success storyUncategorized

ಶ್ರೀ.ಕ್ಷೇ.ಧ.ಗ್ರಾ.ಯೋಜನೆ, ಕಿರು ಆಥರ್ಿಕ ವ್ಯವಹಾರದಿಂದ ಬಾಳಿನ ಉತ್ತುಂಗಕ್ಕೆ ಏರಿದ ಕೃಷಿ ಪಂಡಿತ ಆವಸರ್ೆ ಕೃಷ್ಣ ಕುಲಾಲ್

ಪ್ರಸ್ತಾವನೆ:-

ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 1982 ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭವಾದ ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ಎಸ್.ಕೆ.ಡಿ.ಆರ್.ಡಿ.ಪಿ) ಸಮಗ್ರ ಗ್ರಾಮಾಭಿವೃದ್ದಿ ಕಲ್ಪನೆಯನ್ನು ಸಾಕಾರಗೊಳಿಸಿ ಮಹತ್ವ ಪೂರ್ಣ ಸಾಧನೆ ಮಾಡಿದೆ. ಆಥರ್ಿಕ ಬೆಳವಣಿಗೆಯ ಪ್ರಕ್ರಿಯೆಯ ಪರಿಮಿತಿಯ ಹೊರಗುಳಿದಿದ್ದ ಸಣ್ಣ ಮತ್ತು ಅತಿ ಸಣ್ಣ ಕೃಷಿ ಕಾಮರ್ೀಕರು ಹಾಗೂ ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಈ ಯೋಜನೆಯ ಪಾಲುದಾರರಾಗಿದ್ದಾರೆ.ಅನೇಕರು ಈಗ ಅಭಿವೃದ್ದಿ ಪ್ರಜ್ಞೆಯುಳ್ಳ ಹಿತಾಸಕ್ತರಾಗಿ ವಿಕಸನ ಹೊಂದಿದ್ದಾರೆ.ಕಾಲಕಾಲಂತರಕ್ಕೆ ರೂಪಾಂತರಗೊಂಡ ಈ ಯೋಜನೆಯು ಕನರ್ಾಟಕದ ಇಪ್ಪತ್ತೈದು ಜಿಲ್ಲೆಗಳಲ್ಲಿ ಅನುಷ್ಟಾನಗೊಂಡು ತನ್ನ ಪ್ರಭಾವ ಬೀರುತ್ತಿದೆ.ಸುಮಾರು 33 ಲಕ್ಷ ಸದಸ್ಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಡಾ.ವೀರೇಂದ್ರ ಹೆಗ್ಗಡೆಯವರು ನುಡಿದಂತೆ ಯೋಜನೆಯ ಸಹಕಾರವನ್ನು ಪಡೆದ ಸಾಧಕರು ತಮ್ಮ ಕುಟುಂಬದ ಬದುಕು ರೂಪಿಸಿ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ.

ರೈತಾಪಿ ಕುಟುಂಬಗಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯೋಜನೆಯು ಮಹತ್ವ ಪೂರ್ಣ ಸಾಧನೆಯನ್ನು ಮಾಡಿದೆ. ಕೃಷಿ ಸಲಕರಣೆಗಳ ಪೂರೈಕೆ ಕೃಷಿಗೆ ಪೂರಕವಾದ ಪ್ರಗತಿ ಬಂಧು ಕಾರ್ಯಕ್ರಮ(ಶ್ರಮವಿನಿಮಯ) ಉಪಯುಕ್ತ ತಂತ್ರಜ್ಞಾನದ ಬಳಕೆ ಸ್ವಾವಲಂಬಿಯಾಗಿ ಬದುಕಬೇಕೆಂಬ ಮಾರ್ಗದರ್ಶನ ಪರಸ್ಪರ ಸಹಕಾರದ ಬದುಕಿನತ್ತ ಪಯಣ ಮತ್ತು ಪರಿಶ್ರಮದಿಂದಲೇ ಬಡತನ ನಿವಾರಣೆ ಸಾಧ್ಯವೆಂಬ ವಿಚಾರ ಯೋಜನೆಯ ಪ್ರಮುಖ ಅಂಶವಾಗಿದೆ. ಕನರ್ಾಟಕದಲ್ಲಿ ಪ್ರಾದೇಶಿಕ ಅಸಮತೋಲನಾ ನಿವಾರಣಾ ಸಮಿತಿ(ನಂಜುಂಡಪ್ಪ ವರದಿ) 2002 ರಲ್ಲಿ ನೀಡಿದ ವರದಿಯಲ್ಲಿ ತಿಳಿಸಿದಂತೆ ಗ್ರಾಮೀಣರ ಬಗ್ಗೆ ವೀರೇಂದ್ರ ಹೆಗ್ಗಡೆಯವರಿಗೆ ಇದ್ದ ಸಹಾನುಭೂತಿ ವಿಚಾರವನ್ನು ತಿಳಿಸಿತು.

ಗ್ರಾಮಾಭಿವೃದ್ದಿ ಯೋಜನೆಯಲ್ಲಿ ಪ್ರಗತಿ ಬಂಧು ಕಾರ್ಯಕ್ರಮ ಅತ್ಯಂತ ಪ್ರಮುಖವಾದ ಕಾರ್ಯಕ್ರಮಗಳಲ್ಲಿ ಒಂದು.5 ರಿಂದ 8 ಜನ ರೈತರು ಪರಸ್ಪರ ಶ್ರಮವಿನಿಮಯ ಮಾಡುವ ಮೂಲಕ ತಮ್ಮ ಕುಟುಂಬದ ಅಭಿವೃದ್ದಿಗೆ ತನ್ನೆದೇ ಆದ ಪಾತ್ರ ನಿರ್ವಹಿಸುತ್ತಿದ್ದಾರೆ.

ಕೃಷಿಕರನ್ನು ಸಮಾಜದ ಮುಖ್ಯವಾಹಿನಿಗೆ ತಂದುಅವರನ್ನುಕೂಡಅಭಿವೃಧಿಯ ಪಥದತ್ತ ಸಾಗಿಸಲುಧಮರ್ಾಧಿಕಾರಿ ಡಾ|| ಡಿ.ವಿರೇಂದ್ರ ಹೆಗ್ಗಡೆಯವರು ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಮೂಲಕ ಈ ಕಾರ್ಯಕ್ರಮವನ್ನುತಂದಿದ್ದಾರೆ. ಇದರ ಪ್ರಕಾರಇದು ಮಹಿಳೆ ಅಥವಾ ಪುರುಷರ ಸ್ವಸಹಾಯ ಸಂಘವಾಗಿದ್ದುಇವರು ಪ್ರತಿವಾರತಮ್ಮ ಸದಸ್ಯರ ಮನೆಯಲ್ಲಿ ಸರದಿ ಪ್ರಕಾರ ಶ್ರಮ ವಿನಿಮಯ ಮಾಡುತ್ತಾರೆ.ಈ ಸಂದರ್ಭದಲ್ಲಿಅವರಿಗೆಯಾವುದೇರೀತಿಯ ಕೂಲಿ ನೀಡಲಾಗುದಿಲ್ಲ ಬದಲಾಗಿಅವರು ಪ್ರತಿಯೊಬ್ಬ ಸದಸ್ಯರ ಮನೆಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿಸಿದ ಕೆಲಸವನ್ನು ಮಾಡುತ್ತಾರೆ.ಅವರುಯಾರ ಮನೆಯಲ್ಲಿ ಕೆಲಸಮಾಡುತ್ತಾರೆ.ಆ ಮನೆಯವರು ಊಟ ಮತ್ತುಉಪಹಾರದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.

