success storyUncategorizedWomen Empowerment

ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ

ಓ ಕಸಮರಿಕೆ (ಪೊರಕೆ)ಯೇ ನೀನೆಷ್ಟು ಅದ್ಭುತ !!!
ರೇಣುಕಮ್ಮನ ಬದುಕು ರೂಪಿಸಿದ ಕಸಮರಿಕೆ(ಪೊರಕೆ) ತಯಾರಿಕಾಉದ್ಯಮ

ಕೌಟುಂಬಿಕ ಹಿನ್ನೆಲೆ:

ರೇಣುಕಮ್ಮನವರು ಶಿಕಾರಿಪುರ ತಾಲೂಕಿನ ಶ್ರೀ ವಿಠಲ ದೇವಸ್ಥಾನ ಎದುರುಗಡೆಯ ಸಣ್ಣದಾದ ಮನೆಯಲ್ಲಿ ವಾಸವಿದ್ದು ಅಂಬಾಭವಾನಿ ಸ್ವ ಸಹಾಯ ಸಂಘದ ಸದಸ್ಯರಾಗಿದ್ದು, ಗಂಡನಾದ ಕರಿಬಸಪ್ಪ ಆರ್.ವಿ, ಅತ್ತೆ, ಮಾವ ಮತ್ತು ತನ್ನಿಬ್ಬರು ಮಕ್ಕಳಾದ 13 ವರ್ಷದ ವಿಜಯ್, 12 ವರ್ಷದ ಕಾತರ್ಿಕ್ರ ತುಂಬು ಕುಟುಂಬವಾಗಿತ್ತು. ಮದುವೆಯಾದ ಒಂದು ವರ್ಷದ ತರುವಾಯ ಅತ್ತೆ ಹಾಗೂ ಮಾವಂದಿರು ತೀರಿಕೊಂಡಿರುತ್ತಾರೆ. ಬಿ.ಕಾಂ ಪದವೀಧರರಾಗಿದ್ದರೂ ಕರಿಬಸಪ್ಪನವರರದು ತಳ್ಳು ಗಾಡಿಯಲ್ಲಿತಿಂಡಿ ಹಾಗೂ ಗೋಭಿ ಮಂಚೂರಿ ವ್ಯಾಪಾರವನ್ನು ಮಾಡುತ್ತಿದ್ದರು, ಇದಕ್ಕೆ ಕಾರಣ ಕುಡಿತದ ಚಟ ಹಾಗಿದ್ದರೂ ಕುಟುಂಬಕ್ಕೆ ಯಾವುದೇ ರೀತಿಯ ಸಹಕಾರವನ್ನು ಮಾಡಿದವರಲ್ಲ. ತಾನಾಯಿತು ತನ್ನ ವ್ಯಾಪಾರವಾಯಿತು, ತನ್ನ ಕುಡಿತವಾಯಿತು ಎಂದು ಬದುಕುತ್ತಿದ್ದವರು. ಮನೆಯ ಹೆಣ್ಣು ಮಗಳಾದ ನೀನು ದುಡಿದು ದುಡ್ಡು ಸಂಪಾದಿಸಿ ಏನಾಗಬೇಕಿದೆ, ಮನೆಯ ಕೆಲಸಗಳನ್ನು ಮಾಡಿಕೊಂಡು ಬಿದ್ದಿರು ಎಂಬ ಗಂಡನ ಚುಚ್ಚು ಮಾತು ಹಾಗೂ ಅತ್ತಿಗೆಯು ನಮ್ಮ ಮನೆಗೆ ಪಾತ್ರೆ ಮತ್ತು ಬಟ್ಟೆ ತೊಳೆಯಲು ಬಾ ಎಂಬ ಮಾತುಗಳು ಹಾಗೂ ದೈಹಿಕ ಹಾಗೂ ಮಾನಸಿಕ ಕಿರುಕುಳ ಪ್ರತೀ ದಿನವಿತ್ತು. ಇದರಿಂದ ಮನನೊಂದು ಮನೆಯಿಂದ 2 ಕಿ.ಮೀ ದೂರದಲ್ಲಿ ಇರುವ ಕೆರೆಗೆ ತನ್ನ ಎರಡು ಮಕ್ಕಳನ್ನು ದೂಡಿತಾನೂ ಸಾಯಬೇಕೆಂದು ಮಕ್ಕಳ ಸಮೇತರಾಗಿ ಕೆರೆಯಲ್ಲಿ ಬಹಳ ದೂರ ಇಳಿದು ನಡೆದುಕೊಂಡು ಹೋದಾಗ ಸಣ್ಣ ಮಗನ ಅಮ್ಮಾ ಬೇಡಮ್ಮಾ ಭಯವಾಗುತ್ತೆ ಎಂಬ ಮಾತಿನಿಂದ ಮನ ಕರಗಿ ಹೇಗಾದರೂ ಮಾಡಿ ನನ್ನಿಬ್ಬರು ಮಕ್ಕಳನ್ನು ಸಾಕಬೇಕು; ಸಾಕಿ ಸಲಹಬೇಕು ಎಂಬ ಛಲದೊಂದಿಗೆ ವಾಪಸ್ಸು ಬರುತ್ತಾರೆ ರೇಣುಕಮ್ಮ.

ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯಳಾಗಿ ರೇಣುಕಮ್ಮ:

ಹಲವಾರು ಸಂಘ ಸಂಸ್ಥೆಗಳಲ್ಲಿ ತಾನು ಇದ್ದರೂ ಸಹಾ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶಕ್ತಳಾಗದೇ ಇದ್ದ ರೇಣುಕಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು 2007ನೇ ಇಸವಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ವಿಸ್ತರಣೆಗೊಂಡಾಗ ಶಿಕಾರಿಪುರ ತಾಲೂಕಿನ ಶಿಕಾರಿಪುರ-ಂ ಕಾರ್ಯಕ್ಷೇತ್ರದ ಶ್ರೀ ವಿಠಲ ದೇವಸ್ಥಾನ ಅಕ್ಕ ಪಕ್ಕದ ಸುಮಾರು 15 ಮಂದಿ ಮಹಿಳೆಯರು ಒಟ್ಟು ಸೇರಿ ದಿನಾಂಕ 12.07.2009 ರಂದುಶ್ರೀ ಅಂಬಾಭವಾನಿ ಸ್ವ ಸಹಾಯ ಸಂಘವನ್ನು ಪ್ರಾರಂಭಿಸಿದ್ದು ಅದರಲ್ಲಿ 43 ವರ್ಷ ವಯಸ್ಸಿನ ರೇಣುಕಮ್ಮನವರೂ ಒಬ್ಬರು. ರೇಣುಕಮ್ಮ ಕೇವಲ ನಾಲ್ಕನೇ ತರಗತಿ ವಿದ್ಯಾಭ್ಯಾಸ ಮಾಡಿ ಸಂಘದಲ್ಲಿ ಸದಸ್ಯರಾಗಿ, ಪ್ರಬಂಧಕನಾಗಿಯೂ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಸ ್ವಉದ್ಯೋಗದೆಡೆಗೆ ಮನಸ್ಸು ಮಾಡಿದರೇಣುಕಮ್ಮ:

ಸಂಘಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ ರೇಣುಕಮ್ಮನವರ ಒಂಟಿ ಬದುಕನ್ನು ಕಂಡ ಸಂಘದ ಇತರ ಸದಸ್ಯರು ಸಾಲ ಕೊಡಲು ಸಾಧ್ಯವಿಲ್ಲ, ಸಾಲ ಕೊಟ್ಟರೆ ಏನೂ ಇಲ್ಲದ ನೀನು ಊರು ಬಿಟ್ಟು ಹೋಗುತ್ತೀಯಾ, ಹಾಗೂ ಜಾಮೀನಿನ ಕೊರತೆಯಿಂದಾಗಿ ನಿರಾಕರಿಸಿದ್ದರು. ಆದರೆ ಶಿವಮೊಗ್ಗದಲ್ಲಿ ಬಟ್ಟೆ ಅಂಗಡಿಯನ್ನು ನಡೆಸುತ್ತಿರುವ ಸಹೋದರ ಜಾಮೀನು ನೀಡಿದ ನಂತರ ಸದಸ್ಯರು ಸಾಲವನ್ನು ನೀಡಿರುತ್ತಾರೆ.

ಸಂಘಕ್ಕೆ ಸೇರಿದ ಪ್ರಾರಂಭಿಕ ಹಂತದಲ್ಲಿ ಹೈನುಗಾರಿಕೆಯನ್ನು ಮಾಡುವ ತೀವ್ರವಾದ ಆಸಕ್ತಿಯಿಂದ ಗುಂಪಿನಿಂದ ರೂ.10,000/- ಸಾಲ ಪಡೆದು ಒಂದು ಆಕಳನ್ನು ಖರೀದಿಸಿ ಹೈನುಗಾರಿಕೆ ಪ್ರಾರಂಭಿಸಿದ ರೇಣುಕಮ್ಮ, ಅನಾರೋಗ್ಯದಿಂದ ಆಕಳು ಮರಣ ಹೊಂದಿದಾಗ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸಲಹೆಯಂತೆ ಮಾಡಿದ ಜಾನುವಾರು ವಿಮೆಯ ಕಾರಣವಾಗಿ ಆಥರ್ಿಕ ಹೊಡೆತದಿಂದ ಮತ್ತೊಮ್ಮೆ ಬಚಾವಾದರು.

