TechnologyUncategorized

ಮೊಬೈಲ್ ಮಾಯೆ

ಕಛೇರಿಯ ಕೆಲಸದ ಒತ್ತಡ ಮತ್ತು ಮನೆಯ ಜವಾಬ್ದಾರಿಯ ನಡುವೆ ನನ್ನ ಸುತ್ತ-ಮುತ್ತ ಏನಾಗುತ್ತಿದೆ, ಎಂಬುದನ್ನು ನೋಡುವುದನ್ನು ಮರೆತ್ತಿದ್ದೆ. ಮೊನ್ನೆ ತಾನೇ ನನ್ನ ಮನೆಯಿಂದ ಮಂಗಳೂರಿಗೆ ಪ್ರಯಾಣಿಸಿದ್ದೆ, ಪ್ರಯಾಣದಲ್ಲಿ ಏನೂ ಅವಸರ ಇಲ್ಲದ ಕಾರಣ ಸ್ಥಳೀಯ ಖಾಸಗಿ ಬಸ್ಸು ಮತ್ತು ಗ್ರಾಮಾಂತರ ಸರಕಾರಿ ಬಸ್ಸಿನಲ್ಲಿ ಆರಾಮವಾಗಿ ಪ್ರಯಾಣಿಸುತ್ತಿದ್ದೆ. ಯಾವುದೇ ಒತ್ತಡವಿಲ್ಲದೆ ಪ್ರಯಾಣದ ಸುಖವನ್ನೂ ಅನು”sವಿಸುತ್ತಿದ್ದೆ. ಆದರೆ ಬಸ್ಸಲ್ಲಿ ಕುಳಿತ್ತಿದ್ದವರನ್ನು ನೋಡಿದಾಗ ಒಂದು ಕ್ಷಣ ಕಸಿವಿಸಿಯಾಯಿತು. ಇದ್ದಂತಹ ಮಂದಿಯಲ್ಲಿ ಹೆಚ್ಚಿನವರು ತಲೆ “ಗಿಸಿ ಕುಳಿತ್ತಿದ್ದರು. ಏನು ಎಂದು ನೋಡಿದರೆ ಕೆಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ಕೊಂಡು ಬಲಗೆ ಹೆಬ್ಬೆರಳನ್ನು ಮೇಲೆ ಕೆಳಗೆ ಮಾಡುತ್ತಿದ್ದರು. ಏನನ್ನೋ ನೋಡುತ್ತಿದ್ದರು, ತಮ್ಮಷ್ಟಕ್ಕೆ ನಗುತ್ತಿದ್ದರು, ನಂತರ ಎರಡೂ ಕೆಗಳ ಹೆಬ್ಬೆರಳಲ್ಲಿ ಒತ್ತುತ್ತಿದ್ದರು. ಒಟ್ಟಾರೆಯಾಗಿ ಮೊಬೈಲ್ ಪ್ರಪಂಚದಲ್ಲಿ ಮುಳುಗಿದ್ದರು. ಹೆಚ್ಚಿನವರೆಲ್ಲಾ ಯುವಕರು-ಯುವತಿಯರು.

