MicrofinanceUncategorized

ಶಿಕ್ಷಣ ಸಾಲ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯಾಗಿದೆ

ಶಿಕ್ಷಣ ಸಾಲ ಯಾರಿಗೆ ಸಿಗುತ್ತದೆ:-ಭಾರತೀಯ ಪ್ರಜೆ ದೇಶದ ಅಥವಾ ವಿದೇಶದ ಯಾವ ಭಾಗದಲ್ಲಿಕಾಲೇಜು ವಿಶ್ವವಿದ್ಯಾಲಯ ವೃತ್ತಿ ಅಥವಾ ತಾಂತ್ರಿಕ ಶಿಕ್ಷಣದ ಟೆಸ್ಟ್ ಮತ್ತುಆಯ್ಕೆ ಪ್ರಕ್ರಿಯೆ ಮುಗಿಸಿದ ದಾಖಲೆಗಳನ್ನು ಸಲ್ಲಿಸಿದವರು ಸಾಲ ಪಡೆಯಲು ಅರ್ಹರು ವಿದೇಶಿ ವಿ.ವಿ ಅಥವಾ ಶಿಕ್ಷಣ ಸಂಸ್ಥೆಗಳು ದಾಖಲಾತಿಯ ಬಗ್ಗೆ ಖಾತ್ರಿ ಪಡಿಸಬೇಕು.

ಬಡ್ಡಿ ಮತ್ತು ಸಾಲದ ಅವಧಿ:-10 ವರ್ಷ ಒಳಗಿನವಧಿಯ 4 ಲಕ್ಷ ರೂ ಸಾಲಕ್ಕೆ 11.75/-ಬಡ್ಡಿದರ 4 ಲಕ್ಷಕ್ಕೂ ಮೇಲ್ಪಟ್ಟು7.5/- ಲಕ್ಷ ರೂ.ಒಳಗಿನ ಮೊತ್ತಕ್ಕೆ12.75/-ಬಡ್ಡಿದರವಿರುತ್ತದೆ.ಈ ಮೋತ್ತಕ್ಕೆ 10 ವರ್ಷಗಳ ಅವಧಿ ನೀಡಲಾಗುತ್ತದೆ.ಇನ್ನೂ 7.5/-ಲಕ್ಷ ರೂಮೇಲ್ಪಟ್ಟ ಸಾಲದ ಮೊತ್ತಕ್ಕೆಶೆ.11.75/-ಬಡ್ಡಿದರ 12 ವರ್ಷಗಳ ಅವಧಿ ಬ್ಯಾಂಕುಗಳು ನಿಗದಿಪಡಿಸಿವೆ.ಬಡ್ಡಿದರ ರಿಸರ್ವ ಬ್ಯಾಂಕಿನ ನಿಯಮದಂತೆ ಬದಲಾವಣೆಯಾಗುತ್ತದೆ.

