UncategorizedWomen Empowerment

ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ

ಇತ್ತೀಚೆಗೆ ನಾನೊಂದು ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಮಹಿಳಾ ದಿನಾಚರಣೆ ಸಂದರ್ಬ ನಡೆದ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾನೂನು ನುರಿತ ತಜ್ಞರು, ಮಹಿಳಾ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು, ವಿರಾಜಮಾನರಾಗಿದ್ದರು. ಇವರೆಲ್ಲರೂ ತಮ್ಮ ಭಾಷಣದಲ್ಲಿ ಮಹಿಳೆಯರು ಮುಂದೆ ಬರಬೆಕು. ಬಹಳ ದೌರ್ಜನ್ಯ ನಡೀತಾ ಇದೆ, ಶೋಷಣೆ ನಡೀತಾ ಇದೆ, ಪುರುಷರು ಮಹಿಳೆಯರಿಗೆ ಅವಕಾಶ ಕೊಡ”ಕು, ಸರಕಾರ ಈ ದೌರ್ಜನ್ಯ ತಡೆಗಟ್ಟುವಲ್ಲಿ ಕ್ರಮ ಕೆಗೊಳ್ಳಬೆಕು, ಹೀಗೆ ತಮ್ಮ-ತಮ್ಮ ವಿಚಾರ ಧಾರೆಗಳನ್ನು ಮುಂದಿಟ್ಟರು. ಈ ಎಲ್ಲಾ ಮಾತುಗಳನ್ನು ಕೇಳುವಾಗ ನನ್ನ ಮನದಲ್ಲಿ ಒಂದು ಜಿಜ್ಞಾಸೆ ಮೂಡಿತು. ಮಹಿಳೆಯರು ಮುಂದೆ ಬರುವಲ್ಲಿ ಇಂದು ನಿಜವಾಗಿಯೂ ಅಡ್ಡಿ ಇದೆಯೇ? ಈ ಪ್ರಶ್ನೆಯು ನನ್ನನ್ನು ನಿರಂತರವಾಗಿ ಕಾಡಿತ್ತು ಮತ್ತು ಈಗಲೂ ಕಾಡುತ್ತಿದೆ.

ಹಾಗಿದ್ದರೆ ಮಹಿಳೆಯರು ಮುಂದೆ ಬರಲು ಇಂದು ಯಾವುದೇ ಅಡ್ಡಿ-ಆತಂಕಗಳು ಇಲ್ಲವೇ? ಈ ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ, ಆದರೆ ಇಂದು ಭಾರತ ಸರಕಾರ, ರಾಜ್ಯ ಸರಕಾರಗಳು, ಸಾವಿರಾರು ಸಂಘ-ಸಂಸ್ಥೆಗಳು, ಮಹಿಳೆಯರಿಗೆ ಪ್ರಾಧನ್ಯತೆ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ರಾಜಕೀಯ, ಸಾಮಾಜಿಕ ಸಂಘಟನೆಗಳು ಮಹಿಳೆಯರ ಸಹಭಾಗಿತ್ವಕ್ಕಾಗಿ ಮಿಸಲಾತಿಯನ್ನು ಇಟ್ಟಿದೆ. ಹಾಗಿದ್ದಲ್ಲಿ ಯಾಕೆ ಇಂದು ಪ್ರತೀ ವೇದಿಕೆಯಲ್ಲಿಯೂ ಈ ಜಿಜ್ಞಾಸೆಯು ಪ್ರಶ್ನಾರ್ಥವಾಗಿಯೇ ಉಳಿದಿದೆ? ಈ ಬಗ್ಗೆ ಬಹಳ ಗಾಢವಾಗಿ ಆಲೋಚನೆ ಮಾಡಿದಾಗ ನಮ್ಮಲ್ಲಿ ಯೋಜನೆಗಳಿವೆ, ಅವಕಾಶಗಳಿವೆ, ಮಹಿಳಾಪರ ಕಾನೂನುಗಳೂ ಇವೆ. ಆದರೆ ಇದನ್ನು ತಳಮಟ್ಟಕ್ಕೆ ತಲುಪಿಸುವಂತಹ I.E.C ಅಂದರೆ (Information Education & Communication) ಮಾಹಿತಿ ನೀಡುವುದು, ತಿಳುವಳಿಕೆ ನೀಡುವುದು ಮತ್ತು ಸಂಪರ್ಕಿಸುವ ವ್ಯವಸ್ಥೆ ಇದ್ದರೂ, ಯೋಜನೆಗಳು, ಅವಕಾಶಗಳು, ಕಾನೂನುಗಳು ಬರೀ ಪುಸ್ತಕ-ವರದಿಗಳಗೆ ಸೀಮಿತವಾಗಿದೆ ಎಂಬ ಭಾವನೆ ಬೇರೂರಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ತೋರಿಸುತ್ತಿರುವ ಆಸಕ್ತಿ, ಬದ್ದತೆ ಮತ್ತು ನೆಪುಣ್ಯತೆಯೂ ಕಾರಣವಾಗಿದೆ.

ಕೆಲವು ಯೋಜನೆಗಳಂತೂ ಬರೀ ದುಡ್ಡು ಮಾಡುವುದಾಕ್ಕಾಗಿ ರೂಪಿಸಲಾಗುತ್ತಿದೆ ಎಂಬ ಮಾತೂ ಇದೆ, ಕಾನೂನು ಇಂದು ಕೆಗೆಟುಕದ ಸ್ಥಿತಿಯಲ್ಲಿ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ಇದೆ. ಏನೇ ಇರಲಿ ಇಂದು ಮಹಿಳಾ ಸಬಲೀಕರಣಕ್ಕೆ ಪೂರಕವಾದ ಆಯುಧಗಳು ನಮ್ಮ ಸಮಾಜದಲ್ಲಿ ಬಹಳಷ್ಟು ಇದೆ. ಇದನ್ನು ತಿಳಿದುಕೊಂಡು ಬಳಕೆ ಮಾಡಿದರೆ ನಾವು ಯಾರನ್ನು ದೂರಬೇಕಾಗಿಲ್ಲ, ಯಾರನ್ನು ಬೇಡ ಬೇಕಾಗಿಲ್ಲ.

ಈ ನಿಟ್ಟಿನಲ್ಲಿ ಮಹಿಳೆಯರ ಅಭಿವೃದ್ಧಿಗೆ, ಸಬಲೀಕರಣಕ್ಕೆ ಪ್ರಸ್ತುತ ಇರುವ ಸರಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಸಣ್ಣ ಬೆಳಕನ್ನು ಚೆಲ್ಲುವ ಪ್ರಯತ್ನವನ್ನು ನಾನು ಮಾಡಿದ್ದೇನೆ. ಇದು ಎಲ್ಲರಿಗೂ ಉಪಯೋಗವಾಗಬಹುದು ಎಂದು ನಾನು ನಂಬಿದ್ದೇನೆ. ಹೆಣ್ಣು ಮಗು ಈ ಭೂಮಿಗೆ ಕಾಲಿಡುವ ಸಂದರ್ಭದಿಂದ ಇರುವ ಯೋಜನೆಯ ಬಗ್ಗೆ ಪ್ರಾರಂಭಿಸುತ್ತೇನೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ಧಿ ಇಲಾಖೆ:

ಈ ಇಲಾಖೆಯಡಿಯಲ್ಲಿ ಮಕ್ಕಳ ಕಲ್ಯಾಣ, ಮಹಿಳಾ ಕಲ್ಯಾಣ ಮತ್ತು ಸಾಮಾಜಿಕ ರಕ್ಷಣೆಯಡಿಯಲ್ಲಿ ಹಲವಾರು ಕಾರ್ಯ ಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.
ಮಕ್ಕಳ ಕಲ್ಯಾಣ ಯೋಜನೆಯಡಿಯಲ್ಲಿ:

೧) ಭಾಗ್ಯಲಕ್ಷ್ಮಿ ಯೋಜನೆ :: ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕಂತಹ ಬಡತನ ರೇಖೆಗಿಂತ ಕೆಳಗಿರುವ(BPL) ಮೂರು ಮಕ್ಕಳಿರುವ BPL ಕುಟುಂಬಗಳ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ದೊರೆಯುತ್ತಿದೆ. ರೂ.೧೯,೩೦೦/- ಮೊತ್ತ ನಿರಖು ಠೇವಣಿಯನ್ನು ಮೊದಲ ಮಗುವಿನ ಹೆಸರಿನಲ್ಲಿಡಲಾಗುವುದು ಮತ್ತು ಎರಡನೇಯ ಮಗುವಿನ ಹೆಸರಿನಲ್ಲಿ ರೂ.೧೮,೩೫೦/- ಇಡಲಾಗುವುದು. ಮತ್ತು ಮಗುವಿಗೆ ೧೮ ವರ್ಷ ಪೂರ್ಣಗೊಂಡ ನಂತರ ಮೊದಲ ಮಗುವಿಗೆ ರೂ.೧,೦೦,೦೯೭/- ಮತ್ತು ಎರಡನೇಯ ಮಗುವಿಗೆ ರೂ.೧,೦೦,೦೫೨/- ಮೊತ್ತ ನೀಡಲಾಗುತ್ತದೆ.

ಈ ಮಗುವಿಗೆ ೧೫ ವರ್ಷ ತುಂಬಿದ ನಂತರ ೧೦ನೇ ತರಗತಿಯಲ್ಲಿ ಉತ್ತಿರ್ಣಳಾಗಿ, ಮುಂದಿನ ವಿದ್ಯಾಬ್ಯಾಸಕ್ಕಾಗಿ ಈ ಭಾಗ್ಯಲಕ್ಷ್ಮಿ ಬಾಂಡನ್ನು ಅಂಗೀಕೃತ ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ, ಗರಿಷ್ಠ ರೂ.೫೦,೦೦೦/- ಸಾಲ ಪಡೆಯಬಹುದಾಗಿದೆ.
ಈ ಯೋಜನೆಯನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.
ಈ ಯೋಜನೆಯಡಿಯಲ್ಲಿ ಇತರ ಅರ್ಹತೆಯ ಅಂಶಗಳು:
೧) ಮಗುವಿನ ಜನನವನ್ನು ಖಡ್ಡಾಯವಾಗಿ ನೋಂದಾಯಿಸಿರಬೆಕು.
೨) ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗ ನಿರೋಧಕ ಲಸಿಕೆ ಹಾಕಿಸಿರಬೆಕು.
೩) ಅಂಗನವಾಡಿ ಕೇಂದ್ರಕ್ಕೆ ನೊಂದಾವಣೆ ಆಗಿರಬೆಕು.
೪) ಶಿಕ್ಷಣ ಇಲಾಖೆಯು ನೋಂದಾಯಿಸಿದ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿರಿಸಬೆಕು.
೫) ಮಗು ಬಾಲಕಾರ್ಮಿಕಳಾಗಿರಬಾರದು.
೬) ೧೮ ವರ್ಷತನಕ ವಿವಾಹವಾಗಬಾರದು.

೨. ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ: (Integrated Child Development Scheme (ICDS)

ಈ ಯೋಜನೆಯು ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಆರೋಗ್ಯ, ಶಿಶುಗಳ ಆರೋಗ್ಯ ಮತ್ತು ಆರೆಕೆ, ಮತ್ತು ಹದಿಹರೆಯದ ಮಕ್ಕಳ ಆರೋಗ್ಯಕ್ಕೆ ಪೂರಕವಾದಂತಹ ಯೋಜನೆ ಕರ್ನಾಟಕ ಸರಕಾರವು ೧೯೭೫ರಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಿಸಿ ಪ್ರಸ್ತುತ ರಾಜ್ಯಾದ್ಯಾಂತ ಎಲ್ಲಾ ತಾಲೂಕುಗಳಲ್ಲಿ ಅನುಷ್ಠಾನವಾಗುತ್ತಿದೆ.

ಈ ಯೋಜನೆಯ ಉದ್ದೇಶ:

೧) ಆರು ವರ್ಷದೊಳಗಿನ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಕಾಪಾಡುವುದು.
೨) ಮಗುವಿನ ದೆಹಿಕ, ಬೌದ್ದಿಕ, ಮಾನಸಿಕ ಮತ್ತು ಭಾವಾನಾತ್ಮಕ ಬೆಳವಣಿಗೆ ಸಮಗ್ರವಾಗುವಂತೆ ಮಾಡುವುದು.
೩) ಶಿಶುಗಳ ಮರಣ, ಅನಾರೋಗ್ಯ, ಅಪೌಷ್ಠಿಕತೆಯ ಸಮಸ್ಯೆಗಳ ನಿವಾರಣೆ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು.
೪) ಮಕ್ಕಳ ಅಭಿವೃದ್ಧಿಗೆ ಇರುವಂತಹ ವಿವಿಧ ಇಲಾಖೆಗಳ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುವಂತೆ ನೋಡುವುದು.
೫) ಮುಖ್ಯವಾಗಿ ತಾಯಂದಿರು ತಮ್ಮ ಆರೋಗ್ಯ ನಿರ್ವಹಣೆ ಮತ್ತು ಮಕ್ಕಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವಂತೆ ಮಾಹಿತಿ ಕಾರ್ಯಕ್ರಮಗಳ ಆಯೋಜನೆ ಮಾಡುವುದು.