ಬಹಳ ಕಷ್ಟದಿಂದಲೇ ಜೀವನ ಸಾಗಿಸುತ್ತಿದ್ದ ರೇಣುಕಮ್ಮನಿಗೆ ಹೈನುಗಾರಿಕೆ ಉದ್ಯಮದಲ್ಲಿ ಸಫಲತೆ ಸಿಗದೇ ಇದ್ದಾಗ ಹೇಗಾದರೂ ಮಾಡಿ ಒಳ್ಳೆಯ ಆದಾಯವನ್ನು ಗಳಿಸಬೇಕೆಂಬ ಯೋಚನೆಯನ್ನು ಮಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಕೂಡಲೇ ಹೊಳೆದದ್ದು ಕಸಮರಿಕೆ ವ್ಯಾಪಾರ (ಗೃಹ ಚಾಮರ, ಹಿಡಿಸೂಡಿ ಅಥವಾ ಪೊರಕೆ ತಯಾರಿಕೆ).

ಕಸಮರಿಕೆ (ಪೊರಕೆ)ಯೆಂದರೆ ಎಲ್ಲರಿಗೂ ಏನೋ ಒಂದು ರೀತಿಯ ತಾತ್ಸಾರ ಹಾಗೂ ತಿರಸ್ಕಾರ. ಏಕೆಂದರೆ ಇದು ಕಸ ಹಾಗೂ ತ್ಯಾಜ್ಯಗಳನ್ನು ಗುಡಿಸಲು ಅಥವಾ ಪರಿಸರವನ್ನು ಶುಚಿಯಾಗಿಡಲು ಬಳಸುವ ವಸ್ತುವಾಗಿರುವುದು ಹಾಗೂ ಇದನ್ನು ಶುಚಿ ಮಾಡುವ ಕೆಲಸಕ್ಕಷ್ಟೇ ಬಳಸಿ ನಂತರ ಯಾವುದೇ ಉಪಯೋಗಕ್ಕಿಲ್ಲದಂತೆ ಮೂಲೆಯಲ್ಲಿಡುವುದೇ ಇದಕ್ಕಿರುವ ಪ್ರಮುಖ ಕಾರಣ. ಸಾಮಾನ್ಯವಾಗಿ ಕಸಮರಿಕೆಯನ್ನು ಮನೆಯ ಕಸ ಗುಡಿಸಲು (ಕಸ ಹೊಡೆಯಲು), ಬಲೆ ತೆಗೆಯಲು, ಶೌಚಾಲಯ ತೊಳೆಯಲು, ಮನೆಯಂಗಳವನ್ನು ಶುಚಿಯಾಗಿಡಲು ಬಳಸುತ್ತಾರೆ. ಇಂತಹ ಒಂದು ಕಸಮರಿಕೆ ತಯಾರಿಕೆಯನ್ನೇ ತನ್ನ ಬದುಕನ್ನು ರೂಪಿಸುವ ಉದ್ಯಮವನ್ನಾಗಿ ರೇಣುಕಮ್ಮ ಪ್ರಾರಂಭಿಸಿರುವುದು ವಿಶೇಷ.

