UncategorizedWomen Empowerment

ಮಹಿಳೆ

ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ. ಮಾತೃ ಶಕ್ತಿ, ವಾತ್ಸಲ್ಯ, ಸಹನೆ, ಪ್ರೀತಿ, ತಾಳ್ಮೆ, ಆರೆಕೆ, ಸತ್ಕಾರ, ಸನ್ಮಾನ, ಸಾಂತ್ವಾನ ಗುಣಗಳು ಆಕೆಗೆ ಹುಟ್ಟಿನಿಂದಲೇ ಮೇಳೆಸಿಕೊಂಡು ಬಂದಿರುತ್ತದೆ. ಸಮಾಜದಲ್ಲಿ ಇರುವ ಪರಿಸ್ಥಿತಿಗಳು, ಕಟ್ಟುಪಾಡುಗಳಿಗೆ ಮತ್ತು ಆಕೆಗೆ ಸಿಗುತ್ತಿರುವ ಪ್ರಾಧಾನ್ಯತೆಗಳಿಗೆ ಸರಿಯಾಗಿ ಅವಳಿಗೆ ಸ್ಥಾನಮಾನ ಸಿಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಹಿಳೆ ಪುರುಷರಿಗೆ ಸಮಾನಳು, ತನ್ನ ಜೀವನವನ್ನು ತಾನೇ ರೂಪಿಸಿಕೊಂಡಿರುವುದನ್ನು ನೋಡಬಹುದು. ನಮ್ಮ ದೇಶದಲ್ಲಿ ಕೌಟುಂಬಿಕ ಪದ್ಧತಿ, ಸಂಸ್ಕೃತಿ, ಸಂಸ್ಕಾರಗಳು, ಕುಟುಂಬ ನಿರ್ವಹಣೆ, ಆರೆಕೆ ಮಾಡುವ ಜವಾಬ್ದಾರಿ ಅನಾದಿ ಕಾಲದಿಂದಲೂ ಬಂದಿರುವುದರಿಂದ ಸಣ್ಣ ವಯಸ್ಸಿನಿಂದಲೇ ಆಕೆಗೆ ಹಲವಾರು ನೀತಿ ನಿಯಮಗಳು, ಕಟ್ಟುಪಾಡುಗಳನ್ನು ಹಾಕಲಾಗುತ್ತದೆ. ಇದರಿಂದಾಗಿ ಅವಳು ಮನೆ, ಸಂಸಾರ, ಮಕ್ಕಳು, ಮನೆಯ ಕಟ್ಟುಪಾಡುಗಳು, ಹಬ್ಬ ಹರಿದಿನ, ಸಂಸ್ಕಾರಗಳನ್ನು ಪಾಲಿಸುವವಳು ಎಂದು ಆಗಿ ಬಿಡುತ್ತಾಳೆ. ಈ ಅಗಾಧವಾದ ಜವಾಬ್ದಾರಿಯನ್ನು ಬಹಳ ನಾಜೂಕಾಗಿ ನಿಭಾಯಿಸಿಕೊಂಡು ಬಂದಿರುತ್ತಾಳೆ. ಅವಳಲ್ಲಿ ಹುಟ್ಟಿನಿಂದ ಬಂದಂತಹ ಗುಣಗಳನ್ನು, ಕೌಶಲ್ಯಗಳನ್ನು ತನ್ನ ಮನೆಯ ನಿರ್ವಹಣೆಯಲ್ಲಿ ತೋರಿಸುತ್ತಿದ್ದಾಳೆ.

