success storyUncategorized

ಕೃಷಿಯಲ್ಲಿ ಸೋಪ್ಟವೇರ್ ಕಂಪನಿಗಿಂತ ಹೆಚ್ಚಾಗಿ ಗಳಿಸಬಹುದು ಎಂದು ತೋರಿಸಿಕೊಟ್ಟಿರುವ ಪ್ರಗತಿಪರ ರೈತ ಕುದಿ ಶ್ರೀನಿವಾಸ ಭಟ್ ಯುವಜನಾಂಗಕ್ಕೆ ಮಾದರಿ

ಉಡುಪಿ:-ಕೃಷಿಯಲ್ಲಿ ಎನೂ ಲಾಭವಿಲ್ಲ ಕೃಷಿಯನ್ನು ಬಿಟ್ಟು ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡಿದರೆ ಉತ್ತಮ ಆದಾಯ ಪಡೆಯಬಹದು ಎಂದು ಬಹಳಷ್ಟು ರೈತರು ಕೃಷಿಗೆ ತಿಲಾಂಜಲಿ ನೀಡಿ ಇತರ ಉದ್ಯೋಗಗಳತ್ತ ಹೋಗುತ್ತಿರುವ ಸಂದರ್ಭದಲ್ಲಿ ಉಡುಪಿ ತಾಲೂಕಿನ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ರವರು ಕೃಷಿಯಲ್ಲಿಯೂ ಮನಸ್ಸು ಮಾಡಿದರೆ ಇತರ ಯಾವುದೇ ಉದ್ಯೋಗಗಳಿಗಿಂತ ಹೆಚ್ಚಿನ ಲಾಭ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.ಪದವಿ ಪಡೆದು ಬೇರೆ ಉದ್ಯೋಗ ಸಿಗುವ ಹಂತದಲ್ಲಿದ್ದರೂ ಅದನ್ನು ಬಿಟ್ಟು ಉತ್ತಮ ಕೃಷಿ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.
ತನ್ನಲ್ಲಿರುವ ಸುಮಾರು 6 ಎಕರೆ ಭೂಮಿಯನ್ನು ಯಾವುದೇ ಜಾಗವನ್ನು ಖಾಲಿ ಬಿಡದೆ ಇಲ್ಲಾ ರೀತಿಯ ಸಮಗ್ರ ಕೃಷಿ ಮಾಡುತ್ತಿದ್ದಾರೆ.ಕೃಷಿಯೊಂದಿಗೆ ಸುಮಾರು 3 ಸಾವಿರ ಕೋಳಿಗಳಿಂದ ಕೂಡಿದ ಕೋಳಿ ಸಾಕಾಣಿಕೆ ಯನ್ನು ಕೂಡ ಮಾಡುತ್ತಿದಾರೆ.ಮುಖ್ಯವಾಗಿ ವಿವಿಧ ರೀತಿಯ ಬಾಳೆ ಕೃಷಿಯನ್ನು ಮಾಡಿರುವ ಇವರು ಅದರಲ್ಲಿಯೂ ಉತ್ತಮ ಆದಾಯ ನಿರಂತರವಾಗಿ ಪಡೆಯುತ್ತಿದ್ದಾರೆ.ಬಾಳೆ ಗಿಡ ನಾಟಿಯಲ್ಲಿ ತನ್ನದೆ ಆದ ಮಾದರಿಯನ್ನು ಅನುಸರಿಸುತ್ತಾರೆ.ಅಂದರೆ ಬಾಳೆ ಗಿಡ ನೆಡುವ ಹೊಂಡದ ಮದ್ಯದಲ್ಲಿ ಬಾಳೆ ಗಿಡ ನೆಡದೆ ಅದರ ಬದಿಯ ಸಂದಿನಲ್ಲಿ ಗಿಡ ನಾಟಿ ಮಾಡುತ್ತಾರೆ,ಎಕೆಂದರೆ ನೀರು ನಿಂತು ಬಾಳೆಯ ಬೇರು ಕೊಳೆಯುದಿಲ್ಲ.ಈ ಮಾದರಿನ್ನು ಇಂದು ಹೆಚ್ಚಿನ ರೈತರು ಅನುಸರಿಸುತ್ತಾರೆ.ತನ್ನದೇ ಆದ ಈ ಮಾದರಿಯನ್ನು ಮೆಚ್ಚಿ ವಿವಿಧ ಇಲಾಖೆಗಳ ಅಧಿಕಾರಿಗಳು,ಕೃಷಿ ವಿಜ್ಙಾನಿಗಳು ಕೂಡ ಅವರ ಪ್ರಯೋಗಶೀಲ ಗುಣಕ್ಕೆ ಮಾರು ಹೋಗಿದ್ದಾರೆ.

