MicrofinanceUncategorized

ಸ್ವಸಹಾಯ ಸಂಘಗಳ ಆರ್ಥಿಕ ಸೇರ್ಪಡೆ-ಹೊಸ ಅಧ್ಯಾಯವನ್ನು ಬರೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಲೇಖಕರು : ಶ್ರೀಮತಿ ಮಮತಾ ಹರೀಶ್ ರಾವ್

ನಮ್ಮ ದೇಶವು ಗ್ರಾಮಗಳಿಂದ ಕೂಡಿದ ದೇಶ. ಗ್ರಾಮಗಳ ಅಭಿವೃದ್ಧಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯವೆಂದು ಮನಗಂಡ ಭಾರತ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುತ್ತಿದೆ. ಆದರೂ ಕೂಡ ನಿರೀಕ್ಷಿತ ಪ್ರಗತಿ, ಗ್ರಾಮಗಳಲ್ಲಿ ಆಗಲಿಲ್ಲ. ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾದಂತಹ ಬಹಳಷ್ಟು ಗ್ರಾಮಗಳನ್ನು ನಾವು ನೋಡಬಹುದಾಗಿದೆ.

ಗ್ರಾಮಗಳಿಗೆ ಅಭಿವೃದ್ಧಿಗೆ ನಿರಂತರವಾಗಿ ಆರ್ಥಿಕ ಸೌಲಭ್ಯಗಳು ಸಿಕ್ಕಿದಲ್ಲಿ ಅಭಿವೃದ್ಧಿ ಹೊಂದುತ್ತದೆ ಎಂಬ ಆಗಿನ ಘನಭಾರತ ಸರಕಾರದ ಚಿಂತನೆಯಂತೆ ೧೯೬೯ರಲ್ಲಿ ಖಾಸಗೀ ವಲಯದಲ್ಲಿದ್ದಂತಹ ಬ್ಯಾಂಕ್ಗಳನ್ನು ರಾಷ್ಟ್ರೀಕೃತ ಮಾಡಲಾಯಿತು. ನಂತರ ಸರಕಾರದ ನಿರ್ದೇಶನದಂತೆ ಆದ್ಯತೆ ಕ್ಷೇತ್ರಗಳಾದ ಕೃಷಿ, ಸ್ವ ಉದ್ಯೋಗ, ಸಣ್ಣ/ಗುಡಿ ಕೆಗಾರಿಕೆಗಳು, ಸಣ್ಣ ಉದ್ದಿಮೆಗಳು ಇವುಗಳಿಗೆ ಹಣಕಾಸಿನ ನೆರವು ನೀಡುವಲ್ಲಿ ಬ್ಯಾಂಕ್ಗಳು ಮುಂದಾದವು. ಆದರೆ ನಿರೀಕ್ಷಿತ ಮಟ್ಟದಲ್ಲಿ ಬ್ಯಾಂಕ್ಗಳು ಹಳ್ಳಿಗಳನ್ನು ತಲುಪಲು ಸಾಧ್ಯವಾಗಲಿಲ್ಲ, ಕಾರಣ ಹಳ್ಳಿಗಳಲ್ಲಿ ಆರ್ಥಿಕ ಸೌಲಭ್ಯಗಳಿಗೆ ಬೆಡಿಕೆ ಅತ್ಯಧಿಕವಾಗಿತ್ತು. ಅಲ್ಲದೇ ದೊರಕಿದ ಆರ್ಥಿಕ ಸೌಲಭ್ಯಗಳನ್ನು ವಿನಿಯೋಗಿಸುವ ಕೌಶಲ್ಯ/ಸಾಮರ್ಥ್ಯ ಜನರಲ್ಲಿ ಕಡಿಮೆ ಇತ್ತು. ಬ್ಯಾಂಕ್ಗಳು ಹಳ್ಳಿಗಳಲ್ಲಿ ಶಾಖೆಯನ್ನು ತೆರೆಯುವುದು Viable ಅಲ್ಲ ಎನ್ನುವ ದೃಷ್ಟಿಯಿಂದ ಹಳ್ಳಿಗಳಲ್ಲಿ ಬ್ಯಾಂಕ್ ಶಾಖೆಗಳು ತೆರೆಯಲಿಲ್ಲ. ಸುಮಾರು ೯೦ ದಶಕದಲ್ಲಿ ಭಾರತ ಸರಕಾರವು ಗ್ಲೋಬಲೆಸೇಷನ್ ಮತ್ತು ಲಿಬರಲೆಸೇಷನ್ ತತ್ವವನ್ನು ಅನುಸರಿಸಿ ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದಿಟ್ಟಂತಹ ಸಂದರ್ಭದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ಬ್ಯಾಂಕ್ಗಳ ಆಗಮನವಾಗುತ್ತಿದ್ದಂತೆ ಭಾರತೀಯ ವಾಣಿಜ್ಯ ಬ್ಯಾಂಕ್ಗಳು ತಮ್ಮ ಸೇವೆಯಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಿಕೊಳ್ಳಬೆಕಾಯಿತು. ತಂತ್ರಜ್ಞಾವೂ ಬೆಳೆಯಿತು. ಪ್ರಸ್ತುತ ಬ್ಯಾಂಕಿಂಗ್ ವ್ಯವಹಾರವನ್ನು ದೇಶದ ಯಾವುದೇ ಭಾಗದಲ್ಲಿ ಕುಳಿತು ಮಾಡುವ ವ್ಯವಸ್ಥೆಗಳು ಬಂದಿತು.