ಸೇವೆಗಳು:

ಸೇವೆಗಳು ಯಾರಿಗೆ? ಸೇವೆ ನೀಡುವವರು
ಪೌಷ್ಟಿಕ ಆಹಾರ ಒದಗಣೆ ಆರುವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ, ಹದಿಹರೆಯದ ಹೆಣ್ಣುಮಕ್ಕಳಿಗೆ. ಅಂಗನವಾಡಿ ಕಾರ್ಯಕರ್ತೆಯರು.
ಲಸಿಕೆಗಳು ಆರುವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು. ANM
ಉಚಿತ ಆರೋಗ್ಯ ತಪಾಸಣೆ ಆರುವರ್ಷದೊಳಗಿನ ಮಕ್ಕಳು, ಗರ್ಭಿಣಿ ಮಹಿಳೆ, ಹಾಲುಣಿಸುವ ತಾಯಿ. ಡಾಕ್ಟgಗಳು/ANM/ ಅಂಗನವಾಡಿ ಕಾರ್ಯಕರ್ತರು
ರೆಫರ ಹದಿಹರೆಯದ ಹೆಣ್ಣುಮಕ್ಕಳು. ಡಾಕ್ಟgಗಳು/ANM/ ಅಂಗನವಾಡಿ ಕಾರ್ಯಕರ್ತರು.
ಪ್ರಾಥಮಿಕ ಶಾಲೆ, ವಿದ್ಯಾಭ್ಯಾಸ ೩-೬ ವರ್ಷದ ಮಕ್ಕಳಿಗೆ. ಅಂಗನವಾಡಿ ಕಾರ್ಯಕರ್ತರು.
ಪೌಷ್ಠಿಕತೆ ಮತ್ತು ಆರೋಗ್ಯ ಶಿಕ್ಷಣ ೧೫ ರಿಂದ ೪೫ ವರ್ಷದ ಮಹಿಳೆಯರು, ಹದಿಹರೆಯದ ಮಕ್ಕಳು. ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು.

 

ಈ ಸೇವೆಗಳ ಅನುಷ್ಠಾನದಲ್ಲಿ ಹಲವಾರು ಮಾಹಿತಿ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಸಣಾ ಶಿಬಿರಗಳು, ಗರ್ಬಿಣಿ/ಬಾಣಂತಿಯರ ಆರೆಕೆ, ಶಿಶುಗಳ ಆರೆಕೆಗೆ ಕ್ರಮಗಳನ್ನು ಮಾಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮೀಣ ನಗರ ಪ್ರದೇಶಗಳ ಕುಟುಂಬಗಳು ಸೌಲಭ್ಯ ಪಡಕೊಳ್ಳಬಹುದಾಗಿದೆ.

೩. ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ (Child Tracking System): ೧೮ ವರ್ಷದೊಳಗಿನ ಮಕ್ಕಳ ಸಂಖ್ಯೆ ಒಟ್ಟು ಜನಸಂಖ್ಯೆಗೆ ಹೋಲಿಸಿದಾಗ ಅಧಿಕವಾಗಿರುವ ನಿಟ್ಟಿನಲ್ಲಿ, ಈ ಮಕ್ಕಳ ಪಾಲನೆ, ಪೋಷಣೆ-ರಕ್ಷಣೆಗಾಗಿ, ಮಕ್ಕಳ ಟ್ರ್ಯಾಕಿಂಗ್ ಪದ್ಧತಿಯನ್ನು NIC (ನ್ಯಾಷನಲ್ ಇನ್ಫೋಮೆಟ್ರಿಕ್ಸ್ ಸೆಂಟರ್) ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಿಸಲಾಗುತ್ತಿದೆ. ಈ ವ್ಯವಸ್ಥೆಯ ಪ್ರಕಾರ ೧೮ ವರ್ಷದೊಳಗಿನ ಮಕ್ಕಳ ಮಾಹಿತಿ ಅವರಿಗೆ ವಿವಿಧ ಇಲಾಖೆಗಳಿಂದ ಕೊಡಿಸಲಾದ ಸೌಲಭ್ಯ, ಅವರ ಶಿಕ್ಷಣ ವ್ಯವಸ್ಥೆ, ಆರೋಗ್ಯ ಮತ್ತು ವಲಸೆ ಹೀಗೆ ಎಲ್ಲಾ ವಿಚಾರಗಳನ್ನು ಸಾಫ್ಟ್ ವೆರ್ ನಲ್ಲಿ ದಾಖಲಿಸಿ ಟ್ರ್ಯಾಕ್ ಮಾಡಲಾಗುತ್ತಿದೆ. ಇದು ಮಕ್ಕಳ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವಾಗಿರುತ್ತದೆ.

 

೪. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ತರಗತಿ ಹಾಜರಾತಿಗೆ ಸ್ಕಾಲರ್ ಶಿಪ್ ಪಾವತಿ: ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೆಕೆಂಬ ಉದ್ದೇಶದಿಂದ ಪ್ರತಿ ತಿಂಗಳು ರೂ.೨೫/-ರಂತೆ, ಹತ್ತು ತಿಂಗಳು-೭ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ೮-೧೦ ನೇ ತರಗತಿಯವರೆಗೆ ಹೆಣ್ಣು-ಮಕ್ಕಳಿಗೆ ರೂ.೭೫/-ರಂತೆ ನೀಡಲಾಗುತ್ತಿದೆ. ಕನಿಷ್ಠ ೮೦% ಹಾಜರಾತಿ ಖಡ್ಡಾಯ. ಕುಟುಂಬದ ಆದಾಯ ರೂ.೧೦,೦೦೦/-ಕ್ಕೆ ಮೀರಿರಬಾರದು ಮತ್ತು ಹಳ್ಳಿಯ ಜನಸಂಖ್ಯೆ ೨೦,೦೦೦ ದೊಳಗೆ ಇದ್ದರೆ ಮಾತ್ರ ಈ ಯೋಜನೆ ಅನ್ವಯಿಸುವುದು. ಜಿಲ್ಲಾ ಪಂಚಾಯತಿ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

೫. ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ: ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ರೂ.೧೦,೦೦೦/-ಕ್ಕಿಂತ ಆದಾಯ ಕಡಿಮೆಯಿರುವ ಕುಟುಂಬದ ಹೆಣ್ಣುಮಕ್ಕಳಿಗೆ ಆರನೇ ತರಗತಿ ನಂತರದ ವಿದ್ಯಾಭ್ಯಾಸಕ್ಕಾಗಿ ಉಚಿತ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಟ್ಟು ೪೪ ಹಾಸ್ಟೆಗಳನ್ನು ರಾಜ್ಯಾದ್ಯಂತ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.

೬. ಮಕ್ಕಳ ರಕ್ಷಣೆ ಮತ್ತು ಜಾಗರೂಕತೆಗಾಗಿ ಮತ್ತು ಕಲ್ಯಾಣಕ್ಕಾಗಿ ಯೋಜನೆಗಳು: ಅನಾಥ ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆಗಾಗಿ, ಅವರ ಪಾಲನೆ ಪೋಷಣೆಗಾಗಿ ಅನಾಥಾಲಯಗಳನ್ನು ಸ್ಥಾಪಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳಿಗೆ ಇದರ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಒಟ್ಟು ೨೬೯ ಅನಾಥಾಲಯಗಳು ಕಾರ್ಯನಿರ್ವಸುತ್ತಿದೆ.

೭. ಕೆಲಸ ಮಾಡುವ ಮಹಿಳೆಯರ, ಮಕ್ಕಳ ಪಾಲನೆಗಾಗಿ ಶಿಶುಧಾಮ: ಗಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಇತರ ಕೆಲಸಗಳಿಗೆ ತೆರಳುವ ಮಹಿಳೆಯರ ೩ ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಶಿಶುಧಾಮ, ಶಿಶು ಮಂದಿರಗಳನ್ನು ನಡೆಸುವರೇ ಮಹಿಳಾ ಮಂಡಳಿ, ಸ್ವಯಂ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯದ ಸೌಲಭ್ಯವಿದೆ. ಈ ಸೌಲಭ್ಯದಲ್ಲಿ ಆರೋಗ್ಯ ರಕ್ಷಣೆ, ಪೌಷ್ಠಿಕ ಆಹಾರ, ಮಗುವಿಗೆ ವಸತಿ ವ್ಯವಸ್ಥೆ, ಲಸಿಕೆ ಹಾಕುವುದು, ಆಟಗಳು ಇವೆಲ್ಲವೂ ಒಳಗೊಂಡಿದೆ.

೮. ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ತಡೆಗೆ ಯೋಜನೆಗಳು: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಈ ವಿಚಾರದ ಬಗ್ಗೆ ಮಾಹಿತಿ ಕೊಡುವ ನಿಟ್ಟಿನಲ್ಲಿ ಮತ್ತು ಈ ವಿಚಾರದ ಬಗ್ಗೆ ಮನದಟ್ಟು ಮಾಡುವಂತೆ ಪ್ರತೀ ತಾಲೂಕು ಮತ್ತು ಗ್ರಾಮ ಪಂಚಾಯv ಮಟ್ಟದಲ್ಲಿ ಒಂದು ದಿನದ ಮಾಹಿತಿ ಕಾರ್ಯಕ್ರಮಗಳನ್ನು ಜಾಥಾ, ಬೀದಿ ನಾಟಕ, ರ್‍ಯಾಲಿಗಳ ಮೂಲಕ ಸಂಘಟಿಸಲಾಗುತ್ತಿದೆ.

೯. ಬಾಲ್ಯವಿವಾಹ ತಡೆ ಕಾಯಿದೆ ೨೦೦೬ರ ಅನುಷ್ಠಾನ: ಬಾಲ್ಯ ವಿವಾಹ ತಡೆ ಕಾಯಿದೆಯ ಅನುಷ್ಠಾನ ಜವಾಬ್ದಾರಿಯನ್ನು ಇಲಾಖೆ ನೋಡಿಕೊಳ್ಳುತ್ತಿದೆ. ಇಲಾಖೆಯ ಉಪ ಕಮಿಷನರ್, ಉಪನಿರ್ದೇಶಕರು, ಕಾರ್ಯನಿರ್ವಹಣಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ತಹಶೀಲ್ದಾರರು, ಕಾರ್ಮಿಕ ಇಲಾಖಾ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ರೆವನ್ಯೂ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು ಇವರೆಲ್ಲರೂ ಈ ಕಾಯಿದೆಯ ಅನುಷ್ಠಾನದ ಜವಾಬ್ದಾರಿ ಇರುವವರು, ಬಾಲ್ಯವಿವಾಹ ಕಂಡು ಬಂದಲ್ಲಿ ಈ ಅಧಿಕಾರಿಗಳಿಗೆ ಯಾರು ಬೇಕಾದರೂ (ಸಾರ್ವಜನಿಕರು) ಸೂಚಿಸಬಹುದು.

೧೦. ಹೆಣ್ಣು ಮಕ್ಕಳ ದಿನ ಆಚರಣೆ: ಜನವರಿ ೨೪ರಂದು ಹೆಣ್ಣು ಮಗುವಿನ ದಿನ ಎಂದು ಭಾರತ ಸರಕಾರವು ಘೋಷಿಸಿದೆ. ಈ ದಿನದಂದು ಹೆಣ್ಣು ಮಗುವಿನ ಪ್ರಾಮುಖ್ಯತೆ, ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ, ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಶೋಷಣೆ, ಅಪೌಷ್ಠಿಕತೆ ಬಗ್ಗೆ ಜಾಗೃತಿ ಹೀಗೆ ಈ ವಿಚಾರಗಳ ಬಗ್ಗೆ ವ್ಯಾಪಕವಾದಂತಹ ಮಾಹಿತಿ ಒದಗಣೆ ಮತ್ತು ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ.

೧೧. ಉಜ್ವಲ ಯೋಜನೆ: ಲೆಂಗಿಕ ಶೋಷಣೆಗೆ ಒಳಗಾದ ಮಕ್ಕಳು/ಮಹಿಳೆಯರ ರಕ್ಷಣೆ, ಆರೆಕೆ ಮತ್ತು ಅವರನ್ನು ಕುಟುಂಬದ ಜೊತೆ ಜೋಡಿಸುವ ಯೋಜನೆ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಅಕ್ರಮ ಸಾಗಾಣಿಕೆ ಮತ್ತು ಬಲಾತ್ಕಾರವಾದ ಲೆಂಗಿಕತೆ, ಇಂತಹ ದೌರ್ಜನ್ಯವನ್ನು ತಡೆಯುವುದಕೋಸ್ಕರ ಸಮಾಜದಲ್ಲಿ ಸಾರ್ವಜನಿಕರಿಗೆ ಮಹಿಳೆಯರ ಪರವಾಗಿ ಗೌರವಯುತ ಭಾವನೆಯನ್ನು ತರುವಂತೆ ಮತ್ತು ಲೆಂಗಿಕ ಬಲಾತ್ಕಾರ ಮತ್ತು ಶೋಷಣೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಉಜ್ವಲ ಯೋಜನೆ ಶ್ರಮಿಸುತ್ತಿದೆ. ಇಂತಹ ಸಮಸ್ಯೆಗೆ ಸಿಲುಕಿದಂತಹ ಮಹಿಳೆಯರ ರಕ್ಷಣೆ ಮತ್ತು ಅವರಿಗೆ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸುವಲ್ಲಿ, ದೇಶದ ಗಡಿ ಪ್ರದೇಶದಲ್ಲಿ ಈ ಸಮಸ್ಯೆಗೆ ಒಳಗಾದಂತಹ ಮಹಿಳೆಯರನ್ನು ಅವರ ಸ್ವದೇಶಕ್ಕೆ ಮರಳುವಂತೆ ಮಾಡುವಂತೆ, ವಸತಿ ವ್ಯವಸ್ಥೆ, ಊಟ-ಉಪಚಾರ, ಮೂಲಭೂತ ಸೌಕರ್ಯಗಳ ಒದಗಣೆ ಹೀಗೆ ಈ ರೀತಿಯಾದಂತಹ ಸೇವೆಗಳನ್ನು ಕಲ್ಪಿಸಲಾಗುತ್ತಿದೆ. ಈ ಯೋಜನೆಯನ್ನು ಸಮಾಜಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮಗಳು, ಇತರ ಸ್ವಯಂ ಸೇವಾ ಸಂಸ್ಥೆಗಳು ಅನುಷ್ಠಾನ ಮಾಡುತ್ತಿದೆ.

