕಟ್ಟೆಯಲ್ಲಿ ಎದುರಿಸುವ ಜ್ಞಾನ, ಕುಟುಂಬದ ನಿರ್ವಹಣೆಗೆ ಪತಿಗೆ ಸಹಕಾರ, ಪತಿಯೊಂದಿಗೆ ವ್ಯಾಪಾರದಲ್ಲಿ ಸನ್ನದ್ಧ ಜೊತೆಗೆ ವಯಕ್ತಿಕವಾಗಿ ಮಾತುಗಾರಿಕೆಯ, ನಾಯಕತ್ವದ ತೊಡಗುವಿಕೆ, ಆತ್ಮವಿಶ್ವಾಸ ಮತ್ತು ದೃಢನಿಧರ್ಾರದ ಬೆಳವಣಿಗೆಗೆ ಜ್ಞಾನವರ್ಜನೆಯ ಸಫಲತೆಗೆ ಅವಕಾಶವು ದೊರೆತಿದ್ದು ವಿಶೇಷವೆ ಸರಿ. ಅರ್ಥಪೂರ್ಣ ಮಹಿಳಾ ಸಬಲೀಕರಣದತ್ತ ಇಂತಹ ಜ್ಞಾನವಿಕಾಸ ಹೆಜ್ಜೆಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥವನ್ನು ತರುವದಾಗಿದ್ದು, ನಾವು ಈ ದಿನದಲ್ಲಿ ಮೆಲಕು ಹಾಕುವುದು ಮಹತ್ವವೇ ಸರಿ

2 thoughts on “ತೊಟ್ಟಿಲು ತೂಗುವ ಕೋಮಲ ಕೈ, ತಬಲಾ ತಯಾರಿಯಲ್ಲಿಯೂ ಸೈ

Leave a Reply

Your email address will not be published. Required fields are marked *