ಸಮಾನ ಹಿನ್ನಲೆಯ ಹಾಗೂ ನೆರೆಹೊರೆಯ ಪ್ರದೇಶದಿಂದ ಬಂದ ಸಣ್ಣ ಮತ್ತುಅತೀ ಸಣ್ಣ ರೈತರನೊಳಗೊಂಡ ಸಂಘಟನೆಯೇ ಈ ಪ್ರಗತಿಬಂಧು ಸಂಘಗಳುಇವು ಹೆಸರೇ ಸೂಚಿಸುವಂತೆ ಪ್ರಗತಿಗಾಗಿ ಸೇರಿರುವ ಬಂಧುಗಳು

ಈ ಕಾರ್ಯಕ್ರಮದ ಪ್ರಯೋಜನವೇನು?ಎಂದು ನಾವು ತಿಳಿಯುದಾದರೆ ಇದುರೈತ ಸಮುದಾಯದ ಸಂಘಟನೆಯಾಗಿದ್ದು,ಇವರು ವಾರದಲ್ಲಿಕಡ್ಡಾಯ ಉಳಿತಾಯ ಮಾಡಿತಮ್ಮ ಪ್ರಗತಿಗಾಗಿ ಹಿಡುವಳಿ ಯೋಜನೆ ಎಂಬ ಕ್ರಿಯಾಯೋಜನೆರೂಪಿಸುವರು.

ಯೋಜನೆಯ ವತಿಯಿಂದಅವರಿಗೆ ವಿವಿಧ ವಿಚಾರಗಳ ಬಗ್ಗೆ ತಾಂತ್ರಿಕತರಬೇತಿಯುಕೂಡ ಲಭಿಸುತ್ತದೆ.ಈತರಬೇತಿಯನ್ನು ಪಡೆದುಅವರುಉತ್ತಮರೀತಿಯಲ್ಲಿತನ್ನಕೃಷಿಯಲ್ಲಿ ಅಬಿವೃಧಿ ಸಾಧಿಸಬಹುದು.

ಅದೇರೀತಿಕೃಷಿಯಲ್ಲಿ ಸಾಧನೆ ಮಾಡಿದ ಇತರ ತಾಲೂಕು ಅಥವಾ ಜಿಲ್ಲೆಯ ಸಾಧಕರೈತರ ಕೃಷಿ ತಾಕುಗಳಿಗೆಅದ್ಯಯನ ಪ್ರವಾಸ ಕೈಗೊಳಲು ಅವಕಾಶ ಇದರಲ್ಲಿದೆ.ಈಅದ್ಯಯನ ಪ್ರವಾಸದಿಂದಉತ್ತಮಅನುಭವ ಪಡೆಯಬಹುದುಅಲ್ಲದೆ ಸಾಧಕಕೃಷಿಕರ ವಿವಿಧ ಮಾಹಿತಿ ಮಾರ್ಗದರ್ಶನ ಮುಂದೆಕೃಷಿಯಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ.

ಬಹಳ ಪ್ರಾಮುಖ್ಯವಾಗಿರೈತರಿಗೆ ಪರಸ್ಪರ ಶ್ರಮ ವಿನಿಮಯದಿಂದ ಕೂಲಿಯಾಳುಗಳ ಸಮಸ್ಯೆಯನ್ನು ಹೊಗಲಾಡಿಸಬಹುದು.ಇಂದುಎಲ್ಲಾ ಕಡೆಗಳಲ್ಲಿ ಕೂಲಿಯಾಳುಗಳ ಸಮಸ್ಯೆ ಹೆಚ್ಚಾಗಿದ್ದುಇದಕ್ಕೆ ಶಾಶ್ವತ ಪರಿಹಾರದೊರಕಿಸುವಲ್ಲಿ ಈ ಶ್ರಮ ವಿನಿಮಯ ಸಹಾಯ ಮಾಡುತ್ತದೆ.

ಇದೀಗ ಮಹಿಳೆಯರು ಕೂಡ ಪ್ರಗತಿಬಂಧು ಗುಂಪು ಪ್ರಾರಂಭಿಸಿ ಉತ್ತಮವಾಗಿತಮ್ಮ ಸಂಘಗಳನ್ನು ನಡೆಸಿಕೊಂಡುಹೋಗುತ್ತಿದ್ದಾರೆ.ಕೃಷಿಕರು ತಮ್ಮ ಭೂಮಿಯಲ್ಲಿ ಕೆಲಸ ಮಾಡುದಲ್ಲದೆ,ಅವರಅನುಭವವನ್ನುಕೂಡ ಹಂಚಿಕೊಳ್ಳುದರಿಂದ ಕೃಷಿ ಅಭಿವೃಧಿಗೆ ಪೂರಕವಾಗುತ್ತದೆ.

ಈ ಶ್ರಮ ವಿನಿಮಯದಲ್ಲಿ ಕೇವಲ ಕೃಷಿ ಕೆಲಸ ಮಾತ್ರವಲ್ಲದೆಇತರ ಕೃಷಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಕೂಡ ಮಾಡಬಹುದು-ಹಟ್ಟಿರಚನೆ,ಕೊಟ್ಟಿಗೆರಚನೆ,ಕಟ್ಟಡರಚನೆ,ಕೆರೆರಚನೆಇತ್ಯಾದಿ ಕೆಲಸಗಳನ್ನು ಆಯ್ಕೆ ಮಾಡಬಹುದಾಗಿದೆ.ಅಲ್ಲದೆಊರಿನದೇವಾಲಯದರಸ್ತೆರಚನೆ,ಕೆರೆರಚನೆ ಮುಂತಾದಜನಪರ ಕೆಲಸವನ್ನುಕೂಡ ಮಾಡಬಹುದಾಗಿದೆ