ಆದರೆ, ಇಂದು ಗ್ರಾಮೀಣ ಪ್ರದೇಶದ ಕುಟುಂಬಗಳು ಈ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳ ಮೂಲಕ ಬೆಳೆದಂತಹ ಬ್ಯಾಂಕಿ೦ಗ್ ವ್ಯವಸ್ಥೆಯನ್ನು ಪಡೆದುಕೊಳ್ಳಲು ಸಾದ್ಯವೇ? ಬ್ಯಾಂಕಿನ ಪದ್ಧತಿಗಳು, ನಿಯಮಗಳು ಇವರಿಗೆ ಅರ್ಥವಾಗುವುದೇ? ತಮ್ಮ ಮನೆಯಲ್ಲಿಯೇ ಕುಳಿತು ಬ್ಯಾಂಕಿಗ್ ವ್ಯವಹಾರ ಇವರು ಮಾಡಬಹುದೇ?

ಆರ್ಥಿಕ ಸಾಕ್ಷರತೆ ಮತ್ತು ಆರ್ಥಿಕ ಸೇರ್ಪಡೆ: ಕೇಂದ್ರದಲ್ಲಿ ಯು.ಪಿ.ಎ ಸರಕಾರ ಇದ್ದಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಗ್ ಸೇವೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಆರ್ಥಿಕ ಸಾಕ್ಷಾರತೆ ಮತ್ತು ಆರ್ಥಿಕ ಸೇರ್ಪಡೆ ಯೋಜನೆಗಳನ್ನು ಜಾರಿಗೆ ತಂದಿತು. ಆರ್ಥಿಕ ಸೇರ್ಪಡೆ ಯೋಜನೆಯ ಪ್ರಕಾರ ಸದಸ್ಯರು ಯಾವುದೇ ಮೊತ್ತವನ್ನು ನೀಡದೆ ಬ್ಯಾಂಕ್ಗಳಲ್ಲಿ ಖಾತೆ ತೆರೆಯುವಂತೆ ಪ್ರೇರಣೆ ನೀಡಿ, ಸರಕಾರದ ಯಾವುದೇ ಸೌಲಭ್ಯಗಳು ಈ ಬ್ಯಾಂಕ್ ಖಾತೆಯ ಮೂಲಕ ಪಾವತಿಯಾಗುವಂತೆ ಮಾಡಲಾಯಿತು. ಇದಕ್ಕೆ ಪೂರಕವಾಗಿ ಜಿಲ್ಲಾ ಮಟ್ಟದಲ್ಲಿ ಆರ್ಥಿಕ ಸಾಕ್ಷಾರತಾ ಕೇಂದ್ರಗಳನ್ನು ಸ್ಥಾಪನೆ ಮಾಡಿ ಅದರ ಮೂಲಕ ಆರ್ಥಿಕ ಸೌಲಭ್ಯಗಳು, ಬ್ಯಾಂಕ್ ಲೋನ್, ಬಂಡವಾಳ ಹೂಡಿಕೆ, ಆದಾಯ ಪ್ರಗತಿ, ಬಡ್ಡಿದರಗಳು, ಯೋಜನಾ ಪತ್ರ ತಯಾರಿ ಹೀಗೆ ಹಲವಾರು ವಿಚಾರಗಳ ಬಗ್ಗೆ ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಪ್ರಸ್ತುತ ಆಡಳಿತದಲ್ಲಿರುವ ಘನಭಾರತ ಸರಕಾರವು ಆರ್ಥಿಕ ಸೇರ್ಪಡೆಯಲ್ಲಿ ಜನ್ ಧನ್ ಯೋಜನೆಯ ಮೂಲಕ ಇನ್ನೂ ಹೆಚ್ಚಿನ ಅವಕಾಶಗಳನ್ನು ಕಲಿಸಿಕೊಟ್ಟಿದೆ. ಅತೀ ಕಡಿಮೆ ೩ ತಿಂಗಳ ಅವಧಿಯಲ್ಲಿ ೧೫ ಕೋಟಿ ಬ್ಯಾಂಕ್ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಈ ಖಾತೆ ತೆರೆದವರಿಗೆ ರೂ.೧ ಲಕ್ಷದ ವಿಮಾ ಸೌಲಭ್ಯ ಮತ್ತು ರೂ.೫೦೦೦/- ಮೊತ್ತ ಓವರ್ ಡ್ರಾಫ್ತ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿತು.