೧೨. ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನಾ (IGMSY) (ಹೆರಿಗೆ ಸೌಲ”s ಯೋಜನೆ): ಕೇಂದ್ರ ಸರಕಾರದ ಕಾರ್ಯಕ್ರಮ: ಈ ಯೋಜನೆಯ ಪ್ರಕಾರ ಗರ್ಭಿಣಿ, ಬಾಣಂತಿ ಮತ್ತು ಹಾಲುಣಿಸುವ ತಾಯಂದಿರ ಮತ್ತು ಶಿಶುಗಳ ಆರೋಗ್ಯ, ನೆರ್ಮಲ್ಯ ಮತ್ತು ಪೌಷ್ಟಿಕತೆ ಬಗ್ಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾದ ಹೆಜ್ಜೆಗಳು, ಪದ್ಧತಿಗಳು, ಆರೆಕೆ ಕ್ರಮಗಳು, ಸುರಕ್ಷಾ ಹೆರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನೀಡಬೆಕಾದ ಆಹಾರ ಪದ್ಧತಿ ಹೀಗೆ ಈ ವಿಚಾರಗಳ ಬಗ್ಗೆ ಕಾಳಜಿಯನ್ನು ವಹಿಸಲಾಗುತ್ತದೆ. ವಯೋಮಿತಿ ಹತ್ತೊಂಬತ್ತು ಮತ್ತು ಹೆಚ್ಚಿನ ಪ್ರಾಯದ ಗರ್ಭಿಣಿ ಮಹಿಳೆಯರ ಎರಡು ಮಕ್ಕಳಿಗೆ ಈ ಯೋಜನೆ ಅನ್ವಯಿಸುತ್ತದೆ. ಗರ್ಭವತಿಯಾದ ಸಂದರ್ಭ ಮತ್ತು ಹೆರಿಗೆ ಸಂದರ್ಭ ಉದ್ಯೋಗ/ಕೂಲಿ ಕೆಲಸಕ್ಕೆ ಹೋಗಲು ಅಸಾಧ್ಯವಾಗುವುದರಿಂದ ಅದಕ್ಕೆ ಪೂರಕವಾಗಿ ರೂ.೪,೦೦೦/- ಸಹಾಯ ಧನವನ್ನು ಮೂರು ಕಂತಿನಲ್ಲಿ ಮಹಿಳೆಯರಿಗೆ, ಗರ್ಭಿಣಿಯಾಗಿ ಆರು ತಿಂಗಳು ಪೂರ್ತಿಯಾಗಿ ಮತ್ತು ಹೆರಿಗೆಯಾಗಿ ಆರು ತಿಂಗಳು ಆಗುವ ಅವಧಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಯು ಸಮಗ್ರ ಮಕ್ಕಳ ಕಲ್ಯಾಣ ಯೋಜನೆ (ICDS) ಉಸ್ತುವಾರಿಯಲ್ಲಿ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಮಹಿಳೆ ಗರ್ಭಿಣಿ ಆಗಿರುವಾಗ ಉತ್ತಮ ಆಹಾರ ಸೇವನೆ ಬಗ್ಗೆ ಜಾಗೃತಿ ವಹಿಸಿ ತನ್ನನ್ನು ಆರೆಕೆ ಮಾಡಿಕೊಂಡು ಆರೋಗ್ಯವಂತ ಶಿಶುಗಳ ಸುರಕ್ಷಿತ ಜನನ ಮತ್ತು ಶಿಶುಗಳ ಜನನವಾದ ತಕ್ಷಣದಲ್ಲಿ ಖಡ್ಡಾಯವಾಗಿ ಎದೆಹಾಲನ್ನು ಉಣಿಸುವ ಬಗ್ಗೆ ಜಾಗೃತಿ ಮತ್ತು ಬಾಣಂತಿ ಆರೆಕೆ ಸಮಗ್ರವಾಗಿ ಆಗಿ ತಾಯಿ ಮತ್ತು ಮಗು ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳುವ ಯೋಜನೆ.

ಇದಕ್ಕೆ ಮಾಡಬೆಕಾದದ್ದು ಇಷ್ಟೇ:

 • ಗರ್ಭವತಿ ಆದ ೪ ತಿಂಗಳೊಳಗಾಗಿ ಸ್ಥಳೀಯ ಅಂಗನವಾಡಿಯಲ್ಲಿ ನೊಂದಾವಣೆ ಮಾಡಿಸಿಕೊಳ್ಳಬೆಕು.
 • ಪ್ರಸವ ಪೂರ್ವ ಆರೆಕೆ ಸ್ಥಳೀಯ ಅಂಗನವಾಡಿಯ ಮೂಲಕ ಪಡಕೊಳ್ಳಬೆಕು. ಪ್ರತೀ ತಿಂಗಳಲ್ಲಿ ಒಂದು ದಿನ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ದಿನವನ್ನು ಆಚರಿಸುವ ಸಂದರ್ಭ ಹಾಜರಿರಬೆಕು.
 • ಹೆರಿಗೆ: ಹೆರಿಗೆಯನ್ನು ಖಡ್ಡಾಯವಗಿ ನರ್ಸಿಂಗ್ ಹೋಮ್, ಆಸ್ಪತ್ರೆಗಳಲ್ಲಿ ನುರಿತ ಡಾಕ್ಟರ್ಗಳಿಂದ/ ನರ್ಸ್ ಗಳಿಂದ ಮಾಡಿಸಬೆಕು. ಮನೆಯಲ್ಲಿ ಹೆರಿಗೆ ಮಾಡಿಸಬಾರದು.
 • ಶಿಶುವಿನ ಆರೆಕೆ: ಕಾಲಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳುವುದು, ಮಗುವಿನ ಬೆಳವಣಿಗೆ ಬಗ್ಗೆ ನಿಗಾ ಇಡುವುದು, ಶಿಶುವಿನ ೬ ತಿಂಗಳ ತನಕ ಕಡ್ಡಾಯ, ಎದೆಹಾಲು ಮಾತ್ರ ನೀಡುವುದು. ನಂತರ ಇತರ ಪೂರಕ ಆಹಾರದ ಜೊತೆಗೆ ಎರಡುವರ್ಷ ತುಂಬುವ ತನಕ ಎದೆಹಾಲು ನೀಡುವುದು. ಇದರಿಂದ ಮಗುವಿನ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಅಧಿಕವಾಗಲು ಸಾಧ್ಯ. ಈ ರೀತಿಯ ಆರೆಕೆಯನ್ನು ಮಾಡಿದಲ್ಲಿ ಮಾತ್ರ ಆರೋಗ್ಯವಂತವಾಗಿ ಮಗು ಬೆಳೆಯಲು ಸಾಧ್ಯ.

೧೩. ಜನನಿ ಸುರಕ್ಷಾ ಯೋಜನಾ: ರಾಷ್ರೀಯ ಗ್ರಾಮೀಣ ಆರೋಗ್ಯ ಮಿಷನ್ – ಗ್ರಾಮೀಣ ಭಾಗದ ಮಹಿಳೆಯರು ಸುರಕ್ಷಿತ ಹೆರಿಗೆ ಮತ್ತು ಆರೆಕೆ ಮಾಡಿಸಿ ಕೊಳ್ಳಬೆಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಕಾರ್ಯಕ್ರಮವು ಕೇಂದ್ರ ಸರಕಾರದ ಕಾರ್ಯಕ್ರಮವಾಗಿದೆ.

ಆಶಾ ಕಾರ್ಯಕರ್ತರು ಈ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಅನುಷ್ಠಾನ ಮಾಡುತ್ತಾರೆ. (ಆಶಾ ಅಂದರೆ: ASHA: Accredited Social Health Activist) ಗ್ರಾಮಿಣ ಪ್ರದೇಶದಲ್ಲಿ ಗರ್ಭಿಣಿ ಸ್ತ್ರೀಯರನ್ನು ಗುರುತಿಸಿ ಅವರು ಪ್ರಸವ ಪೂರ್ವ ಆರೆಕೆ ಪಡಕೊಳ್ಳುವಂತೆ ಮತ್ತು ಹೆರಿಗೆ ಸಂದರ್ಭ ಆಕೆಯ ಸಂಪೂರ್ಣ ಆರೆಕೆ, ಹೆರಿಗೆಯ ನಂತರ ಶಿಶು ಹಾಗೂ ತಾಯಿಯ ಆರೋಗ್ಯ ಸ್ಥಿತಿ ಬಗ್ಗೆ ನಿಗಾವಹಿಸುವಿಕೆ, ಶಿಶುವಿಗೆ ಲಸಿಕೆ ಹಾಕಿಸುವುದು, ಮಗುವಿಗೆ ಎದೆಹಾಲು ಉಣಿಸುವಂತೆ ಮಾಡುವುದು, ಆಸ್ಪತ್ರೆಯಲ್ಲಿಯೇ ಹೆರಿಗೆ ಆಗುವಂತೆ ನೋಡಿಕೊಳ್ಳುವುದು ಇತ್ಯಾದಿ ಜವಾಬ್ದಾರಿಗಳು ಆಶಾ ಕಾರ್ಯಕರ್ತೆಯರಿಗೆ ಇದೆ.
ಈ ಯೋಜನೆ ಯಾರಿಗೆ ಅನ್ವಯಿಸುತ್ತದೆ?

ದೇಶದಲ್ಲಿ ಕೆಲವೊಂದು ರಾಜ್ಯಗಳನ್ನು ಉತ್ತಮ ನಿರ್ವಹಣೆಯ ರಾಜ್ಯಗಳು ಮತ್ತು ಸಾಮಾನ್ಯ ನಿರ್ವಹಣೆಯ ರಾಜ್ಯಗಳು (ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವ ಸಂಖ್ಯೆಗಳ ಆಧಾರದಲ್ಲಿ) ಎಂದು ವಿಂಗಡಣೆ ಮಾಡಲಾಗಿದೆ. ಈ ರಾಜ್ಯಗಳಿಗೆ ಸೂಕ್ತವಾದ ಸೌಲಭ್ಯಗಳು ಅನ್ವಯಿಸುತ್ತದೆ.

ರಾಜ್ಯಗಳು ಚಿಕಿತ್ಸೆ ಪಡಕೊಳ್ಳ ಬೆಕಾದ ಸ್ಥಳ ಗ್ರಾಮೀಣ ಪ್ರದೇಶ (ಲಗವಾಗುವ ಮೊತ್ತ) ನಗರ ಪ್ರದೇಶ (ಲಗವಾಗುವಮೊತ್ತ)
ಸಾಮಾನ್ಯ ನಿರ್ವಹಣೆ ರಾಜ್ಯಗಳು (LPS)
Low Preparing States
ಸರಕಾರಿ ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಜಿಲ್ಲಾ, ರಾಜ್ಯ ಆಸ್ಪತ್ರೆಗಳಲ್ಲಿ ಮತ್ತು ಗುರುತಿಸಿದ ಖಾಸಗೀ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಕೊಳ್ಳುವ ಮಹಿಳೆಯರಿಗೆ. ೧,೪೦೦ ೧,೦೦೦
ಉತ್ತಮ ನಿರ್ವಹಣೆ ರಾಜ್ಯಗಳು(HPS)High Preparing States ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ೧೯ ವರ್ಷ ಮೇಲ್ಪಟ್ಟ ಮಹಿಳೆಯರಿಗೆ ೭೦೦ ೬೦೦
ಸಾಮಾನ್ಯ ಮತ್ತು ಉತ್ತಮ ನಿರ್ವಹಣೆ ರಾಜ್ಯಗಳು
(  LPS, HPS)
ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮಹಿಳೆಯರು, ಸರಕಾರಿ ಆಸ್ಪತ್ರೆ, ಪ್ರಾಥಮಿಕ ೧,೪೦೦ ೧,೦೦೦

 

೧೪. ನ್ಯಾಶನಲ್ ಚಾರ್ಟರ್ ಫಾರ್ ಚಿಲ್ಡ್ರನ್ (National Charter For Children)-೨೦೦೩: ಮಕ್ಕಳ ಏಳಿಗೆಗಾಗಿ ಅಭ್ಯುದಯಕ್ಕಾಗಿ ಕೇಂದ್ರ ಸರಕಾರವು ೨೦೦೩ ರಲ್ಲಿ ನ್ಯಾಶನ ಚಾರ್ಟರ್ ಫಾರ್ ಚಿಲ್ಡ್ರನ್ನ್ನು ಜಾರಿಗೆ ತಂದಿತು. ಈ ಚಾರ್ಟರ್ನ ಪ್ರಕಾರ ಯಾವುದೇ ಮಗು ಹಸಿವಿನಿಂದ ಬಳಲಬಾರದು, ಶಿಕ್ಷಣ ವಂಚಿತನಾಗಬಾರದು ಮತ್ತು ಅನಾರೋಗ್ಯ ಪೀಡಿತನಾಗಬಾರದು ಎಂಬುದಾಗಿದೆ. ಈ ಚಾರ್ಟರ್ನ ಪ್ರಕಾರ ಸಮುದಾಯವು/ಸಮಾಜವು ಪ್ರತಿಯೊಂದು ಮಗುವಿಗೆ ಕೆಳಗಿನ ವಿಚಾರಗಳಲ್ಲಿ ನ್ಯಾಯಸಮ್ಮತವಾದದನ್ನೇ ಮಾಡಬೆಕು.