 • ನೆರೆಹೊರೆಯ ಸಣ್ಣ ಮತ್ತುಅತೀ ಸಣ್ಣರೈತರು ಸಂಘಟಿತರಾಗಿ 5 ರಿಂದ 7 ಜನರತಂಡವನ್ನುರಚಿಸಬೇಕು.ಆದಷ್ಟು ಹತ್ತಿರಇರುವವರನ್ನು(ಭೂಮಿಇರುವವರು)ಸಂಘಕ್ಕೆ ಸೇರಿಸಬೇಕು.ಎಕೆಂದರೆದೂರದವರನ್ನು ಸೇರಿಸಿ ಸಂಘ ರಚನೆ ಮಾಡಿದರೆ ಶ್ರಮ ವಿನಿಮಯಕ್ಕೆತೊಂದರೆಯಾಗುತ್ತದೆ.
 • ವಾರಕ್ಕೊಮ್ಮೆ ನಿಗದಿಪಡಿಸಲಾದ ದಿನಾಂಕದಲ್ಲಿ ಸದಸ್ಯರೋರ್ವರಜಮೀನಿನಲ್ಲಿ ಶ್ರಮವಿನಿಮಯ ಮಾಡಬೇಕು.ಮುಂದಿನ ವಾರದ ಶ್ರಮವಿನಿಮಯ ಈ ವಾರದಲ್ಲಿ ನಿಧರ್ಾರವಾಗಬೇಕುಅದೇರೀತಿ ಕೆಲಸ ಮಾಡಲು ಬೇಕಾದ ಉಪಕರಣಗಳನ್ನು ಕೂ ಕ್ಲಪ್ತ ಸಮಯದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ.ಇಲ್ಲವಾದಲ್ಲಿ ಉಪಕರಣಗಳನ್ನು ಹೊಂದಿಸಿಕೊಳ್ಳಲು ಸಮಯ ನಷ್ಟವಾಗುತ್ತದೆ.
 • ಮುಖ್ಯವಾಗಿಅವರಿಗೆ ಕೆಲಸ ಮಾಡಿದ್ದಕ್ಕೆಯಾವುದೇರೀತಿಯ ಸಂಬಂಳ ನೀಡುವಂತಿಲ್ಲ.ಆದರೆಅವರಿಗೆಊಟ,ಉಪಹಾರದ ವ್ಯವಸ್ಥೆಯನ್ನು ಮಾಡಬೇಕು.
 • ಈ ರೀತಿ ಶ್ರಮವಿನಿಮಯದಿಂದ ಸದಸ್ಯರಲ್ಲಿಆತ್ಮೀಯ ಮನೋಭಾವ ಬೆಳೆಯುತ್ತದೆ.ನಾವು ಕೆಲಸಕ್ಕೆ ಜನ ಪಡೆದಲ್ಲಿಅವರು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಾರೆ.ಆದರೆ ನಮ್ಮ ಪ್ರಗತಿಬಂಧು ಗುಂಪಿನಲ್ಲಿ ಸಮಯವನ್ನು ನೋಡದೆ ಕೆಲಸ ಮುಗಿಸಿ ನಂತರ ಸಮಯ ನೋಡುವ ವ್ಯವಸ್ಥೆ ನಾವು ಕಾಣುತೇವೆ.ಅಂದರೆ ಅಷ್ಟು ನಿಷ್ಟೆಯಲ್ಲಿಅವರು ಅಂದಿನ ಕೆಲಸ ಮುಗಿಸುತ್ತಾರೆ.ಹಾಗೂ ಕೃಷಿ ಕುರಿತಾದ ಮಾಹಿತಿಗಳನ್ನು ರೈತರು ಪರಸ್ಪರ ಹಂಚಿಕೊಳ್ಳುದರಿಂದ ಕೃಷಿಯಅಭಿವೃಧಿಗೆಇದು ಪೂರಕವಾಗಿ ಕೆಲಸ ಮಾಡುತ್ತದೆ.
 • ಕೂಲಿ ಸಮಸ್ಯೆ ನಿವಾರಣೆಯಾಗಿ ರೈತರ ಉತ್ತಮ ಸಂಘಟನೆಯಾಗುತ್ತದೆ.

ಪ್ರಗತಿಬಂಧುತಂಡದಿಂದರೈತರಿಗೆ ಸಿಗುವ ಅವಕಾಶಗಳು:-

ರೈತರ ಪ್ರಗತಿಗಾಗಿ ಹಿಡುವಳಿ ಯೋಜನೆ:–ಸಂಘಕ್ಕೆ ಸೇರ್ಪಡೆಗೊಂಡರೈತರಅಭಿವೃಧಿಗಾಗಿ 5 ವರ್ಷದ ವಿವಿಧ ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನ ಮಾಡುವುದು.ಈ ಹಿಡುವಳಿ ಯೋಜನೆ ಮೂಲಕ ತಮ್ಮಜಮೀನಿನ ಅವಶ್ಯಕತೆೆಯನ್ನುಗಣನೆಗೆತೆಗೆದುಕೊಂಡುಉತ್ತಮರೀತಿಯಯೋಜನೆ ರೂಪಿಸಿ ಅಭಿವೃಧಿಯಾಗಲು ಸಹಾಯಕವಾಗುತ್ತದೆ.

ರೈತರಿಗೆತಾಂತ್ರಿಕತರಬೇತಿ:- ಯೋಜನೆಯಿಂದ ವಿವಿಧ ಕೃಷಿಗಳ ಬಗ್ಗೆ ಸ್ವಉದ್ಯೋಗದ ಬಗ್ಗೆ ಯೋಜನೆಯಿಂದ ನೇಮಿಸಲ್ಪಟ್ಟ ಕೃಷಿ ಹಾಗೂ ಹೈನುಗಾರಿಕಾಧಿಕಾರಿಗಳಿಂದ ಅಥವಾ ಸಕರ್ಾರಿ ಇಲಾಖಾ ಅಧಿಕಾರಿಗಳಿಂದ ಇಲ್ಲವೋಇತರ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಗುತ್ತದೆ.ರೈತರು ಈ ಮಾಹಿತಿಯನ್ನು ಪಡೆದುಉತ್ತಮರೀತಿಯಲ್ಲಿಅದನ್ನುತಮ್ಮಕೃಷಿಯಲ್ಲಿ ಅನುಷ್ಠಾನಗೊಳಿಸಬಹುದು.

ರೈತರಅದ್ಯಯನ ಪ್ರವಾಸಗಳು:- ಯೋಜನೆಯ ವತಿಯಿಂದಆಯ್ದರೈತರನ್ನುಆಯ್ಕೆ ಮಾಡಿಉತ್ತಮ ಕೃಷಿತಾಕುಗಳು,ಮಾದರಿ ರೈತರು,ಮಾದರಿ ಪ್ರಗತಿಬಂಧು ತಂಡಗಳ ಭೇಟಿಯನ್ನು ಮಾಡಿಸಿ,ರೈತರಿಗೆ ಕೃಷಿಯಲ್ಲಿ ಆಸ್ತಿಯನ್ನು ಮೂಡಿಸಲಾಗುತ್ತದೆ.ಇದರಿಂದ ಪ್ರೇರಣೆಗೊಂಡು ಹಲವಾರು ಮಂದಿ ರೈತರುತಮ್ಮಲ್ಲಿಯೂಇದೇ ಮಾದರಿಯನ್ನು ಅನುಸರಿಸಿ ಪ್ರಗತಿಹೊಂದಿದ್ದಾರೆ.

