ಮಹಿಳೆಯರು ಈ ಹಿಂದೆ ಮನೆಯಲ್ಲಿ ಮನೆ ವಾರ್ತೆ ನೋಡಿಕೊಂಡು ತಮ್ಮಷ್ಟಕ್ಕೆ ತಾವು ಇರುತ್ತಿದ್ದರು.ಆದರೆ ಈಗ ಕಾಲ ಬದಲಾದಂತೆ ಅವರು ಕೂಡ ಸಮಾಜದಲ್ಲಿ ಬದಲಾವಣೆಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವ ಸಹಾಯ ಸಂಘಗಳು ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಕಾಣಿಕೆ ಸಲ್ಲಿಸುತ್ತಿದೆ.
ಉಡುಪಿ ತಾಲೂಕಿನ ದೊಡ್ಡಣಗುಡ್ಡೆ ಬಳಿಯ ಗುಲಾಬಿಯವರು ತಮ್ಮ ಪ್ರಜ್ವಲ್ ಸ್ವ ಸಹಾಯ ಸಂಘದ ಮೂಲಕ ಹಲವಾರು ರೀತಿಯಲ್ಲಿ ಅಭಿವೃಧಿಯಾಗಿದ್ದಾರೆ.ಸಂಘದ ಮೂಲಕ ಕಳೆದ 10 ವರ್ಷಗಳಲ್ಲಿ ಸುಮಾರು 8 ಲಕ್ಷ ರೂ ಸಾಲ ಪಡೆದು ಬಟ್ಟೆ ಅಂಗಡಿ ಅದೇ ರೀತಿ ಹೊಲಿಗೆ ಮಾಡುತ್ತಿದ್ದಾರೆ.ಗ್ರಾಮೀಣ ಪ್ರದೇಶದಲ್ಲಿ ಈ ಅಂಗಡಿ ಸಾಕಷ್ಟು ಹೆಸರುವಾಸಿಯಾಗಿದೆ.ಸುಮಾರು 30 ಲಕ್ಷ ರೂ ಮೌಲ್ಯದ ಬಟ್ಟೆಗಳನ್ನು ಇರಿಸಿ ಅತ್ಯಂತ ಉತ್ತಮ ರೀತಿಯಲ್ಲಿ ಯಾವುದೇ ಇತರ ಬಟ್ಟೆ ಅಂಗಡಿಗಳಿಗೆ ಕಡಿಮೆ ಇಲ್ಲದಂತೆ ಅಂಗಡಿ ರಚನೆ ಮಾಡಿದ್ದಾರೆ.ಅದೇ ರೀತಿ ಅಂಗಡಿಯಲ್ಲಿ ಎಲ್ಲಾ ವಿಧಧ ವಿವಿಧ ರೀತಿಯ ನವೀನ ಫ್ಯಾಷನ್ ಬಟ್ಟೆ ಬರೆಗಳ ಸಂಗ್ರಹ ಮದುವೆ ಮುಂತಾದ ಸೀರೆಗಳ ಸಂಗ್ರಹವಿದೆ.ಹೊಲಿಗೆ ಮಾಡಿ ತಾವೆ ಸ್ವತಃ ರೆಡಿಮೆಡ್ ಬಟ್ಟೆಗಳನ್ನು ತಯಾರಿ ಮಾಡುತ್ತಾರೆ.ಅಂಗಡಿಯಲ್ಲಿ 10 ಜನ ಕೆಲಸಕ್ಕೆ ಇದ್ದು ಅವರ ಗಂಡ ಕೂಡ ಅವರಿಗೆ ಸಹಾಯ ಮಾಡುತ್ತಾರೆ.
ಸಈ ಹಿಂದೆ ಅವರು ಕೇವಲ ಸಣ್ಣ ಮಾದರಿಯಲ್ಲಿ ಟೈಲರಿಂಗ ಮಾಡುತ್ತಿದ್ದು,ನಂತರ ಸಂಘಕ್ಕೆ ಸೇರಿ ಅಲ್ಲಿ ಸಾಲ ಪಡೆದು ಇಂದು ಈ ಹಂತಕ್ಕೆ ಬಂದಿದ್ದಾರೆ.ವ್ಯಾಪಾರದಿಂದ ಉತ್ತಮ ಮನೆ,ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತಿದ್ದು,ಅವರ ಮಾತಿನಲ್ಲಿ ಹೇಳುದಾದರೆ ನಾನು ಸಂಘಕ್ಕೆ ಸೇರದೆ ಇದ್ದರೆ ನಾನು ಅದೇ ರೀತಿ ಇರುತಿದ್ದೆ ಶ್ರೀ.ಕ್ಷೇ,ಧ ಗ್ರಾ ಯೋಜನೆ ಪ್ರಾಯೋಜಿತ ಸ್ವ ಸಹಾಯ ಸಂಘದ ಮೂಲಕ ಈ ಹಂತಕ್ಕೆ ಬರಲು ಸಹಕಾರಿಯಾಯಿತು ಎಂದು ಅವರು ಹೇಳುತ್ತಾರೆ.ಒಬ್ಬ ಮಹಿಳೆ ಮನಸ್ಸು ಮಾಡಿದೆ ಯಾವ ಸಾಧನೆ ಮಾಡಬಹುದು ಎಂಬುದಕ್ಕೆ ಗುಲಾಬಿಯವರು ಸಾಕ್ಷಿಯಾಗಿದ್ದಾರೆ.
ಅವರ ನಗುಮುಖದ ಸೇವೆ ಅದೇರೀತಿ ಉತ್ತಮ ವ್ಯವಸ್ಥೆಯಿಂದ ಅವರ ಅಂಗಡಿಗೆ ಇತರ ಊರಿನಿಂದಲೂ ಜನ ಬಂದು ಬಟ್ಟೆ ಖರೀದಿ ಮಾಡುತ್ತಿರುವುದು ಅವರ ವ್ಯಕ್ತಿತ್ವ ಕ್ಕೆ ಹಿಡಿದ ಕನ್ನಡಿಯಾಗಿದೆ. ಅವರಂತೆಯೇ ಇತರ ಮಹಿಳೆಯರು ಸ್ವುದ್ಯೋಗ ಮಾಡಿ ತಮ್ಮ ಬದುಕನ್ನು ಸಾಗಿಸಬಹುದಾಗಿದೆ ಮನೆಯಲ್ಲಿ ಬಿಡುವಿನ ವೇಳೆಯನ್ನು ವ್ಯರ್ಥ ಮಾಡದೆ,ಅದರಿಂದ ಸದುಪಯೋಗ ಪಡಿಸಿಕೊಂಡು ಬಂದರೆ ಸಾಧನೆ ಮಾಡಲು ಯಾವುದೇ ರೀತಿಯ ತೊಂದರೆಯಿಲ್ಲ. ಇದರಿಂದ ನಿಜವಾದ ರೀತಿಯಲ್ಲಿ ಮಹಿಳಾ ಸಬಲೀಕರಣ ಆಗಲು ಸಾದ್ಯ.