 • ಬದುಕಲು, ಜೀವಿಸಲು ಮತ್ತು ಸ್ವತಂತ್ರ್ಯವಾಗಿರಲು ಅವಕಾಶ.
 • ಆರೋಗ್ಯ ಮತ್ತು ಪೌಷ್ಟಿಕತೆಗೆ ಪೂರಕವಾದ ಅತ್ಯುತ್ತಮವಾದ ಆಹಾರ ಪದ್ಧತಿ ಅನುಸರಣೆ ಮಾಡುವುದು.
 •  ಮೂಲಭೂತ ಸೌಕರ್ಯಗಳ ಅವಶ್ಯಕತೆಯನ್ನು ಪೂರೆಸುವುದು ಮತ್ತು ಭದ್ರತೆ ಒದಗಿಸುವುದು.
 • ಆಟವಾಡಲು ಮತ್ತು ಬಿಡುವಿನ ವೇಳೆ ನೀಡುವುದು.
 • ಮಗುವಿನ ಬೆಳವಣಿಗೆ , ಅಭಿವೃದ್ಧಿ ಮತ್ತು ಬದುಕು ಸಾಗಿಸುವುದಕ್ಕಾಗಿ ಅದರ ಆರೆಕೆ.
 • ಉಚಿತ ಮತ್ತು ಖಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವುದು.
 • ಸಮಾಜದಲ್ಲಿ ಆಗುವ ಶೋಷಣೆಗಳು ಮತ್ತು ಇತರ ದುಷ್ಟಶಕ್ತಿಗಳಿಂದ ಮಗುವಿನ ರಕ್ಷಣೆ.
 • ಹೆಣ್ಣು ಮಗವಿನ ರಕ್ಷಣೆ.
 • ಹದಿಹರೆಯದ ಮಕ್ಕಳ ಸಬಲೀಕರಣ.
 • ತನ್ನ ವಿಚಾರಗಳನ್ನು ಮಂಡನೆ ಮಾಡುವುದಕ್ಕೆ, ಮಾಹಿತಿಯನ್ನು ಪಡೆಯುವುದಕ್ಕೆ ಮತ್ತು ಉಪಯೋಗಿಸುವುದಕ್ಕೆ, ಇನ್ನೊಬ್ಬರ ಜೊತೆ ಸಹವಾಸ ಮತ್ತು ಶಾಂತಿಯುತವಾಗಿ ಸೇರುವ ಬಗ್ಗೆ ಸ್ವಾತಂತ್ಯ.
 • ಮಗುವಿನ ಕುಟುಂಬದ ಜೊತೆ ಬಲ ವರ್ಧನೆ.
 • ಪೋಷಕರ ಜವಾಬ್ದಾರಿಗಳು.
 • ಅಂಗವಿಕಲ/ವಿಕಲಚೇತನ ಮಕ್ಕಳ ರಕ್ಷಣೆ.
 • ಇತರ ಜನಾಂಗದ ಕುಟುಂಬಗಳ, ಮಕ್ಕಳ ಆರೆಕೆ, ರಕ್ಷಣೆ, ಕ್ಷೇಮ ನೋಡಿಕೊಳ್ಳುವ ಜವಾಬ್ದಾರಿ.
 • ಮಕ್ಕಳಿಗೆ ಹಿತವಾಗುವ ಪದ್ಧತಿಗಳ ಅನುಕರಣೆ.

ಹೀಗೆ ಮೇಲಿನ ಎಲ್ಲಾ ವಿಚಾರಗಳಲ್ಲಿ ಸಮುದಾಯವು, ಸಮಾಜವು, ಜನರು ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೆಕೆಂದು ಇದರಲ್ಲಿ ವಿವರಿಸಲಾಗಿದೆ.

ಮೇಲೆ ಉಲ್ಲೇಖಿಸಿದ ಅಷ್ಟೂ ಕಾರ್ಯಕ್ರಮಗಳು ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಕಾರ್ಯಕ್ರಮಗಳು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರದಿಂದ ನಡೆಸಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳು ಹಿಂದುಳಿದ ಗ್ರಾಮೀಣ ಭಾಗದ ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳು.

ಅದೇ ರೀತಿಯಲ್ಲಿ ಈ ಇಲಾಖೆಗಳಿಂದ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಇರುವ ಕಾರ್ಯಕ್ರಮಗಳು:

೧. ಸ್ತ್ರೀ ಶಕ್ತಿ ಸಂಘಗಳು: ಮಹಿಳಾ ಸಶಕ್ತೀಕರಣ ಮತ್ತು ಅವರನ್ನು ಸ್ವಾವಲಂಬಿಗಲಾಗಿಸುವ ನಿಟ್ಟಿನಲ್ಲಿ ೨೦೦೦-೦೧ರಲ್ಲಿ ಆಗಿನ ಕರ್ನಾಟಕ ಘನ ಸರಕಾರವು ಸ್ತ್ರೀಶಕ್ತಿ ಸಂಘಗಳ ರಚನೆಯನ್ನು ಪ್ರಾರಂಭಿಸಿತು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬ, ಕೃಷಿ ಕೂಲಿ ಕಾರ್ಮಿಕರು, ಭೂರಹಿತ ಕುಟುಂಬಗಳು, ಮಹಿಳೆಯರು ಸಂಘ ರಚನೆ ಮಾಡುತ್ತಾರೆ. ಸಣ್ಣ ಉಳಿತಾಯವನ್ನು ಪ್ರಾರಂಭಿಸಿ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಇದರ ಮೂಲ ಉದ್ದೇಶ. ಮಹಿಳೆಯರನ್ನು ಸಂಘಟಿಸಿ ಅವರು ಆದಾಯವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಂಡು ತಮ್ಮ ಕುಟುಂಬದ ಏಳಿಗೆ ಮಾಡುವ ಅವಕಾಶ ಈ ಸ್ತ್ರೀಶಕ್ತಿ ಸಂಘಗಳ ಮೂಲಕ ಸಾಧ್ಯವಿದೆ, ಅಲ್ಲದೆ ಇಲಾಖೆಯ ಇತರ ಸೌಲ”sಗಳನ್ನೂ ಈ ಸಂಘಗಳ ಮೂಲಕ ನೇರವಾಗಿ ನೀಡುವಲ್ಲಿಯೂ ಇದು ಸಹಕಾರಿಯಾಗಿದೆ.

೨. ಕರ್ನಾಟಕ ಮಹಿಳಾ ಅಭಿವೃದ್ಧಿ ಯೋಜನೆ: ೨೦೦೩ರಲ್ಲಿ ಕರ್ನಾಟಕ ಘನ ಸರಕಾರವು ಈ ಕೇಂದ್ರವನ್ನು ಸ್ಥಾಪನೆ ಮಾಡಿತು. ಈ ಕೇಂದ್ರದ ಉದ್ದೇಶ ಲಿಂಗ ತಾರತಮ್ಯ ನಿವಾರಣೆ ಮತ್ತು ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಯೋಜನೆಗಳಲ್ಲಿ ೧/೩ ರಷ್ಟು ಮಹಿಳೆಯರಿಗೆ ಮೀಸಲಿರಿಸಿ ಅನುಷ್ಠಾನ ಮಾಡುವುದಾಗಿದೆ. ೨೦೧೪-೧೫ ರಲ್ಲಿ ಇಂತಹ ೨೩೭ ಯೋಜನೆಗಳನ್ನು ಗುರುತಿಸಲಾಗಿದ್ದು ೫೮೦೦ ಕೋಟಿ ಮೊತ್ತ ಮಹಿಳೆಯರ ಯೋಜನೆಗಳಿಗಾಗಿ ಇಟ್ಟುಕೊಳ್ಳಲಾಗಿದೆ.

೩. ಉದ್ಯೋಗಿನಿ: ಮಹಿಳೆಯರು ಸ್ವಂತ ಉದ್ಯೋಗವನ್ನು ಕೆಗೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಸೌಲಭ್ಯವನ್ನು ಒದಗಿಸುವ ಯೋಜನೆ. ಕರ್ನಾಟಕ ಮಹಿಳಾ ಅಭಿವೃದ್ಧಿ ಪ್ರಾಧಿಕಾರವು ಉದ್ಯೋಗ ಕೆಗೊಂಡ ಮಹಿಳೆಯರಿಗೆ ಪ್ರೋತ್ಸಾಹಧನವನ್ನು ನೀಡುತ್ತದೆ. ವರ್ಷಕ್ಕೆ ರೂ.೪೦,೦೦೦ ಆದಾಯದೊಳಗಿನ ಕುಟುಂಬದ ೧೮ ರಿಂದ ೪೫ ವರ್ಷಪ್ರಾಯದ ಮಹಿಳೆಯರಿಗೆ ರೂ.೧,೦೦,೦೦೦/- ಮೊತ್ತ ಆರ್ಥಿಕ ಸೌಲಭ್ಯ ನೀಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರಿಗೆ ೩೦% ಅಥವಾ ರೂ.೧೦,೦೦೦/-ಯಾವುದು ಕಡಿಮೆಯೋ ಅದು ಮತ್ತು ಇತರ ಮಹಿಳೆಯರಿಗೆ ೨೦% ಅಥಯಾ ರೂ.೭,೫೦೦/- ಯಾವುದು ಕಡಿಮೆಯೋ ಅದು ಪ್ರೋತ್ಸಾಹ ಧನ ಲಭ್ಯವಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅರ್ಜಿ ವಿಲೇವಾರಿ ಮಾಡಲಾಗುತ್ತದೆ.

೪. ಸಾಂತ್ವಾನ ಕೇಂದ್ರ: ಈ ಯೋಜನೆಯು ೨೦೦೦ನೇ ಇಸವಿಯಲ್ಲಿ ಪ್ರಾರಂಭವಾಯಿತು. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೆಂಗಿಕ ಕಿರುಕುಳ, ವರದಕ್ಷಿಣೆ ಇತ್ಯಾದಿಗಳಿಗೆ ಒಳಗಾದ ಮಹಿಳೆಯರಿಗೆ ಸಾಂತ್ವಾನ, ಆಶ್ರಯ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಈ ಕೇಂದ್ರದ ಮೂಲಕ ಕಾನೂನು ಸಹಾಯ, ತಾತ್ಕಾಲಿಕ ಆಶ್ರಯ, ಆರ್ಥಿಕವಾಗಿ ಸ್ವಾಲಂಬನೆ ಹೊಂದುವುದಕ್ಕೆ ಪೂರಕ ತರಬೆತಿಗಳ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ಈ ಸಾಂತ್ವಾನ ಕೇಂದ್ರಗಳನ್ನು ನಡೆಸುತ್ತಿದ್ದು ೨೪ ಗಂಟೆಗಳ ಸೇವೆಯನ್ನು ಪ್ರತೀ ತಾಲೂಕುಗಳಲ್ಲಿ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಸಮಿತಿ ಇದ್ದು ಈ ಸಮಿತಿಯ ನಿರ್ದೇಶನದಂತೆ ಕೇಂದ್ರ ಕಾರ್ಯಾಚರಿಸುತ್ತದೆ. ಮಹಿಳೆಗೆ ಅಗತ್ಯವಿದ್ದಾಗ ರೂ.೨,೦೦೦/- ದಿಂದ ರೂ.೧೦,೦೦೦/- ದವರೆಗೆ ಆರ್ಥಿಕ ನೆರವೂ ನೀಡಲಾಗುತ್ತಿದೆ.

೫. ಉದ್ಯೋಗಸ್ಥ ಮಹಿಳೆಯರ ವಸತಿ ವ್ಯವಸ್ಥೆ: ಅತೀ ಕಡಿಮೆ ದರದಲ್ಲಿ ಮತ್ತು ಸುರಕ್ಷಿತ ವಸತಿ ವ್ಯವಸ್ಥೆ, ಉದ್ಯೋಗಸ್ಥ ಮಹಿಳೆಯರಿಗೆ ಪಟ್ಟಣ ಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ. ಕೇಂದ್ರ ಸರಕಾರ ೭೫% ಕಟ್ಟಡ ನಿರ್ಮಾಣ ವೆಚ್ಚ ಭರಿಸುತ್ತಿದೆ. ರಾಜ್ಯ ಸರಕಾರ ೨೫% ಮತ್ತು ಸ್ವಯಂ ಸೇವಾ ಸಂಸ್ಥೆ ೧೨.೫% ವೆಚ್ಚ ಭರಿಸುತ್ತದೆ. ಇದರ ನಿವಹಣೆಯು ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿದ್ದು ಒಟ್ಟು ೬೬ ವಸತಿ ಗೃಹಗಳಿವೆ.

೬. ಸಾಮಾಜಿಕ ದುಷ್ಟ ಶಕ್ತಿಗಳ ತಡೆಗೆ ವಿಶೇಷ ಕೇಂದ್ರ ಸ್ಥಾಪನೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶನಾಲಯದಲ್ಲಿ ವರದಕ್ಷಿಣೆ ಪಿಡುಗು, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಮಹಿಳೆಯರ ಶೋಷಣೆಗಳ ವಿರುದ್ಧ ಜಾಗೃತಿ ಮೂಡಿಸುವಲ್ಲಿ ನಿರಂತರವಾಗಿ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಈ ಕೇಂದ್ರದ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ.

೭. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ೨೦೦೫ರ ಅನುಷ್ಠಾನ: ಇಲಾಖೆಯ ಉಪ ನಿರ್ದೇಶಕರು, ಯೋಜನಾಧಿಕಾರಿಗಳು, ಈ ಕಾಯಿದೆಯ ಪ್ರಕಾರ ರಕ್ಷಣಾ ಅಧಿಕಾರಿಗಳಾಗಿರುತ್ತಾರೆ. ಉಚಿತ ಕಾನೂನು ನೆರವು ಕೇಂದ್ರಗಳ ರಚನೆ ಮಾಡಲಾಗಿದೆ. ಅನುಭವ ಇರುವ ಕಾನೂನು ತಜ್ಞರು ವಾರದಲ್ಲಿ ಎರಡುದಿನ ಈ ಕೇಂದ್ರದಲ್ಲಿ ಲಭ್ಯವಿರುತ್ತಾರೆ. ಮಹಿಳೆಯರ ಆರೆಕೆಗಾಗಿ, ಆರೋಗ್ಯ ನಿರ್ವಹಣೆಗಾಗಿ ಮತ್ತು ವಸತಿಗಾಗಿ ಸ್ವಧಾರ್ ಕೇಂದ್ರ, ಸ್ಟೇ ಹೋಮ ಗಳು ಮತ್ತು ಸಾಂತ್ವಾನ ಕೇಂದ್ರಗಳು ಇವೆ. ಅಲ್ಲದೇ ೧೧೬ ಸ್ವಯಂ ಸೇವಾ ಸಂಸ್ಥೆಗಳು, ಕಾನೂನು, ವೆದ್ಯಕೀಯ ಮತ್ತು ಇತರ ಸೇವೆಗಳನ್ನು ನೀಡುವುದಕ್ಕೆ ಗುರುತಿಸಲ್ಪಟ್ಟಿದೆ.

೮. ಕಾನೂನು ಅರಿವು ಕಾರ್ಯಕ್ರಮ: ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಇಲಾಖೆಯ ಬಾಲ್ಯವಿವಾಹ ತಡೆ ಕಾಯಿದೆ, ವರದಕ್ಷಿಣೆ ತಡೆ ಕಾಯಿದೆ, ಮಹಿಳಾ ದೌರ್ಜನ್ಯ ತಡೆ ಕಾಯಿದೆ ಇತ್ಯಾದಿ. ಕಾನೂನುಗಳ ಬಗ್ಗೆ ವ್ಯಾಪಕ ಮಾಹಿತಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ.

