Uncategorized

ಯೋಗದ ಕ್ರಾಂತಿಯಲ್ಲಿ ಶಾಂತಿವನ ಟ್ರಸ್ಟ್

1901876_715506088502790_596126560467962061_n
ಉಡುಪಿ:- ಯೋಗ ದಿನಾಚರಣೆಗೆ ಜಗತ್ತೆ ಒಂದಾಗಿದೆ.ಭಾರತೀಯರು ಮಾತ್ರವಲ್ಲದೆ ಇಡೀ ದೇಶದ ಜನರು ಯೋಗಕ್ಕೆ ಕಾತರರಾಗಿದ್ದಾರೆ.ಈ ಯೋಗದ ಬಗ್ಗೆ ಬಹಳ ಹಿಂದೆಯೇ ಕೈಜೋಡಿಸಿ ಅದರಲ್ಲಿ ಯಶಸ್ವಿಯಾದ ಸಂಸ್ಥೆಯಲ್ಲಿ ಶ್ರೀ.ಕ್ಷೇತ್ರ ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಕಣ ಯೋಜನೆ ಕಾರ್ಯಕ್ರಮ ಧಮರ್ಾಧಿಕಾರಿ ಡಾ||| ವಿರೇಂದ್ರ ಹೆಗ್ಗಡೆಯವರು ಸುಮಾರು 3 ವರ್ಷದ ಹಿಂದೆ ಪ್ರಾರಂಭಿಸಿದ ಈ ಕಾರ್ಯಕ್ರಮ ಇಂದು ಗಿನ್ನೇಸ್ ದಾಖಲೆಗೆ ಪಾತ್ರವಾಗಿದೆ.

ಇದರ ಮೂಲಕ ಮಕ್ಕಳಿಗೆ ಯೋಗ ಶಿಕ್ಷಣ ನೀಡುದಲ್ಲದೆ,ನೈತಿಕ ಶಿಕ್ಷಣಕ್ಕೆ ಪೂರಕವಾದ ಪುಸ್ತಗಳನ್ನು ಪ್ರಕಟಿಸಿ ಅದನ್ನು ಶಾಲೆಗಳಿಗೆ ವಿತರಿಸಿ ಅದನ್ನು ಓದಿದ ಮಕ್ಕಳಿಗೆ ಪುಸ್ತಕದ ಕುರಿತು ಸ್ಪದರ್ೆಗಳನ್ನು ಮಾಡಿ ಅವರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.ಅಲ್ಲದೆ ಅಂಚೆ ಕುಂಚ ಸ್ಯದರ್ೆಂ ಮೂಲಕ ಅವರಿಗೆ ಭಾರತೀಯ ದೇಶ ನಾಯಕರ ಪರಿಚಯ ಮಾಡಿಸಲಾಗುತ್ತದೆ.ಈ ಹಿಂದೆ ಇದರ ಕಾರ್ಯಕ್ರಮವನ್ನು ಮೆಚ್ಚಿ ಅಂದಿನ ರಾಷ್ಟಪತಿ ಡಾ|| ಕಲಾಂರವರು ಭಾಗವಹಿಸಿ ಸ್ಪಧರ್ಾ ವಿಜೇತರಿಗೆ ಬಹುಮಾನ ನೀಡಿದ್ದರು.ಇಂದು ಯೋಗಕ್ಕೆ ಈ ವಿಶ್ವ ಮಾನ್ಯತೆ ಲಭಿಸಲು ಈ ಸಂಸ್ಥೆಯೂ ಕಾರಣವಾಗಿದೆ.

ಕಳೆದ ವರ್ಷ ಸುಮಾರು 60ಸಾವಿರ ಮಕ್ಕಳ ವಿವಿಧ ಕಡೆಗಳಲ್ಲಿ ಎಕ ಕಾಲದಲ್ಲಿ ನಡೆದ ಯೋಗ ಪ್ರದರ್ಶನ ಗಿನ್ನೆಸ್ ದಾಖಲೆಗೆ ಪಾತ್ರವಾಗಿತ್ತು.ಯೋಗ ಮತ್ತು ನೈತಿಕ ಶಿಕ್ಷಣವನ್ನು ನೀಡಲು ಅದ್ಯಾಪಕರನ್ನು ತರಬೇತಿ ಗೊಳಿಸಿ ಅವರ ಮೂಲಕ ಈ ಕೆಲಸ ನಡೆಯುತ್ತಿದೆ.ಈ ಅದ್ಯಾಪಕರು ಶಾಲೆಯ ಅವಧಿಯ ಬಳಿಕ ಅಥವಾ ಸಮಯದ ಹೊಂದಾಣಿಕೆ ಮಾಡಿ ಯೋಗ ತರಬೇತಿಗಳನ್ನು ವಿದ್ಯಾಥರ್ಿಗಳಿಗೆ ನೀಡಿ ಅವರನ್ನು ಯೋಗದ ಬಗ್ಗೆ ಆಕರ್ಷಣೆ ಮೂಡಿಸಲು ಪ್ರಯತ್ನ ಮಾಡುತ್ತಿರುವುದು ಅಭಿನಂದನೀಯ ವಿಚಾರ.

ಇಂದು ಯೋಗದ ಕುರಿತು ವ್ಯಥಾ ಪ್ರಚಾರಕ್ಕಾಗಿ ಕೆಲವರು ಅದರ ಬಗ್ಗೆ ಆರೋಪ ಮಾಡುತ್ತಿರುವ ಈ ಸಂದರ್ಭದಲ್ಲಿ ಯಾವುದಕ್ಕೂ ಕಿವಿಕೊಡದೆ ತನ್ನದೇ ಆದ ರೀತಿಯಲ್ಲಿ ಈ ರೀತಿಯ ಕೆಲಸ ನಿರ್ವಹಿಸುತ್ತಿದೆ.ಯೋಗದ ಬಗ್ಗೆ ಅನೇಕ ರೀತಿಯ ಕಾರ್ಯಕ್ರಮ ನಡೆಯುವ ಈ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಕೂಡ ಧರ್ಮಸ್ಥಳದಲ್ಲಿ ಸುಮಾರು 10 ಸಾವಿರ ಮಂದಿ ಏಕ ಕಾಲದಲ್ಲಿ ಯೋಗ ಪ್ರದರ್ಶನವನ್ನು ಇಂದು (ಜೂನ್21) ನಡೆಯಲಿದೆ.

ಈ ನಿಟ್ಟಿನಲ್ಲಿ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗದ ಕುರಿತು ಇನ್ನಷ್ಟು ಸಂಶೋದನೆಯನ್ನು ನಡೆಸಿ ಅದನ್ನು ಭಾರತದ ಆಸ್ತಿಯನ್ನಾಗಿ ಮಾಡಲು ನಾವು ಪಣ ತೊಡಬೇಕು.ವಿದೇಶದಲ್ಲಿ ಅವರ ಸಾಂಪ್ರಾದಾಯಕ ರಕ್ಷಣಾ ಕಲೆಗಳನ್ನು ಅವರು ಯಾವ ರೀತಿಯಲ್ಲಿ ಗೌರವಿಸುತ್ತಾರೋ ಅದೇ ರೀತಿ ನಮ್ಮ ದೇಶದಲ್ಲಿ ಈ ಪ್ರಯತ್ನ ನಡೆಯಲಿ

Leave a Reply

Your email address will not be published. Required fields are marked *