ಆದರೆ ಇಂದು ಕಾಲ ಬದಲಾಗಿದೆ, ಕೂಡು ಕುಟುಂಬ ಪದ್ಧತಿ ಒಡೆದು ಸಣ್ಣ ಕುಟುಂಬ ಆಗಿದೆ. ಗಂಡ, ಮಕ್ಕಳು ತಾನು ಎಂದಾಗಿದೆ. ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಗೋಸ್ಕರ ಸಮಾಜದಲ್ಲಿ ತಾನೂ ದುಡಿದು ಸಂಸಾರ ಸುಗಮವಾಗುವಲ್ಲಿ ಸಹಕಾರಿಸುತ್ತಿದ್ದಾಳೆ. ಅನಾದಿ ಕಾಲದಿಂದ ಬಂದಂತಹ ಜವಾಬ್ದಾರಿಗಳ ಜೊತೆಯಲ್ಲಿ ಪುರುಷರಿಗೆ ಸಮಾನವಾಗಿ ಹೊರಗಡೆಯೂ ದುಡಿಯಲು ತಾನು ಶಕ್ತಳು ಮತ್ತು ತನ್ನ ಕರ್ತವ್ಯನಿರ್ವಹಣೆಯಲ್ಲಿ ಪುರುಷರಿಗಿಂತಲೂ ಮೇಲು ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳ ಮಹಿಳೆಯರ ಚಿತ್ರಣವೂ ಇಂದು ಬದಲಾಗಿದೆ. ಸಂಸಾರಕ್ಕೆ ಬೆನ್ನೆಲುಬಾಗಿ ಪುರುಷರ ಜೊತೆ ಸಮಾನವಾಗಿ ಕೃಷಿ ಕೆಲಸ, ಕೂಲಿ ಕೆಲಸವನ್ನು ಮಾಡುತ್ತಿದ್ದಾಳೆ. ಆದರೆ ಬದುಕಿನ ಈ ಜಂಜಾಟದಲ್ಲಿ ಮಹಿಳೆಯರು ತಮ್ಮ ಆರೋಗ್ಯ, ಸ್ವಚ್ಚತೆ, ಮಕ್ಕಳ ಬೆಳವಣಿಗೆ, ಅವರ ವಿದ್ಯೆ, ಪಾಲನೆ, ಪೋಷಣೆ ಈ ವಿಚಾರಗಳಿಗೆ ಆದ್ಯತೆ ನೀಡುವುದು ಕಡಿಮೆ. ಜೀವನ ನಡೆದರೆ ಸಾಕು ಎಂಬ ಅಭಿಪ್ರಾಯ ಅವರಲ್ಲಿದೆ. ಅಲ್ಲದೆ ಇಂತಹ ಕುಟುಂಬಗಳಲ್ಲಿ ಮಹಿಳೆಗೆ ಪ್ರಾಶಸ್ತ್ಯವೂ ಕಡಿಮೆ. ಪುರುಷರಿಗೆ ಸಿಗುತ್ತಿರುವ ಸಮಾನ ಅವಕಾಶಗಳು ಅವಳಿಗೆ ಇಲ್ಲ. ಶಿಕ್ಷಣ, ಉದ್ಯೋಗಗಳಿಗೆ ಅವಕಾಶಗಳು ಬಹಳ ಕಡಿಮೆ. ಕುಟುಂಬದ ಮುಖ್ಯ ನಿರ್ಧಾರಗಳೆಲ್ಲವೂ ಮನೆಯ ಪುರುಷರೇ ಕೆಗೊಳ್ಳುತ್ತಾರೆ.

ಹುಟ್ಟಿನಿಂದಲೂ ಈ ರೀತಿಯಾಗಿ ಎರಡನೇ ದರ್ಜೆಯವಳಾಗಿ, ತಗ್ಗಿ, ಬಗ್ಗಿ ಮನೆಯ ಆಳಾಗಿ ದುಡಿಯುತ್ತಿರುವ ಇಂತಹ ಮಹಿಳೆಯ ಅಭಿವೃದ್ಧಿ ಖಂಡಿತವಾಗಿ ಆಗಬೆಕು. ಭಗವಂತನು ಕರುಣಿಸಿದ ಆಕೆಯ ವಿಶೇಷ ಕೌಶಲ್ಯಗಳಿಗೆ ಮನ್ನಣೆ ಸಿಗಲೇಬೆಕು ಮತ್ತು ಇತ್ತೀಚೆಗೆ ಅವಳ ಮೇಲೆ ಆಗುತ್ತಿರುವ ದೌರ್ಜನ್ಯಗಳು ಕಡಿಮೆ ಆಗಲೇಬೆಕು. ಇದನ್ನು ಹೇಗೆ ಮಾಡಬಹುದು/ಸಾಧಿಸಬಹುದು. ಮಹಿಳೆಯರ ಸಂಘಟನೆಯೇ ಇದಕ್ಕೆ ಉತ್ತರ. ಮಹಿಳೆಯರನ್ನು ಸಣ್ಣ ಸಂಘಗಳನ್ನಾಗಿ ಪರಿವರ್ತಿಸಿ, ಈ ಸಂಘಗಳ ಮೂಲಕ ಅವರಿಗೆ ಕುಟುಂಬ ನಿರ್ವಹಣೆ, ಆರ್ಥಿಕ ಸವಲತ್ತುಗಳು, ಮಹಿಳಾ ಆರೋಗ್ಯ, ಸ್ವಚ್ಚತೆ ಮತ್ತು ನೆರ್ಮಲ್ಯ ಪೌಷ್ಟಿಕ ಆಹಾರ ಮತ್ತು ಮಕ್ಕಳ ಪೋಷಣೆ, ಹದಿಹರೆಯದ ಮಕ್ಕಳ ಪಾಲನೆ, ಸ-ಉದ್ಯೋಗಕ್ಕೆ ಪ್ರೇರಣೆ, ತನ್ನ ಸಾಮರ್ಥ್ಯದ ಬಗ್ಗೆ ತಿಳುವಳಿಕೆ, ಪ್ರೇರಣೆ, ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತಹ ಶಕ್ತಿ, ತನ್ನ ಕೌಶಲ್ಯ ಗುರುತಿಸಿ ಕೊಳ್ಳುವಿಕೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗುವಲ್ಲಿ ತನ್ನ ಪಾತ್ರ ಹೀಗೆ ನಾನಾ ವಿಚಾರಗಳ ಬಗ್ಗೆ ತಿಳುವಳಿಕೆ ಮಾಡಿಸುವ ಪ್ರಯತ್ನ ಆಗ”ಕಾಗಿದೆ. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಈ ಸಂಘಟನೆಗೆ ಇರಬೆಕು.