ಆದರೆ ಎಲ್ಲಾ ಯೋಜನೆಗಳಿದ್ದರೂ, ಗ್ರಾಮೀಣ ಜನರು ಬ್ಯಾಂಕಿಂಗ್ ಸೇವೆಗಾಗಿ ಪಟ್ಟಣ ಪ್ರದೇಶಗಳಿಗೆ ಪ್ರಯಾಣಿಸುವುದು ಸಾಧ್ಯವೇ?. ಗ್ರಾಮೀಣ ಜನರ ಮನೆ ಬಾಗಿಲಿಗೆ ಬ್ಯಾಂಕ್ಗಳನ್ನು ಒಯ್ಯುವುದು ಹೇಗೆ? ಎಂದು ವಿಮರ್ಶೆ ಮಾಡಿದಾಗ ಭಾರತೀಯ ವಿತ್ತ ಬ್ಯಾಂಕ್ ನಿರ್ದೇಶನದಂತೆ ಬಿಸಿನೆಸ್ ಕರೆಸ್ಪಾಂಡೆಂಟ (Business Corespondent (BC)) ವ್ಯವಸ್ಥೆಯು ಸೂಕ್ತ ಎಂಬ ಅಭಿಪ್ರಾಯವು ಆರ್ಥಿಕ ವಲಯದಲ್ಲಿ ವ್ಯಕ್ತವಾಯಿತು. ಬಿಸಿನೆ ಕರೆಸ್ಪಾಂಡೆಂಟ ಅಂದರೆ ಒಬ್ಬ ವ್ಯಕ್ತಿ/ಸಂಸ್ಥೆ ಬ್ಯಾಂಕ್ನ ಪ್ರತಿನಿಧಿಯಾಗಿ ಗ್ರಾಮಗಳಲ್ಲಿ ಸೇವೆ ನೀಡುವುದು. ಬ್ಯಾಂಕ್ ಸೇವೆ ಎಂದರೆ ಬ್ಯಾಂಕ್ನ ಪರವಾಗಿ ಮೊತ್ತ ಸಂಗ್ರಹಣೆ ಮತ್ತು ಬಿಡುಗಡೆ. ವಾರದಲ್ಲಿ ನಿಗದಿತ ದಿನಗಳಲ್ಲಿ ಬ್ಯಾಂಕ್ನ ಸೇವಾ ಕೇಂದ್ರವು ಕರ್ತವ್ಯ ನಿರ್ವಹಿಸುವುದು. ಸದಸ್ಯರು ತಮ್ಮ ಆರ್ಥಿಕ ವ್ಯವಹಾರಗಳನ್ನು ಈ ದಿನಗಳಲ್ಲಿ ಮಾಡಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾರತೀಯ ವಿತ್ತ ಬ್ಯಾಂಕ್ (RBI) ಮಾರ್ಗ ಸೂಚಿಯಂತೆ ಬ್ಯಾಂಕ್ಗಳು ಗ್ರಾಮಗಳಲ್ಲಿ ಬಿ.ಸಿಗಳನ್ನು ನೇಮಕಾತಿ ಮಾಡಿಕೊಂಡು ಬ್ಯಾಂಕಿಗ್ ವ್ಯವಸ್ಥೆಯನ್ನು ಜನಸಾಮಾನ್ಯರ ಬಾಗಿಲಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಯ ದೇಶದಲ್ಲೇ ಅತ್ಯಂತ ದೊಡ್ಡ ಮೆಕ್ರೋಫೆನಾ ಸಂಸ್ಥೆ ಎಂದು ಗುರುತಿಸ್ಪಟ್ಟಿದೆ. ಸುಮಾರು ೧೦ ವಾಣಿಜ್ಯ ಬ್ಯಾಂಕ್ಗಳ ಬಿಸಿನೆಸ್ ಕರೆಸ್ಪಾಂಡೆಂಟ ಆಗಿ ಇಂದು ಕರ್ನಾಟಕ ರಾಜ್ಯದ ೨೫ ಜಿಲ್ಲೆಗಳಲ್ಲಿ ಸ್ವಸಹಾಯ ಸಂಘಗಳ ರಚನೆ ಬಲವರ್ಧನೆ ಹಾಗೂ ಆರ್ಥಿಕ ಸೇರ್ಪಡೆ ಸೇವೆಯನ್ನು ವೆಶಿಷ್ಟ್ಯ ಪೂರ್ಣವಾಗಿ ನೀಡುತ್ತಿದೆ. ಸ್ವಸಹಾಯ ಸಂಘಗಳ ರಚನೆ ಮತ್ತು ಬಲವರ್ಧನೆಯಲ್ಲಿ ಇಡೀ ದೇಶದಲ್ಲಿ ಅತ್ಯುತ್ತಮ ಮಾದರಿ ಎಂದೂ ಸಂಸ್ಥೆಯು ಗುರುತಿಸ್ಪಟ್ಟಿದೆ. ಇಂದು ಗ್ರಾಮೀಣ ಭಾಗದ ಜನರನ್ನು ಸಂಘಟಿಸಿ ಅವರಲ್ಲಿ ಸಾಮರ್ಥ್ಯವನ್ನು ಬೆಳೆಸಿ ಸದೃಢರಾಗಿ ಬೆಳೆಯುವಂತೆ ಮಾಡುವಲ್ಲಿ ಸಂಸ್ಥೆಯು ಯಶಸ್ವಿಯಾಗಿದೆ. ಇಂದು ಕೇಂದ್ರ ಸರಕಾರದ ಚಿಂತನೆ ಮನೆಬಾಗಿಲಿಗೆ ಬ್ಯಾಂಕ್ ಎಂಬುದನ್ನು ಈಗಾಗಲೇ ಸಾಧಿಸಿ ತೋರಿಸಿದೆ.