ರೈತರಿಗೆ ಕ್ಷೇತ್ರದಿಂದ ಅನುದಾನಗಳು:-

 1. ಯೋಜನೆಯ ವತಿಯಿಂದ ವಿವಿಧ ಕೃಷಿ ಹಾಗೂ ಕೃಷಿ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಅನುದಾನ ನೀಡಲಾಗುತ್ತದೆ.ಇದರಿಂದರೈತರಲ್ಲಿ ಹೊಸ ಉತ್ಸಾಹ ಬರಲು ಸಾದ್ಯಅದೇರೀತಿಅವರಲ್ಲಿಕೃಷಿಯ ಬಗ್ಗೆ ಆಸಕ್ತಿ ಮೂಡುತ್ತದೆ.
 2. ಹೊಸದಾಗಿ ಕೃಷಿ ಮಾಡುದಿದ್ಲ್ಲಿ ಸಸಿ ವಿತರಣೆಗಾಗಿಅನುದಾನ ಪಡೆದುಕೊಳ್ಳಲು ಅವಕಾಶವಿದೆ.
 3. ರೈತರುತಮ್ಮಜಮೀನಿನಲ್ಲಿ ನೀರಾವರಿ ವಿಧಾನ ಅಳವಡಿಕೆ ಮಾಡುವುದಿದ್ದಲ್ಲಿಅನುದಾನ ಸೌಲಭ್ಯವಿದೆ.
 4. ವಿವಿಧ ಕೃಷಿ ಸಂಬಂಧಿಸಿದ ಮಾಹಿತಿ ಪಡೆಯಲು ಮತ್ತುತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲುರೈತಕ್ಷೇತ್ರ ಪಾಠಶಾಲೆಯ ಮಾಹಿತಿಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಈ ಪ್ರಗತಿಬಂಧುತಂಡದ ಮೂಲಕ ಇದೆ.
 5. ರೈತರುಅದ್ಯಯನ ಪ್ರವಾಸದ ಪ್ರಯೋಜನವನ್ನುಕೂಡ ಪಡೆಯಬಹುದು.
 6. ಯೋಜನೆಯ ಮೂಲಕ ನಡೆಯುವ ಕೃಷಿ ವಿಚಾರ ಸಂಕಿರಣ,ಕೃಷಿ ಉತ್ಸವದಲ್ಲಿ ಭಾಗವಹಿಸಿ ಅದರ ಮೂಲಕ ವಿವಿಧ ಮಾಹಿತಿಯನ್ನು ಪಡೆಯಬಹುದು.
  ಸಕರ್ಾರದಅನುದಾನವನ್ನು ಪಡೆಯಲು ಸಹಕಾರ:-ಸಕರ್ಾರದ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಬಗ್ಗೆ ಯೋಜನೆಯತಾಂತ್ರಿಕ ಮಾಹಿತಿ ಸಿಬ್ಬಂದಿಗಳ ಸಹಕಾರ ಪಡೆಯಬಹುದು.ಇಲಾಖೆಗಳಲ್ಲಿ ವಿವಿಧರೀತಿಯ ಯೋಜನೆಗಳಿದ್ದು ಅದರಉಪಯೋಗ ಪಡೆಯಲು ಸಾದ್ಯವಿದೆ.
 7. ರಾಜ್ಯ ಸಕರ್ಾರ ಪ್ರಾರಂಭಿಸಿರುವ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರಗಳ (CHSC)ನಿರ್ವಹಣೆಯನ್ನು ಯೋಜನೆಗೆ ನೀಡಿದ್ದು ಇದರ ಮೂಲಕ ರೈತರು ವಿವಿಧ ರೀತಿಯ ಯಂತ್ರೋಪಕರಣಗಳನ್ನು ತಮ್ಮ ಕೃಷಿಗೆ ಅತ್ಯಂತ ಕಡಿಮೆ ದರದಲ್ಲಿ ಬಾಡಿಗೆ ಪಡೆದು ಉತ್ತಮ ರೀತಿಯಲ್ಲಿ ಕೃಷಿ ಮಾಡಲು ಸಾದ್ಯವಿದೆ.

ಶ್ರಮವಿನಿಮಯದಿಂದ ಕೂಲಿಯಾಳುಗಳ ಬಹಳ ದೊಡ್ಡ ಸಮಸ್ಯೆ ನಿವಾರಣೆ:

 • ಶ್ರಮವಿನಿಮಯದಿಂದ ಕೃಷಿ ಅಭಿವೃಧಿ ಮಾಡಬಹುದಾಗಿದೆ.
 • ಶ್ರಮ ವಿನಿಮಯದಿಂದರೈತರು ಹೊಸ ಕೃಷಿಯನ್ನುಕೂಡ ಮಾಡಬಹುದು.
 • ಶ್ರಮವಿನಿಮಯದಿಂದ ಮೂಲ ಸೌಕರ್ಯಅಭಿವೃಧಿ ಮಾಡಿಕೊಂಡುಉತ್ತಮರೀತಿಯಲ್ಲಿಜೀವನ ಸಾಗಿಸಲು ನೆರವಾಗುತ್ತದೆ.
 • ಶ್ರಮವಿನಿಮಯದಿಂದಕೃಷಿಯೇತರ ಚಟುವಟಿಕೆಗಳ ಅನುಷ್ಟಾನ ಮಾಡಬಹುದು.
 • ಒಟ್ಟಾಗಿ ಹೇಳುದಾದರೆ,ಶ್ರಮವಿನಿಮಯದಿಂದರೈತರ ಸಂಘಟನೆಯೊಂದಿಗೆ ಪ್ರಗತಿಯನ್ನು ಸುಲಭವಾಗಿ ಸಾಧಿಸಬಹುದು.
  ಇದರೊಂದಿಗೆ ಯೋಜನೆಯಲ್ಲಿ ಸಿಗುವ ಪ್ರಗತಿನಿಧಿ(ಕಿರು ಸಾಲ) ಬಳಸಿಕೊಂಡು ಕೃಷಿ ಮತ್ತು ಕೃಷಿಯೇತರ ಕೆಲಸ ಕಾರ್ಯಗಳನ್ನು ಮಾಡುತ್ತಾರೆ.

ವ್ಯಕ್ತಿ ಪರಿಚಯ:-

ಉಡುಪಿ ಜಿಲ್ಲೆ ಗ್ರಾಮಾಭಿವೃದ್ದಿ ಯೋಜನೆ ಪ್ರಾರಂಭಗೊಳ್ಳುವ ಮೊದಲು ಬಹಳಷ್ಟು ಮಂದಿ ಕೃಷಿಯಲ್ಲಿ ಲಾಭವಿಲ್ಲ ಎಂದು ಹೇಳಿ ಅಥವಾ ಕೂಲಿ ಕಾಮರ್ಿಕರ ಕೊರತೆಯ ಕಾರಣದಿಂದ ತಮ್ಮ ಜಮೀನನ್ನು ಪಾಳುಬಿಟ್ಟು ತಾವು ಬೆರೆ ಪ್ರದೇಶಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು.ಅದೆಷ್ಟು ಮಂದಿ ತಮ್ಮ ಭೂಮಿಯನ್ನು ಅತೀ ಕಡಿಮೆ ದರದಲ್ಲಿ ಜಮೀನ್ದಾರರಿಗೆ, ವ್ಯಾಪಾರಿಗಳಿಗೆ ಮಾರಾಟ ಮಾಡಿದ ಪ್ರಕರಣ ಕೂಡ ಇವೆ. ಇಂತಹ ಪರಿಸ್ಥಿತಿಯಲ್ಲಿ ಉಡುಪಿ ತಾಲೂಕಿನ ಆವಸರ್ೆ ಎಂಬ ಕುಗ್ರಾಮ ಕೂಡ ಹೊರತಾಗಿಲ್ಲ. ಅಲ್ಲಿನ ಹೆಚ್ಚಿನ ರೈತರು ಇದೇ ವ್ಯವಸ್ಥೆಯನ್ನು ಮುಂದುವರಿಸಿದ್ದರು.