ಬಾಳೆ ಗಿಡವನ್ನು ನಾಟಿ ಮಾಡುವಾಗ ಹಬ್ಬ ಹರಿದಿನಗಳಿಗೆ ಸರಿಯಾಗಿ ಗೊನೆ ಬರುವಂತೆ ನೋಡಿಕೊಂಡು ನಾಟಿ ಮಾಡುವುದರಿಂದ ಉತ್ತಮ ಆಧಾಯ ಪಡೆಯಲು ಇದು ಪೂರಕವಾಗಿದೆ ಎನ್ನಬಹುದು.ಸುಮಾರು 70-80ಕೆ.ಜಿ ಬಾಳೆ ಗೊನೆ ತೂಗುತ್ತದೆ.ಬಾಳೆಯೊಂದಿಗೆ ಅದರ ಮದ್ಯದಲ್ಲಿ ಉಪಬೆಳೆಯಾಗಿ ಅಡಿಕೆ ನಾಟಿ ಮಾಡುತ್ತಾರೆ.ಅದರೊಂದಿಗೆ ವಿವಿಧ ರೀತಿಯ ತರಕಾರಿ,ವಿಳ್ಯ,ಕರಿಮೆಣಸು,ಮುಂತಾದ ವಾಣಿಜ್ಯ ಬೆಳೆಯನ್ನು ಕೂಡ ಬೆಳೆಸುತ್ತಿದ್ದಾರೆ.ಭತ್ತವನ್ನು ಮನೆಯ ಉಪಯೋಗಕ್ಕೆ ಬೇಕಾದಷ್ಟು ಬೆಳೆೆಸಿ ಉಳಿದ ಪ್ರದೇಶದಲ್ಲಿ ಬಾಳೆ ನಾಟಿ ಮಾಡುತ್ತಾರೆ. ಮನೆಯಲ್ಲಿ ಕೃಷಿಗೆ ಬೇಕಾದ ಎಲ್ಲಾ ರೀತಿಯ ಕೃಷಿ ಯಂತ್ರಗಳನ್ನು ಖರೀದಿಸಿ ಅದರ ಉಪಯೋಗವನ್ನು ಮಾಡುತ್ತಿರುವ ಇವರು,ಉತ್ತಮ ಸಾವಯವ ಕೃಷಿಕೂ ಹೌದು ಕಾರಣ ಎಲ್ಲಾ ಸಾವಯವ ಮಾದರಿಯ ಗೊಬ್ಬರವನ್ನು ಮನೆಯಲ್ಲಿ ತಯಾರಿಸುತ್ತಾರೆ.ಇದರಿಂದ ಗೊಬ್ಬರಕ್ಕೆ ಖಚರ್ಾಗಬಹುದಾದ ಹಣವನ್ನು ಉಳಿತಾಯ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ.

