success storyUncategorized

ಕೃಷಿಯಲ್ಲಿ ಕೀಟಗಳ,ರೋಗಗಳ ಹಾವಳಿಗೆ ಗಿಡಮೂಲಿಕೆ ಔಷಧಿ ಯಶಸ್ಸು ಕಂಡಿರುವ ನೀಲಾವರ ಪ್ರಭಾಕರ ನಾಯಕ್

ಇವರಿಗೆ ಗ್ರಾಮಾಭಿವೃಧಿ ಯೋಜನೆ ಆದರ್ಶ

1505227_575673639181701_102463513_n

ಇಂದಿನ ಯುಗದಲ್ಲಿ ಹಲವಾರು ಕಾರಣಗಳಿಂದ ಕೃಷಿಯತ್ತ ದೂರ ಸಾಗುವ ಹಲವಾರು ಜನ ನಮಲ್ಲಿ ಇದ್ದಾರೆ,ಆದರೆ ಇದಕ್ಕೆ ಅಪವಾದಯೆಂಬಂತೆ ಕೃಷಿಯಲ್ಲಿಯೂ ಲಾಭ ಗಳಿಸಬಹುದು ಅಲ್ಲದೆ ಇತರರಂತೆ ಉತ್ತಮವಾಗಿ ಜೀವನ ಸಾಗಿಸಬಹುದೆಂದು ತೋರಿಸಿಕೊಟ್ಟವರು ಉಡುಪಿ ತಾಲೂಕು ನೀಲಾವರದ ಪ್ರಗತಿಪರ ಯುವ ಕೃಷಿಕ ಹಾಗೂ ಗಿಡಮೂಲಿಕೆ ತಜ್ಙರಾದ ಪ್ರಭಾಕರ ನಾಯಕ್ ರವರು.

ತನ್ನಲಿರುವ ಸುಮಾರು 4 ಎಕರೆ ಜಾಗದಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಮುಖ್ಯವಾಗಿ ಭತ್ತ,ತರಕಾರಿ ಅದೇ ರೀತಿ ತನ್ನಲ್ಲಿರುವ ಗಿಡಮೂಲಿಕೆ ಜ್ಙಾನದಿಂದ ಸುಮಾರು 300 ಕ್ಕು ಹೆಚ್ಚು ಜಾತಿಯ ಗಿಡಮೂಲಿಕೆ ಸಸ್ಯಗಳನ್ನು ನೆಟ್ಟಿದ್ದಾರೆ.ಕೃಷಿಯಲ್ಲಿ ಸಾವಯವ ಮಾದರಿಯಲ್ಲಿ ಕೃಷಿ ಮಾಡುತ್ತಿರುವ ಇವರು ಉತ್ತಮ ಉದ್ಯಮಿಯಾಗಿಯೂ ಸಾಧನೆ ಮಾಡಿದ್ದಾರೆ.ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಪ್ರಗತಿಬಂಧು ಸ್ವ ಸಹಾಯ ಸಂಘದ ಮೂಲಕ ತನ್ನ ಸಂಘದ ಉಳಿದ ಸದಸ್ಯರನ್ನು ಕೂಡ ಉತ್ತಮ ರೀತಿಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಲು ಪ್ರೇರೆಪಣೆ ನೀಡುತ್ತಿದ್ದಾರೆ.ಗಿಡಮೂಲಿಕೆ ಸಸ್ಯಗಳಿಂದ ಉತ್ತಮ ರೀತಿಯ ಕೇಶ ತೈಲ ಮತ್ತು ನೋವಿನ ಎಣ್ಣೆಯನ್ನು ಉತ್ಪಾದಿಸಿ ಆ ಮೂಲಕ ಅದನ್ನು ಇತರ ಕಡೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.ಈ ಕೆಲಸಕ್ಕೆ ತನ್ನ ಸಂಘದ ಇತರ ಸದಸ್ಯರನ್ನು ತೊಡಗಿಸಿಕೊಂಡು ಅವರಿಗೂ ಕೂಡ ಅದರ ಮಾಹಿತಿಯನ್ನು ನೀಡುತ್ತಿದ್ದಾರೆ.ಅವರು ತಯಾರಿಸಿದ ತೈಲ ಸೀತಾ ಕೇಶ ತೈಲವೆಂದು ಉತ್ತಮ ಪ್ರಸಿದ್ದಿಯನ್ನು ಪಡೆದಿದೆ.