ಆ ಗ್ರಾಮದ ಅತ್ಯಂತ ಬಡ ಕುಟುಂಬದ ವ್ಯಕ್ತಿ ಕೃಷ್ಣ ಕುಲಾಲ್. ಇವರು ಕೂಡ ತನ್ನಲ್ಲಿರುವ 5 ಎಕರೆ ಭೂಮಿಯನ್ನು ಪಾಳುಬಿಟ್ಟು ದೂರದ ಮುಂಬೈಯಲ್ಲಿ ಹೋಟೇಲ್ ಕೆಲಸ ಮಾಡುತ್ತಿದ್ದರು.ತನ್ನ ಜೀವನ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ, ಮನೆ ವಾತರ್ೆಗೆ ಹೋಟೇಲ್ ಕೆಲಸದ ಸಂಬಳವೆ ಆಧಾರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಕಷ್ಟದಿಂದ ತನ್ನ ಜೀವನ ಸಾಗಿಸುತ್ತಿದ್ದರು ಕುಲಾಲ್ ರವರು.

ಒಂದು ಬಾರಿ ದೀಪಾವಳಿಯ ಸಂಧರ್ಭದಲ್ಲಿ ಊರಿಗೆ ಬಂದಾಗ ಗ್ರಾಮಾಭಿವೃದ್ದಿ ಯೋಜನೆಯು ಉಡುಪಿ ತಾಲೂಕಿಗೆ ಕಾಲಿರಿಸಿದ ಕ್ಷಣವದು. ಅಂಗಡಿಯಲ್ಲಿ ದಿನಸಿ ವಸ್ತುಗಳನ್ನು ಕೊಳ್ಳುವ ಸಂದರ್ಭದಲ್ಲಿ ಯೋಜನೆಯ ಕಾರ್ಯಕರ್ತ(ಸೇವಾನಿರತ) ರವರ ಪರಿಚಯವಾಯಿತು. ಈ ಸಂಧರ್ಭದಲ್ಲಿ ಅವರು ಪ್ರಗತಿ ಬಂಧು ಸಂಘ ರಚನೆಗೆ ಒತ್ತು ನೀಡಿದಾಗ ತನಗೂ ಕೂಡ ಇಷ್ಟವಿಲ್ಲದೆ ಸಂಘವನ್ನು ರಚನೆ ಮಾಡಿದರು.ಈ ಸಂಘಕ್ಕೆ ಶಂಕರನಾರಾಯಣ ಪ್ರಗತಿ ಬಂಧು ಸಂಘ ಎಂಬ ನಾಮಕರಣದೊಂದಿಗೆ 8 ಮಂದಿ ಸದಸ್ಯರು ಸಂಘ ರಚನೆಗೆ ಸಹಕಾರಿಯಾದರು.ಸೇವಾ ನಿರತರ ನಿರಂತರ ಮಾರ್ಗದರ್ಶನದಿಂದ ತಂಡದ ವಾರದ ಶ್ರಮ ವಿನಿಮಯ ಪ್ರಾರಂಭವಾಯಿತು.ಕುಲಾಲ್ ರವರ ಪಾಳುಬಿದ್ದ 5 ಎಕರೆ ಪ್ರದೇಶ ನೋಡಿದಾಗ ಉಳಿದವರಿಗೂ ಕೂಡ ಅಲ್ಲಿ ಏನು ಕೆಲಸ ಮಾಡುವುದು, ಇಡೀ ಭೂಮಿ ಕಸ ಕಡ್ಡಿಗಳಿಂದ ತುಂಬಿ ಹೋಗಿತ್ತು.ಕುಲಾಲ್ ರವರು ಈ ಭೂಮಿಯಲ್ಲಿ ಕೆಲಸ ಮಾಡುವುದಕ್ಕಿಂತ ಮುಂಬೈಯಲ್ಲಿ ಹೋಟೇಲ್ ಕೆಲಸ ಮಾಡುವುದೇ ಲೇಸು ಎಂದು ಹೇಳಿ ಮುಂಬೈಗೆ ಹೊರಟು ನಿಂತರು. ಈ ಸಂದರ್ಭದಲ್ಲಿ ಕಾರ್ಯಕರ್ತರು ನೀಡಿದ ಪ್ರೇರಣೆ , ಧೈರ್ಯ ಅವರನ್ನು ಮುಂಬೈಗೆ ಹೋಗುವುದನ್ನು ನಿಲ್ಲಿಸಿತು. ಆ ಭೂಮಿಯಲಿ ್ಲ ನೀರಿಲ್ಲದೆ ಬರಡಾಗಿತ್ತು.ಕುಲಾಲ್ ರವರು ಈ ಬರಡು ಭೂಮಿಯನ್ನು ಏನಾದರೂ ಮಾಡಿ ಹಸಿರುಗೊಳಿಸಬೇಕು ಎಂದು ನಿಶ್ಚಯಿಸಿ ಬಾವಿ ರಚನೆ ಮಾಡಲು ಪ್ರಾರಂಭಿಸಿದರು.ಅವರ ಬಳಿ ಹಣಕಾಸಿನ ವ್ಯವಸ್ಥೆ ಅಷ್ಟೊಂದು ಇರಲಿಲ್ಲ. ತಮ್ಮ ಪ್ರಗತಿ ಬಂಧು ತಂಡದ ಸದಸ್ಯರು ಶ್ರಮ ವಿನಿಮಯ ಮತ್ತು ಯೋಜನೆಯ ಮೂಲಕ 2002 ರಲ್ಲಿ ರೂ.5000/- ಸಾಲ ಪಡೆದು ಬಾವಿ ಕೆಲಸ ಪ್ರಾರಂಭಿಸಿದರು.ಆದರೆ ಅವರ ದುರಾದೃಷ್ಟ ಅಥವಾ ಆ ಜಮೀನಿನ ಪ್ರಭಾವವೊ ಏನೋ ನೀರು ಬರಲಿಲ್ಲ. ಈ ಸಂದರ್ಭದಲ್ಲಿ ಧೈರ್ಯವನ್ನು ಕಳೆದುಕೊಳ್ಳದೆ ಮಳೆ ನೀರಿನಿಂದ ಮನೆಯ ಖಚರ್ಿಗಾಗಿ ಒಂದು ಗದ್ದೆಯಲ್ಲಿ ಭತ್ತ ಬೆಳೇ ಮಾಡಿದರು.ಈ ಸಂಧರ್ಭದಲ್ಲಿ ಕುಲಾಲ್ ರವರು ಯೋಜನೆಯಲ್ಲಿ ನೀಡಲಾಗುವ ವಿವಿಧ ರೀತಿಯ ಕೃಷಿ ತರಬೇತಿಗಳು, ಸರಕಾರದ ವಿವಿಧ ಇಲಾಖೆಯ ತರಬೇತಿಗಳನ್ನು ಪಡೆದುಕೊಂಡು ನೀರಿಂಗಿಸುವಿಕೆ ಅಥವಾ ಮಳೆನೀರು ಕೊಯ್ಲು ವಿಧಾನಗಳನ್ನು ತನ್ನ ಜಮೀನಿನಲ್ಲಿ ಅಳವಡಿಸಿಕೊಂಡರು.ಇದರ ಪರಿಣಾಮವಾಗಿ ಅವರ ಜಮೀನಿನಲ್ಲಿ ಇಂದು ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಈ ಮೂಲಕ ನೀರಿಂಗಿಸುವಿಕೆಯ ಎಲ್ಲಾ ರೀತಿಯ ವಿಧಾನಗಳನ್ನು ಅಳವಡಿಸಿಕೊಂಡು ಅವರು ಯಶಸ್ವಿಗೊಳಿಸಿದ್ದಾರೆ.ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮತ್ತು ಜಲಾನಯನ ಇಲಾಖೆಯ ವತಿಯಿಂದ ತನ್ನ ಜಮೀನಿನಲ್ಲಿ ಸುಮಾರು 20 ಅಡಿ ಆಳ ಮತ್ತು 200 ಅಡಿ ಅಗಲದ ಕೆರೆಯನ್ನು ಸುಮಾರು 2 ಲಕ್ಷ ರೂ.ವೆಚ್ಚದಲ್ಲಿ ಮಾಡಿದ್ದು, ಇದಕ್ಕೆ ಸಂಘದಿಂದ ರೂ.1 ಲಕ್ಷ ಸಾಲ ಪಡೆದುಕೊಂಡಿದ್ದು, ಇದರ ಪರಿಣಾಮ ಇಂದು ಆವಸರ್ೆ ಗ್ರಾಮದ ಸುಮಾರು 200 ಮನೆಗಳ ಬಾವಿಗಳು ಅಂತರ್ಜಲದಿಂದ ಕೂಡಿವೆ. ಈ ಹಿಂದೆ ಮಾಚರ್್, ಏಪ್ರಿಲ್ ತಿಂಗಳಲ್ಲಿ ಬರಿದಾಗುತ್ತಿದ್ದ ಬಾವಿಗಳು ಇಂದು ಈ ಕೆರೆಯ ಮೂಲಕ ಅಂತರ್ಜಲವನ್ನು ಹೆಚ್ಚಿಸಿಕೊಂಡಿವೆ.