ಕಿರು ಆರ್ಥಿಕ ವ್ಯವಹಾರದ ಕ್ಷೇತ್ರದಲ್ಲಿ ಸ್ವಸಹಾಯ ಸಂಘಗಳು ಮತ್ತು Joint Liability Group ಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. “ನಮಗಾಗಿ ನಾವು” ಎಂಬ ತತ್ವದಡಿಯಲ್ಲಿ ಸದಸ್ಯರು ಸಂಘಟಿತರಾಗಿ ತಮ್ಮ ಅವಶ್ಯಕತೆಗಳಿಗನುಗುಣವಾಗಿ ಆರ್ಥಿಕ ಸೌಲಭ್ಯ ಪಡೆಯುವಂತಹ ವ್ಯವಸ್ಥೆ. ಬಹುಶ” ಬ್ಯಾಂಕ್ಗಳು, ವಿತ್ತ ಸಂಸ್ಥೆಗಳೂ ಕೂಡ ಆದ್ಯತೆ ಕ್ಷೇತ್ರಗಳಿಗೆ ಆರ್ಥಿಕ ಸೌಲಭ್ಯ ಒದಗಿಸಲು ಅತ್ಯಂತ ಸರಳ ಸುಲಭ ವ್ಯವಸ್ಥೆ ಇದಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಆರ್ಥಿಕ ಸೇರ್ಪಡೆ ಯಶಸ್ವಿ ಕಥೆ:
ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯು ಸುಮಾರು ೩೧೦೦೦೦ ಕ್ಕಿಂತಲೂ ಅಧಿಕ ಸ್ವಸಹಾಯ ಸಂಘಗಳಲ್ಲಿ ೩೪ ಲಕ್ಷಕ್ಕಿಂತಲೂ ಅಧಿಕ ಸದಸ್ಯರು ತಮ್ಮ ಕುಟುಂಬದ ಆರ್ಥಿಕ ಸಬಲೀಕರಣಕ್ಕಾಗಿ ಸಾಕಷ್ಟು ಆರ್ಥಿಕ ಸೌಲಭ್ಯಗಳನ್ನು ಬ್ಯಾಂಕ್ಗಳಿಂದ ಪಡೆಯುತ್ತಿದ್ದಾರೆ. ಸ್ಮಾರ್ಟ್ ಕಾರಡ್ಗಳ ಮೂಲಕ ತಮ್ಮ ಉಳಿತಾಯ ಖಾತೆ, ಸಾಲದ ಖಾತೆಯಲ್ಲಿ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಅನುಕೂಲವಾಗುವಂತೆ ಕೆಲವೊಂದು ಪದ್ಧತಿಗಳನ್ನು ಗ್ರಾಮಾಭಿವೃದ್ಧಿ ಯೋಜನೆಯನ್ನು ಅಳವಡಿಸಿಕೊಂಡಿದೆ. ಅವುಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಹಂತಗಳು:
೧. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ, ಸ್ವಸಹಾಯ ಸಂಘಗಳಲ್ಲಿ, ಸದಸ್ಯರಾಗಲು ಇಚ್ಚಿಸುವವರು ತಮ್ಮ K.Y.C ದಾಖಲೆಗಳೊಂದಿಗೆ ಅವರ ವೆಯಕ್ತಿಕ ಮಾಹಿತಿಯನ್ನು ಪಡಕೊಳ್ಳಲಾಗುವುದು.
೨. ಸಂಘಕ್ಕೆ ನಾಮಕರಣವನ್ನು ಮಾಡಲಾಗುವುದು.
೩. ಸಂಘದ ಪ್ರಬಂಧಕ, ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯವರನ್ನು ಆಯ್ಕೆಮಾಡಿ ಅವರ ಕೆ.ವೆ.ಸಿ ದಾಖಲಾತಿಗಳನ್ನು ಪಡಕೊಳ್ಳಲಾಗುವುದು.
೪. ಈ ದಾಖಲೆಗಳ ವಿವರಗಳನ್ನು ಕಂಪ್ಯೂಟರ್ ನಲ್ಲಿ ದಾಖಲಿಸಲಾಗುವುದು.
೫. ಮೂವರು ಸದಸ್ಯರ ಹೆಬ್ಬಟ್ಟಿನ ಅಚ್ಚನ್ನು ಕಂಪ್ಯೂಟರ್ ನಲ್ಲಿ ದಾಖಲು ಮಾಡಿಕೊಳ್ಳಲಾಗುವುದು.
೬. ಏನ್ರೋಲ್ಮೆಂಟ ಮಾಡಿದ ಡಾಟಾವನ್ನು ತಂತ್ರಜ್ಞಾನ ಸೇವೆ ನೀಡುವ ಸಂಸ್ಥೆ (TSP) Technical Service Prividerಯು ಸರ್ವರ್ಗೆ ಕಳುಹಿಸಲಾಗುವುದು.
೭. ಅಕೌಂಟ ಓಪನ್ ಅರ್ಜಿಯನ್ನು K.Y.C ಜೊತೆಗೆ ಬ್ಯಾಂಕ್ಗೆ ಕಳುಹಿಸಲಾಗುವುದು.
೮. ಬ್ಯಾಂಕ್ನಲ್ಲಿ ಅರ್ಜಿ ಮತ್ತು TSP ಯಿಂದ ಬಂದಿರುವ ಡಾಟಾವನ್ನು ಪರಿಶೀಲನೆ ಮಾಡಿ ಖಾತೆಯನ್ನು ತೆರೆಯಲಾಗುತ್ತದೆ.
೯. ಸಂಘಗಳ ಪ್ರತಿನಿಧಿಗಳಿಗೆ ಸ್ಮಾರ್ಟ್ ಕಾರಡ್ಗಳನ್ನು ನೀಡಲಾಗುತ್ತದೆ. ಈ ಕಾರಡ್ ಗಳ ಮೂಲಕ ಸಂಘಗಳು ತಮ್ಮ ಖಾತೆಯಲ್ಲಿ ವ್ಯವಹಾರವನ್ನು ಮಾಡುತ್ತಾರೆ.

