success storyUncategorized

ಶ್ರೀ.ಕ್ಷೇ.ಧ.ಗ್ರಾ ಯೋಜನೆ ಮೂಲಕ ಮಾದರಿ ಹೈನುಗಾರಿಕೆ ಸಾಧನೆ

10988944_877682688921957_1316245446616344594_n

ಉಡುಪಿ: ನಮ್ಮ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ವಿವಿಧ ಕಾರಣಗಳಿಂದ ಆಮೆ ಗತಿಯಲ್ಲಿ ಸಾಗುತ್ತಿದೆ.ಬಹಳ ಪ್ರಾಮಖ್ಯವಾಗಿ ಕೃಷಿ ಲಾಭದಾಯಕವಲ್ಲ ಎಂಬ ಹಳೆಯ ನಂಬಿಕೆ ಇದಕ್ಕೆ ನಮ್ಮ ಹೆಚ್ಚಿನ ರೈತರು ತಮ್ಮ ಹೊಲವನ್ನು ಹಡಿಲು ಬಿಟ್ಟು ಇತರ ಚಟುಚಟಿಕೆ ಮಾಡುತ್ತಿದ್ದಾರೆ.ಆದರೆ ಕೃಷಿಯಲ್ಲಿಯೂ ಕೂಡ ಲಾಭ ಗಳಿಸಬಹುದು ಅದರಲ್ಲಿಯೂ ಸಾವಯವ ಕೃಷಿ ಅದರೊಂದಿಗೆ ಹೈನುಗಾರಿಕೆ ಮಾಡಿದರೆ ಉತ್ತಮ ಲಾಭ ಗಳಿಸಲು ಸಾದ್ಯ ಮಾದರಿಯಾಗಿ ಹೈನುಗಾರಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದನ್ನು ಕಾರ್ಕಳ ತಾಲೂಕಿನ ನಂದಲು ಗ್ರಾಮದ ಅರುಣ್ ಶೆಟ್ಟಿ ದಂಪತಿಗಳು ಸಾಧಿಸಿ ತೋರಿಸಿದ್ದಾರೆ.
ಕೃಷಿಯೊಂದಿಗೆ ಅದಕ್ಕೆ ಪೂರಕವಾಗಿ ಸಾವಯವ ರೀತಿಯಲ್ಲಿ ಹೈನುಗಾರಿಕೆಯನ್ನು ಮೈಗೂಡಿಸಿದ್ದಾರೆ.ಉತ್ತಮ ರೀತಿಯಲ್ಲಿ ಹಟ್ಟಿ ರಚನೆ ಮಾಡಿ 30 ವಿವಧ ಜಾತಿಯ ಅದರಲ್ಲಿಯು ಹೆಚ್ಚಾಗಿ ಜೇಸರ್ಿ ಜಾನುವಾರುಗಳನ್ನು ನಿರ್ವಹಣೆ ಮಾಡಿ ಪ್ರತಿದಿನ ಸರಾಸರಿ 170-200 ಲೀ ಹಾಲನ್ನು ಡೈರಿಗೆ ನೀಡುತ್ತಿದ್ದಾರೆ.ಸುಮಾರು 6 ಜಾತಿಯ ದನಗಳಿಂದ ತಿಂಗಳಲ್ಲಿ ಸರಾಸರಿ 30 ಸಾವಿರ ರೂ ಆದಾಯ ಗಳಿಸುತ್ತಿರುವ ಇವರು ಕೃಷಿ ವಿಜ್ಙಾನಿಯಂತೆ ಸದಾಕಾಲ ಕೃಷಿಯಲ್ಲಿ ಹೊಸ ಮಾದರಿಯನ್ನು ಆವಷ್ಕಾರ ನಡೆಸಿದ್ದಾರೆ.ಮುಖ್ಯವಾಗಿ ಹಟ್ಟಿ ತೊಳೆದ ನೀರನ್ನು ಸಂಗ್ರಹಿಸಲು ದೊಡ್ಡ ತೊಟ್ಟಿಯನ್ನು ರಚನೆ ಮಾಡಿ (ಬಯೋಡೈಜೆಸ್ಟರ್) ಆ ನೀರನ್ನು ತಮ್ಮ ಅಡಿಕೆ,ಬಾಳೆ ತೋಟಕ್ಕೆ ನೀಡಿದಪರಿಣಾಮ ಅಡಿಕೆಗೆ ಕೊಳೆ ರೋಗ ಅಷ್ಟೋಂದು ಬಾಧಿಸಿಲ್ಲ.ಅದೇ ರೀತಿ ಗೋಬರ್ ಗ್ಯಾಸ್ ರಚನೆ ಮಾಡಿ ಅದರ ತ್ಯಾಜ್ಯವನ್ನು ಬತ್ತ ತರಕಾರಿಗೆ ನೀಡಿ ಉತ್ತಮ ಫಲಿತಾಂಶ ಪಡೆಯುತ್ತಿದ್ದಾರೆ.ಯಾವುದೇ ಗೊಬ್ಬರವನ್ನು ಹೊರಗಿಂದ ತರದೆ,ಉತ್ತಮ ಕೃಷಿ ಜೊತೆಗೆ ರಬ್ಬರ್,ತೋಟಗಾತಿಕೆ ಬೆಳೆ,ಹೈನುಗಾರಿಕೆ ಬೇಕಾದ ಹುಲ್ಲು ನಾಟಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.