೯. ಸ್ವಾಧಾರ್ ಕೇಂದ್ರ: ಮಹಿಳೆಯರ ಸಂಕಷ್ಟಗಳ ಪರಿಸ್ಥಿತಿಯಲ್ಲಿ ನೆರವಾಗುವ ಯೋಜನೆ: ನಿರ್ಗತಿಕ ಮಹಿಳೆ, ವಿಧವಾ ಮಹಿಳೆ, ಜೆಲಿನಿಂದ ಹೊರಬಂದ ಮಹಿಳಾ ಖೆದಿಗಳು, ಪ್ರಾಕೃತಿಕ ವಿಕೋಪದಿಂದಾಗಿ ಉಳಿದಿರುವ ಮಹಿಳೆಯರು/ಹೆಣ್ಣು ಮಕ್ಕಳು, ಮಾನಸಿಕವಾಗಿ ಅಸ್ವಸ್ಥರಾಗಿರುವ ಮಹಿಳೆಯರು ಮತ್ತು ಯಾವುದೇ ಆಧಾರ, ಬೆಂಬಲವಿಲ್ಲದ ಮಹಿಳೆಯರನ್ನು ರಕ್ಷಣೆ ಮಾಡುವ ಕೇಂದ್ರವೇ “ಸ್ವಾಧಾರ್ ಕೇಂದ್ರ“. ಈ ಕೇಂದ್ರವು ಮಹಿಳೆಯರಿಗೆ ಆಹಾರ, ವಸತಿ, ಬಟ್ಟೆ, ಆರೋಗ್ಯ ರಕ್ಷಣೆ, ಸಮಾಲೋಚನೆ, ಕಾನೂನು ನೆರವು ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಅವರು ಮುಂದೆ ಬರುವಂತೆ ತರಬೆತಿ ಸೇವೆಗಳನ್ನು ನೀಡುತ್ತದೆ. ಈ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಇಲಾಖೆಯ ಸಹಯೋಗದೊಂದಿಗೆ ಇತರ ಮಹಿಳಾ ಅಭಿವೃದ್ಧಿ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೆ ಈ ಕೇಂದ್ರದಲ್ಲಿ ಮಹಿಳಾ ಸಹಾಯ ವಾಣಿಯ ಸೇವೆಯೂ ಲಭ್ಯವಿರುತ್ತದೆ. ಒಟ್ಟು ೩೨ ಸ್ವಧಾರ್ ಕೇಂದ್ರಗಳು ಕಾರ್ಯಾಚರಣೆ ಮಾಡುತ್ತಿದೆ.

೧೦. ಮದ್ಯಪಾನ, ಏದ್ಸ್ ಮತ್ತು ಡ್ರಗ್ಸ್ ಬಳಕೆ ತಡೆ ಯೋಜನೆ: ಮದ್ಯವರ್ಜನ ಶಿಬಿರಗಳು ಮತ್ತು ಸಮಾಲೋಚನೆ, ಆರೆಕೆ ಮತ್ತು ಪುನರ್ ವಸತಿ ಸೌಲಭ್ಯಗಳನ್ನು ಒದಗಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಕೇಂದ್ರಸರಕಾರದಿಂದ ವಿಶೇಷ ನೆರವು ಒದಗಿಸಲಾಗುತ್ತಿದೆ. ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದು, ಶಿಬಿರಗಳ ಆಯೋಜನೆ, ಮಾಹಿತಿ, ಜಾಥಾ, ಆಂದೋಲನಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

೧೧. ತರಬೆತಿ ಹಾಗೂ ಉದ್ದಿಮೆಗೆ ಉತ್ತೇಜನ ಕಾರ್ಯಕ್ರಮ (STEP- Support to Training & Employment Project): ಕೇಂದ್ರಸರಕಾರದ ಮಹತ್ತರವಾದ ಈ ಯೋಜನೆಯ ಉದ್ದೇಶ ಮಹಿಳೆಯರು ಉದ್ಯೋಗಿಗಳಾಗುವಂತೆ ತಯಾರುಗೊಳಿಸುವುದು ಮತ್ತು ಸ್ವ ಉದ್ಯೋಗ ಕೆಗೊಳ್ಳುವಂತೆ ಸಬಲರನ್ನಾಗಿ ಮಾಡುವುದು. ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ/ಮಹಿಳೆಯರಿಗೆ ಈ ಯೋಜನೆ ಅನ್ವಯಿಸುತ್ತದೆ. ಕೃಷಿ, ತೋಟಗಾರಿಕೆ, ಆಹಾರ ಸಂಸ್ಕರಣೆ, ಕೆಮಗ್ಗ, ಹೊಲಿಗೆ, ಕಸೂತಿ, ಕರ-ಕುಶಲ ವಸ್ತು ತಯಾರಿ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ, ಇಂಗ್ಲೀಷ್ ಮಾತನಾಡುವ ಕಲೆ, ಕೃತಕ ಆಭರಣದ ತಯಾರಿ, ಪ್ರವಾಸೋದ್ಯಮ ಮತ್ತು ಆರೆಕೆ ಕ್ಷೇತ್ರಗಳಲ್ಲಿ ನಿರಂತರ ವಿಶೇಷ ತರಬೆತಿ ಮತ್ತು ಉದ್ಯೋಗವಕಾಶಗಳನ್ನು ಕಲ್ಪಿಸಲಾಗುವುದು.

೧೨. ರಾಜೀವ್ ಗಾಂಧಿ ಯುವತಿಯರ ಸಬಲೀಕರಣ ಯೋಜನೆ (RGMSY): ಈ ಯೋಜನೆಯೂ ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನವಾಗುತ್ತದೆ. ಈ ಯೋಜನೆಯ ಉದ್ದೇಶ ಹದಿಹರೆಯದ ಯುವತಿಯರ ಸ್ವಯಂ ಅಭಿವೃದ್ಧಿ ಮತ್ತು ಸಬಲೀಕರಣ, ಅವರ ಆರೋಗ್ಯ ಮತ್ತು ಪೌಷ್ಟಿಕತೆ, ಸ್ಥಿತಿಗತಿಯನ್ನು ಅಭಿವೃದ್ಧಿ ಪಡಿಸುವುದು, ಆರೊಗ್ಯ, ಸ್ವಚ್ಚತೆ, ನೆರ್ಮಲ್ಯ, ಲೆಂಗಿಕ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ, ಯುವತಿಯರಲ್ಲಿರುವ ಕೌಶಲ್ಯಗಳನ್ನು ಗುರುತಿಸಿ, ಅದನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಜೋಡಿಸಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡುವುದು. ಶಾಲೆ ಬಿಟ್ಟ ಯುವತಿಯರನ್ನು ಶಾಲೆಗೆ ಸೇರಿಸುವುದು ಹಾಗೂ ಸಾರ್ವಜನಿಕ ಸೇವೆಗಳ ಬಗ್ಗೆಯೂ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಂಕ್, ಅಂಚೆಕಛೇರಿ, ಪೋಲಿ ಸ್ಟೇಷಗಳ ಬಗ್ಗೆ ಮಾಹಿತಿ ಒದಗಿಸುವುದು. ೧೧ ರಿಂದ ೧೮ ವರ್ಷದ ವಯೋಮಿತಿ ಒಳಗಿನ ಹೆಣ್ಣು ಮಕ್ಕಳು ಈ ಯೋಜನೆಯಡಿಯಲ್ಲಿ ಬರುತ್ತಾರೆ.

ಈ ಯೋಜನೆಯ ಸೇವೆಗಳು:
೧) ಪೌಷ್ಟಿಕ ಆಹಾರ ಒದಗಣೆ.
೨) ಕಬ್ಬಿಣ ಮತ್ತು ಫೋಲಿಕ್ ಆಸಿದ್ ಮಾತ್ರೆಗಳ ಒದಗಣೆ.
೩) ಉಚಿತ ಆರೋಗ್ರ ತಪಾಸಣೆ ಮತ್ತು ಮುಂದಿನ ಹಂತದ ಚಿಕಿತ್ಸೆಗಾಗಿ ಕಳುಹಿಸುವುದು.
೪) ಪೌಷ್ಟಿಕತೆ ಮತ್ತು ಆರೋಗ್ಯದ ಬಗ್ಗೆ ಶಿಕ್ಷಣ.
೫) ಕೌಟುಂಬಿಕ ಕ್ಷೇಮ, ವಿಚಾರಗಳ ಬಗ್ಗೆ, ಮಗುವಿನ ಆರೆಕೆ ಮತ್ತು ಗೃಹಾಡಳಿತದ ಬಗ್ಗೆ ಸಮಾಲೋಚನೆ/ಮಾಹಿತಿ ಕಾರ್ಯಕ್ರಮಗಳು.
೬) ಜೀವನ ಕೌಶಲ್ಯ ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳನ್ನು ಪಡಕೊಳ್ಳುವುದು.
೭) ೧೬ ವರ್ಷ ಮೇಲ್ಪಟ್ಟ ಹೆಣ್ಣಿಗೆ ಉದ್ಯೋಗ ಪೂರಕ ಕೌಶಲ್ಯಾಭಿವೃದ್ಧಿ ತರಬೆತಿ ಅವಕಾಶ.

ಅನುಷ್ಠಾನ ಮಾದರಿ:
೧) “ಕಿಶೋರಿ ಸಮೂಹ” ಎಂಬ ತಂಡಗಳನ್ನು ಮಾಡಿ ಸುಮಾರು ೧೫-೨೦ ಹೆಣ್ಣು ಮಕ್ಕಳು ಅಂಗನವಾಡಿಯಲ್ಲಿ ಸೇರುತ್ತಾರೆ. ಅಲ್ಲಿ ಮಾಹಿತಿಗಳನ್ನು ನೀಡಲಾಗುತ್ತಿದೆ.
೨) ಇದಕ್ಕಾಗಿ ಪ್ರತೀ ಅಂಗನವಾಡಿ ಕೇಂದ್ರಕ್ಕೆ ತರಬೆತಿ ಕಿಟಗಳನ್ನು ನೀಡಲಾಗುತ್ತದೆ.
೩) “ಕಿಶೋರಿ ದಿನ” ಎಂದು ಒಂದು ದಿನ ಆಚರಣೆ ಮಾಡಿ ಉಚಿತ ವೆದ್ಯಕೀಯ ಚಿಕಿತ್ಸೆ ಹಮ್ಮಿಕೊಳ್ಳುತ್ತಾರೆ.
೪) ಆರೋಗ್ಯ ಕಾರದ್ ಗಳನ್ನು ನೀಡಲಾಗುತ್ತದೆ.
೫) ಜಿಲ್ಲಾ ಯೋಜನಾಧಿಕಾರಿ ಈ ಕಾರ್ಯಕ್ರಮವನ್ನು ಅನುಷ್ಠಾನಿಸಿ ಮಕ್ಕಳ ಅಭಿವೃದ್ಧಿ ಅಧಿಕಾರಿ ತಾಲೂಕು ಮಟ್ಟದಲ್ಲಿ ಅನುಷ್ಠಾನಿಸುತ್ತಾರೆ. ಅಂಗನವಾಡಿ ಕಾರ್ಯಕರ್ತೆ ಸಂಯೋಜಕಿಯಾಗಿರುತ್ತಾರೆ.

ಶಿಕ್ಷಣ ಇಲಾಖೆ:
೧. ಸೆಕಲ್ ವಿತರಣೆ :ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹೆಣ್ಣು ಮಕ್ಕಳಿಗೆ ಸರಕಾರಿ/ಅನುದಾನಿತ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ಅವರಿಗೆ ಸೆಕಲ್ ನೀಡುವ ಯೋಜನೆಯನ್ನು ೨೦೦೬-೦೭ರಲ್ಲಿ ಕರ್ನಾಟಕ ಘನ ಸರಕಾರವು ಜಾರಿಗೆ ತಂದಿತು. ೮ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ನೀಡಲಾಯಿತು. ಮುಖ್ಯವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ, ಬಹಳ ದೂರದಿಂದ ಶಾಲೆಗೆ ಬರಬೆಕಾಗಿದ್ದು, ಸಂಚಾರ ವ್ಯವಸ್ಥೆ ಇಲ್ಲದಿರುವ ಸ್ಥಳಗಳಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ನೂತನ ಕಾರ್ಯಕ್ರಮ ಜಾರಿಗೆ ಬಂತು.

೨. ಉಚಿತ ಯೂನಿಫಾರಮ್, ಸ್ಕೂಲ್ ಬ್ಯಾಗ್: ೧೪ ವರ್ಷದ ತನಕ ಮಕ್ಕಳಿಗೆ ಖಡ್ಡಾಯ ಶಿಕ್ಷಣ ಸಿಗಬೆಕು ಎಂಬ ನಿರ್ದೇಶನ, ನಮ್ಮ ಸಂವಿಧಾನದಡಿ “ಡೆರೆಕ್ಟ ಪ್ರಿಸೀಪಲ್ ಆಫ್ ಸ್ಟೇಟ ಪಾಲಿಸಿ”ಯಲ್ಲಿ ಉಲ್ಲೇಖವಾದ ನಿಟ್ಟಿನಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು “ಯೂನಿವರ್ಸಲೆಸೇಶನ್ ಆಫ್ ಎಲಿಮೆಂಟರಿ ಎಜುಕೇಶ”ನ್ನು ಅನುಷ್ಠಾನ ಮಾಡಿದ ನಂತರ ಪ್ರಾಥಮಿಕ ಶಿಕ್ಷಣಕ್ಕೆ ಮಕ್ಕಳು ನೋಂದಾವಣೆಗೊಳ್ಳುವುದು ಹೆಚ್ಚಳವಾಯಿತು. ಬಡತನ ಹಾಗೂ ಆರ್ಥಿಕ ಸೌಲಭ್ಯ ವಂಚಿತರಾದ ಕುಟುಂಬಗಳ ಮಕ್ಕಳು ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡದಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಖಡ್ಡಾಯ ಶಿಕ್ಷಣಕ್ಕಾಗಿ ಸರಕಾರದಿಂದ ವಿಶೇಷ ಯೋಜನೆಗಳನ್ನು ಮಾಡಿ, ಅಂಥಹ ಮಕ್ಕಳು ಶಿಕ್ಷಣ ಪಡೆಯುವಂತೆ ಮಾಡಲೇ ಬೆಕಾಗಿದೆ. ಅಲ್ಲದೇ ಶಾಲೆಗೆ ಸೇರಿದ ಮಕ್ಕಳು ಶಿಕ್ಷಣ ಮುಂದುವರೆಸಿಕೊಂಡು ಹೋಗುವಂತೆ ಮಾಡುವುದು ಕೂಡಾ ಅಷ್ಟೇ ಪ್ರಮುಖವಾದ ವಿಚಾರವಾಗಿದೆ. ಈ ಎಲ್ಲಾ ವಿಚಾರಗಳಿಂದಾಗಿ ರಾಜ್ಯ ಸರಕಾರವು ಉಚಿತ ಶಿಕ್ಷಣ, ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ಒದಗಿಸಿತ್ತಿದೆ. ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳಲ್ಲಿ ಓದಿತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ.