ಅಕ್ಕಿ ಮಿಲ್ ರಚನೆ: ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಸಂಘದ ಮೂಲಕ ರೂ.2 ಲಕ್ಷ ಸಾಲ ಪಡೆದು ಶ್ರೀ.ಕುಲಾಲ್ ರವರು ಅಕ್ಕಿ ಮಿಲ್ನ್ನು ರಚನೆ ಮಾಡಿದ್ದು, ಇಂದು ಅವರ ಅಕ್ಕಿ ಮಿಲ್ ನಲ್ಲಿ ಸಂಘದ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಮಿಲ್ನ ಬೂದಿಯನ್ನು ತನ್ನ ಕೃಷಿಗೆ ಬಳಸುತ್ತಾರೆ.ಅಲ್ಲದೇ ಈ ಬೂದಿಯಿಂದ ಗೊಬ್ಬರವನ್ನು ತಯಾರಿಕೆ ಮಾಡಿ ತರಕಾರಿ ಮುಂತಾದ ಬೆಳೆಗಳಿಗೆ ಹಾಕುತ್ತಾರೆ.

ಸಿಮೆಂಟ್ ಚೀಲದಲ್ಲಿ ತರಕಾರಿ ಕೃಷಿ: ಶ್ರೀ ಕುಲಾಲ್ ರವರು ಮಳೆಗಾಲದ ಸಮಯದಲ್ಲಿ ಅಕ್ಕಿ ಮಿಲ್ನ ಅಂಗಳವನ್ನು ತನ್ನ ಕೃಷಿಗೆ ಬಳಸಿಕೊಂಡಿರುವುದು ಸಂತೋಷದಾಯಕ ಯಾಕೆಂದರೆ ಹೆಚ್ಚಿನ ರೈತರು ಜಾಗವನ್ನು ಖಾಲಿ ಬಿಟ್ಟು ಕೃಷಿಗೆ ಜಾಗವಿಲ್ಲ ಎಂದು ಹೇಳುವ ಮಂದಿ ಬಹಳಷ್ಟು ಇದ್ದಾರೆ. ಆದರೆ ಇವರು ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿ ಅದರಲ್ಲಿ ಗೊಬ್ಬರ(ಹಟ್ಟಿ), ಮಣ್ಣು ಮುಂತಾದವುಗಳನ್ನು ಸೇರಿಸಿ ಬೆಂಡೆ, ಅಲಸಂಡೆ, ಕುಂಬಳಕಾಯಿ ಮುಂತಾದವುಗಳನ್ನು ಬೆಳೆಸಿ ಅದರಲ್ಲಿ ಹೆಚ್ಚಿನ ಲಾಭವನ್ನು ಪಡೆದಿರುತ್ತಾರೆ. 2014-15 ನೇ ಸಾಲಿನಲ್ಲಿ ಅವರು ಈ ಕೃಷಿಯಿಂದ ಸುಮಾರು 80000/- ರೂ.ಆದಾಯ ಪಡೆದಿರುತ್ತಾರೆ.ಇದಕ್ಕೆ ಸಂಘದ ಮೂಲಕ ಆಯೋಜಿಸಿದ ಕೃಷಿ ತರಬೇತಿ ಕಾರ್ಯಕ್ರಮದಿಂದ ಮಾಹಿತಿಯನ್ನು ಪಡೆದು ಅದನ್ನು ಅನುಷಾನ ಮಾಡಿದ್ದಾರೆ.

ತರಕಾರಿ ಬೀಜ, ಎರೆಗೊಬ್ಬರ ಮಾರಾಟ: ಶ್ರಿ ಕುಲಾಲ್ ರವರು ತನ್ನಲ್ಲಿ ಸಾವಯವ ಮಾದರಿಯಲ್ಲಿ ಬೆಳೆದ ತರಕಾರಿ ಬೀಜಗಳನ್ನು ಸಂಗ್ರಹಿಸಿ ಅದನ್ನು ಸಣ್ಣ ಸಣ್ಣ ಪೊಟ್ಟಣಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ. ಇವರ ತರಕಾರಿ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.ಬಹಳಷ್ಟು ಮಂದಿ ರೈತರು ಇವರ ಮನೆಗೆ ಬಂದು ತರಕಾರಿ ಬೀಜಗಳನ್ನು ತೆಗೆದುಕೊಂಡು ಹೋಗುತ್ತಾರೆ.ಕೃಷಿ ಮೇಳ, ವಿಚಾರ ಸಂಕಿರಣ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಲ್ಲಿ ಅವರು ಬೆಳೆದ ತರಕಾರಿ ಬೀಜಗಳನ್ನು ಮಾರಾಟ ಮಾಡುತ್ತಾರೆ.ಕಳೆದ ವರ್ಷ ಯೋಜನೆ ವತಿಯಿಂದ ನಡೆದ ಕೃಷಿ ಮೇಳದಲ್ಲಿ ಇವರು ಸುಮಾರು 1 ಲಕ್ಷ ರು.ಮೌಲ್ಯದ ಬೀಜ ಮಾರಾಟ ಮಾಡಿದ್ದಾರೆ.ಅಲ್ಲದೇ 2 ಎರೆಗೊಬ್ಬರ ತೊಟ್ಟಿಯನ್ನು ರಚನೆ ಮಾಡಿದ್ದು, ಇದರಲ್ಲಿ ತಯಾರಿಸಿದ ಎರೆಗೊಬ್ಬರವನ್ನು ತನ್ನ ಕೃಷಿಗೆ ಬಳಸಿಕೊಂಡು ಉಳಿದ ಗೊಬ್ಬರವನ್ನು ಕೆ.ಜಿ.ಗೆ 20 ರೂ.ನಂತೆ ಮಾರಾಟ ಮಾಡುತ್ತಾರೆ.ಪ್ರತಿ ವರ್ಷ ಸರಾಸರಿ 70,000/- ರೂ.ಮೌಲ್ಯದ ಗೊಬ್ಬರವನ್ನು ಮಾರಾಟ ಮಾಡುತ್ತಾರೆ.