ಜಾನುವಾರುಗಳ ಸಮಗ್ರ ನಿರ್ವಹಣೆಯನ್ನು ವಿವಧ ಯಂತ್ರಗಳ ಮೂಲಕ ಮಾಡುತ್ತಿದ್ದಾರೆ.ಉದಾ: ಹಾಲು ಕರೆಯುವ ಯಂತ್ರ,ಮೇವು ತುಂಡುಮಾಡುವ ಯಂತ್ರ. ಅದೇ ರೀತಿ ರಾಸುಗಳಿಗೆ ಬರಬಹುದಾದ ವಿವಧ ರೋಗಗಳ ನಿರ್ವಹಣೆಗೆ ಕಾಲಕಾಲಕ್ಕೆ ಚುಚ್ಚುಮದ್ದನು ತಾವೇ ನೀಡುತ್ತಾರೆ.ಯೂವುದೇ ಪಶು ವೈದ್ಯರ ಸಹಾಯ ಪಡೆಯದೆ ಮಾಡುತ್ತಿದ್ದಾರೆ. ಅವರ ಮಾತಿನ ಪ್ರಕಾರ ಕೃಷಿಕ ಸ್ವಾವಲಂಬಿಯಾಗಬೇಕಾದರೆ ಆತ ಕೃಷಿ ತಜ್ಙರಾಗಬೇಕು ಅಂದರೆ ಎಲ್ಲಾ ರೀತಿಯ ಮಾಹಿತಿ ಪಡೆದು ಕೃಷಿ ಜೊತೆಗೆ ಹೈನುಗಾರಿಕೆ ಮಾಡಿದರೆ ಯಾರ ಹಂಗು ಇಲ್ಲದೆ ಜೀವನ ನಿರ್ವಹಣೆ ಮಾಡಬಹುದು.
ಸಕರ್ಾರದಿಂದ ಬರುವ ವಿವಧ ರೀತಿಯ ಅನುದಾನವನ್ನು ಪಡೆದು ಅದರ ಜೊತೆಗೆ ಶ್ರೀ.ಕೈ,ಧ.ಗ್ರಾ ಯೋಜನೆಯ ಮಾಹಿತಿ ಪಡೆದು ಉತ್ತಮ ಕೃಷಿಕರಾಗಿ ಬೆಳೆದಿದ್ದಾರೆ.ಅವರ ಕೃಷಿ ತಾಕು ನೊಡಲು ವಿವಿಧ ಸಂಸ್ಥೆಗಳ ಅಧಿಕಾರಿಗಳು ಭೇಟಿ ನೀಡುತ್ತಾರೆ.ಅರುಣ್ ಶೆಟ್ಟಿ ಯವರ ಪತ್ನಿ ಮನೆ ಕೆಲಸದೊಂದಿಗೆ ಹೈನುಗಾರಿಕೆಗೆ ಸಹಕಾರಿಯಾಗಿದ್ದಾರೆ.ವೃತಿಯಲ್ಲಿ ಶಾಲಾ ಶಿಕ್ಷಕಿಯಾಗಿ ಹೈನುಗಾರಿಕೆಯ ಬಗ್ಗೆ ಒಲವು ವ್ಯಕ್ತಪಡಿಸಿರುವುದು ಹೆಮ್ಮೆಯ ವಿಚಾರ.ತನ್ನ 4 ಎಕರೆ ಪ್ರದೇಶದಲ್ಲಿ ಕೃಷಿ ಮತ್ತು ಹೈನುಗಾರಿಕೆ ಮಾಡಿ ಕಾರ್ಕಳ ತಾಲೂಕಿನಲ್ಲಿ ಉತ್ತಮ ಕೃಷಿಕ ದಂಪತಿ ಪ್ರಶಸ್ಯಿ ಪಡೆದಿದ್ದಾರೆ.ಸಾವಯವ ಮಾದರಿಯಲ್ಲಿ ಕೃಷಿ ಅದರೊಂದಿಗೆ ಹೈನುಗಾರಿಕೆ ಮಾಡಿದ್ದಲ್ಲಿ ಉತ್ತಮ ಲಾಭ ಗಳಿಸಬಹುದಾಗಿದೆ ಎಂದು ಅವರ ಅಭಿಪ್ರಾಯವಾಗಿದೆ.ಮುಂದೆ ಹೈನುಗಾರಿಕಾ ಉದ್ಯಮ ಪ್ರಾರಂಭಿಸುವ ಯೋಜನೆ ಅವರಿಗಿದೆ.
ಒಬ್ಬ ಮಾದರಿ ಕೃಷಿಕ ಮನಸ್ಸು ಮಾಡಿದರೆ ಬೇರೆ ಕಂಪನಿಯ ನೌಕರ ದುಡಿಯುದಕ್ಕಿಂತ ಹೆಚ್ಚಿನ ಆಧಾಯ ಪಡೆಯಲು ಸಾದ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸದಾಕಾಲ ಚಿಂತನೆ ತುಂಬಿದ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ. ಅವರ ಈ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳು ಗೌರವಿಸಿವೆ ಮುಂದೆಯೂ ಅವರಿಗೆ ವಿವಿಧ ಪ್ರಶಸ್ಥಿಗಳು ಬರಲಿ ಎಂಬುದು ನಮ್ಮೆಲ್ಲರ ಹಾರೈಕೆ.11084275_877682722255287_2318354218623001615_n

One thought on “ಶ್ರೀ.ಕ್ಷೇ.ಧ.ಗ್ರಾ ಯೋಜನೆ ಮೂಲಕ ಮಾದರಿ ಹೈನುಗಾರಿಕೆ ಸಾಧನೆ

Leave a Reply to Veeresh Cancel reply

Your email address will not be published. Required fields are marked *