೩. ಬಿಸಿಯೂಟ : ಕೇಂದ್ರ ಸರಕಾರದ “ಯೂನಿವರ್ಸಲೆಸೇಶನ್ ಆಫ್ ಪ್ರೆಮರಿ ಎಜುಕೇಶನ್” (Universalisation of Priamary Education) ಯೋಜನೆ ಪ್ರಕಾರ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯನ್ನು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಾಡಲಾಗುತ್ತಿದೆ.

೪. ಕ್ಷೀರ ಭಾಗ್ಯ: ಕರ್ನಾಟಕ ಘನ ಸರಕಾರವು ಸರಕಾರೀ ಮತ್ತು ಸರಕಾರೀ ಅನುದಾನಿತ ಶಾಲೆಗಳ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

೫. ಸುವರ್ಣ ಆರೋಗ್ಯ ಚೆತನ್ಯ ಕಾರ್ಯಕ್ರಮ: ಆರೋಗ್ಯ ತಪಸಾಣಾ ಕಾರ್ಯಕ್ರಮವನ್ನು ಎಲ್ಲಾ ಶಾಲೆಗಳ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ೨೦೦೬-೦೭ರಿಂದ ನಡೆಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರಕಾರೀ ಆಸ್ಪತ್ರೆಗಳ ವೆದ್ಯರು, ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡುತ್ತಾರೆ. ಯಾವುದೇ ವಿದ್ಯಾರ್ಥಿಗೆ ತೀವ್ರ ತರವಾದ ಕಾಯಿಲೆಯ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೇ ದೇಹದ ಪ್ರಮುಖ ಅಂಗಗಳಾದ ಹೃದಯ, ಕಿವಿ, ಕಣ್ಣು, ಮೂಳೆಗಳಲ್ಲಿ ತೀವ್ರ ಸಮಸ್ಯೆಗಳು ಕಂಡುಬಂದಲ್ಲಿ ಉತ್ತಮ ಆಸ್ಪತ್ರೆಗಳಲ್ಲಿ ಉಚಿತ ಕಾರಡ್ಗಳನ್ನು ನೀಡಿ ಅದರಲ್ಲಿ ಚಿಕಿತ್ಸೆಯ ತಪಾಸಣೆ ಸಂಪೂರ್ಣ ವಿವರಗಳನ್ನು ದಾಖಲಿಸಲಾಗುತ್ತದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ:

೬. ಅನ್ನಭಾಗ್ಯ : ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಒಂದು ಕೆ.ಜಿ ಅಕ್ಕಿಗೆ ರೂ.೧/-ರಂತೆ ೩೦ ಕೆ.ಜಿ ಅಕ್ಕಿ ಪ್ರತೀ ತಿಂಗಳಿಗೆ ನೀಡಲಾಗುವುದು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳ ಒಬ್ಬ ಸದಸ್ಯನಿಗೆ ೧೦ ಕೆ.ಜಿ ಅಕ್ಕಿ ರೂ.೧/-ರಲ್ಲಿ ನೀಡಲಾಗುತ್ತಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ:

೭. ಸುವರ್ಣ ಗ್ರಾಮೋದಯ ಯೋಜನೆ: ಆಯ್ಕೆಯಾದ ಹಳ್ಳಿಗಳ ಸಮಗ್ರ ಅಭಿವೃದ್ಧಿ ಹಳ್ಳಿಯಲ್ಲಿ ಲಭ್ಯವಿರುವ ಭೌತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಆದಾಯಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಜನರಿಗೆ ಪ್ರೇರಣೆ ನೀಡಿ ಪ್ರತೀ ಕುಟುಂಬಗಳ ಅಭಿವೃದ್ಧಿಗಾಗಿ ಈ ಯೋಜನೆ ಅನುಷ್ಠಾನ ಮಾಡಲಾಗುತ್ತಿದೆ. ಜನರನ್ನು ಸ್ವಸಹಾಯ ಸಂಘಗಳನ್ನಾಗಿ ಸಂಘಟಿಸಿ ಮಾಹಿತಿ, ತರಬೆತಿ ಕಾರ್ಯಕ್ರಮಗಳ ಮೂಲಕ ಅವರನ್ನು ಸಬಲರನ್ನಾಗಿ ಮಾಡಿ, ಹಳ್ಳಿಯ ಅಭಿವೃದ್ಧಿ ಸಾಧಿಸುವಲ್ಲಿ ಈ ಯೊಜನೆ ಶ್ರಮಿಸುತ್ತಿದೆ.

೮. ಕೇಂದ್ರ ಸರಕಾರದ ಇತರ ಯೋಜನೆಗಳು: ಮಹಿಳಾ ಕಿಸಾನ್ ಸಶಕ್ತೀಕಿರಣ ಪರಿಯೋಜನಾ:
ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಕೃಷಿ ಕಾರ್ಮಿಕರಾಗಿ, ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಇವರನ್ನು ನೇರವಾಗಿ ಸರಕಾರದ ಸೌಲಭ್ಯಗಳು ಒದಗುವಂತೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಇವರು ಭೂಮಾಲೀಕರು ಅಲ್ಲ. ಅಲ್ಲದೇ ದಿನಗೂಲಿ ವ್ಯತ್ಯಾಸ ಪುರುಷರಿಗೆ ಅಧಿಕ ಮಹಿಳೆಯರಿಗೆ ಕಡಿಮೆ ಎಂಬ ತಾರತಮ್ಯವೂ ಇದೆ. ತನ್ನ ಕೃಷಿ ಭೂಮಿಯಲ್ಲಿ ತನ್ನನ್ನು ತಾನೂ ಹೆಚ್ಚಾಗಿ ತೊಡಗಿಸಿಕೊಂಡರೂ ಕೂಡಾ ಆಕೆಯ ಹಲವಾರು ಜವಾಬ್ದಾರಿಗಳ ನಡುವೆ ಇದು ನಗಣ್ಯ ವೆನಿಸುತ್ತಿದೆ. ಇದರಿಂದಾಗಿ ಆಕೆ ಕೃಷಿಗೆ ಪೂರಕವಾದ ಮಾಹಿತಿ ತಂತ್ರಜ್ಞಾನಗಳನ್ನು ಪಡಕೊಳ್ಳುವಲ್ಲಿ ಅಶಕ್ತಳಾಗುತ್ತಾಳೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಕೃಷಿಕರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇಂದ್ರಸರಕಾರವು ಮಹಿಳಾ ಕಿಸಾ ಸಶಕ್ತೀಕರಣಾ ಪರಿಯೋಜನಾ ಎಂಬ ಹೊಸಯೋಜನೆಯನ್ನು “ನ್ಯಾಷನ ರೂರಲ್ ಲೆವ್ಲಿಹುದ್ ವಿಷನ್”ನ ಯೋಜನೆಯಲ್ಲಿ ತಂದಿತು.

ಈ ಯೋಜನೆಯ ಮೂಲಭೂತ ಉದ್ದೇಶ:

 • ಕೃಷಿಯಲ್ಲಿ ಮಹಿಳೆಯರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
 • ಕೃಷಿಯಲ್ಲಿ ನಿರಂತರ ಜೀವನೋಪಾಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಪ್ರೇರಣೆ.
 • ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲಿ ಮಹಿಳೆಯರ ಕೌಶಲ್ಯ ಹಾಗೂ ಸಾಮರ್ಥ್ಯ ಹೆಚ್ಚಿಸುವ ಕಾರ್ಯಕ್ರಮಗಳ ಆಯೋಜನೆ.
 • ಸಮುದಾಯದಲ್ಲಿ ಮಹಿಳೆಯರ ಆಹಾರ ಮತ್ತು ಪೌಷ್ಟಿಕತೆ ಭದ್ರತೆ.
 • ಸರಕಾರ ಮತ್ತು ಸರಕಾರೇತರ ಸಂಸ್ಥೆಗಳ ಸೇವೆಗಳನ್ನು ಸುಲಲಿತವಾಗಿ ಪಡೆಯುವಂತೆ ಮಾಡುವುದು.
 • ಕೃಷಿಯಲ್ಲಿ ಅತ್ಯುತ್ತಮವಾದ ಸಾಧನೆ ಮಾಡುವಂತೆ ನಿಯಂತ್ರಣವನ್ನು ಹೊಂದುವಂತೆ ಮಾಡುವುದು, ಕೃಷಿಯಲ್ಲಿ ಮಹಿಳೆಯರ ಜ್ಞಾನ ಹೆಚ್ಚಿಸುವ ಪ್ರಯತ್ನ ಮಾಡಲಾಗುವುದು.

೯. ರಾಷ್ಟ್ರೀಯ ಮಹಿಳಾ ನಿಧಿ (ರಾಷ್ಟ್ರೀಯ ಮಹಿಳಾ ಕೋಶ್)(RMK): ಅತ್ಯಂತ ಕಡಿಮೆ ಆದಾಯ ಇರುವ ಮಹಿಳೆಯರಿಗೆ ಈ ನಿಧಿಯಿಂದ ಕಿರು ವ್ಯವಹಾರ ಪ್ರಾರಂಭಿಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ.

೧೦. ರಾಷ್ಟ್ರೀಯ ಮಹಿಳಾ ಸಬಲೀಕರಣ ಪ್ರಾಧಿಕಾರ: ೨೦೧೦ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭ ಈ ಪ್ರಾಧಿಕಾರವನ್ನು ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸರಕಾರೀ ಇಲಾಖೆಗಳ ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.

ಮಹಿಳೆಯರ ಯೋಗ ಕ್ಷೇಮಕ್ಕಾಗಿ, ಅಭಿವೃದ್ಧಿಗಾಗಿ ಇರುವ ಎಲ್ಲಾ ಸೇವೆಗಳನ್ನು ಒಂದೇ ಕೇಂದ್ರದಿಂದ ಒದಗಿಸುವ ವ್ಯವಸ್ಥೆ, ಈ ಪ್ರಾಧಿಕಾರ ಮಾಡುವುದರಿಂದ “ಮಿಷನ್ ಪೂರ್ಣ ಶಕ್ತಿ” ಎಂದೂ ಇದಕ್ಕೆ ನಾಮಕರಣ ಮಾಡಲಾಗಿದೆ. ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು (ನ್ಯಾಷನ ರಿಸೋರ್ಸ್ ಸೆಂಟರ್) ಇದಕೋಸ್ಕರ ಪ್ರಾರಂಭ ಮಾಡಲಾಗಿದ್ದು, ವಿವಿಧ ಯೋಜನೆಗಳ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ತಂತ್ರಜ್ಞಾನ, ತಿಳುವಳಿಕೆ, ಸಂಶೋಧನೆಗಳ ಅಂಕಿ ಅಂಶಗಳು ಮತ್ತು ಲಿಂಗತಾರತಮ್ಯ, ಲಿಂಗನುಪಾತ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳು. ಹೀಗೆ ಸಮಗ್ರ ವಿಚಾರಗಳು ಈ ಕೇಂದ್ರದಲ್ಲಿ ಲಭ್ಯವಿರುತ್ತದೆ. ಅಲ್ಲದೇ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಪ್ರಾಧಿಕಾರಿಗಳಿಗೆ ನಿರ್ದೇಶನ ಮತ್ತು ಸೇವೆಯನ್ನು ನೀಡುವ ಪ್ರಮುಖ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕೆಳಗಿನ ವಿಚಾರಗಳ ಬಗ್ಗೆ ಕರ್ತವ್ಯ ನಿರ್ವಹಿಸುತ್ತಿದೆ.

 • ಮಹಿಳಾ ದೌರ್ಜನ್ಯ.
 • ಲಿಂಗ ತಾರತಮ್ಯ.
 • ಬಾಲ್ಯವಿವಾಹ.
 • ಅಕ್ರಮ ಸಾಗಣಿಕೆ.
 • ಆರೋಗ್ಯ ಮತ್ತು ಶೌಚಾಲಯ.
 • ಕುಡಿಯುವ ನೀರು.
 • ಟೆಂಡರ್ ಬಜೆಟಿಂಗ್.
 • ಖಡ್ಡಾಯ ಶಿಕ್ಷಣ ಹಕ್ಕು.
 • ಮಹಿಳಾ ರಾಜಕಾರಣೀಗಳು.
 • IEC ಚಟುವಟಿಕೆ.
 • ಒತ್ತಡ/ಶ್ರಮ ಕಡಿಮೆ ಮಾಡುವುದು.
 • ಆರ್ಥಿಕ ಸೇರ್ಪಡೆ.
 • ಜೀವನೋಪಾಯ ಚಟುವಟಿಕೆ/ತರಬೆತಿ ಕಾರ್ಯಕ್ರಮ.

೧೧. ನ್ಯಾಶನ ಬಯೋಫ್ಯೂಯೆಲ್ ಅಭಿವೃದ್ಧಿ ಯೋಜನೆ: ಈ ಯೋಜನೆಯ ಮಹಿಳೆಯರ ಕ್ಷೇಮಕ್ಕಾಗಿ ಇರುವುದು. ಜೆವಿಕ ಅನಿಲ ಸ್ಥಾನದ ರಚನೆಗಾಗಿ ಕೇಂದ್ರಸರಕಾರ ಹಾಗೂ ರಾಜ್ಯ ಸರಕಾರಗಳಿಂದ ಅನುದಾನ ರೂ.೧೧,೦೦೦/- ಲಭ್ಯವಿದೆ.