ತನ್ನ ಸಂಘದಿಂದ ಸಿಗುವ ಬೆಂಬಲ, ಗ್ರಾಮಾಭಿವೃದ್ಧಿ ಯೋಜನೆಯ ಮಾರ್ಗದರ್ಶನ ಹಾಗೂ ಸುಲಭದಲ್ಲಿ ಸಿಗುವ ಸಾಲದ ವ್ಯವಸ್ಥೆ ಇರುವುದರಿಂದ ಎದೆಗುಂದದ ರೇಣುಕಮ್ಮ ಸ್ವಲ್ಪವೂ ವಿಳಂಬಿಸದೆ ತನ್ನ ಸ್ವ ಸಹಾಯ ಸಂಘದಿಂದ ರೂ.10,000/- ಪ್ರಾರಂಭಿಕ ಬಂಡವಾಳದೊಂದಿಗೆ ಸ್ವ ಉದ್ಯೋಗವನ್ನು ಪ್ರಾರಂಭಿಸಿದರು. ಕಸಮರಿಕೆ ತಯಾರಿಸಬೇಕೆಂದರೆ ಅದಕ್ಕೆ ಬೇಕಾಗುವ ಕಚ್ಛಾ ಸಾಮಾಗ್ರಿಗಳು ಒಂದೇ ಕಡೆ ದೊರೆಯದಿರುವುದೇ ಬಹಳ ದೊಡ್ಡ ಸಮಸ್ಯೆಯಾಗಿದ್ದು, ಕಸಮರಿಕೆಯ ಪ್ಲಾಸ್ಟಿಕ್ ಹಿಡಿಯನ್ನು ಹುಬ್ಬಳ್ಳಿಯಿಂದ ಮತ್ತು ಕಚ್ಛಾ ಹುಲ್ಲನ್ನು ಕೊಲ್ಲೂರು, ಸಾಗರದ ಸಿಗಂಧೂರು ಮತ್ತು ಶಿವಮೊಗ್ಗದಿಂದ ತಾನೇ ಸ್ವತಹ ಖರೀದಿಸಿ ತರುತ್ತಿದ್ದಾರೆ. ಇವರ ಬೆಂಬಲಕ್ಕೆ ನಿಂತ ಸಹೋದರ ಪ್ಲಾಸ್ಟಿಕ್ ಹಿಡಿಯನ್ನು ಜೋಡಿಸುವ ಯಂತ್ರವನ್ನು ಚಿತ್ರದುರ್ಗ ಹಾಗೂ ಶಿವಮೊಗ್ಗದಿಂದ ಹಳೆಯ ಮೋಟಾರು ಹಾಗೂ ಅದರ ಇತರ ಬಿಡಿ ಭಾಗಗಳನ್ನು ತಂದು ರೂ.15,000/- ವೆಚ್ಚದಲ್ಲಿ ಜೋಡಿಸಿ ತಯಾರಿಸಿ ಕೊಟ್ಟಿರುತ್ತಾರೆ.

ತುತರ್ು ಕಚ್ಚಾ ಸಾಮಾಗ್ರಿಗಳ ಖರೀದಿಗೆ ರೂ.3% ತಿಂಗಳ ಬಡ್ಡಿದರದಲ್ಲಿ ಕೈಸಾಲವನ್ನು ಅಥವಾ ಬಂಗಾರದ ಅಡಮಾನದ ಮೂಲಕ ಹಣಕಾಸಿನ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಧೈರ್ಯಸ್ಥೆ ರೇಣುಕಮ್ಮ. ಇವರು ಆಥರ್ಿಕವಾಗಿ ಸಾಕ್ಷರರು, ಭವಿಷ್ಯ ಹಾಗೂ ವಾಸ್ತವದ ಬಗ್ಗೆ ಯೋಚನೆಯನ್ನೂ ಮಾಡುತ್ತಾರೆ.

ತಾನು ತಯಾರಿಸಿದ ಕಸಮರಿಕೆಗೆ ಉತ್ತಮ ಮಾರುಕಟ್ಟೆಯೂ ಇದ್ದು ತನ್ನ ಮನೆಯಂದಲೇ ಗ್ರಾಹಕರು ಬಂದು ಖರೀದಿಸುತ್ತಿದ್ದು, ಶಿಕಾರಿಪುರದಲ್ಲಿ ಶನಿವಾರ ದಿವಸ ಸಂತೆ ಮಾರುಕಟ್ಟೆಯಲ್ಲಿ ಚಿಲ್ಲರೆ ಹಾಗೂ ರಖಂ ದರದಲ್ಲಿ ಗ್ರಾಹಕರು ಹಾಗೂ ವ್ಯಾಪಾರಿಗಳೇ ಖರೀದಿಸುತ್ತಾರೆ. ತಾನು ವಾರ ಪೂತರ್ಿ ತಯಾರಿಸಿದ ಕಸಮರಿಕೆ ಕೇವಲ ಒಂದೇ ದಿನದಲ್ಲಿ ಪೂತರ್ಿಯಾಗಿ ಮಾರಾಟವಾಗುತ್ತದೆ ಎಂದು ಖುಷಿಯಿಂದ ಹೇಳುತ್ತಾರೆ.