ಮರುಪಾವತಿ:-ಸಾಲದ ಹಣ (ಇ.ಎಮ್.ಐ) ಮರುಪಾವತಿ ವಿದ್ಯಾಥರ್ಿಯ ಶಿಕ್ಷಣ ಅವಧಿ ಹಾಗೂ ಒಂದು ವರ್ಷ ಮುಗಿದ ನಂತರ ಅಥವಾ ಕೆಲಸ ಸಿಕ್ಕ ಆರು ತಿಂಗಳಲ್ಲಿ (ಯಾವುದು ಮೊದಲು ಅದು ಅನ್ವಯಿಸುತ್ತದೆ). ಒಮ್ಮೊಮ್ಮೆ ವಿದ್ಯಾಥರ್ಿ ಉನ್ನತ ಶಿಕ್ಷಣಕ್ಕಾಗಿ ಮತ್ತೊಮ್ಮೆ ಬ್ಯಾಂಕಿಗೆ ಬೇಡಿಕೆ ಸಲ್ಲಿಸಿ ಸಾಲ ಪಡೆದರೆ ಎರಡನೇ ಬಾರಿಗೆ ತೆಗೆದುಕೊಂಡ ಸಾಲವೂ ಸೇರಿದಂತೆ ಮರುಪಾವತಿ ಅವದಿ 12 ವರ್ಷಗಳಿಗೆ ನಿಗದಿಪಡಿಸಿದೆ. ವಿದ್ಯಾಥರ್ಿಯು ಶಿಕ್ಷಣ ಆರಂಭಿಸಿ ಮುಗಿಯುವ ವರೆಗೆ ಹಾಗೂ ಒಂದು ವರ್ಷದ ರಿಲ್ಯಾಕ್ಸ್ ಅವಧಿಯು ಸೇರಿದಂತೆ, ಈ ಮೊರಟೋರಿಯಂ ಪಿರಿಯಡ್ ನ ಸಂಚಿತ ಬಡ್ಡಿ ಸೇರಿಸಿ 84 ತಿಂಗಳ ಇ.ಎಮ್.ಐ ಮೂಲಕ ಪಡೆಯಲಾಗುವುದು. ಶಿಕ್ಷಣ ಅವಧಿಯಲ್ಲಿ ಮೂಲ ಹಣ (ಪ್ರಿನ್ಸಿಪಲ್) ಹಣವನ್ನು ಸೇರಿಸಿ ಇ.ಎಮ್.ಐ ಮೂಲಕ ತೆಗೆದುಕೊಳ್ಳಲಾಗುವುದು. ವಿದ್ಯಾಭ್ಯಾಸದ ಅವಧಿಯಲ್ಲಿ ಪೋಷಕರು ಬಡ್ಡಿ ಹಣ ಕಟ್ಟುತ್ತಾ ಬಂದಲ್ಲಿ ಸಾಲ ಮರುಪಾವತಿ ಆರಂಭಗೊಳ್ಳುವ ಕಾಲದಲ್ಲಿ ಕೇವಲ ಪ್ರಿನ್ಸಿಪಲ್ ಮೊತ್ತಕ್ಕೆ ಮಾತ್ರ ಇ.ಎಂ.ಐ ಲೆಕ್ಕ ಹಾಕಲಾಗುತ್ತದೆ. ವಿದ್ಯಾಥರ್ಿನಿಯರಿಗೆ ಬಡ್ಡಿ ಹಣದಲ್ಲಿ 0.50% ರಷ್ಟು ಆದಾಯ ತೆರೆಗೆಯಲ್ಲಿ ವಿನಾಯಿತಿ ಇರುತ್ತದೆ. ಶಿಕ್ಷಣ ಸಾಲಕ್ಕೆ ಯಾವುದೇ ಪ್ರೊಸೆಸಿಂಗ್ ಅಥವಾ ಇತರೆ ಯಾವುದೇ ವೆಚ್ಚಗಳು ಇರುವುದಿಲ್ಲ.

ಕೆಪೆಬಿಲಿಟಿ ಸಟರ್ಿಫಿಕೇಟ್: ಒಮ್ಮೊಮ್ಮೆ ವಿದೇಶಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾನಿಲಯಗಳು ವಿದ್ಯಾಥರ್ಿಗಳು ಸಾಲಪಡೆದಿರುವ ಬ್ಯಾಂಕುಗಳಿಂದ ಬ್ಯಾಂಕ್ ಗ್ಯಾರೆಂಟಿಯಂತಹ ಸಾಲ್ವೆನ್ಸಿ ಅಥವಾ ಫೈನಾನ್ಸಿಯಲ್ ಕೆಪೆಬಿಲಿಟಿ ಸಟರ್ಿಫಿಕೇಟ್ ಕೇಳುವ ಸಾಧ್ಯತೆ ಇದೆ. ಕಾರಣ ವಿದೇಶದಲ್ಲಿ ಶಿಕ್ಷಣ ಪಡೆಯುವ ವೇಳೆ ತಗಲುವ ಖಚರ್ು ವೆಚ್ಚಗಳನ್ನು ಭರಿಸುವ ವೆಚ್ಚದ ಜವಾಬ್ದಾರಿಯನ್ನು ಭಾರತದಲ್ಲಿರುವ ಪೋಷಕರು ಅಥವಾ ಬ್ಯಾಂಕುಗಳು ವಹಿಸಿಕೊಳ್ಳುತ್ತದೆ. ಶಿಕ್ಷಣ ಸಾಲ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಗೆ ನೀಡುವುದರಲ್ಲಿ ಬ್ಯಾಂಕುಗಳಿಗೆ ಯಾವುದೇ ನಿರ್ಬಂಧವಿಲ್ಲ. ಒಂದೇ ಕುಟುಂಬ ಮತ್ತೊಬ್ಬ ಸದಸ್ಯ ವಿದ್ಯಾಥರ್ಿ ಶಿಕ್ಷಣ ಸಾಲ ಪಡೆಯಬೇಕಾದರೆ ಮಾಮೂಲಿನಂತೆ ಬ್ಯಾಂಕಿನ ಎಲ್ಲಾ ಅಗತ್ಯಗಳನ್ನು ಪೂರೈಸಬೇಕು. ಆದರೆ ಕೊಲಾಟೆರಲ್ ಸೆಕ್ಯೂರಿಟಿಯಲ್ಲಿ ವಿನಾಯಿತಿ ನೀಡಲಾಗುತ್ತದೆ.