೧೨. ನಿರ್ಮಲ್ ಭಾರತ್ ಅಭಿಯಾನ: ಕೇಂದ್ರ ಸರಕಾರದ “ಟೋಟಲ್ ಸ್ಯಾನೀಟೇಶ ಕ್ಯಾಂಪ್” ಯೋಜನೆಯನ್ನು ಮರು ನಾಮಾಕರಣ “ನಿರ್ಮಲ್ ಭಾರತ್ ಅಭಿಯಾನ” ಎಂದು ಮಾಡಲಾಯಿತು. ಈ ಯೋಜನೆಯಡಿಯಲ್ಲಿ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ.೧೨,೦೦೦/ ಮತ್ತು ಪರಿಶಿಷ್ಠ ಜಾತಿ/ಪಂಗಡದ ಕುಟುಂಬಗಳಿಗೆ ರೂ.೧೫,೦೦೦/- ಮೊತ್ತ ಅನುದಾನ ನೀಡಲಾಗುವುದು. ಜೊತೆಯಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ, ಅಂಗನವಾಡಿಗಳ ಮೂಲಕ ಶೌಚಾಲಯ ಬಳಕೆ ಬಗ್ಗೆ ಮತ್ತು ನೆರ್ಮಲ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಇತರ ಯೋಜನೆಗಳು

೧೩. ಜನ್ ಧನ್ ಯೋಜನೆ: ಕೇಂದ್ರ ಸರಕಾರವು ಪ್ರತಿಯೊಂದು ಕುಟುಂಬವನ್ನು ಆರ್ಥಿಕ ಸೇರ್ಪಡೆ ಮಾಡಿಸುವ ನಿಟ್ಟಿನಲ್ಲಿ “ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ ತೆರೆಯುವ ವಿಶೇಷ ಯೋಜನೆಯನ್ನು ಅಗ ೨೦೧೪ ರಲ್ಲಿ ಜಾರಿಗೆ ತಂದಿತು. ಈ ಯೋಜನೆಯನ್ನು ಅತ್ಯಂತ ಸರಳ ಕೆ.ವೆ.ಸಿ ದಾಖಲೆಗಳನ್ನು ಒದಗಿಸಿ ಯಾವುದೇ ಆರಂಭಿಕ ಮೊತ್ತ ಜಮೆ ಮಾಡದೇ ಝೀರೋ ಬ್ಯಾಲೆನಲ್ಲಿ ನಲ್ಲಿ ಖಾತೆ ಪ್ರಾರಂಭಿಸಬಹುದಾಗಿದೆ. ಈ ಖಾತೆ ತೆರೆದಲ್ಲಿ ಸದಸ್ಯರಿಗೆ ರೂ. ೧ ಲಕ್ಷ ತನಕ ಅಪಘಾತ ವಿಮೆ ಮತ್ತು ರೂ.೩೦,೦೦೦/- ಜೀವ ವಿಮೆಯ ಸೌಲಭ್ಯ ದೊರಕುತ್ತದೆ. ಅಲ್ಲದೇ ಖಾತೆದಾರರು ಮಹಿಳೆಯರಾಗಿದ್ದಲ್ಲಿ, ಆರು ತಿಂಗಳ ನಂತರ ರೂ.೫,೦೦೦/- ತನಕ ಓವg ಡ್ರಾಫಟ್ ಸೌಲಭ್ಯ ಸಿಗುತ್ತದೆ. ಸರಕಾರದಿಂದ ದೊರೆಕುವ ಸೌಲಭ್ಯಗಳು ನೇರವಾಗಿ ಸದಸ್ಯರ ಈ ಖಾತೆಗೆ ವರ್ಗಾವಣೆಗೊಳ್ಳುತ್ತದೆ.

೧೪. “ಬೆಟಿ ಬಚಾವೋ ಬೆಟಿ ಪಡಾವೋ” ಆಂದೋಲನವು ಕೇಂದ್ರಸರಕಾರದ ನೂತನ ಕಾರ್ಯಕ್ರಮ. ದೇಶದಲ್ಲಿ ಲಿಂಗಾನುಪಾತ ಕುಸಿದಿರುವ ಕಾರಣದಿಂದಾಗಿ ಹೆಣ್ಣು ಮಕ್ಕಳ/ಮಹಿಳೆಯರ/ಅಬಾಲ ವೃದ್ಧೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳಿಂದಾಗಿ ಭವಿಷ್ಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣದ ಆದ್ಯತೆ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಅನುಷ್ಠಾನ ಮಾಡಲಾಗುವುದು. ಹೆಣ್ಣು ಮಗು ಹುಟ್ಟಿದಾಗ ಸಂಭ್ರಮ ಆಚರಣೆ ಮಾಡುವುದು ಮತ್ತು ಅವಳ ವಿದ್ಯೆಗೆ ಆದ್ಯತೆ ನೀಡುವಂತೆ ಮಾಡುವುದು, ಈ ಬಗ್ಗೆ ತೀವ್ರ ತರವಾದ ತಿಳುವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಲಿಂಗನುಪಾತ ಕಡಿಮೆ ಇರುವ ಜಿನ್ಯಗಳನ್ನು ಆಯ್ಕೆ ಮಾಡಿ ನಿರಂತರ ಮಾಹಿತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಡುವುದು, ಇವೇ ಮೊದಲಾದ ಕಾರ್ಯಕ್ರಮಗಳನ್ನು ಈ ಯೋಜನೆ ಒಳಗೊಂಡಿರುತ್ತದೆ.
೧೫. ಸುಕನ್ಯ ಸಮೃದ್ಧಿ ಯೋಜನೆ: ಹತ್ತು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಗಳನ್ನು ತೆರೆಯುವ ಹೊಸ ಯೋಜನೆಯನ್ನು ಕೇಂದ್ರಸರಕಾರ ಆರಂಭಿಸಿದೆ. ಪ್ರತೀ ವರ್ಷ ಕನಿಷ್ಟ ರೂ.೧,೦೦೦/- ಮೊತ್ತ ಗರಿಷ್ಟ ರೂ.೧.೫ ಲಕ್ಷ ಈ ಖಾತೆಗೆ ಜಮಾ ಮಾಡಿದರೆ ಪ್ರಸ್ತುತ ೯.೧% ಬಡ್ಡಿದರ ನೀಡಲಾಗುತ್ತದೆ. ಮಗುವಿಗೆ ೨೧ ವರ್ಷ ಆದ ನಂತರ ಖಾತೆಯನ್ನು ಮುಚ್ಚ ಬಹುದಾಗಿದೆ. ಮತ್ತು ಮಗುವಿಗೆ ೧೮ ವರ್ಷ ನಂತರ ಖಾತೆಯಲ್ಲಿ ಜಮೆ ಇರುವ ೫೦% ಮೊತ್ತ ಶಿಕ್ಷಣಕ್ಕಾಗಿ ಹಿಂಪಡೆಯಬಹುದು.
೧೬. ಪ್ರಧಾನ ಮಂತ್ರಿ ಜೀವ ಜ್ಯೋತಿ ಭಿಮಾ ಯೋಜನೆ (PMJJBY): ಈ ಯೋಜನೆಯ ಪ್ರಕಾರ ಬ್ಯಾಂಕ್ ಖಾತೆ ಹೊಂದಿರುವಂತಹ ಎಲ್ಲಾರಿಗೆ ಅನ್ವಯವಾಗುತ್ತದೆ. ರೂ.೩೮೦/- ಪ್ರತೀ ವರ್ಷಕ್ಕೆ ಪ್ರಿಮಿಯಂ ಮೊತ್ತ ಖಾತೆಯಿಂದ ಈ ಯೋಜನೆಗೆ ವರ್ಗಾವಣೆಯಾಗುತ್ತದೆ. ಈ ವಿಮಾದಾರರು ಯಾವುದೇ ಕಾರಣಕ್ಕೆ ಮರಣ ಹೊಂದಿದ ಸಂದರ್ಭದಲ್ಲಿ ರೂ. ೨ ಲಕ್ಷ ವಿಮೆ ಮೊತ್ತ ಸಿಗುತ್ತದೆ. ೧೮ ರಿಂದ ೫೦ ವರ್ಷದೊಳಗಿನ ಎಲ್ಲರೂ ಮಾಡಬಹುದು. ಈ ವಿಮೆಯು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗುವುದು. ಉದಾರಹಣೆಗೆ: ೨೪.೦೫.೨೦೧೫ರ ದಿನಾಂಕದಂದು ವಿಮೆ ಮಾಡಿಸಿದಲ್ಲಿ, ೨೩.೦೫.೨೦೧೬ರ ತನಕ ಮಾತ್ರ ವಿಮೆ ಚಾಲ್ತಿಯಲ್ಲಿರುವುದು. ಬ್ಯಾಂಕ್ನಲ್ಲಿ ಈ ವಿಮೆಯ ಅರ್ಜಿ ಲಭ್ಯವಿರುವುದು.

೧೭. ಪ್ರಧಾನ ಮಂತ್ರಿ ಜೀವ ಸುರಕ್ಷಾ ಯೋಜನೆ((PMJSY): ಈ ಯೋಜನೆಯೂ ಕೂಡ ಬ್ಯಾಂಕ್ ಉಳಿತಾಯ ಖಾತೆ ಹೊಂದಿರುವ ಸದಸ್ಯರಿಗೆ ಅನ್ವಯಿಸುತ್ತದೆ. ವಯೋಮಿತಿ ೧೮ ರಿಂದ ೭೦ ವರ್ಷ ಆಗಿರುವುದೇ. ಇದರ ಪ್ರಕಾರ ಸದಸ್ಯರು ಅಪಘಾತದಲ್ಲಿ ಮರಣ ಹೊಂದಿದಲ್ಲಿ/ಎರಡು ಕೆ/ಎರಡು ಕಾಲು/ಎರಡು ಕಣ್ಣುಗಳನ್ನು ಕಳೆದುಕೊಂಡಲ್ಲಿ ರೂ. ೨ ಲಕ್ಷ ಪರಿಹಾರ ಧನವಿರುತ್ತದೆ. ಇದಕ್ಕೆ ನೀಡಬೆಕಾದ ಮೊತ್ತ ರೂ. ೧೨ ನೇರವಾಗಿ ಬ್ಯಾಂಕ್ ಖಾತೆಯಿಂದ ಜಮೆ ಮಾಡಿ ಕೊಳ್ಳಲಾಗುತ್ತದೆ.

೧೮. ಅಟಲ್ ಪಿಂಚಣಿ ಯೋಜನೆ: ಇದು ರಾಷ್ರೀಯ ಪಿಂಚಣಿ ಯೋಜನೆಯಾಗಿದ್ದು-ಪ್ರಸ್ತುತ ಅಟಲ್ ಪಿಂಚಣಿ ಎಂದು ಮರು ನಾಮಕರಣಗೊಂಡಿದೆ. ಕೂಲಿಕಾರ್ಮಿಕರು, ಇತರ (ಪಿಂಚಣಿ ಸೌಲಭ್ಯ ಕೊಳ್ಳಗಾದ) ಸದಸ್ಯರು ಈ ಯೋಜನೆಗೆ ಸೇರಬಹುದು. ವಯೋಮಿತಿ ೧೮ ರಿಂದ ೪೦ ವರ್ಷ ಆಗಿರುತ್ತದೆ. ಪ್ರತೀ ವರ್ಷವು ಪಿಂಚಣಿ ಖಾತೆಗೆ ಕನಿಷ್ಠ ರೂ.೧,೦೦೦/- ಗರಿಷ್ಠ ೧೨,೦೦೦/- ಮೊತ್ತ ಜಮೆ ಮಾಡಬೆಕು. ಕನಿಷ್ಠ ಇಪತ್ತು ವರ್ಷಗಳ ಕಾಲ ನಿರಂತರವಾಗಿ ಮೊತ್ತ ಜಮೆ ಮಾಡಿದರೆ ೬೦ ವರ್ಷ ಪ್ರಾಯದ ನಂತರ ಪಿಂಚಣಿ ಸೌಲಭ್ಯ ಪಡೆಯಬಹುದು. ಇಪ್ಪತ್ತು ವರ್ಷಗಲಲ್ಲಿ ಸದಸ್ಯರ ಪಿಂಚಣಿ ಖಾತೆಯಲ್ಲಿ ಕ್ರೋಢಿಕರಣವಾದ ಮೊತ್ತದ ಆಧಾರದಲ್ಲಿ ನೀಡಲಾಗುವ ಮಾಸಿಕ ಪಿಂಚಣಿ ಮೊತ್ತ ನಿರ್ಧರಿತವಾಗುತ್ತದೆ. ಪ್ರಥಮ ೫ ವರ್ಷದಲ್ಲಿ ಕೇಂದ್ರ ಸರಕಾರವೂ ಕೂಡ ಗರಿಷ್ಠ ರೂ.೧,೦೦೦/- ಮೊತ್ತ ಸದಸ್ಯರ ಪಿಂಚಣಿ ಖಾತೆಗೆ ಜಮೆ ಮಾಡುತ್ತದೆ.

ವೇತನ ಯೋಜನೆಗಳು:
೧) ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ: ಇದು ರೂ.೧೧,೮೦೦/- ಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಮಾಸಿಕ ರೂ.೫೦೦/- ವೇತನ ನೀಡಲಾಗುವುದು.

೨) ಸಂಧ್ಯಾ ಸುರಕ್ಷಾ ಯೋಜನೆ: ಕರ್ನಾಟಕ ಘನ ಸರಕಾರವು ೨೦೦೭ನೇ ಇಸವಿಯಿಂದ ರೂ.೧,೦೦೦ ಮಾಸಿಕಈ ವೇತನ ಪ್ರಾರಂಭಿಸಿತು. ಇದು ಮೇಲೆ ಉಲ್ಲೇಖಿಸಿದ ರೀತಿಯಲ್ಲಿಯೇ ಅನುಷ್ಠಾನ ಆಗುತ್ತಿದೆ. ಆದರೆ ಇಲ್ಲಿ ವಾರ್ಷಿಕ ಆದಾಯ ರೂ.೨೦,೦೦೦/- ಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಅನ್ವಯಿಸುವುದು.