ಬಾಲ್ಯದಲ್ಲಿಯೇ ಬಹಳ ಚಟುವಟಿಕೆಯಿಂದ ಇರುತ್ತಿದ್ದ ರೇಣುಕಮ್ಮ ತನ್ನ ಪೋಲಿಯೋ ಪೀಡಿತ ಅಂಗವಿಕಲ ಸಹೋದರನನ್ನು ಬಹಳ ಮಮತೆಯಿಂದ ಆರೈಕೆ ಮಾಡುತ್ತಾ ಬೆಳೆದವರು. ತಂದೆಯು ಶಿಸ್ತಿನ ಸಿಪಾಯಿಯಾಗಿದ್ದು ಹೆಣ್ಣೆಂಬ ತಾತ್ಸಾರದಿಂದ ಮಗಳನ್ನು ಬೆಳೆಸದೇ ಆಕೆಯ ಜೀವನಕ್ಕೆ ಬೇಕಾಗುವಷ್ಟು ದೈನಂದಿನ ಉಳಿತಾಯ, ದೈನಂದಿನ ಖಚರ್ಿನ ನಿರ್ವಹಣೆ, ಭವಿಷ್ಯದ ಹೂಡಿಕೆಯ ಬಗ್ಗೆ ಸಾಮಾನ್ಯ ಜ್ಞಾನವನ್ನು ನೀಡಿರುವುದೂ ನನ್ನ ಇಂದಿನ ಆತ್ಮವಿಶ್ವಾಸದ ಬದುಕಿಗೆ ಕಾರಣವಾಗಿದೆ ಎಂದು ನೆನೆಯುತ್ತಾರೆ.

ವಾರದಲ್ಲಿ ಸರಾಸರಿ 55-60 ಕಸಮರಿಕೆಯನ್ನು ರೇಣುಕಮ್ಮ ತಯಾರಿಸುತ್ತಿದ್ದು, ಜೋಡಿ ಕಸಮರಿಕೆಗೆ ರೂ.30/- ರಿಂದ ರೂ.40/- ರವರೆಗೆ ಮಾರುಕಟ್ಟೆಯಲ್ಲಿ ಬೆಲೆ ಇದೆ. ವಾರದಲ್ಲಿ ರೂ.2,500/- ರಷ್ಟು ಕಸಮರಿಕೆ ವ್ಯಾಪಾರದಿಂದ ಆದಾಯವನ್ನು ಗಳಿಸುತ್ತಿದ್ದು, ಸ್ವಲ್ಪ ಮೊತ್ತವನ್ನು ಕಸಮರಿಕೆ ತಯಾರಿಕೆಯ ಖಚರ್ಿಗಾಗಿ ಬಳಸುತ್ತಿದ್ದು, ಸ್ವಲ್ಪ ಮೊತ್ತವನ್ನು ದೈನಂದಿನ ಖಚರ್ಿನ ನಿರ್ವಹಣೆಗೆ, ರೂ.500/- ಉಳಿತಾಯ ಪಾವತಿ ಹಾಗೂ ರೂ.500/- ಪ್ರಗತಿನಿಧಿಯನ್ನು ಸ್ವಾವಲಂಬಿಯಾಗಿ ಮರು ಪಾವತಿಯನ್ನು ಮಾಡುತ್ತಿದ್ದಾರೆ

ರೇಣುಕಮ್ಮನವರಲ್ಲಿ ಧೈರ್ಯ ತುಂಬಿದ ಗ್ರಾಮಾಭಿವೃದ್ಧಿ ಇತರ ಯೋಜನೆಯ ಸೌಲಭ್ಯಗಳು:

ವಾರದಲ್ಲಿ ರೂ.20/- ರಂತೆ ಉಳಿತಾಯವನ್ನು ಮಾಡುತ್ತಿರುವ ರೇಣುಕಮ್ಮ ಒಟ್ಟು ರೂ.3,750/- ಉಳಿತಾಯವನ್ನು ಹೊಂದಿದ್ದಾರೆ. ಯೋಜನೆಯಿಂದ ಪ್ರಾರಂಭದಲ್ಲಿ ಹೈನುಗಾರಿಕೆಗಾಗಿ ರೂ.10,000/-ಕಸಮರಿಕೆ ವ್ಯಾಪಾರ ಪ್ರಾರಂಭಿಸಲು ರೂ.30,000/-, ಸ್ವಉದ್ಯೋಗ ವಿಸ್ತರಣೆಗಾಗಿ ರೂ.60,000/- ಪ್ರಗತಿನಿಧಿಯನ್ನು ಪಡೆದುಕೊಂಡು ಕಸಮರಿಕೆ ತಯಾರಿಕೆ ಹಾಗೂ ಮಾರಾಟ ಮಾಡುತ್ತಿದ್ದಾರೆ. ಒಟ್ಟು ಏಳು ವರ್ಷವೂ ಯೋಜನೆಯ ವತಿಯಿಂದ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡಿದ್ದು, ಪ್ರಯೋಜನವನ್ನೂ ಪಡೆದುಕೊಂಡಿರುತ್ತಾರೆ. ಕೇಂದ್ರ ಸರಕಾರದ ಕಿರು ಆಥರ್ಿಕ ವಿಮೆಯಾದ ಎರಡು ಜೀವನ ಮಧುರಾ ಪಾಲಿಸಿಯನ್ನು ತನ್ನ ಹೆಸರಿಗೆ (ರೂ. 600/-ರಂತೆ ಅರ್ಧ ವಾಷರ್ಿಕವಾಗಿ ಪಾವತಿಸುವ ಒಟ್ಟು ಮೊತ್ತ ರೂ.12,000/- ಹತ್ತು ವರ್ಷದ ಅವಧಿಗೆ ಹಾಗೂ ರೂ.2,000/- ವಾಷರ್ಿಕ ಪಾವತಿಯ ಹದಿನೈದು ವರ್ಷ ಅವಧಿಯ ರೂ.30,000/- ಮೊತ್ತದ ಪಾಲಿಸಿಯನ್ನು) ಹಾಗೂ ತನ್ನ ಗಂಡನ ಹೆಸರಿಗೆ ಮಾಡಿಸಿರುತ್ತಾರೆ. ಎರಡನೇ ವರ್ಷದ ಪ್ರೀಮಿಯಂ ಮೊತ್ತ ತುಂಬಿದ ಎರಡನೇ ದಿನವೇ ಗಂಡನಾದ ಕರಿಬಸಪ್ಪನವರು ಅಧಿಕ ರಕ್ತದೊತ್ತದ, ಪಿತ್ತ ಜನಕಾಂಗದ ಸೋಂಕು, ಮಧುಮೇಹ ಹಾಗೂ ಕಿಡ್ನಿ ಸಮಸ್ಯೆ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ನಾಲ್ಕು ವರ್ಷಗಳ ಹಿಂದೆ ತೀರಿಕೊಂಡಿರುತ್ತಾರೆ. ಮಣಿಪಾಲದ ಕಸ್ತೂಬರ್ಾ ವೈದ್ಯಕೀಯ ಆಸ್ಪತ್ರೆಗೆ ದಾಖಲಾದಾಗ ರೂ.26,000/- ವರೆಗೆ ಆಸ್ಪತ್ರೆಯ ವೆಚ್ಚಗಳು ಸಂಪೂರ್ಣ ಸುರಕ್ಷಾದಿಂದ ಉಚಿತವಾಗಿ ದೊರಕಿದ್ದು, ರೂ.18,000/- ಮೊತ್ತದ ಪರಿಹಾರ ಮೊತ್ತವು ಜೀವ ವಿಮಾ ನಿಗಮದಿಂದ ದೊರಕಿರುವುದರಿಂದ ತೀವ್ರ ಆಥರ್ಿಕ ಹೊಡೆತದಿಂದ ಪಾರಾಗಿರುತ್ತಾರೆೆ.

ಸದ್ರಿ ಗ್ರಾಮಾಭಿವೃದ್ಧಿ ಯೋಜನೆಯಿಂದ ರೇಣುಕಾರವರಿಗೆ ಸರ್ವ ರೀತಿಯ ಸಹಕಾರ ಹಾಗೂ ಬದುಕು ಕಟ್ಟಿಕೊಳ್ಳುವ ಅವಕಾಶ ದೊರತಿರುತ್ತದೆ. ಸಂಘಕ್ಕೆ ಸೇರಿದ ಪ್ರಾರಂಭದಲ್ಲಿ ಕುರಿ ಸಾಕಾಣಿಕೆಯನ್ನೂ ಸ್ವಉದ್ಯೋಗವಾಗಿ ಮಾಡಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ.

ರೇಣುಕಮ್ಮನ ಆರೋಗ್ಯ ಹಾಗೂ ಲವಲವಿಕೆಯ ಗುಟ್ಟು:

ಸರಳ ಜೀವಿಯಾಗಿರುವ ರೇಣುಕಮ್ಮ ದೈನಂದಿನ ಆಹಾರವಾಗಿ ರೋಟಿ ಹಾಗೂ ಚಪಾತಿ ಮತ್ತು ಅನ್ನವನ್ನು ಸೇವಿಸುತ್ತಾರೆ. ದಿನದಲ್ಲಿ ಒಂದೂವರೆ ಗಂಟೆ ಯೋಗವನ್ನು ಮಾಡುತ್ತಿದ್ದು ಮುಖ್ಯವಾಗಿ ಕಪಾಲಬಾತಿ, ಅನುಲೋಮ, ವಿಲೋಮ, ಬಟರ್ಫ್ಲೈ ಹಾಗೂ ಸೂರ್ಯನಮಸ್ಕಾರವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಲವಲವಿಕೆಯಿಂದಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿರುತ್ತಾರೆ.