ಈ ದೃಶ್ಯ ಕೇವಲ ಬಸ್ಸಿಗೆ ಸೀಮಿತವಾಗಿರಲಿಲ್ಲ. ನಾನು ಮಂಗಳೂರಿನಲ್ಲಿ ಇಳಿದು ನಮ್ಮ ಸಂಭಂಧಿಕರ ಮನೆಗೆ ಕಾರ್ಯಕ್ರಮಕ್ಕೆ ಹೋಗಬೆಕಾಗಿತ್ತು. ಸ್ವಲ್ಪ ದೂರ ನಡೆಯಬೆಕಾಗಿತ್ತು. ನಡೆದುಕೊಂಡು ಹೊಗುತ್ತಿರುವ ಸಂದರ್ಭದಲ್ಲಿ ಎದುರಿನಿಂದ ಬಂದಂತಹ ಯುವಕನ ಕಿವಿಯಲ್ಲಿ ಹೆಡ ಫೋನ್ ಮತ್ತು ಕೆಯಲ್ಲಿ ಮೊಬೈಲ್, ಮೊಬೈಲ್ನ ಮೇಲೆ ದೃಷ್ಠಿ ಈ ದೃಶ್ಯ ಸಾಮಾನ್ಯವಾಗಿತ್ತು. ನಂತರ ಸಂಭಂಧಿಕರ ಮನೆಗೆ ಹೋಗಿ ಕುಶಲೋಪಚಾರ ಎಲ್ಲಾ ಆದ ನಂತರ ಅವರ ಮಗ “ಹಾಯ್ ಆಂಟೀ” ಅಂದ ನಂತರ ಮರೆಯಾದ. ಅಲ್ಲಿ ಬಂದಿರುವವರಲ್ಲಿ, ಹಿರಿಯ ಹೆಂಗಸರು ಅಲ್ಲಲ್ಲಿ ಕೂತು ಮಾತನಾಡುತ್ತಿದ್ದರೆ, ಹಿರಿಯ ಗಂಡಸರು ಲೋಕಾಭಿಮಾನದ ಬಗ್ಗೆ ಮಾತನಾಡುತ್ತಿದ್ದರೆ, ಯುವಕರು-ಯುವತಿಯರು, ಮಕ್ಕಳು, ಮರಿ-ಮಕ್ಕಳು ಎಲ್ಲರೂ ಮೊಬೈಲ್ ಪ್ರಪಂಚದೊಳಗಿದ್ದರು.
ಸ್ಕೂನಲ್ಲಿ ಮೇಷ್ಟ್ರು ವ್ಯಾಯಾಮ ಮಾಡುವಾಗ ‘ಅಟೆಂಷನ್, ಸ್ಟಾಂಡ ಇಟ ಈಸ್’ ಎಂದು ಹೇಳಿದಂತೆ, ಪೂಜೆಯ ಭಟ್ಟರು, ಪೂಜೆಗೆ ಆಯ್ತು, ಆರತಿ ತಕ್ಕೊಳ್ಳಿ, ತೀರ್ಥ ತೆಗೆದುಕೊಳ್ಳಿ ಊಟಕ್ಕೆ ಎಲೆ ಹಾಕಿದೆ, ಬನ್ನಿ ಊಟ ಮಾಡಿ ಎಂದಾಗ ಈ ಮಕ್ಕಳು ಈಚೆ ಬರುತ್ತಿದ್ದರು.

ಇದೇನಿದು ಮಾಯೆ? ಹತ್ತಿರ ಇರುವವರ ಜೊತೆ ಸಂಪರ್ಕ ಕಡಿತಗೊಳಿಸಿ ದೂರ ಇರುವವರ ಜೊತೆ ನಿರಂತರ ಸಂಪರ್ಕ ಬಯಸುವ ಪ್ರವೃತಿ. ಇದರ ಜೊತೆ ಉಚಿತವಾಗಿ ತೊಂದರೆಗಳನ್ನೂ ಆಹ್ವಾನಿಸುವ ಪ್ರವೃತ್ತಿ. ಬೆಕಾದ್ದನ್ನು-ಬೆಡವಾದದನ್ನು ನೋಡುವಂಥಹ ಪ್ರವೃತ್ತಿ.

ಒಂದು ಸಣ್ಣ ಮರದ ಹಲಗೆಯಂಥಹ ವಸ್ತುವು ಇಂದು ಪ್ರಪಂಚದ ಕೋನ-ಕೋನವನ್ನು ತೋರಿಸಬಹುದಾದಂತಹ ಶಕ್ತಿಯನ್ನು ಹೊಂದಿ ಮಕ್ಕಳ, ಯುವ ಜನಾಂಗದ, ಅಷ್ಟೇ ಯಾಕೆ, ಎಲ್ಲರ ಮನಸೂರೆಗೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅಲ್ಲದೇ ಪ್ರಪಂಚದ ಯಾವುದೇ ಕೋನದಲ್ಲಿದ್ದು ಯಾವುದೇ ವ್ಯವಹಾರಗಳನ್ನು ಮಾಡಬಹುದಾದಂತಹ ಮ್ಯಾಜಿಕ್ ಸ್ಟಿಕ್.