ಆರ್ಥಿಕ ಸೌಲಭ್ಯ: ಕೇವಲ ಮೇಲೆ ತಿಳಿಸಿದಂತಹ ಸರಳ ವಿಧಾನದಲ್ಲಿ ಸಂಘಗಳ ಖಾತೆ ತೆರೆಯಬಹುದು. ಅಷ್ಟೇ ಸರಳ ವಿಧಾನದಲ್ಲಿ ಸದಸ್ಯರು ಸಂಘದ ಮೂಲಕ ಆರ್ಥಿಕ ಸೌಲಭ್ಯಗಳನ್ನು ಪಡೆಯುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವ್ಯವಸ್ಥೆಗೊಳಿಸಿದೆ.

ಬ್ಯಾಂಕ್ನ ಜೊತೆ ವಿಶೇಷವಾದಂತಹ ಒಪ್ಪಂದವನ್ನು ಮಾಡಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ಸುಲಭ ವಿಧಾನದಲ್ಲಿ ಸಾಕಷ್ಟು ಮೊತ್ತ ಲಭಿಸುವಂತೆ ಮಾಡಲಾಗಿದೆ. ಅಲ್ಲದೇ ಸಂಘಗಳ ಆರ್ಥಿಕ ವ್ಯವಹಾರವು ಪಾರದರ್ಶಕವಾಗಿ ನಡೆಯುವಂತೆ, ಕುಟುಂಬಕ್ಕೆ ಸಾಲದ ಹೊರೆ ಆಗದಂತೆ ನಿರ್ಧಿಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಬ್ಯಾಂಕ್ ಜೊತೆ ಒಪ್ಪಂದ:
೧. ಸಂಘಗಳಿಗೆ ಕ್ಯಾ ಕ್ರೆಡಿಟ ಆಧಾರದಲ್ಲಿ ಸೌಲಭ್ಯ. ಸದಸ್ಯರು ತಮ್ಮ ಅವಶ್ಯಕತೆಗಳಿಗನುಗುಣವಾಗಿ ಮೊತ್ತ ಪಡಕೊಳ್ಳಬಹುದು. ಹೆಚ್ಚುವರಿ ಇದ್ದಾಗ ಜಮೆ ಮಾಡಬಹುದು.
೨. ಸಂಘ ಪ್ರಾರಂಭವಾದ ಮೂರು ತಿಂಗಳು ಯಾವುದೇ ಆರ್ಥಿಕ ಸೌಲಭ್ಯವಿಲ್ಲ ಸದಸ್ಯರು ಉಳಿತಾಯ ಮಾಡುವರು.
೩. ಸಂಘವು ಮೂರು ತಿಂಗಳು ಪೂರೆಸಿದ ಕೂಡಲೇ ರೂ.೫೦,೦೦೦/- ಆರ್ಥಿಕ ಸೌಲಭ್ಯ ನೀಡಲಾಗುವುದು.
೪. ಸಂಘವು ಆರು ತಿಂಗಳು ಪೂರೆಸಿದ ಕೂಡಲೇ ರೂ. ೧ ಲಕ್ಷ ಸೌಲಭ್ಯ ನೀಡಲಾಗುವುದು
೫. ಸಂಘವು ಒಂದು ವರ್ಷ ಪೂರೆಸಿದ ಕೂಡಲೇ ರೂ.೧.೫ ಲಕ್ಷ ಸೌಲಭ್ಯ ನೀಡಲಾಗುವುದು.
೬. ಸಂಘಕ್ಕೆ ಮಾರುಕಟ್ಟೆದರದಲ್ಲಿರುವ ಬಡ್ಡಿ ಮತ್ತು ಬಿ.ಸಿ ಸಂಸ್ಥೆಗೆ ನೀಡಲಾಗು ವೆಚ್ಚವನ್ನು ವಿಧಿಸಲಾಗುವುದು. ಒಟ್ಟಾರೆಯಾಗಿ ೧೫% ನಿಂದ ೧೬.೫% ವರೆಗೆ ಬಡ್ಡಿದರ ವಿಧಿಸಲಾಯಿತು.
೭. ಒಂದು ವರ್ಷದಿಂದ ಮೂರು ವರ್ಷದವರೆಗೆ ಸಂಘವು ರೂ.೩ ಲಕ್ಷ ಗರಿಷ್ಟ ಮಿತಿಯವರೆಗೆ ಮೊತ್ತ ಉಪಯೋಗಿಸಬಹುದು.

ಸಂಘಗಳಲ್ಲಿ ಆರ್ಥಿಕ ವ್ಯವಹಾರದ ಬಗ್ಗೆ ಯೋಜನೆಯಿಂದ ನೀಡಲಾದ ನಿರ್ದೇಶನಗಳು:
೧. ಸಂಘ ಪ್ರಾರಂಭವಾದ ಮೂರು ತಿಂಗಳು ಉಳಿತಾಯ ಪ್ರಕ್ರಿಯೆ.
೨. ಈ ಮೂರು ತಿಂಗಳಲ್ಲಿ ನಿಗದಿತ ೭ ತರಬೆತಿಗಳಲ್ಲಿ ಸಂಘದ ಪಾಲ್ಗೊಳ್ಳುವಿಕೆ.
೩. ಮೂರು ತಿಂಗಳ ನಂತರ ಸದಸ್ಯರಿಗೆ ಗರಿಷ್ಟ ರೂ.೧೦,೦೦೦/- ದಂತೆ ಆರ್ಥಿಕ ಸೌಲಭ್ಯ.
೪. ಆರುತಿಂಗಳ ನಂತರ ಒಟ್ಟು ರೂ.೩೦,೦೦೦/- ದಂತೆ ಗರಿಷ್ಟ ಸೌಲಭ್ಯ.
೫. ಒಂದು ವರ್ಷ ಪೂರೆಸಿದ ನಂತರ ರೂ.೭೦,೦೦೦ ಗರಿಷ್ಟ ಸಲಭ್ಯ ಮತ್ತು ವಿಶೇಷ ವಾಹನ ಸಾಲ ರೂ. ೧.೪೦ ಲಕ್ಷ ಸೌಲಭ್ಯ.
೬. ಮೂರು ವರ್ಷ ಪೂರೆಸಿದ ನಂತರ ರೂ.೧೦೦,೦೦೦ ಗರಿಷ್ಟ ಸೌಲಭ್ಯ ಮತ್ತು ಎಶ್ರೇಣಿಯ ತಂಡಕ್ಕೆ ಗರಿಷ್ಟ ೧೫೦೦೦೦.
೭. ವಿಶೇಷ ಮನೆ ನಿರ್ಮಾಣ ಸೌಲಭ್ಯ.
೮. ಸಂಘದಲ್ಲಿ ೧೮% ರೆಡ್ಯೂಸಿಂಗ್ “ಲೆ ನಲ್ಲಿ ಬಡ್ಡಿ ಲೆಕ್ಕಾಚಾರ.
೯. ವಾರದ ಮರುಪಾವತಿ ಖಡ್ಡಾಯ.
೧೦. ಒಕ್ಕೂಟದಲ್ಲಿ ಸಂಘದ ತಿಂಗಳ ಗ್ರೇಡಿಂಗ್ ಮಾಡುತ್ತದೆ ಮತ್ತು ವರ್ಷದ ಗ್ರೇಡಿಂಗ್ ಆಂತರಿಕ ಲೆಕ್ಕ ಪರಿಶೋಧಕರು ಮಾಡುವರು ‘ಎ’ ಮತ್ತು ‘ಬಿ’ ಶ್ರೇಣಿಯ ತಂಡಗಳಿಗೆ ಮಾತ್ರ ಆರ್ಥಿಕ ಸೌಲಭ್ಯ.
ಈ ಎಲ್ಲಾ ವ್ಯವಸ್ಥೆಗಳ ಮೂಲಕ ಸ್ವಸಹಾಯ ಸಂಘಗಳ ಸದಸ್ಯರು ತಮಗೆ ಬೆಕಾದಷ್ಟು ತಮ್ಮ ಕುಟುಂಬದ ಆರ್ಥಿಕ ಬಜೆmನ ಪ್ರಕಾರ ಆರ್ಥಿಕ ಸೌಲಭ್ಯಗಳನ್ನು ತಮಗೆ ಬೆಕಾದಾಗೆ ಪಡಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇಂದು ಸಂಘದ ಸದಸ್ಯರು ಬಹಳ ಗೌರವದಿಂದ ತಮ್ಮ ಬ್ಯಾಂಕ್ ಖಾತೆಗಳಲ್ಲಿ ವ್ಯವಹಾರ ಮಾಡುತ್ತಿದ್ದಾರೆ.