ಇಂದು ದೇಶಾದ್ಯಂತ ಹಲವಾರು ಮಹಿಳಾ ಪರ ಸಂಘಟನೆಗಳು ಸಂಸ್ಥೆಗಳು ಕಾರ್ಯಾಚರಿಸುತ್ತಿದೆ. ಮಹಿಳಾಪರ ಕಾನೂನು, ಮಹಿಳಾ ದೌರ್ಜನ್ಯ, ಮಹಿಳಾ ಸಬಲೀಕರಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣಾರ್ಥ ಕಾರ್ಯಕ್ರಮಗಳು, ಪಾಲನಾ ಕೇಂದ್ರಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಈ ಸಂಸ್ಥೆಗಳು ಕರ್ತವ್ಯ ನಿರ್ವಹಿಸುತ್ತಿದೆ. ಕೆಲವೊಂದು ಸಂಸ್ಥೆಗಳ ವಿವರ ಈ ಕೆಳಗಿನಂತಿದೆ:

೧) ಸ್ತ್ರೀ ಮುಕ್ತಿ ಸಂಘಟನೆ (ಮುಂಬೈ): ಈ ಸಂಸ್ಥೆಯು ಲಿಂಗತಾರತಮ್ಯ ನಿವಾರಣೆ, ಕೌಟುಂಬಿಕ ದೌರ್ಜನ್ಯ ತಡೆ, ಕಸ ಹೆಕ್ಕುವ ಕುಟುಂಬಗಳಿಗೆ ಕಾರ್ಯಕ್ರಮ, ಹದಿ ಹರೆಯದ ಮಕ್ಕಳಿಗೆ ಕಾರ್ಯಕ್ರಮ ಮತ್ತು ಪಾಲನಾ ಕೇಂದ್ರಗಳನ್ನು ನಡೆಸುತ್ತಿದೆ.
೨) ಸ್ತ್ರೀ ಶಕ್ತಿ ಸಂಘಗಳು: ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮಹಿಳೆಯರ ಸಂಘಟನೆಗಾಗಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳನ್ನು ರಚನೆ ಮಾಡಿ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ಪ್ರಂiತ್ನಿಸುತ್ತಿದೆ.
೩) ನಿರ್ಮಾಣ್ ಸಂಸ್ಥೆ: ಆಸಕ್ತ ವಿದ್ಯಾರ್ಥಿಗಳಿಂದ ಪ್ರಾರಂಭಿಸಲಾದ ಸಂಸ್ಥೆ, ಮಹಿಳೆ ಮತ್ತು ಮಕ್ಕಳ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜಸ್ಥಾನ , ಆಂದ್ರಪ್ರದೇಶ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
೪) ಇಂಡಿಯಾ ವುಮೆನ್ ಆಂಡ ವೆಲ್ ಫೇರ್ ಫೌಂಡೇಷನ್: ಮಹಿಳಾ ಪರ ಕಾನೂನುಗಳು, ಲಿಂಗತಾರತಮ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಮಹಿಳಾ ದೌರ್ಜನ್ಯದ ಕ್ಷೇತ್ರದಲ್ಲಿ ಭಾರತಾದ್ಯಂತ ಕೆಲಸ ಮಾಡುತ್ತಿದೆ.
೫) ಸ್ಮೆಲ್ ಫೌಂಡೇಷ ಇಂಡಿಯಾ ನವದೆಹಲಿ: ಮೂರು ಲಕ್ಷಕ್ಕಿಂತಲೂ ಅಧಿಕ ಮಕ್ಕಳು ಹಾಗೂ ಮಹಿಳೆಯರಿಗಾಗಿ ಭಾರತದ ೨೫ ರಾಜ್ಯಗಳ ೭೦೦ ಗ್ರಾಮಗಳಲ್ಲಿ ಸುಮಾರು ೧೫೮ ಕಾರ್ಯಕ್ರಮಗಳನ್ನು ಅನುಸ್ಠಾನ ಮಾಡುತ್ತಿದೆ. ಮಕ್ಕಳ ವಿದ್ಯಾಭ್ಯಾಸ, ಮಹಿಳೆಯರ ರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಡುತ್ತಿದೆ.