ಟಿ.ವಿಯ ಮುಂದೆ ಕೂತರೆ ಕಾಸ್ಟ್ಯೂಮ್ಗಳು, ಸೋಪುಗಳ ಜಾಹೀರಾತು ಬಿಟ್ಟರೆ ಉಳಿದದ್ದು ಹೊಸ-ಹೊಸ ಮೊಬಲ್ ಆಪ್ಗಳದ್ದೇ ಕಾರುಬಾರು. ಯಾವುದನ್ನು ಮಾರಬೆಕು, ಮಾರಿಬಿಡಿ ಎಂದು OLX ಹೇಳಿದರೆ, ಯಾವುದಕ್ಕೆ ಪಾವತಿ ಮಾಡಬೆಕು, ಮಾಡಿಬಿಡಿ ಎಂದು ಪೇ.ಟಿ.ಎಂ ಹೇಳುತ್ತದೆ. ಇವತ್ತು ಶಾಪಿಂಗ್ಗಾಗಿ ಟ್ಯಾಕ್ಸಿ ಹಿಡಿದು ಲೋಡ ಗಟ್ಟಲೆ ಬ್ಯಾಗ್ ಹಿಡಿದುಕೊಂಡು ಬರಬೆಕಾಗಿಲ್ಲ. ಅದರ ಬದಲು ಅಮೇಜ್ಞಾನ್, ಸ್ನಾಪ್ಡಿಲ್, ಜಬೋಂಗ್, ಜಂಗ್ಲಿ, ಶಾಪ್ ಕ್ಲೂಸ್, ಪ್ಲಿಪ್ ಕಾರ್ಟ್ ಇದರಲ್ಲಿ ಖರಿಸಿದ್ರೆ ಮನೆದು ಬಾಗಿಲಿಗೆ ಬಂದು ಬಿಡುತ್ತದೆ. ಅಷ್ಟೇ ಅಲ್ಲ ಯಾರಿಗಾದ್ರೂ ಗಿಫ್ತ್ ಕೊಡಬೆಕೆ, ಖರೀದಿಸಿ, ವಿಳಾಸ ನೀಡಿ ಅದು ಅವರಿಗೆ ತಲುಪುತ್ತದೆ. ಇನ್ನೂ ಉಚಿತವಾಗಿ ಹಾಡುಗಳನ್ನು ಕೇಳಬೆಕೆ ಸಾವನ್ ಆನ್ನು ಬಳಸಿ. ವೀಡಿಯೋ, ಟೆಕಸ್ಟ್ ಮೆಸೇಜ್, ಫೋಟೋ, ಜೋಕ್ಸ್ ಇವುಗಳನ್ನು ಉಚಿತವಾಗಿ ವಾಟ್ಸ್ ಆಪ್, ಹೆಕ್ಗಳ ಮೂಲಕ ರವಾನಿಸಿ, ನಿರಂತರ ಸಂಪರ್ಕವಿರಬೆಕೇ? ಫೇ ಬುಕ್, ವಾಟ್ಸ್ ಅಪ್ ಬಳಸಿ, ಏನಾದರೂ ಕಮೆಂಟ ಮಾಡಬೆಕೇ? ಟ್ವಿಟ್ಟರ್ ಇದೆಯಲ್ಲಾ/ ಇನ್ನೂ ಹೆಚ್ಚೇನಾದರೂ ಬೆಕಿದ್ದರೆ ಸಾಕಷ್ಟು ವೆಬಸೈಟ್ ಇವೆಯಲ್ವಾ!

ನನ್ನ ಮಗಳು ಅಮ್ಮಾ ಕೇಳು ನಾನು ನಿನಗೆ ಜೋಕ್ ಹೇಳ್ತೆನೆ, ಚೆನ್ನಾಗಿದೆ ಓದಿ ಹೇಳ್ತೇನೆ ಎಂದು ಯಾವಾಗಲೂ ನನ್ನ ತಲೆಗೆ ಕೆಲಸ ಕೊಡುತ್ತಾಳೆ. ಒಂದೊಮ್ಮೆ ಆಶ್ಚರ್ಯ ಆಗ್ತದೆ ಕೆಲವೊಂದು ಜೋಕ್ಗಳು, ಕೋಟ್ಸ್ಗಳು, ಪ್ರಶ್ನೆಗಳು ಹೇಗೆ ತಯಾರಾಗುತ್ತದೆ ಎಂದು! ಎಲ್ಲಾ ಕ್ರಿಯಾತ್ಮಕವಾಗಿ ಅಲೋಚಿಸಿ ಮಾಡಿದಂತವುಗಳು. ಇದರಲ್ಲಿ ಅಡಕವಾಗಿರುವ ಕೌಶಲ್ಯ ನಿಜವಾಗಿಯೂ ಶ್ಲಾಘನೀಯ.