ತೀರಾ ಗ್ರಾಮೀಣ ಪ್ರದೇಶಗಳಲ್ಲಿ, ಗುಡ್ಡ-ಕಾಡುಗಳಂತಹ ಭಾಗದಲ್ಲಿ, ವಿದ್ಯುತ್, ದೂರವಾಣಿ ತಲುಪದಂತಹ ಪ್ರದೇಶಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಲ್ಲಿ ಇಲ್ಲದ ಪ್ರದೇಶದಲ್ಲಿ, ಇಂದು ಬ್ಯಾಂಕಿಂಗ್ ಸೇವೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತಲುಪಿಸಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಗ್ರಾಮೀಣ ಭಾಗದ ಜನತೆಗೆ, ಬಡಕುಟುಂಬಗಳಿಗೆ, ಬ್ಯಾಂಕ್ ಸೌಲಭ್ಯ, ವಂಚಿತರಿಗೆ ತಮಗೆ ಬೆಕಾದಷ್ಟು ಆರ್ಥಿಕ ಸವಲತ್ತು ಒದಗಿಸಿ ಕೊಡುವಲ್ಲಿ ಮತ್ತು ಸರಕಾರೀ ಸೌಲಭ್ಯಗಳನ್ನು ಸುಲಲಿತವಾಗಿ ಪಡಕೊಳ್ಳುವಲ್ಲಿ ತನ್ನ ಸಹಕಾರವನ್ನು ನೀಡಿದೆ. ಇಂದು ನಮ್ಮ ದೇಶದಲ್ಲಿಯೇ ಅತ್ಯಂತ ದೊಡ್ಡ ಬಿ.ಸಿ ಸಂಸ್ಥೆಯಾಗಿ ವಿಶೇಷ ಹೆಗ್ಗಳಿಕೆ ಪಾತ್ರವಾಗಿದೆ.

ಬಹುಶಃ ಪ್ರಧಾನ ಮಂತ್ರಿಗಳ ಮಹೋನ್ನತ ಆಶಯವಾದ ಆರ್ಥಿಕ ಸೇರ್ಪಡೆಯು ಬಿ.ಸಿ ಮಾದರಿಯಿಂದ ಮಾತ್ರ ಸಾಧ್ಯವಾಗಬಹುದು. ಪ್ರತಿಯೊಂದು ಕುಟುಂಬಕ್ಕೆ ಬ್ಯಾಂಕ್ ಖಾತೆ, ವಿಮಾ ಸೌಲಭ್ಯ, ಅಪಘಾತ ವಿಮೆ ಭದ್ರತೆ ಸಾಕಷ್ಟು ಆರ್ಥಿಕ ಸೌಲಭ್ಯಗಳು ಒದಗಿಸುವಲ್ಲಿ ಈ ಮಾದರಿಯು ಅನುಕರಣೀಯವಾಗಲಿ ಎಂಬ ಆಶಯದೊಂದಿಗೆ,

20 thoughts on “ಸ್ವಸಹಾಯ ಸಂಘಗಳ ಆರ್ಥಿಕ ಸೇರ್ಪಡೆ-ಹೊಸ ಅಧ್ಯಾಯವನ್ನು ಬರೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