೬) ಸೆಲ್ಫ್ ಎಂಪ್ಲಾಯಿಡ ವುಮೆನ್ ಅಸೋಸಿಯೇಷನ್ ಅಹಮದಾಬಾದ್, ಗುಜರಾತ್: ಸ್ವಉದ್ಯೋಗ ಕೆಗೊಂಡ ಮಹಿಳೆಯರ ಸಂಘಟನೆ. ಈ ಸಂಘಟನೆಯ ಜೊತೆಗೆ ಮಹಿಳಾ ಸೌಹಾರ್ದ ಸಹಕಾರ ಬ್ಯಾಂಕ್, ಸೋಶಿಯ ಸೆಕ್ಯುರಿಟಿ ಸಂಸ್ಥೆ, ಸೇವಿಂಗ್ ಮತ್ತು ಕ್ರೆಡಿಟ ಸಂಸ್ಥೆ, ಒಕ್ಕೂಟಗಳನ್ನು ಮಾಡಿಕೊಂಡಿವೆ. ಅಲ್ಲದೇ ಗ್ರಾಮೀಣ ಉದ್ಪಾದಕರ ಸಂಘಟನೆ (Rural Producer’s Group) ಮಾಡಿಕೊಂಡು ಪ್ರಮುಖವಾಗಿ ಮಹಿಳೆಯರಿಂದ ಮಹಿಳೆಯರಿಗಾಗಿ ಕರ್ತವ್ಯ ನಿರ್ವಹಿಸುತ್ತಿದೆ.
೭) ಸಂಜೀವಿನಿ ವಿಕಾಸ್ ಏವಂ ಜನ ಕಲ್ಯಾಣ ಸಮಿತಿ ಅಲ್ಮೋರ ಜಿಲ್ಲೆ ಉತ್ತರಾಕಾಂಡ (ಹಿಮಾಲಯ ರೀಜಿಯ): ೨೦೦೦ನೇ ಇಸವಿಯಲ್ಲಿ ೭ ಜನರ ತಂಡ ಈ ಸಂಸ್ಥೆಯನ್ನು ಪ್ರಾರಂಭಿಸಿತು. ಮಹಿಳಾ ಸಬಲೀಕರಣ, ಜೀವನೋಪಾಯ ಚಟುವಟಿಕೆ, ತಿಳುವಳಿಕೆ ಮೂಡಿಸುವ ಕಾರ್ಯಕ್ರಮ. ಮಾಹಿತಿ ತಂತ್ರಜ್ಞಾನ ಬಗ್ಗೆ ತಿಳುವಳಿಕೆ ನೀಡುವುದು ಹೇಗೆ ಹಲವಾರು ಮಹಿಳಾ ಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
೮) ಸಮ್ಮಾ ಫೌಂಡೇಷ ಪಾಟ್ನಾ (ಬಿಹಾರ್): ಮಹಿಳೆ ಹಾಗೂ ಮಕ್ಕಳ ಕಲ್ಯಾಣರ್ಥವಾಗಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಹಮ್ಮಿಕೊಳ್ಳುತ್ತಿದೆ.
೯) ಜೆಪುರ್ ರಗ್ಸ್( Jaipur Rugs Foundation): ರಾಜಾಸ್ಥಾನದ ಈ ಸಂಸ್ಥೆ ಗ್ರಾಮೀಣ ಪ್ರದೇಶದ ಭಾಗದಲ್ಲಿ ರಗ್ಸ್ ತಯಾರಿ ಮತ್ತು ಇತರ ಗೃಹ ಉಪಯೋಗಿ ವಸ್ತುಗಳ ತಯಾರಿಗಾಗಿ ವಿಶ್ವದ್ಯಾಂತ ಗುರುತಿಸಿ ಕೊಂಡಿದ್ದಲ್ಲದೇ, ಆರ್ಥಿಕ ಶಕ್ತಿ/ಸಾಮರ್ಥ್ಯ ಇಲ್ಲದ ಮಹಿಳೆಯರಿಗೆ ಈ ಶಕ್ತಿಯನ್ನು ಕೊಡಿಸಿ ಅವರು ಉದ್ಯೋಗಸ್ಥರನ್ನಾಗಿ ಮಾಡುತ್ತಿದೆ. ಕೌಶಲ್ಯಾಭಿವೃದ್ಧಿ ತರಬೆತಿಯನ್ನು ನೀಡುತ್ತಿದೆ.
೧೦) ಸೆಂಟರ್ ಫಾರ್ ಸೋಶಿಯ ರಿಸರ್ಚ್ (ನವದೆಹಲಿ): ಈ ಸಂಸ್ಥೆಯು ಸುಮಾರು ೧೯೮೩ ರಲ್ಲಿ ಪ್ರಾರಂಭವಾಗಿದೆ. ಮಹಿಳೆ ಮತ್ತು ಹೆಣ್ಣು ಮಕ್ಕಳ ಮೂಲಭೂತ ಹಕ್ಕುಗಳು, ಸಾಮಾಜಿಕ ವಿಚಾರಗಳ ಬಗ್ಗೆ ಇವರಲ್ಲಿ ಅರಿವು ಮೂಡಿಸುವುದು, ಲಿಂಗ ತಾರತಮ್ಯ ನಿವಾರಣೆ ಇತ್ಯಾದಿ ಕ್ಷೇತದಲ್ಲಿ ಕಾರ್ಯಕ್ರಮ ಮಾಡುತ್ತಿದೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬೆಳೆಯಲು ಸಮಾನವಾದ ಹಕ್ಕು, ಅವಕಾಶಗಳು, ಆದ್ಯತೆಗಳು ಇರಬೆಕು. ಆಗ ಮಾತ್ರ ಸಮಾಜ ಸಮಾನವಾಗಿ ಬೆಳೆಯಲು ಸಾಧ್ಯ ಎಂಬ ಉದ್ದೇಶದಿಂದ ಈ ಸಂಸ್ಥೆ ಮೂರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದೆ.
