ತಮಿಳುನಾಡಿನ ಗ್ರಾಮ ವಿದ್ಯಾಲ ಸಂಸ್ಥೆಯ ೧೫ ಜನ ಸಿಬ್ಬಂದಿಗಳು ದಿನಾಂಕ ೨೩ ಹಾಗೂ ೨೪ ಎಪ್ರಿಲ್ ೨೦೧೫ರಂದು ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಿದರು. ಯೋಜನೆಯ ಅಧ್ಯಕ್ಷರಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಅವರು ಮಹಿಳಾ ಸಬಲೀಕರಣಕ್ಕಾಗಿ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು. ೨ ದಿನಗಳ ಕಾಲ ಅಧ್ಯಯನ ನಡೆಸಿದ ತಂಡವು ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ರವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿತು. ಯೋಜನೆಯ ಕಾರ್ಯಕ್ರಮಗಳಾದ ಸಂಘರಚನೆ, ಕಿರು ಆರ್ಥಿಕ ವ್ಯವಹಾರ, ಶುಧ್ಧಗಂಗಾ, ವಾಟ್ಸನ್ ಕಾರ್ಯಕ್ರಮ ಮೊದಲಾದವುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆತು. ಮಾನವ ಸಂಪನ್ಮೂಲ ಅಭಿವೃಧ್ಧಿ ವಿಭಾಗದ ನಿರ್ದೇಶಕಿ ಮಮತಾ ರಾವ್, ಯೋಜನಾಧಿಕಾರಿ ಅಭಯ್ರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಪ್ರಾಂಶುಪಾಲ ಸುರೇಶ್ ಸಾಲಿಯಾನ್ ಉಪನ್ಯಾಸಕ ಅಶೋಕ್, ವಸಂತ್ ನಾಯಕ್ ಉಪಸ್ಥಿತರಿದ್ದರು.
ತಮಿಳುನಾಡಿನ ತ್ರಿಚಿಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿರುವ ಗ್ರಾಮ ವಿದ್ಯಾಲ ಸಂಸ್ಥೆಯು ನೀರು ನೈರ್ಮಲ್ಯ ಹಾಗೂ ಕಿರು ಹಣಕಾಸು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಶದ ೫ ರಾಜ್ಯಗಳಲ್ಲಿ ೨೭೦ ಶಾಖೆಗಳನ್ನು ಹೊಂದಿರುವ ಇದು ೧೦.೦೭ ಲಕ್ಷ ಮಹಿಳಾ ಸದಸ್ಯರನ್ನು ಹೊಂದಿದೆ. ಸಂಸ್ಥೆಯ ಮಹಾ ಪ್ರಬಂಧಕ ಟಿ. ಸುಬೇಶ್ ಕುಮಾರ್ ಹಾಗೂ ಸಂಯೋಜಕ ಶಣ್ಮುಗರಾಜ್ ತಂಡದ ನೇತೃತ್ವ ವಹಿಸಿದ್ದರು.