ಕೋಳಿ ಸಾಕಾಣಿಕೆ / ಹೈನುಗಾರಿಕೆ: ಕುಲಾಲ್ ರವರು ಯೋಜನೆಯ ಮೂಲಕ ರೂ.2 ಲಕ್ಷ ಸಾಲ ಪಡೆದು ಕೋಳಿ ಸಾಕಾಣಿಕೆ ಮಾಡಿರುತ್ತಾರೆ. ಹೆಚ್ಚಾಗಿ ನಾಟಿ ಕೋಳಿ, ಗಿರಿರಾಜ, ಸ್ವರ್ಣಧಾರ, ಮುಂತಾದ ತಳಿಯ ಕೋಣಿ ಸಾಕಾಣಿಕೆ ಮಾಡಿದ್ದು, ಉತ್ತಮ ಲಾಭ ಗಳಿಸಿರುತ್ತಾರೆ. ತಿಂಗಳಿಗೆ ಸರಾಸರಿ 30000/- ರೂ.ಲಾಭ ಇದರಿಂದ ಬರುತ್ತಿದೆ.ಮನೆಯಲ್ಲಿ ಉತ್ತಮವಾದ ಹಟ್ಟಿ ರಚನೆ ಮಾಡಿ ಹೈನುಗಾರಿಕೆ ಮಾಡುತ್ತಿದ್ದು, ಪ್ರತಿ ದಿನ 80 ಲೀ. ಹಾಲನ್ನು ಡೈರಿಗೆ ಹಾಕುತ್ತಾರೆ. ಹಟ್ಟಿ ರಚನೆಗೆ ಯೋಜನೆ ಮೂಲಕ 25000/- ರೂ. ಸಾಲ ಪಡೆದಿರುತ್ತಾರೆ ಅಲ್ಲದೆ ಕೆಲಸ ಕಾರ್ಯಗಳನ್ನು ತನ್ನ ಸಂಘದ ಸದಸ್ಯರು ಶ್ರಮ ವಿನಿಮಯದ ಮೂಲಕ ಮಾಡಿರುತ್ತಾರೆ.

ಕುಮ್ಕಿ ಜಾಗದಲ್ಲಿ ತರಕಾರಿ ಕೃಷಿ: ಕುಲಾಲ್ ರವರು ಯೋಜನೆಯ ಮೂಲಕ ನಡೆಯುತ್ತಿರುವ ವಿವಿಧ ರೀತಿಯ ಕೃಷಿ ಸಂಬಂಧಿತ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಲ್ಲಿ ಸಿಕ್ಕಿದ ಮಾಹಿತಿಯಿಂದ ಸಾವಯವ ಮಾದರಿಯಲ್ಲಿ ತರಕಾರಿ ಕೃಷಿಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುತ್ತಾರೆ. ಮುಖ್ಯವಾಗಿ ಯಾವುದೇ ರೀತಿಯ ನೀರಿನ ಆಶ್ರಯವಿಲ್ಲದ ನಿರುಪಯುಕ್ತ ಗುಡ್ಡೆ ಜಾಗದಲ್ಲಿ ಗೇರು ಗಿಡಗಳನ್ನು ನಾಟಿ ಮಾಡಿದ್ದಾರೆ. ಮಳೆಗಾಲದ ಸಮಯದಲ್ಲಿ ಗೇರು ಗಿಡದ ಬುಡದಲ್ಲಿ ತರಕಾರಿಗಳನ್ನು ನಾಟಿ ಮಾಡಿದ್ದಾರೆ. ಇದರ ಮೂಲಕ ಹೆಚ್ಚಿನ ಲಾಭವನ್ನು ಅವರು ಪಡೆದಿರುತ್ತಾರೆ.ಒಂದು ಕಾಲದಲ್ಲಿ ಪಾಳುಬಿದ್ದ ಈ ಪ್ರದೇಶ ಇಂದು ಸಂಘದ ಮೂಲಕ ಶ್ರಮ ವಿನಿಮಯ ಮಾಡುವುದರ ಮೂಲಕ ಹಸಿರಾಗಿ ಕಂಗೊಳಿಸುತ್ತಿದೆ. ಅಲ್ಲದೇ ನೋಣಿ ಗಿಡಗಳನ್ನು (ಔಷದೀಯ ಸಸ್ಯ) ನಾಟಿ ಮಾಡಿ ಅದರ ಮೂಲಕ ನಾಟಿ ಔಷದಿಯನ್ನು ಕೂಡ ತಯಾರಿಸಿ ತನ್ನ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

ಯೋಜನೆಯಿಂದ ಸಂಪೂರ್ಣ ಸುರಕ್ಷಾ (ಆರೋಗ್ಯ ವಿಮೆ), ಜೀವನ ಮಧುರ(ಜೀವ ವಿಮೆ), ಪಿಂಚಣಿ ಗಳನ್ನು ಮಾಡಿದ್ದು, ಯೋಜನೆಯ ಮೂಲಕ ಮತ್ತು ವಿವಿಧ ರೀತಿಯ ತರಬೇತಿಯ ಮೂಲಕ ಅವರು ಒಬ್ಬ ಆದರ್ಶ ಕೃಷಿಕರಾಗಿ ಮೆರೆದಿದ್ದಾರೆ. ಯಾವುದೇ ಸಾಫ್ಟ್ ವೇರ್ ಕಂಪನಿಯ ನೌಕರರಿಗೆ ಕಡಿಮೆ ಇಲ್ಲದೆ ಕೃಷಿಯಿಂದ ಆದಾಯ ಪಡೆಯುತ್ತಿದ್ದಾರೆ.ಓದಿದ್ದು 7 ನೇ ತರಗತಿಯಾದರೂ ತನ್ನ ಅಪಾರವಾದ ಕೃಷಿ ಜ್ಞಾನದಿಂದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಕೃಷಿ ವಿಜ್ಞಾನಿಗಳಿಗೆ ಪಾಠ ಹೇಳುವಷ್ಟು ಅವರು ಬೆಳೆದಿದ್ದಾರೆ.