೧೧) ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ (ರಿ), ಇದರ ಜ್ನಾನ ವಿಕಾಸ ಮಹಿಳಾ ಕಾರ್ಯಕ್ರಮ: ಮಹಿಳಾ ಸಬಲೀಕರಣದ ಮೂಲ ಉದ್ದೇಶವನ್ನು ಇಟ್ಟುಕೊಂಡು ಪ್ರಸಕ್ತ ದಿನಗಳಲ್ಲಿ ಮಹಿಳೆಯರು ಯಾವ ರೀತಿ ವ್ಯವಹರಿಸಬೆಕು, ಅವರು ಮುಖ್ಯವಾಗಿ ತಿಳಿದುಕೊಳ್ಳಬೆಕಾದ ವಿಚಾರಗಳು, ತನ್ನ ಕುಟುಂಬ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಿರಂತರವಾದ ತಿಳುವಳಿಕೆಯನ್ನು ಮೂಡಿಸುವಂಥಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕೌಟುಂಬಿಕ ಸಾಮರಸ್ಯ, ಶಿಕ್ಷಣ, ಆರೋಗ್ಯ ಮತ್ತು ನೆರ್ಮಲ್ಯ, ಪೌಷ್ಠಿಕ ಆಹಾರ, ಸ್ವ ಉದ್ಯೋಗ, ಸರಕಾರೀ ಸೌಲಭ್ಯ ಗಳು ಮತ್ತು ಮಹಿಳಾ ಪರ ಕಾನೂನುಗಳು ಎಂಬ ಆರು ಮೂಲಭೂತವಾದ ವಿಚಾರಗಳ ಬಗ್ಗೆ ಮಹಿಳೆಯರು ತಿಳಿದುಕೊಂಡಿರಬೆಕು ಎಂಬ ಮಹತ್ವಾಕಾಂಕ್ಷೆಯಿಂದ ಮಾತ್ರಶ್ರೀ ಹೇಮಾವತಿ ಹೆಗ್ಗಡೆ ಯವರು ಈ ವಿನೂತನವಾದ ಕಾರ್ಯಕ್ರಮದ ನೇತ್ರತ್ವ ವಹಿಸಿರುತ್ತಾರೆ. ಸುಮಾರು ೫೦ ರಿಂದ ೬೦ ಮಹಿಳೆಯರನ್ನು ಹೊಂದಿರುವ ಕೇಂದ್ರಗಳಲ್ಲಿ ಪ್ರತೀ ತಿಂಗಳಿಗೊಮ್ಮೆ ಎರಡು ತಾಸುಗಳ ಕಾಲ ಮಹಿಳೆಯರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮಗಳಿಂದಾಗಿ ಮಹಿಳೆಯರು ಇಂದು ಆತ್ಮಸ್ಥೆರ್ಯ ಬೆಳೆಸಿಕೊಂಡು ತಮ್ಮ ಕುಟುಂಬದ ಅಭಿವ್ರದ್ದಿಯಲ್ಲಿ ತಮ್ಮದೇ ಆದಂತಹ ಪಾಲು ನೀಡುತ್ತಿದ್ದಾರೆ.