ನಿಜವಾಗಿಯೂ ಈ ಸಾಧನದಿಂದ ಎಷ್ಟೊಂದು ವಿಫುಲಾವಕಾಶಗಳು ಇದೆ ಎಂದರೆ ಮನೆಯಲ್ಲಿಯೇ ಕುಳಿತು ಡಾಕ್ಟರ್ಗಳ ಎಪಾಯಿಂಟಮೆಂಟ ತೆಗೆದುಕೊಳ್ಳಬಹುದು. ಟ್ಯಾಕ್ಸಿ ಬುಕ್ ಮಾಡಬಹುದು, ಪ್ರೆಶ್ ತರಕಾರಿ ಖರಿದಿಸಬಹುದು, ಡಿನ್ನರ್ ಆರ್ಡರ್ ಮಾಡಬಹುದು, ಸರಕಾರದ ಸೇವೆಯನ್ನು ಪಡೆಯಬಹುದು. ಸರಕಾರಕ್ಕೆ ಸಲ್ಲಿಸಿದ ಅರ್ಜಿಗಳ ಸ್ಟೇಟ ತಿಳಿಯಬಹುದು, ಅಲರ್ಟ್ ಮೆಸೇಜ್ ಸೇವೆಗಳನ್ನು ನೀಡಬಹುದು, ಬ್ಯಾಂಕ್ ವ್ಯವಹಾರ, ಬಿಲ್ಲುಗಳ ಪಾವತಿ ಹೀಗೆ ಸಮಗ್ರ ಸೇವೆ ನೀಡುವ ಸಾಧನ. ಮೊದಲು ಮಾತಿಗೆಂದು ಉಪಯೋಗಿಸುತ್ತಿದ್ದನ್ನು ಇಂದು ಸರ್ವ ಸೇವೆ ನೀಡುವ ಸಾಧನವಾಗಿ ಪರಿವರ್ತನೆಯಾಗಿದೆ.

ನಮ್ಮ ವೆಯಕ್ತಿಕ ಕೆಲಸಗಳಿಗಾಗಿ ಅಲರಾಂ ಇಡುವುದು, ರಿಮೆಂಡರ್, ಟು-ಡು-ಲಿಸ್ಟ್, ನೋಟ್ಸ್ ಬರೆಯುವುದು, ಬ್ಲಾಗ್ಗಳಿಗೆ ಬರೆಯುವುದು, ಡಾಕ್ಯೂಮೆಂಟರಿ ತಯಾರಿ ಇವೆಲ್ಲವೂ ನಮಗೆ ಸಮಯ ಇದ್ದಾಗಲೆಲ್ಲಾ ಮಾಡಬಹುದು. ಈ ಸಾಧನ ಮನುಷ್ಯನ ಜೀವನದ ನಾಡಿಯಾಗಿದೆ. ಅದು ಕೆಯಲ್ಲಿ, ಬಳಿಯಲ್ಲಿ ಇಲ್ಲದಿದ್ದರೆ ಏನನ್ನೊ ಕಳೆದುಕೊಂಡ ಅನುಭವವಾಗುತ್ತದೆ. ಇಂದು ಈ ಸಾಧನ ಗೆಳತಿ-ಗೆಳೆಯ, ಅಕ್ಕ-ತಂಗಿ, ಅಮ್ಮ-ಅಪ್ಪ, ಗಂಡ-ಹೆಂಡತಿ, ಬಂಧುಗಳು-ಬಾಂಧವರು, ಸಂಭಂಧಿಕರ ಸ್ಥಾನವನ್ನು ಅಕ್ರಮಿಸಿದೆ ಎಂದು ಹೇಳಿದರೂ ಅತಿಶಯೋಕ್ತಿಯಲ್ಲ.