ರೇಣುಕಮ್ಮನ ಆತ್ಮವಿಶ್ವಾಸ:

ಕೇವಲ ನಾಲ್ಕನೇ ತರಗತಿಯಷ್ಟೇ ಓದಿರುವ ರೇಣುಕಮ್ಮ ನಾನೇನಾದರೂ ಹತ್ತನೇ ತರಗತಿಕಲಿತಿದ್ದರೆ ಖಂಡಿತಾ ಯಾವುದಾದರೊಂದು ಉದ್ಯೋಗದಲ್ಲಿರುತ್ತಿದ್ದೆ, ಆದರೆ ಬಿ.ಕಾಂ ಪದವಿಯನ್ನು ಮಾಡಿದ ನನ್ನ ಗಂಡ ಸದಾ ಕುಡಿತದ ಮತ್ತಿನಲ್ಲಿ ನನ್ನನ್ನು ಕೇವಲ ಮನೆಯ ಕೆಲಸದ ಆಳಿನ ರೀತಿ ದುಡಿಸಿ ತನ್ನೆಲ್ಲಾ ಹಕ್ಕುಗಳನ್ನು ಕಸಿದುಕೊಂಡು ಕಷ್ಟ ಕೊಟ್ಟು ನನ್ನನ್ನು ಸಾಯಿಸಲೂ ಪ್ರಯತ್ನಪಟ್ಟು ಮನೆಗೆ ಯಾವುದೇ ಸಹಾಯವನ್ನು ಮಾಡಿದವರಲ್ಲ, ಗಂಡ ಸತ್ತ ನಂತರ ನಾನು ಒಂಟಿಯಾಗಿಯಾದರೂ ಬಹಳ ನೆಮ್ಮದಿಯಿಂದ ಬದುಕುತ್ತಿದ್ದೇನೆ ಎನ್ನುತ್ತಾರೆ ರೇಣುಕಮ್ಮ.

ರೇಣುಕಮ್ಮನವರಿಗೆ ಇನ್ನೂ ಹೆಚ್ಚಿನ ಮಾರ್ಗದರ್ಶನದ ಅವಶ್ಯಕತೆಯಿದೆ ಹಾಗೂ ಸುಮಾರು ಐದು ಸೆಂಟ್ಸ್ನಷ್ಟು ಸ್ವಂತ ಜಮೀನಿದ್ದು, ಬಹಳ ಸಣ್ಣದಾದ ಗುಡಿಸಲಿನಂತಹ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಲ್ಲೇ ಒಂದು ಬದಿಯಲ್ಲಿ ಕಸಮರಿಕೆಯ ಕಚ್ಚಾ ಹುಲ್ಲಿನ ರಾಶಿ ಹಾಗೂ ಇನ್ನೊಂದು ಮಗ್ಗುಲಲ್ಲಿ ತನ್ನ ವಾಸ್ತವ್ಯ. ಮನೆಗೆ ಸರಿಯಾದ ಭದ್ರತೆಯ ವ್ಯವಸ್ಥೆಯಿಲ್ಲವಾಗಿದ್ದು ಮೂರು ನಾಲ್ಕು ಬಾರಿ ಕಳ್ಳರು ಮನೆಯ ಹೆಂಚು ತೆಗೆದು ಒಳ ನುಗ್ಗಿ ನಾಲ್ಕು ಬಾರಿ ಮೊಬೈಲ್, ಹಾಗೂ ಬೆಲೆ ಬಾಳುವ ಬೆಳ್ಳಿ ಹಾಗೂ ಸ್ವಲ್ಪ ದುಡ್ಡನ್ನು ಕಳ್ಳತನ ಮಾಡಿರುತ್ತಾರೆ.