೧೨) ಗುಲಾಬಿ ಗ್ಯಾಂಗ್: ಬಾಂಡ ಜಿಲ್ಲೆ ಉತ್ತರ ಪ್ರದೇಶ ಇಲ್ಲಿಯ ಮಹಿಳೆಯರು ವಿಶಿಷ್ಠವಾದ ತಂಡವನ್ನು ರಚನೆ ಮಾಡಿದ್ದಾರೆ. ಈ ಜಿಲ್ಲೆಯು ಭಾರತ ದೇಶದಲ್ಲಿಯೇ ಬಹಳ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿ ಪುರುಷರ ದಬ್ಬಾಳಿಕೆ ಪ್ರಧಾನವಾಗಿತ್ತು. ಮಹಿಳೆಯರಿಗೆ ಯಾವುದೇ ಪ್ರಾಧನ್ಯತೆ ಇರಲಿಲ್ಲ. ಅಲ್ಲದೆ ವ್ಯಾಪಕವಾದ ಮೌಡ್ಯಗಳು, ಕೌಟುಂಬಿಕ ದೌರ್ಜನ್ಯಗಳು, ದಬ್ಬಾಳಿಕೆಗಳು, ಅತೀವ ಜಾತೀಯತೆ, ಅಸ್ಪ್ರಶ್ಯತೆ, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ, ವರದಕ್ಷಿಣೆ, ಹಿಂಸೆಗಳು ವ್ಯಾಪಕವಾಗಿದ್ದು ಜೀವನವೇ ದುಸ್ತರವಾಗಿತ್ತು. ಈ ಎಲ್ಲ ಸಾಮಜಿಕ ಅಸ್ವಸ್ಥತೆಯನ್ನು, ಅನ್ಯಾಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಂಪತ್ ಪಾಲ್ ಎನ್ನುವ ಮಹಿಳೆ ೨೦೦೬ ರಲ್ಲಿ ಗುಲಾಬಿ ಗ್ಯಾಂಗ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಮೂಲ ಉದ್ದೇಶ ಆ ಪ್ರದೇಶದಲ್ಲಿ ಮಹಿಳೆಯರ ವಿರುದ್ದ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಟ. ಮಹಿಳಾ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ ಇಂತಹ ಪ್ರಕರಣಗಳ ವಿರುದ್ದ ದಾಳಿ ನಡೆಸುತ್ತಿರುವ ಈ ತಂಡ ಅನ್ಯಾಯಕ್ಕೆ ಬಲಿಯಾದವರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಿದೆ. ಕೆಯಲ್ಲಿ ಬಿದಿರಿನ ದಂಡನ್ನು ಹಿಡಿದುಕೊಂಡು ಗುಲಾಬಿ ಬಣ್ಣದ ಸೀರೆಯನ್ನು ಧರಿಸಿ ತಮ್ಮ ತಂಡದ ಇರುವಿಕೆಯನ್ನು ಸಮಗ್ರವಾಗಿ ಪ್ರದರ್ಶಿಸಿದ್ದಾರೆ. ತಮ್ಮ ಗಮನಕ್ಕೆ ಬಂದಂತಹ ಪ್ರಕರಣಗಳಿಗೆ ಸೂಕ್ತ ಕ್ರಮಗಳನ್ನು ಕೆಗೊಂಡಿದ್ದಾರೆ. ಪ್ರಸ್ತುತ ಅತ್ಯಧಿಕ ಸದಸ್ಯರನ್ನು ಹೊಂದಿರುವಂಥಹ ಈ ತಂಡ ತಮ್ಮ ಕಾರ್ಯಕ್ರಮಗಳನ್ನು ಮಹಿಳಾ ಸಬಲೀಕರಣ, ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳು, ಸ್ವ ಉದೋಗಕ್ಕೆ ಪ್ರೇರಣೆ ಮತ್ತು ತರಬೆತಿಗಳಿಗೆ ವಿಸ್ತರಿಸಿದೆ. ಸಾಮಾಜಿಕ ಮೌಢ್ಯಗಳು, ಮಹಿಳಾ ಅತ್ಯಾಚಾರ ಮತ್ತು ದೌರ್ಜನ್ಯದ ವಿರುದ್ದ ಜಾಗ್ರತಿಯನ್ನು ಮೂಡಿಸುವಲ್ಲಿ ಈ ತಂಡವು ಯಶಸ್ವಿಯಾಗಿದೆ.

ಹೀಗೆ ದೇಶದ ನಾನಾ ಭಾಗಗಳಲ್ಲಿ ಮಹಿಳೆ/ಹೆಣ್ಣುಮಕ್ಕಳು/ಮಕ್ಕಳ ಪರವಾಗಿ ತಮ್ಮದೇ ಆದಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಲವಾರು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸತ್ತಿದೆ. ಬಹುಶ ರಾಜ್ಯ ಸರಕಾರಗಳು ಇಂತಹ ಉತ್ಕ್ರಷ್ಟವಾದ ಸೇವೆಯನ್ನು ಸಲ್ಲಿಸುತ್ತಿರುವ ಸಂಸ್ಥೆಗಳ ಮೂಲಕ ತನ್ನ ಮಹಿಳಾ ಪರ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಲು ಸಾಧ್ಯವಿದೆ.

ಪ್ರಸ್ತುತ ದಿನಗಳಲ್ಲಿ ಬೆಳೆಯುತ್ತಿರುವ ಸ್ವಸಹಾಯ ಸಂಘಗಳು ಮಹಿಳಾ ಸಂಘಟನೆಗೆ ಒಂದು ಉತ್ತಮ ಉದಾಹರಣೆ. ಇಂದು ಸರಕಾರಗಳು, ಸ್ವಯಂ ಸೇವಾ ಸಂಸ್ಥೆಗಳು, ಬ್ಯಾಂಕ್ಗಳು, ಕೋಆಪರೇ ಸೊಸೆಟಿಗಳು ಸಂಘಗಳನ್ನು ಪ್ರಾಯೋಜಿಸುತ್ತಿವೆ. ಅವರಿಗೆ ಆರ್ಥಿಕ ಸವಲತ್ತುಗಳನ್ನೂ ಒದಗಿಸುತ್ತಿದೆ. ಮಹಿಳಾ ಸಬಲೀಕರಣದತ್ತ ಒಂದು ದಿಟ್ಟ ಹೆಜ್ಜೆಯೇ ಈ ಸ್ವಸಹಾಯ ಸಂಘಗಳು. ಇಂದು ಆರ್ಥಿಕವಾಗಿ ಮಹಿಳೆಯರು ಸಬಲರಾಗಿದ್ದಾರೆ. ತನ್ನ ಕುಟುಂಬದಲ್ಲಿಯೂ ಒಂದು ವಿಶಿಷ್ಟ ಸ್ಥಾನ ಮಾನ ಅವಳಿಗೆ ಇವತ್ತು ಸಿಕ್ಕಿದ್ದರೆ ಅದು ಇಂಥಹ ಸಂಘಗಳಿಂದ.