ಶಿಕ್ಷಣ ಅವಧಿಯಲ್ಲಿ ವಿಮೆ: ಶಿಕ್ಷಣ ಸಾಲ ಪಡೆದ ವಿದ್ಯಾಥರ್ಿಗಳಿಗೆ ಬ್ಯಾಂಕುಗಳು ಅವಧಿ ಮುಗಿಯುವ ವರೆಗೆ ಜೀವ ವಿಮೆ ಸೌಲಭ್ಯವನ್ನು ಕಲ್ಪಿಸಿರುತ್ತದೆ. ವಿದ್ಯಾಥರ್ಿ ಒಪ್ಪಿಗೆ ಮೇರೆಗೆ ವಿಮೆ ಮಾಡಿಸಲಾಗುತ್ತದೆ. ಶಿಕ್ಷಣ ಅವಧಿಯಲ್ಲಿ ಅಪಘಾತ ಸಂಭವಿಸಿ ಮರಣ ಹೊಂದಿದ್ದಲ್ಲಿ ವಿಮೆ ಅನುಕೂಲ ಬ್ಯಾಂಕುಗಳು ಪಡೆಯಲಿವೆ. ಈ ವಿಮೆ ಪ್ರೀಮಿಯಂ ಹಣವನ್ನು ಬ್ಯಾಂಕುಗಳು ಇ.ಎಂ.ಐ ಮೊತ್ತದಲ್ಲಿ ಸೇರಿಸಿ ಪಡೆಯುತ್ತವೆ.

ದಾಖಲೆಗಳು:
ಹುಟ್ಟಿದ ದಿನಾಂಕ ಮತ್ತು ವಯಸ್ಸಿನ ದಾಖಲೆಗಳ ಪ್ರತಿಗಳು.
ಕಾಲೇಜು ನೋಂದಣಿ ಪತ್ರ.
ಭತರ್ಿ ಮಾಡಿದ ಸಾಲದ ಅಜರ್ಿ.
ಎರಡು ಪಾಸ್ ಪೋಟರ್್ ಅಳತೆ ಭಾವಚಿತ್ರ.
ಶಿಕ್ಷಣಕ್ಕೆ ತಗಲುವ ವೆಚ್ಚದ ಮಾಹಿತಿ(ಸ್ಟೇಟ್ ಮೆಂಟ್)
ಪ್ಯಾನ್ ಕಾಡರ್್(ವಿದ್ಯಾಥರ್ಿ ಮತ್ತು ಪಾಲಕರು)
ಆಧಾರ್ ಕಾಡರ್್(ವಿದ್ಯಾಥರ್ಿ ಮತ್ತು ಪಾಲಕರು)
ಗುರುತು ಪತ್ರ(ಫೋಟೋ ಇರುವ ಗುರುತಿನ ಪತ್ರ, ವಾಸ ಸ್ಥಳದ ದಾಖಲೆ, ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಇತ್ಯಾದಿ)
ವಿದ್ಯಾಥರ್ಿ, ಸಹಸಾಲಗಾರ ಗ್ಯಾರಂಟರ್ನ ಆರು ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್
ಎರಡು ವರ್ಷದ ಐಟಿರಿಟನರ್್(ಆದಾಯ ತೆರಿಗೆ ಕಟ್ಟುತ್ತಿದ್ದಲ್ಲಿ)
ಆಸ್ತಿ ಮತ್ತು ಸಾಲದ ಚುಟುಕು ಮಾಹಿತಿ.
ಆದಾಯ ದಾಖಲೆ(ಸಂಬಳ ದಾಖಲೆ ಅಥವಾ ಫಾರಂ 16 ಪಾಲಕರ,ಪéೋಕರ, ಸಹಸಾಲಗಾರ)

ಶ್ರೀ.ರಾಘವೇಂದ್ರ ಪ್ರಭು, ಕವರ್ಾಲು

One thought on “ಶಿಕ್ಷಣ ಸಾಲ ವಿದ್ಯಾಥರ್ಿಗಳ ಶೈಕ್ಷಣಿಕ ಬದುಕಿಗೆ ರಹದಾರಿಯಾಗಿದೆ

  1. My dear
    Sir Nanna hesaru THRINATH anta nanige ondu 30000 Hana beku nimage 6months Ge vapas maduteeni sree darmastala MANJUNADA SWAMI DAYAVAAGI KODIRI kai mugiteeni 🙏🙏🙏🙏🙏🙏 nanna life settle hagutte 🙏🙏🙏

Leave a Reply

Your email address will not be published. Required fields are marked *