ಇದ್ದ ಸ್ವಂತ ಜಮೀನಿನ ಪಕ್ಕದಲ್ಲೇ ಶೌಚಾಲಯವನ್ನೂ ನಿಮರ್ಿಸಿಕೊಂಡು ನೈರ್ಮಲ್ಯೀಕರಣದಲ್ಲೂ ಸೈ ಎನಿಸಿಕೊಂಡವರು. ಎರಡು ವರ್ಷಗಳ ಹಿಂದೆ ಪುರಸಭೆಯವರು ರಸ್ತೆ ವಿಸ್ತರಣೆಗೆಂದು ತನ್ನ ಶೌಚಾಲಯವನ್ನು ಒಡೆದುರಸ್ತೆ ವಿಸ್ತರಣೆ ಮಾಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬೆಳಿಗ್ಗೆ ಬೇಗನೇ ಎದ್ದು ಬಯಲು ಶೌಚಾಲಯಕ್ಕೆ ಹೋಗಬೇಕಾದ ಕಷ್ಟದ ಪರಿಸ್ಥಿತಿ ಬಂದೊದಗಿದೆ. ಹೊಸ ಶೌಚಾಲಯ ಕಟ್ಟಿಸಲು ಬೇಕಾದ ಜಮೀನಿದ್ದು ಮುಂದಕ್ಕೆ ಖಂಡಿತಾ ಮತ್ತೆ ಶೌಚಾಲಯ ಕಟ್ಟಿಸುತ್ತೇನೆ ಎಂದು ರೇಣುಕಮ್ಮ ಬಹಳ ಆತ್ಮವಿಶ್ವಾಸದಿಂದ ಹೇಳುತ್ತಾರೆ.

ವಿವಿಧ ಸ್ವಸಹಾಯ ಸಂಘಗಳಲ್ಲಿ ಇದ್ದಾಗ್ಯೂ ತನ್ನ ದೈನಂದಿನ ಆದಾಯೋತ್ಪಾದನೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಾವುದೇ ಯಶಸ್ಸನ್ನು ಕಾಣದ ರೇಣುಕಮ್ಮನವರ ಬಾಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಸಂಘದ ಸದಸ್ಯಳಾದ ನಂತರ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಹೊಸ ಬೆಳಕು ಮೂಡಿದ್ದು, ಯೋಜನೆಯ ಯಾವುದೇ ಕೆಲಸಗಳಿದ್ದಲ್ಲಿ ಅಥವಾ ಯಾವುದೇ ಕಾರ್ಯಕ್ರಮಗಳಿದ್ದಲ್ಲಿ ತಾನು ಅಲ್ಲಿ ಮುಂಚೂಣಿಯಲ್ಲಿ ನಿಂತು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ ಹಾಗೂ ತಾನು ಮಾಡುತ್ತಿರುವ ಕಸಮರಿಕೆ ವ್ಯವಹಾರವನ್ನು ಆಧುನಿಕೀಕರಣಗೊಳಿಸಿ ಇನ್ನೂ ಹೆಚ್ಚಿನ ಆದಾಯವನ್ನು ಗಳಿಸಬೇಕೆನ್ನುವ ಮಹದಾಸೆಯನ್ನು ರೇಣುಕಮ್ಮ ಹೊಂದಿದ್ದಾರೆ.

ಕಸಮರಿಕೆ ವ್ಯಾಪಾರವನ್ನು ಮಾಡುತ್ತಿರುವ ರೇಣುಕಮ್ಮರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಸಿಬ್ಬಂದಿಗಳಿಂದ ಉತ್ತಮ ಸಲಹೆ ಹಾಗೂ ಸಹಕಾರ ಹಾಗೂ ಮಾರ್ಗದರ್ಶನ ದೊರೆಯುತ್ತಿದ್ದು ಯೋಜನೆಯ ಅಧಿಕಾರಿ ವರ್ಗದವರನ್ನು ಕಣ್ಣು ತುಂಬಿ ನೆನೆಯುತ್ತಿದ್ದು ಇವರ ನಿರಂತರ ಅನುಪಾಲನೆ ಹಾಗೂ ಪ್ರೋತ್ಸಾಹದಿಂದಾಗಿ ರೇಣುಕಮ್ಮನವರ ಬದುಕಲ್ಲಿ ಹೊಸ ಆಶಾಕಿರಣವು ಮೂಡಿದಂತಾಗಿದೆ. ಸದ್ರಿ ಸ್ವಉದ್ಯೋಗದಲ್ಲಿ ರೇಣುಕಮ್ಮ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸುವಲ್ಲಿ ಕ್ಷೇತ್ರದ ಮಂಜುನಾಥ ಸ್ವಾಮಿಯ ಅನುಗ್ರಹ ಸದಾ ಇರಲೆಂದು ಹಾರೈಸೋಣ.

ಪೊರಕೆ ಪೊರಕೆಯೆಂದು ಹೀಗಳೆಯದಿರಿ….
ಪೊರಕೆಯೂ ರೂಪಿಸಬಲ್ಲದು ಜೀವನವನ್ನು….

Leave a Reply

Your email address will not be published. Required fields are marked *