ಈ ಆರ್ಥಿಕ ಸಬಲೀಕರಣವು ಅರ್ಥ ಪೂರ್ಣವಾಗಬೆಕಾದರೆ ಈ ಕೆಳಗೆ ನೀಡಿದ ಅಂಶಗಳನ್ನು ಮಹಿಳೆಯರು ಪಾಲಿಸಬೆಕಾಗಿದೆ.
೧) ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೆಕು.
೨) ಕುಟುಂಬದ ಆದ್ಯತೆಗಳಿಗನುಗುಣವಾಗಿ ಮೊತ್ತ ವಿನಿಯೋಗ ಮಾಡಬೆಕು. ಕುಟುಂಬದ ಆರ್ಥಿಕ ಬಜೆಟನ್ನು ಸರಳವಾಗಿ ತಯಾರಿಸಿ ಆ ಪ್ರಕಾರ ವಿನಿಯೋಗ ಮಾಡಬೆಕು.
೩) ಆದಾಯ ವೃದ್ಧಿಯಾಗುವ ಚಟುವಟಿಕೆಗಳನ್ನು ಕೆಗೊಳ್ಳುವಲ್ಲಿ ಕುಟುಂಬದ ಸದಸ್ಯರಿಗೆ ಸಹಕಾರ ಒದಗಿಸಬೆಕು.
೪) ಆರೋಗ್ಯ ರಕ್ಷಣೆ, ಜೀವನ ಭದ್ರತೆಗೆ ಬೆಕಾದ ವಿಮೆಗಳನ್ನು ಮಾಡಿಸಬೆಕು.
೫) ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೆಕು. ಹೆಣ್ಣು/ಗಂಡು ಮಕ್ಕಳ ನಡುವೆ ಭೆದವಿರಬಾರದು.
೬) ಶಿಸ್ತು ಬದ್ಧ ಆರ್ಥಿಕ ವ್ಯವಹಾರ ಪಾಲನೆ ಮಾಡಬೆಕು.
೭) ಮನೆಯಲ್ಲಿ ಅನಗತ್ಯ ಉಪಕರಣಗಳನ್ನು ಇಟ್ಟುಕೊಳ್ಳದೆ, ಭವಿಷ್ಯಕ್ಕಾಗಿ ಮೊತ್ತ ಕೂಡಿಡುವುದು ಅವಶ್ಯಕ.
೮) ಕುಟುಂಬದ ಆರೋಗ್ಯಕ್ಕಾಗಿ ಉತ್ತಮ ಪೌಷ್ಟಿಕ ಆಹಾರದ ಬಳಕೆ.
೯) ಟಿ.ವಿ, ಮೊಬೈಲ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಬಗ್ಗೆ, ಅದರಿಂದಾಗುತ್ತಿರುವ ಒಳಿತು ಕೆಡುಕುಗಳ ಬಗ್ಗೆ ತಿಳಿದು ಕೊಂಡಿರಬೆಕು. ಈ ವಿಚಾರದಲ್ಲಿ ಹದಿಹರೆಯದ ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸುವುದು.
೧೦) ಮನೆ, ಪರಿಸರ ಸ್ವಚ್ಚತೆ.