 1. ಸಾರ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ಪಡೆಯುವುದುಹೇಗೆ

 2. [email protected] from Hubli Dharawad.ಮಾನ್ಯರೆ ನಾನು ಬಸವರಾಜ ವೀರಪ್ಪ ಛಬ್ಬಿ ಒಬ್ಬ ಸಾಮಾನ್ಯ ನಾಗರಿಕ ಮತ್ತು ಸಾಮಾಜಿಕ ಕಾರ್ಯಕರ್ತರು ಹಾಗೂ ಒಂದು ಕನ್ನಡ ದಿನ ಪತ್ರಿಕೆಯ ಸಂಸ್ಥಾಪಕ, ಸಂಪಾದಕರು ಎಲ್ಲವೂ ಸರಿಯಾಗಿದೆ ಎನ್ನುವುದು ನಮ್ಮ ಒಂದು ಕಲ್ಪನೆ ಅಷ್ಟೇ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವ ಸಹಾಯ ಸಂಘಕ್ಕೆ ನಮ್ಮದೊಂದು ಸ್ವಾಗತ ಹಾಗೂ ಅಭಿನಂದನೆಗಳು. ತಮ್ಮ ಕಾರ್ಯ ಕ್ಕೆ ಇಡಿ ಭಾರತದಲ್ಲೇ ಹೊಗಳುವುದು ಉಂಟು. ಅದ್ಭುತ ಯಶಸ್ಸು ಸಾವಿರಾರು ಬಡ ಕುಟುಂಬದ ಕಣ್ಣೀರು ವರೆಸಿದ ಹಿರಿಮೆ ತಮ್ಮದು.ಹುಬ್ಬಳ್ಳಿಯಲ್ಲಿ ಅದು ಹನುಮಂತ ನಗರ ವ್ಯಾಪ್ತಿಯಲ್ಲಿ ಬರುವ,ತಮ್ಮ ಸ್ವ ಸಹಾಯ ಸಂಘದಲ್ಲಿ ಅ ವ್ಯವಹಾರ ನಡೆಯುತ್ತಿದ್ದು ಸ್ವಲ್ಪ ಕಡಿವಾಣ ಹಾಕಿ ಒಂದು ಅವೈಜ್ಞಾನಿಕ ಕಟ್ಟಿಗೆ ಉರಿಯುವ Green way stove ಇದರ ಬೆಲೆ 1499 ರೂಪಾಯಿಯ ಮಾತ್ರ ಒತ್ತಾಯ ಪೂರ್ವಕ ಸಂಘದ ಮಹಿಳೆರಿಗೆ 2500 Rs ಗಳಲ್ಲಿ ತಾವು ಕೊಟ್ಟ ಹಣವನ್ನು ಮತ್ತೆ ಈತರಹ ಕಡ್ಡಾಯ ಮಾಡುವುದು ಬಡವರಿಗೆ ಹೊರೆ ಯಾಗ ಬಹುದು. ಮತ್ತು ಇನ್ನೂ ಅನೇಕ ತರಹದ ಇನ್ಶುರೆನ್ಸ್ ಮೊಬೈಲ್ ಅನೇಕ ಕೆಲವೊಬ್ಬರಿ ಅವಶ್ಯಕತೆ ಇಲ್ಲದವರಿಗೆ ಒತ್ತಾಯ ಮಾಡುವುದು ತಪ್ಪು.

  1. ನಮಸ್ಕಾರ ನಟಿ ಮಾಡುವ ಯಂತ್ರ ಬೇಕಾಗಿದೆ ಬಾಡಿಗೆಗೆ
   Tumakuru kunigal huliyurudurga kodavathi 572123 my address
   My contact number 9743625353 9731310067

  2. ವಿರುಪಾಕ್ಷಪ್ಪ ಪಲ್ಲೇದ ಗಣಿಗೇರಾ ಮೋ. 9591066936 says:

   ಇನ್ಸುರೇನ್ಸ ಬಗ್ಗೆ ಯಾವ ರೀತಿ ಅವ್ಯವಹಾರ ನಡಿತ್ತಾ ಇದೆ ಹೇಳಿ ಸರ್ ? ಯಾವ ರೀತಿ ಎಂಬುವುದು ಮಾಹಿತಿ ತಿಳಿಸಿ.

 3. 16.75% ಬಡ್ಡಿದರ ಇತ್ತು. ಆ ಬಳಿಕ ಅದು ಕೊಂಚ ಕಡಿಮೆ ಆಯಿತು. ಯಾವಾಗ ಎಷ್ಟು ಬಡ್ಡಿದರ ಇತ್ತು ಎಂಬ ಪೂರ್ಣ ಮಾಹಿತಿ ಬೇಕಾಗಿದೆ.

 4. ಧರ್ಮ ಸ್ಥಳ ಸಂಘದಲ್ಲಿ ಉಳಿತಾಯ ಹಣವೇ ಸರಿಯಾಗಿ ಹಂಚಿಕೆ ಮಾಡಿಲ್ಲಾ,, ಬಡ್ಡಿ ಬೇಡ ಕಟ್ಟಿದ ಹಣವಾದರು ಸರಿಯಾಗಿ ವಾಪಸ್ ಕೊಟ್ಟಿಲ್ಲಾ,, ನಾವು ತೆಗೆದು ಕೊಂಡ ಹಣಕ್ಕೆ ಹೆಚ್ಚಿನ ಬಡ್ಡಿ ಹಾಕಿ ವಸೂಲಿ ಮಾಡುತ್ತಾರೆ.. ಆದರೆ ಉಳಿತಾಯ ಹಣಕ್ಕೆ ಬಡ್ಡಿ ಇಲ್ಲಾ,, ಹಾಗೂ ನಮ್ಮ ಉಳಿತಾಯ ಹಣವೇ ಸರಿಯಾಗಿ ಕೊಟ್ಟಿಲ್ಲಾ…

  1. ಧರ್ಮಸ್ಥಳ ಸಂಘ ದ ಅಡಿಯಲ್ಲಿ ಸಾಲ online payment ಮಾಡುವ system ಮಾಡಿದರೆ ತುಂಬಾ ಅನುಕೂಲ ಆಗುತ್ತದೆ