ಇಂದು ಈ ಸಣ್ಣ ವಸ್ತುವಿನಿಂದ ಪ್ರಪಂಚ ಸಣ್ಣದಾಗುತ್ತಿದೆ. ವ್ಯವಹಾರಗಳ ಸ್ವರೂಪ ಬದಲಾಗುತ್ತಿದೆ. ಇವೆಲ್ಲವೂ ಸರಿ, ಆದರೆ ಜನರು ಬದಲಾಗುತ್ತಿದ್ದಾರೆ! ಜನರ ಭಾವನೆಗಳು ಬದಲಾಗುತ್ತಿದೆ? ಜನರ ವ್ಯವಹಾರಗಳೂ ಬದಲಾಗುತ್ತಿದೆ. ಈ ಬದಲಾವಣೆಗೆ ಜನರು ತಯಾರಿದ್ದಾರೆಯೇ? ಇಂಥಹ ಬದಲಾವಣೆಗಳನ್ನು ಅರಗಿಸಿ ಕೊಳ್ಳಲು ನಮ್ಮ ಸಮಾಜಕ್ಕೆ ಸಾಧ್ಯವಿದೇಯೇ? ಧನಾತ್ಮಕವಾದಂತಹ ಬೆಳವಣಿಗೆಗಳು ಖಂಡಿತವಾಗಿಯೂ ಸ್ವಾಗತಾರ್ಹವಾದದ್ದು. ಆದರೆ ಯಾವುದೇ ಅತ್ಯುತ್ತಮ ಸೌಲಭ್ಯಗಳ, ಸಾಧನಗಳ ಧನಾತ್ಮಕ ಹಾಗೂ ಋಣಾತ್ಮಕವಾದ ಪರಿಣಾಮಗಳು ಇರುವುದಂತೂ ಸತ್ಯ.

ಇಂದು ನಮ್ಮ ದೇಶದ ಪ್ರತೀ ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಮೊಬೈಲ್ ಇದೆ. ಅವಶ್ಯಕತೆ ಇದೆಯೋ? ಇಲ್ಲವೋ? ಎಂಬುದನ್ನು ಲೆಕ್ಕಿಸದೆ ಇಂದು ಈ ಸಾಧನವು ಎಲ್ಲರ ಬಳಿಯಲ್ಲೂ ಇದೆ. ಯುವಜನಾಂಗವು ಅತ್ಯಧಿಕ ಸಂಖ್ಯೆಯಲ್ಲಿರುವ ನಮ್ಮ ದೇಶದಲ್ಲಿ ಯುವ ಜನತೆಯು ದಾರಿ ತಪ್ಪುವರೇ? ಯುವ ಜನತೆಯ ಕೌಶಲ್ಯದ ಸದ್ಭಳಕೆಯಾಗುತ್ತಿದೆಯೇ? ಮಾನವೀಯ ಸಂಬಂಧಗಳ ಮೇಲೆ ಬೀರುವ ಪರಿಣಾಮಗಳು? ಸಾಂಸ್ಕೃತಿಕವಾಗಿ ಸಂಪದ್ಬರಿತವಾದ ನಮ್ಮ ದೇಶ ಮುಂದಕ್ಕೆ ಏನಾಗಬಹುದು? ಜನರಲ್ಲಿ ನೆತಿಕ ಅಧ: ಪತನಕ್ಕೆ ಕಾರಣವಾಗುವುದೇ? ಜನರ ಭಾವನೆಗಳು, ನಂಬಿಕೆಗಳ ಮೇಲೆ ಆಗುವ ಪರಿಣಾಮಗಳು ಏನು? ಭವಿಷ್ಯದಲ್ಲಿ ಇನ್ನಷ್ಟು ಬೆಳವಣಿಗೆಗಳು ಆಗುವುದಿದ್ದಲ್ಲಿ ಹೇಗೆ ಇರಬಹುದು? ಸಮಾಜದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳು ಏನು? ಯುವ ಜನತೆಗೆ ಈ ಮಾಧ್ಯಮವನ್ನು ಆರೋಗ್ಯಕರವಾಗಿ ಬಳಸಿಕೊಳ್ಳುವಂತೆ ಪೋಷಕರು ಮಾರ್ಗದರ್ಶನ ನೀಡುವಲ್ಲಿ ಸಫಲರಾಗುವರೇ? ಆ ಮೊಬಿಲೆನಲ್ಲಿ ಆಗುವ ವ್ಯವಹಾರಗಳ ಕಾನೂನು ರಕ್ಷಣೆ ಹೇಗೆ? ಈ ಮೇಲಿನ ವಿಚಾರಗಳು ತಲೆಗೆ ಬರುವಾಗ ಯಾವುದಾದರೂ ಒಂದು ಜೋಕ್ ಕೇಳೋಣ ಅಂತ ಮಗಳ ಬಳಿಗೆ ಹೋದೆ!.

Article by HRD Director.

Leave a Reply

Your email address will not be published. Required fields are marked *