ಲೇಖಕರ ಮಾತು:-ಅವರ ಮಾತಿನಂತೆ ಒಂದು ವೇಳೆ ನಾನು ಅದೇ ಹೋಟೆಲ್ ನೌಕರನಾಗಿದ್ದರೆ ನಾನು ಹಾಗೆ ಇರುತ್ತಿದ್ದೆ. ಆದರೆ ನನ್ನ ಈ ಸಾಧನೆಗೆ ಕಾರಣ ಗ್ರಾಮಾಭಿವೃದ್ದಿ ಯೋಜನೆ ಎಂದು ಅವರು ಮನ ತುಂಬಿ ಹೇಳುತ್ತಾರೆ.ಅವರ ಸಾಧನೆಗೆ ಕನರ್ಾಟಕ ರಾಜ್ಯ ಸಕರ್ಾರದ ಕೃಷಿ ಪಂಡಿತ ಪ್ರಶಸ್ತಿ, ಯೋಜನೆಯ ಕೃಷಿ ಮೇಳದಲ್ಲಿ ಸನ್ಮಾನ ದೊರಕಿರುತ್ತದೆ.ಶ್ರೀ ಕುಲಾಲ್ ರವರನ್ನು ಮಾತನಾಡಿಸಿ ದಾಗ ಅವರು ಹೇಳಿದಿಷ್ಟು ರೈತರು ಕೃಷಿಯಿಂದ ಲಾಭವಿಲ್ಲ ಎಂದು ಹೇಳಿ ಇತರ ಕೆಲಸಕ್ಕೆ ಹೋಗುವ ಬದಲು ಸರಿಯಾದ ಮಾಹಿತಿ ಪಡೆದು ಕೃಷಿ ಮಾಡಿದ್ದಲ್ಲಿ ಖಂಡಿತವಾಗಿಯೂ ಲಾಭ ಇದೆ.ನನ್ನ ಸಾಧನೆ ಅದು ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಮೂಲಕ ಮತ್ತು ಪ್ರಗತಿ ನಿಧಿ (ಕಿರು ಆಥರ್ಿಕ ವ್ಯವಹಾರ) ಮೂಲಕ ನಡೆದಿದೆ.ನಾನು ಮೊದಲು ಕೃಷಿಯಲ್ಲಿ ತೊಡಗಿಸಿಕೊಂಡಾಗ ನನಗೆ ಯಾರೂ ಕೂಡ ಆಥರ್ಿಕ ಸಹಾಯ ಮಾಡಿಲ್ಲ. ಆಗ ನನಗೆ ಆಧಾರವಾಗಿದ್ದು ಯೋಜನೆಯ ಪ್ರಗತಿ ಬಂಧು ಸಂಘ.ಇದರ ಮೂಲಕ ಸಾಲ ಪಡೆದು ಇಂದು ನನಗೆ ಈ ರೀತಿಯ ಕೃಷಿ ಮಾಡಲು ಸಾಧ್ಯುವಾಯಿತು.ಅಂದು ನನಗೆ ಯಾವ ಬ್ಯಾಂಕ್ ನವರು ಕೂಡ ಸಾಲ ನೀಡಿಲ್ಲ. ಆದರೆ ಇಂದು ಅವರೇ ಸಾಲ ನೀಡಲು ಒತ್ತಾಯ ಮಾಡಿದ್ದಾರೆ.ಗ್ರಾಮಾಭಿವೃದ್ದಿ ಯೋಜನೆಯು ಇಲ್ಲದಿದ್ದರೆ ನಾನು ಬರೇ ಕಾಮರ್ಿಕನಾಗಿ ಉಳಿಯುತ್ತಿದ್ದೆ.ಇಂದು ಸಂಘದ ಮೂಲಕ ಮನೆ ರಚನೆ, ಹಟ್ಟಿ ರಚನೆ, ಜಾಗ ಖರೀದಿ, ಅಕ್ಕಿ ಮಿಲ್ ರಚನೆ, ಮಕ್ಕಳಿಗೆ ವಿದ್ಯಾಭ್ಯಾಸ, ತಂಗಿಯಂದಿಯರಿಗೆ ಮದುವೆ, ಮಾಡಿರುತ್ತೇನೆ ಎಂದು ಅವರು ಹೇಳುತ್ತಾರೆ.ಅವರ ಸಾಧನೆ ನಿಜಕ್ಕೂ ಅಧ್ಬುತವಾಗಿದೆ.ಒಬ್ಬ ಕೃಷಿಕನಿಗೆ ಆಥರ್ಿಕ ಮತ್ತು ಮಾಹಿತಿ ಸಹಾಯ ನೀಡಿದ್ದಲ್ಲಿ ಆತ ಯಾವ ರೀತಿ ಬೆಳೆಯಬಹುದು ಎಂಬುದಕ್ಕೆ ಶ್ರಿಯುತ ಕುಲಾಲ್ ರವರು ಸಾಕ್ಷಿಯಾಗಿದ್ದಾರೆ.

ಅವರು ತನ್ನ ಸಾಧನೆಗೆ ನೆರವಾದ ಧಮರ್ಾಧಿಕಾರಿ ಶ್ರೀ.ವೀರೇಂದ್ರ ಹೆಗ್ಗಡೆಯವರು ಮತ್ತು ಯೋಜನೆಯ ಕಾರ್ಯಕರ್ತರುಗಳನ್ನು ನೆನೆಯುತ್ತಾರೆ. ಕುಲಾಲ್ ರವರು ತನ್ನ ಸಾಧನೆಗೆ ಮೈಗೂಡುಸಿದ್ದು ತನ್ನ ಅಪಾರವಾದ ಇಚ್ಚಾ ಶಕ್ತಿ ಮತ್ತು ಸಾಧಿಸುವ ಛಲ. ಇಲ್ಲದಿದ್ದರೆ ಅವರು ಏನು ಕೂಡ ಮಾಡಲು ಆಗುತ್ತಿರಲಿಲ್ಲ. ಪ್ರಗತಿಬಂಧು ಸಂಘದಿಂದ ಹೆಚ್ಚಿನ ಉಪಯೋಗ ಪಡೆದು ಆಥರ್ಿಕ ವ್ಯವಹಾರವನ್ನು ನಡೆಸಿ ಸಂಘದ ಶ್ರಮ ವಿನಿಮಯ ಮಾಡುವುದರ ಮೂಲಕ ಈ ಸಾಧನೆ ಮಾಡಿದ್ದಾರೆ. ತಿಂಗಳಿಗೆ ಸರಾಸರಿ 40000/- ಕ್ಕೂ ಮಿಕ್ಕಿ ಆದಾಯ ಪಡೆಯುತ್ತಿರುವ ಕುಲಾಲ್ ರವರು ನಮ್ಮ ಕೃಷಿಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು.ಒಟ್ಟಾಗಿ ಕಿರು ಆಥರ್ಿಕ ವ್ಯವಹಾರ ಮತ್ತು ಪ್ರಗತಿ ಬಂಧು ಸಂಘದ ಮೂಲಕ ಅವರು ಶೂನ್ಯದಿಂದ ಮೇಲೆ ಬಂದು ಇಂದು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಮೆರೆಯುತ್ತಿದ್ದಾರೆ.ಅವರ ಸಾಧನೆ ಮತ್ತಷ್ಟು ಹೆಚ್ಚಾಗಲಿ ಎಂಬುದು ನಮ್ಮ ಶುಭ ಹಾರೈಕೆ.

ಆಕಾರ ಗ್ರಂಥ : ಡಾ.ಜಿ.ವಿ ಜೋಷಿ ಅರ್ಥಶಾಸ್ತ್ರಜ್ಞರು ಅವರ ಲೇಖನ, ಕೃಷ್ಣ ಕುಲಾಲ್ ಆವಸರ್ೆ, ಯೋಜನೆಯ ಕಾರ್ಯಕರ್ತರು.

ಕುಲಾಲ್ ರವರ ಕೃಷಿ ತಾಕುವಿನ ದೃಶ್ಯಗಳು:

nist 1 150407 nist 2 150407 nist 3 150407 nist 4 150407 nist 5 150407 nist 6 150407 nist 7 150407 nist 8 150407

Leave a Reply

Your email address will not be published. Required fields are marked *