೩) ನಿರ್ಗತಿಕ ವಿಧವಾ ವೇತನಾ: ೧೮ ವರ್ಷಕ್ಕಿಂತ ಅಧಿಕ ವಯೋಮಿತಿಯ ವಿಧವೆಯರಿಗೆ ಇದು ಅನ್ವಯಿಸುತ್ತದೆ. ರೂ.೪೦೦/- ಮಾಸಿಕ ವೇತನ ನೀಡಲಾಗುತ್ತದೆ. ಒಂದು ವೇಳೆ ಆಕೆ ಇನ್ನೊಂದು ಮದುವೆ ಆದಲ್ಲಿಯೂ ಮಕ್ಕಳು ಅವಳನ್ನು ನೋಡಿಕೊಳ್ಳುವ ಹಂತಕ್ಕೆ ಬಂದಾಗ ಅಥವಾ ಆಕೆಯ ಆದಾಯ ವರ್ಷಕ್ಕೆ ರೂ.೧೧,೮೦೦/- ಕ್ಕಿಂತ ಹೆಚ್ಚಾದರೆ ಈ ಸೌಲಭ್ಯ ಒದಗಿಸಲಾಗುವುದಿಲ್ಲ.

೪) ಅಂಗವಿಕಲ ಮಾಸಾಶನ: ವಾರ್ಷಿಕ ಆದಾಯ ರೂ.೬,೦೦೦/- ಕ್ಕಿಂತ ಆದಾಯ ಕಡಿಮೆ ಇರುವ ಮತ್ತು ೭೫% ಅಂಗವೆಕಲ್ಯತೆ ಇದ್ದರೆ ರೂ.೧,೦೦೦/- ಮಾಸಾಶನ ನೀಡಲಾಗುವುದು.

೫) ಮದುವೆಯಾಗದ ಮದ್ಯವಯಸ್ಸಿನ ಮಹಿಳೆಯರಿಗೆ (೪೫-೬೦ ವರ್ಷ): ರೂ.೧,೦೦೦/- ದಂತೆ ವೇತನ ನೀಡಲಾಗುತ್ತಿದೆ. ಇದು ಮಹಿಳೆಯರಿಗೆ ಮಾತ್ರ. ಇವರು ಇತರ ಯಾವುದೇ ಪಿಂಚಣಿ ಯೋಜನೆಯಲ್ಲಿ ನೋದಾವಣೆಗೊಂಡಿರಬಾರದು.

ಉಪಸಂಹಾರ:

ಹೀಗೆ ಸರಕಾರದ ವಿವಿಧ ಇಲಾಖೆಗಳಿಂದ, ನಿಗಮಗಳಿಂದ ಬಡ ಕುಟುಂಬಗಳ ಸ್ವಾವಲಂಬಿಗಳಾಗುವಂತೆ ಹಲವಾರು ಆರ್ಥಿಕ ಸೌಲಭ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೆಗೊಳ್ಳುತ್ತಿವೆ. ಜಲಾನಯನ ಇಲಾಖೆಯಿಂದ ಸೌಲಭ್ಯಗಳು, ತೋಟಾಗಾರಿಕಾ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಿಂದ ಸೌಲಭ್ಯಗಳು ಅಲ್ಲದೇ ಅಲ್ಪ ಸಂಖ್ಯಾತರ ನಿಗಮ, ಅಂಬೆಡ್ಕರ್ ಅಭಿಮಾನಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮ, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸಣ್ಣ ಕೆಗಾರಿಕೆ ಅಭಿವೃದ್ಧಿ ನಿಗಮ ಹೀಗೆ ವಿವಿಧ ನಿಗಮಗಳ ಮೂಲಕ ಸೌಲಭ್ಯಗಳು ಜಾರಿಯಲ್ಲಿದೆ. ಇಷ್ಟೆಲ್ಲ ಸೌಲಭ್ಯಗಳಿದ್ದು ಇಂದಿಗೂ ಜನರಲ್ಲಿ ಅಸಹಾಯಕತೆಯ ಭಾವನೆ ಯಾಕೆ ಇದೆ? ಹಲವಾರು ಉತ್ತರಿಸಲಾಗದ ಪ್ರಶ್ನೆಗಳು! ನಿಜವಾಗಿಯೂ ಈ ಸೌಲಭ್ಯಗಳು ತಲುಪಬೆಕಾದಲ್ಲಿ ತಲುಪುತ್ತಿದೆಯೇ? ಈ ಸೌಲಭ್ಯಗಳಲ್ಲಿ ಡೂಪ್ಲಿಕೇಷ ಆಗುತ್ತಿಲ್ಲವೇ? ಒಂದು ವೇಳೆ ಈ ಎಲ್ಲಾ ಯೋಜನೆಗಳು ತಲುಪಬೆಕಾದಲ್ಲಿ ತಲುಪಿದರೆ ಮುಂದಕ್ಕೆ ಹೊಸ ಯೋಜನೆಗಳ ಅವಶ್ಯಕತೆ ಇದೆಯೇ? ಜನರು ಬಿಟ್ಟು ಅವಲಂಬಿತರಾಗುತ್ತಿದ್ದಾರೆಯೇ? ಸ್ವಾವಲಂಬಿಗಳಾಗುವುದು ಯಾವಾಗ? ನಿಜವಾಗಿಯೂ ಈ ಎಲ್ಲಾ ಕಾರ್ಯಕ್ರಮಗಳ ಮಾಹಿತಿಯು ಸಾಮಾನ್ಯ ಜನರಲ್ಲಿ, ಗ್ರಾಮಗಳಲ್ಲಿ, ಕುಟುಂಬಗಳಲ್ಲಿ ಇದೆಯೇ? ಮಾಹಿತಿ ತಿಳಿದ ಮೇಲೂ ಈ ಸೌಲಭ್ಯಗಳನ್ನು ಪಡೆಯಲು ಅವರು ಶಕ್ತರೇ?
ಬಹುಶ” ಸೌಲಭ್ಯಗಳನ್ನು ಪಡಕೊಳ್ಳುವಲ್ಲಿ ಜನಸಾಮಾನ್ಯರ ಸಾಮರ್ಥ್ಯವನ್ನು ಹೆಚ್ಚಿಸ ಬೆಕಾಗಿದೆ. ಅವರ ದನಿಯನ್ನು ಬಲಗೊಳಿಸ ಬೆಕಾಗಿದೆ. ಜಾಗೃತಿಯನ್ನು ಮೂಡಿಸಬೆಕಾಗಿದೆ.
ಸರಕಾರೀ ಸೌಲಭ್ಯಗಳ ಸಾರ್ಥಕತೆಯು ಜನರನ್ನು ತಲುಪುವಲ್ಲಿ ಇದೆ. ಅವರ ಜೀವನದಲ್ಲಿ ಪರಿವರ್ತನೆಯನ್ನು ತರುವಲ್ಲಿ ಇದೆ.

Article by HRD Director of SKDRDP.

23 thoughts on “ಸರಕಾರಿ ಯೋಜನೆಗಳು, ಸೌಲಭ್ಯಗಳು ಮತ್ತು ಮಹಿಳಾ ಸಬಲೀಕರಣ

 1. ನಮಸ್ತೆ
  ಸರ್ಕಾರದ ಇ ಎಲ್ಲಾ ಯೋಜನೆಗಳಿಗೆ ನನ್ನ ನಮನಗಳು..👌👍

 2. ತುಂಬಾ ಒಳ್ಳೆಯ ಕೆಲಸಗಳು ದೇವರು ನಿಮ್ಮನ್ನ ಚನ್ನಾಗಿಟ್ಟಿರ್ಲಿ

 3. ಸಂಪೂರ್ಣ ಮಾಹಿತಿ ಗ್ರಾಮೀಣ ಜನರಿಗೆ ತಿಳಿಸಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ
  ಮಾಹಿತಿ ಕೇಂದ್ರ ಸ್ಥಾಪಿಸಲು ಆದ್ಯತೆ ನೀಡಿ

 4. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ವ್ಯವಸ್ಥೆಯ ಬಗ್ಗೆ ಕಾಳಜಿ ಇಲ್ಲ ಎಂದು ಹೆಳುವದಕ್ಕೆ ಇಷ್ಟ ಪಡುತ್ತೇನೆ

 5. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಯೋಜನೆಗಳು ಮತ್ತು ಮಾಹಿತಿಗಳು ತಲುಪಿಸಲು ಅಗತ್ಯವಾದ ಕಾರ್ಯಕ್ರಮ ಪ್ರತಿ ಗ್ರಾಮ ಮಟ್ಟದಲ್ಲಿ ಆಯೋಜಿಸಬೇಕು ಈ ಯೋಜನೆಗಳೆಲ್ಲ ಕೇವಲ ರಾಜಕೀಯ ಹಿಂಬಾಲಕರು ಮತ್ತು ಕಾರ್ಯಕರ್ತರಿಗೆ ತಲುಪುವ ಬದಲು ನಿಜವಾದ ಬಡವರಿಗೆ ತಲುಪವಂತಾಗಬೇಕು

 6. ಸರ್ಕಾರದ ಎಲ್ಲಾ ಯೋಜನೆಗಳು ಜನರಿಗೆ ಸಿಗಬೇಕು ಮತ್ತು ಬ್ರೋಕರ್ ಗಳಿಗೆ ಅವಕಾಶ ಕೊಡಬಾರದು

  1. ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ಇಲ್ಲದೆ ಕೆಲವಂದು ಯೋಜನೆಗಳಿಂದ ವಂಚಿತರಾಗಿದ್ದಾರೆ, ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ನ ಜನರಿಗೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು ಎಂಬುವುದು ನನ್ನ ಅಭಿಪ್ರಾಯ.

 7. ನಮಸ್ತೆ……ಸರ್ ಸರ್ಕಾರದ ಈ ಎಲ್ಲಾ ಯೋಜನೆಗಳಿಗೆ ವಂದನೆಗಳು..
  ಆದರೆ ಅಂಗನವಾಡಿ ಯಿಂದ ಗರ್ಭಿಣಿಯರಿಗೆ ಸಿಗುವ ಸೌಲಭ್ಯಗಳನ್ನು ಅಂಗನವಾಡಿ ಕಾರ್ಯಕರ್ತೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಯವಿಟ್ಟು ಸಂಬಂದಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೆಕು ವಿನಂತಿಸಿಕೊಳ್ಳುತ್ತೆನೆ…..ಬಾಗಲಕೊಟ ಜಿಲ್ಲೆ
  ಹುನಗುಂದ ತಾಲೂಕ ವರಗೊಡದಿನ್ನಿಯಲ್ಲಿ ಯಾರೂ ಕೆಳವರಿಲ್ಲ ಎನ್ನುವಂತಾಗಿದೆ

  1. Dear Sir
   ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಮತ್ತು ಸಮಗ್ರ ಶಿಶು ಅಭೀವೃದಿ ಯೋಜನೆ
   Still We are Not received Madilu kit which is provided by government
   Already left 3 months
   Please help We are trying call helpline number 080-22201980
   Not rechible
   Gadag district,Gadag Taluq
   Kurthakoti Village 582205
   8073174480

 8. ಸರಕಾರ ದ ಎಲ್ಲಾ ಯೋಜನೆ ಬಹಳ ಜನ ಉಪಯೋಗ ದಿಂದ ಕೂಡಿದ್ದು ಎಲ್ಲರೂ ಸದುಪಯೋಗ ಪಡೆದುಕೊಂಡು ಅಭಿವೃದ್ಧಿ ಸಾದಿಸಬಹುದು.

 9. ಹಳ್ಳಿಯ ಮಹಿಳಾ ಟೈಲರಿಂಗ್ ತರಬೇತಿರಗೆ ಸಾಲ ಸೌಲಭ್ಯ ಕೊಟ್ಟರೆ ಒಳ್ಳೆಯದು

 10. ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಅಂಗನವಾಡಿ ಕಾರ್ಯಕರ್ತರು ದುರ್ಬಳಕೆ ಮಾಡುತ್ತಿರುವುದು ರಾಜ್ಯದ್ಯಂತ ಕಂಡುಬಂದಿರುತ್ತದೆ ದಯಮಾಡಿ ಸರ್ಕಾರ ಕೂಡಲೇ ಅಂಗನವಾಡಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ವಿನಂತಿಸುತ್ತೇನೆ

 11. ಈ ಯೋಜನೆಗಳು ಪುಸ್ತಕದಲ್ಲಿ ಓದುವುದಕ್ಕೆ ಅಷ್ಟೇ ಸೀಮಿತ. ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳಿಂದ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ. ರಾಜಕಾರಣಿಗಳ ಶಿಫಾರಸಿನ ಮೇಲೆ ದೇವರಾಜು ಅರಸು ಯೋಜನೆ ಉದ್ಯೋಗಿನಿ ಇಂಥ ಯೋಜನೆಗಳಲ್ಲಿ ಲೋನ್ ಕೊಡ್ತಾರೆ. ನೂರಾರು ಬಾರಿ ಕಚೇರಿ ಬಾಗಿಲಿಗೆ ಅಲೆದಾಡಿದರು ಯಾವ್ ಕೆಲಸ ಆಗಲ್ಲ. ಘೋಷಣೆಗಷ್ಟೇ ಈ ಯೋಜನೆಗಳು

 12. ನನಗೆ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಇದೆ ನಮೂರಲಿ ಇರದು st ನೆ ಆದರೆ ಅವರಿಗೆ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಳಿದಿದ್ದಲ್ಲಿ ಅದರಿಂದ ನನಗೆ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಇದೆ ಇದರ ಬಗ್ಗೆ ನನಗೆ ಯಾ
  ವುದೇ ಮಾಹಿತಿ ಗೊತಿಲ ಈ ಸೌಲಾಬ್ಯ ಹೇಗೆ ಪಡೆದುಕೊಳ್ಳುವುದು ತಿಳಿಸಿ

Leave a Reply

Your email address will not be published. Required fields are marked *