ಸ್ವಸಹಾಯ ಸಂಘಗಳ ವಾರದ ಸಭೆ:
ಇದೊಂದು ಬಹಳ ಪ್ರಮುಖವಾದ ವೇದಿಕೆ, ಸ್ವಸಹಾಯ ಸಂಘಗಳ ವಾರದ ಸಭೆ ಅತ್ಯಂತ ಮಹತ್ತರವಾದದ್ದು. ಇಲ್ಲಿಸದಸ್ಯರು ತಮ್ಮ ಪ್ರತಿಯೊಬ್ಬರ ಕೊಡುಗೆಯನ್ನು ನೀಡಬೆಕು. ಸಂಘಗಳ ಸಭೆ ನಡೆಸುವುದು, ದಾಖಲಾತಿಗಳನ್ನು ಬರೆಯುವುದು, ಮೊತ್ತ ಸಂಗ್ರಹಣೆ ಮಡುವುದು, ಬ್ಯಾಂಕಿಗೆ ಮೊತ್ತ ಜಮೆ ಮಾಡುವುದು, ಸಭೆ ನಿರ್ವಹಣೆ, ನಿರ್ಣಯಗಳನ್ನು ಬರೆಯುವುದು, ಹೀಗೆ ಸಂಘದ ಸಂಪೂರ್ಣ ನಿರ್ವಹಣೆಯನ್ನು ಸದಸ್ಯರು ಸೇರಿ ಮಾಡಬೆಕಾಗುತ್ತದೆ. ಇದರಿಂದಾಗಿ ವ್ಯವಹಾರ ಜ್ಞಾನ ವೃದ್ಧಿಯಾಗುತ್ತದೆ. ಮಾತಿನ ಶೆಲಿ, ಕೌಶಲ್ಯ ಹೆಚ್ಚುತ್ತದೆ. ತಿಳುವಳಿಕೆ ಮಟ್ಟಹೆಚ್ಚಾಗುತ್ತದೆ. ಕ್ರಮೇಣ ವ್ಯವಹಾರಗಳನ್ನು ಶಿಸ್ತು ಬದ್ದವಾಗಿ ಮಾಡುವುದು ಹೇಗೆ ಎಂಬ ವಿಚಾರ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಶಿಸ್ತು ವೆಯಕ್ತಿಕ ಜೀವನದಲ್ಲಿ, ತಮ್ಮ ಕುಟುಂಬದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ.

ಸಂಘಗಳ ವಾರದ ಸಭೆಯೇ ಶಿಸ್ತನ್ನು ಅಳವಡಿಸಿಕೊಳ್ಳಲು ಒಂದು ಸೂಕ್ತವಾದ ವೇದಿಕೆ. ಇಲ್ಲಿ ಲಭ್ಯವಾಗುವ ಮಾಹಿತಿಗಳಿಗೆ ಕೊರತೆ ಇಲ್ಲ. ಸಂಘಗಳಲ್ಲಿ ಆರ್ಥಿಕ ವ್ಯವಹಾರದ ಬಗ್ಗೆ, ಸಂಘಟನೆ, ಆರೋಗ್ಯ, ನೆರ್ಮಲ್ಯ, ಸ್ವಚ್ಚತೆ, ಪೌಷ್ಟಿಕ ಆಹಾರ, ಸ್ವಉದ್ಯೋಗ ಅವಕಾಶಗಳು, ಸಾಮಾಜಿಕ ವಿಚಾರಗಳು, ಪರಿಸರಕ್ಕೆ ಸಂಭಂಧಿಸಿದ ವಿಚಾರಗಳು, ಕೃಷಿ ಮತ್ತು ತಂತ್ರಜ್ಞಾನ. ಮಹಿಳಾ ಸಬಲೀಕರಣ, ಬದಲಿ ಇಂಧನ ವ್ಯವಸ್ಥೆಗಳು ಹೀಗೆ ವೆವಿಧ್ಯಮಯ ಕ್ಷೇತ್ರಗಳಿಗೆ ಸಂಭಂಧಿಸಿದಂತೆ ನಿರಂತರವಾದ ಮಾಹಿತಿ ಪೂರೆಕೆ ಆಗುತ್ತಿರುತ್ತದೆ. ಬಹಳಷ್ಟು ಪರಿವರ್ತನೆಯನ್ನು ತನ್ನಲ್ಲಿ ತಾನು ಮಾಡಿಕೊಳ್ಳಲು ಸಾಧ್ಯವಿದೆ. ಮಹಿಳೆ ಇವತ್ತು ಸಬಲೆಯಾಗುವುದಕ್ಕೆ ಯಾವುದೇ ತೊಡಕಿಲ್ಲ. ಆದರೆ ತನ್ನನ್ನು ತಾನು ತೊಡಗಿಸಿ ಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು, ಅಭಿವೃದ್ದಿಗಳು, ಬೆಳವಣಿಗೆಗಳಿಗೆ ಸರಿಯಾಗಿ ತನ್ನನ್ನು ತಾನು ಹೊಂದಿಸಿಕೊಳ್ಳುವುದರಲ್ಲಿ ಆಕೆ ಜಾಣ್ಮೆಅಡಗಿದೆ. ಸರಕಾರ, ಸಂಘ ಸಂಸ್ಥೆಗಳು, ಕಾಯಿದೆ ಕಾನೂನುಗಳು ಇಂದು ಆಕೆಯ ಬೆ\ನ್ನೆಲುಬಾಗಿ ನಿಂತಿದೆ. ಇದನ್ನು ಅರಿತುಕೊಂಡು ಉತ್ತಮ ಉಜ್ವಲ ಭವಿಷ್ಯವನ್ನು ರೂಪಿಸಿ ಕೊಳ್ಳುವಲ್ಲಿ ಆಕೆಗೆ ಶಕ್ತಿತರಲಿ ಎಂದು ಹಾರೆಸೋಣ.

Article by HRD Director

Leave a Reply

Your email address will not be published. Required fields are marked *