ಹೈನುಗಾರಿಕೆಯನ್ನುಕೂಡ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ.ಈ ರೀತಿ ಉತ್ತಮ ಕೃಷಿ ಮಾಡಿರುವ ಇವರ ಕೃಷಿ ತಾಕನ್ನು ಒಮ್ಮೆಯಾದರೂ ವೀಕ್ಷಿಸಬೇಕು.ಉತ್ತಮ ಕೃಷಿ ತರಬೇತುದಾರರಾಗಿರುವ ಭಟ್ ರವರು ವಿವಿಧ ಕಡೆಗಳಲ್ಲಿ ರೈತರಿಗೆ ಕೃಷಿ ಮಾಹಿತಿ ನೀಡುತ್ತಾ ಬರುತ್ತಿದ್ದಾರೆ.ಅತ್ಯಂತ ವೈಜ್ಙಾನಿಕವಾಗಿ ಕೃಷಿ ಮಾಡಿರುವ ಇವರನ್ನು ರಾಜ್ಯ ಸಕರ್ಾರ ರಾಜ್ಯ ಉತ್ತಮ ಕೃಷಿಕ ಪ್ರಶಸ್ಥಿ,ಅದೇ ರೀತಿ ಜಿಲ್ಲಾ ಕೃಷಿ ಪಂಡಿತ ಪ್ರಶಸ್ಥಿ ನೀಡಿ ಗೌರವಿಸಿದೆ.,ಸನ್ಮಾನಗಳು ಇವರನ್ನು ಅರಸಿ ಬಂದಿವೆ.ಸಮಗ್ರ ಕೃಷಿಕರಾಗಿರುವ ಶ್ರೀನಿವಾಸ ಭಟ್ ರವರು ಬರೇ ಕೃಷಿಯಲ್ಲಿ ಸಂಪಾದನೆ ಮಾಡಿ ಯಾರಿಗೂ ಕಡಿಮೆಯಿಲ್ಲದ ಆಧಾಯ ಪಡೆಯುತ್ತಿದ್ದಾರೆ.ಅವರ ಪ್ರಕಾರ ಕೃಷಿಕ ವೈಜ್ಙಾನಿಕವಾದ ಸಂಶೋಧಕನಾಗಬೇಕು ವಿವಿಧ ರೀತಿಯ ಮಿಶ್ರ ಬೆಳೆ ಪದ್ದತಿಯನ್ನು ಅನುಸರಿಸಿದರೆ ಉತ್ತಮವಾದ ಲಾಭವನ್ನು ಕೃಷಿಯಲ್ಲಿ ಮಾಡಬಹುದು ಅದೇರೀತಿ ಕೃಷಿಕ ನಕರಾತ್ಮಕ ಮನೋಭಾವನೆ ಅಳಿಸಿ ಕೆಲಸ ನಿರ್ವಹಿಸಬೇಕಾಗಿದೆ.ಸಣ್ಣ ಹಳ್ಳಿಯ ಈ ವ್ಯಕ್ತಿಯ ಸಾಧನೆ ದೆಹಲಿಯವರೆಗೂ ತಲುಪಿದೆ.

ಕೃಷಿಯಲ್ಲಿ ತನ್ನ ಅನುಭವದಿಂದ ವಿಜ್ಙಾನಿಗಳಿಗೂ ಸಾಟಿಯಾಗಿ ಬೆಳೆಗಳಿಗೆ ರೋಗ ಬಂದಾಗ ಯಾವ ಓಷಧಿ ನೀಡಬೇಕು ಎಂಬುದು ಅವರಿಗೆ ತಿಳಿದಿದೆ.ರೈತರ ಸಂಘಟನೆ ಮಾಡಿ ವಿವಿಧ ಯೋಜನೆಗಳ ಲಾಭವನ್ನು ರೈತರಿಗೆ ನೀಡಿದ್ದಾರೆ.ಅವರ ಸಾಧನೆಯ ಹಿಂದೆ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಸಹಕಾರದಿಂದ ಅದೇರೀತಿ ಪೂಜ್ಯ ಖಾವಂದರ ಆಶಿವರ್ಾದದಿಂದ ಈ ಸಾಧನೆ ಮಾಡಲು ಸಾದ್ಯವಾಗಿದೆ ಎಂದು ಅವರು ಹೃದಯ ತುಂಬಿ ಹೇಳುತ್ತಾರೆ.ಯೋಜನೆಯ ತಾಲೂಕು ಮಟ್ಟದ ಕೃಷಿ ಉತ್ತವದ ಸಮಿತಿಯ ಅದ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದಾರೆ.ಈ ರೀತಿಯಾಗಿ ಒಬ್ಬ ಆದರ್ಶ ಕೃಷಿಕನಾಗಿ ಬೆಳೆದಿರುವ ಶ್ರೀಯುತರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಶುಭ ಹಾರೈಕೆ.ಕೃಷಿಯಲ್ಲಿ ಸಾಧನೆ ಮಾಡಬೇಕು ಎಂಬ ಸಂಕಲ್ಪವಿರಿಸಿರುವ ರೈತರು ಒಮ್ಮೆಯಾದರೂ ಅವರ ಕೃಷಿ ತಾಕನ್ನು ಭೇಟಿ ಮಾಡಬೇಕು.80 ನೇ ಕುದಿ ಗ್ರಾಮ ಹಿರಿಯಡ್ಕ ಅಂಚೆ ಉಡುಪಿ.

ಕೃಷಿತೋ ನಾಸ್ತಿ ದುಭರ್ಿಕ್ಷಂ ಎಂಬತೆ ಕೃಷಿ ಇದ್ದರೆ ಗ್ರಾಮ ಸುಭಿಕ್ಷೆಯಿಂದ ಇರಲು ಸಾದ್ಯ

Leave a Reply

Your email address will not be published. Required fields are marked *