ನಮ್ಮ ಆರೋಗ್ಯವನ್ನು ನಾವು ಯಾವ ರೀತಿಯಲ್ಲಿ ನಮ್ಮ ಸುತ್ತಮುತ್ತಲಿನ ಸಸ್ಯಗಳ ಮೂಲಕ ಕಾಪಾಡಬಹುದೆಂಬ ಮಾಹಿತಿಯನ್ನು ವಿವಿಧ ಕಡೆಗಳಲ್ಲಿ ಜನರಿಗೆ ನಿರಂತರವಾಗಿ ನೀಡುತ್ತಿದ್ದಾರೆ ಈವರೆಗೆ ಸುಮಾರು ಸಾವಿರಕ್ಕೂ ಮಿಕ್ಕಿ ಈ ಬಗ್ಗೆ ಉಪನ್ಯಾಸ ನೀಡಿರುವ ನಾಯಕ ರವರು ಉದ್ಯಮಿಯಾಗಿಯೂ ಯಶಸ್ಸು ಸಾಧಿಸಿದ್ದಾರೆ.ಕೃಷಿಯಲ್ಲಿಯೂ ಕೂಡ ಸಾವಯವ ಮಾದರಿಯಲ್ಲಿ ಕೃಷಿ ನಡೆಸಿ ಬೆಳೆಗಳಿಗೆ ಬರುವ ವಿವಿಧ ರೀತಿಯ ರೋಗಗಳನ್ನು ತನ್ನ ಗಿಡಮೂಲಿಕೆ ಔಷಧದಿಂದ ಗುಣಪಡಿಸುತ್ತಾರೆ.ಹೀಗಾಗಿ ಅವರು ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.ಕೃಷಿ ಮತ್ತು ತನ್ನ ಗಿಡಮೂಲಿಕೆಯಿಂದ ಅವರು ಉತ್ತಮ ಆಧಾಯವನ್ನು ಪಡೆದು ಇತರ ಉದ್ಯೋಗಗಳಿಗೆ ಕಡಿಮೆಯಿದೆಂಬಂತೆ ಸಾಧನೆ ಮಾಡಿದ್ದಾರೆ.

ಪದವಿ ಶಿಕ್ಷಣ ಪಡೆದರೂ ಇತರ ಉದ್ಯೋಗಗಳಿಗೆ ತೆರಳದೆ ತನ್ನಲ್ಲಿರುವ ಕೃಷಿ ಮತ್ತು ಗಿಡಮೂಲಿಕೆ é ಜ್ಙಾನವನ್ನು ಬಳಸಿಕೊಂಡು ಇತರರಿಗೆ ಸಾಟಿಯಿಲ್ಲವೆಂಬಂತೆ ಆಧಾಯ ಗಳಿಸುತ್ತಿದ್ದಾರೆ.ತನ್ನ ತಂದೆಯಿಂದ ಕಲಿತ ಈ ಜ್ಙಾನವನ್ನು ಸಮಾಜದ ಇತರರಿಗೂ ದೊರಕುವಂತೆ ಮಾಡುತ್ತಿರುವ ನಾಯಕ್ ರವರು ಅಭಿನಾಂದನಾರ್ಹರು.

ಅವರ ಮನೆ ಮತ್ತು ಕೃಷಿ ತಾಕನ್ನು ವೀಕ್ಷಿಸಿದರೆ ಅದರ ಅನುಭವ ವಾಗುತ್ತದೆ.ಅವರ ಕೃಷಿ ತಾಕುನ್ನು ವೀಕ್ಷಿಸಲು ಮತ್ತು ಅದರ ಬಗ್ಗೆ ಅದ್ಯಯನ ನಡೆಸಲು ಇತ್ತಿಚೆಗೆ ಅಮೇರಿಕಾ ಪೆನ್ ವಿ.ವಿಯ ವಿದ್ಯಾಥರ್ಿಗಳು ಆಗಮಿಸಿದ್ದರು.ಅಲ್ಲದೆ ಇತರ ಜೆಲ್ಲಿಗಳಿಂದ ರೈತರು ಭೇಟಿ ನೀಡುತ್ತಿದ್ದಾರೆ.ಅವರ ಮಾತಿನಂತೆ ಹೇಳುದಾದರೆ ಕೃಷಿಕ ಉದ್ಯಮಿಯಂತೆ ಜ್ಷಾನವನ್ನು ಪಡೆದು ತನ್ನಲ್ಲಿರುವ ಸಂಪನ್ಮೂಲವನ್ನು ಬಳಸಿಕೊಂಡು ಸಾಧನೆ ಮಾಡಿದರೆ ಖಂಡಿತವಾಗಿಯೂ ಕೃಷಿಯನ್ನು ಲಾಭದಾಯಕವಾಗಿ ನಡೆಸಬಹುದಾಗಿದೆ.ಯುವಕರು ಕೃಷಿಯತ್ತ ಆಸಕ್ತಿ ವಹಿಸಬೇಕಾಗಿದೆ ಎನ್ನುತ್ತಾರೆ.

ಇವರು ಇತರ ಯುವ ಕೃಷಿಕರಿಗೆ ಮಾದರಿಯಾಗಿದ್ದದಾರೆ ಅವರ ಈ ಸಾಧನೆಗೆ ಅವರ ಕುಟುಂಬದ ಬೆಂಬಲ ಅವರಿಗದೆ ಮುಖ್ಯವಾಗಿ ಅವರ ಪತ್ನಿಯೂ ಕೂಡ ಅವರ ಕೆಲಸಕ್ಕೆ ಸಹಾಯ ಮಾಡುತ್ತಾರೆ.ಹೈನುಗಾರಿಕೆಯನ್ನು ಕೂಡ ನಡೆಸಿ ಅದರಿಂದ ಕೂಡ ಹೆಚ್ಚಿನ ಲಾಭ ಸಾಧಿಸಿದ್ದಾರೆ.

SITA PBG-7

Leave a Reply

Your email address will not be published. Required fields are marked *