   1. Yes bro ನನಗ ಜಾಸ್ತಿ ಮೋಸ ವಾಗುತ್ತಿದೆ ಈ ಸಂಗದಲ್ಲಿ ಅದಕ್ಕೇ ಸಂಘದ Contact number 8ದ್ದರೆ ಕೊಡಿ

 5. ಧರ್ಮಸ್ಥಳ ಸಂಘದಲ್ಲಿ ಸರಿಯಾಗಿ ಉಳಿತಾಯ ಸರಿಯಾಗಿ ನಿರ್ವಹಿಸುತ್ತಿರುವುದಿಲ್ಲ ನಾವು ಅದ್ದನ್ನ ಕೇಳಲು ಹೋದರೆ ಯಾಕೆ ಸರಿಯಾಗಿ ಹಣ್ಣ ಕಟ್ಟಿದರು ವಾರ ವಾರ ವೆತ್ಯಾಸ ಯಾಕೆ ಬರುತ್ತಿದೆ ಏದು ಕೇಳಿದರೆ ಸಿಸ್ಟಮ್ ಸರಿ ಇಲ್ಲಾ ಟ್ಯಾಬ್ ನಲ್ಲಿ ಇತರ ಬಂದಿದ್ದೆ ನಾವು ಏನು ಮಾಡಕ್ ಹಾಗಲ್ಲ ನೀವು ಹಣ್ಣ ಕಟಬೇಕು ಯಂದು ಹೆಳ್ಳುತ್ತಾರೆ
  ಇಲ್ಲವಾದ್ರೆ ನಿಮಗೆ ಲೋನ್ ಕೊಡಿಸುದಿಲ್ಲ ಎಂದು ಹೇಳುತ್ತಾರೆ ಸಂಘದ ಅಧ್ಯಕ್ಷರು ಏನೆ ಕೇಳಿದರು ನಮಗೆ ಸರಿಯಾಗಿ ಹೇಳುವದಿಲ್ಲ

 6. ಧರ್ಮಸ್ಥಳ ಸಂಘದಲ್ಲಿ ಸರಿಯಾಗಿ ಉಳಿತಾಯ ಸರಿಯಾಗಿ ನಿರ್ವಹಿಸುತ್ತಿರುವುದಿಲ್ಲ ನಾವು ಅದ್ದನ್ನ ಕೇಳಲು ಹೋದರೆ ಯಾಕೆ ಸರಿಯಾಗಿ ಹಣ್ಣ ಕಟ್ಟಿದರು ವಾರ ವಾರ ವೆತ್ಯಾಸ ಯಾಕೆ ಬರುತ್ತಿದೆ ಏದು ಕೇಳಿದರೆ ಸಿಸ್ಟಮ್ ಸರಿ ಇಲ್ಲಾ ಟ್ಯಾಬ್ ನಲ್ಲಿ ಇತರ ಬಂದಿದ್ದೆ ನಾವು ಏನು ಮಾಡಕ್ ಹಾಗಲ್ಲ ನೀವು ಹಣ್ಣ ಕಟಬೇಕು ಯಂದು ಹೆಳ್ಳುತ್ತಾರೆ
  ಇಲ್ಲವಾದ್ರೆ ನಿಮಗೆ ಲೋನ್ ಕೊಡಿಸುದಿಲ್ಲ ಎಂದು ಹೇಳುತ್ತಾರೆ ಸಂಘದ ಅಧ್ಯಕ್ಷರು ಏನೆ ಕೇಳಿದರು ನಮಗೆ ಸರಿಯಾಗಿ ಹೇಳುವದಿಲ್ಲ

  1. ಅವರ contact number ಇದ್ದರೆ ಕೊಡಿ ನನಗು ಆಗೆ ಆಗ್ತಾ ide

  2. ವಿರುಪಾಕ್ಷಪ್ಪ ಪಲ್ಲೇದ ಗಣಿಗೇರಾ ಮೋ. 9591066936 says:

   ಇಲ್ಲಿಯ ತನಕ ಎಷ್ಟು ಹಣವನ್ನು ಕಳೆದುಕೊಂಡಿದ್ದಿರಿ ಅಂದಾಜು ಹೇಳಿ ಸರ್ ಮತ್ತು ಅದಕ್ಕೆ ನೀವು ಏನ್ನು ಮಾಡಿದ್ದಿರಿ ?

 7. ವಿರುಪಾಕ್ಷಪ್ಪ ಪಲ್ಲೇದ ಗಣಿಗೇರಾ ಮೋ. 9591066936 says:

  ಧರ್ಮಸ್ಥಳ ಮಂಜುನಾಥ ಗುಂಪುನಲ್ಲಿ ಸಾಲ ತೆಗೆದುಕೊಂಡವರು ಮರಣ ಹೊಂದಿದ್ದಾಗ ಸಂಸ್ಥೆಯು ಯಾವ ರೀತಿಯಲ್ಲಿ / ವಿದದಲ್ಲಿ ಜೀವ ವಿಮೆಯನ್ನು ಮರುಪಾವತಿ ಮಾಡಿಕೊಳ್ಳುತ್ತದೆ ಎಂಬುವುದನ್ನು ಯಾರಾದರು ಹೇಳಿ ಸರ್ ?

 8. ಸಂಘ ಸಂಸ್ಥೆಗಳು ಅಂತ ನಿಮ್ಮ ಸಂಘ ಬಡವರನ್ನು ಕಿತ್ತು ತಿನ್ನುತ್ತಿದೆ..
  ೧೦ ಜನಗಳ ಗುಂಪು ಮಾಡಿ ಅದರಲ್ಲಿ ಒಬ್ಬರು ಕಟ್ಟಿಲ್ಲ ವೆಂದರು ಮಿಕ್ಕಲ್ಲ ಸದಸ್ಯರಿಗೆ ಮಾನಸಿಕ ಒತ್ತಡ ಹೇರುವುದು..
  ಮನೆಯ ಬಳಿ ಪೊಲೀಸ್ ಬರುತ್ತಾರೆ ಅನ್ನುವ ಭಯ ಹುಟ್ಟಿಸುವುದು..
  ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿ ಹಣ ಪೀಕುವುದು..
  ಖಾತೆ ತೆರೆಯಲು ೫೦೦ ರಿಂದ ೧೦೦೦ ವರೆಗೆ ಹಣ ವಸೂಲಿ ಮಾಡುವುದೂ.
  ಅಸಲು ತಿರಿದರು ಬಡ್ಡಿ ಪಾವತಿ ಮಾಡಿಲ್ಲವೆಂದು ಕಿರುಕುಳ ನೀಡುವುದು
  ಮನೆಯ ಬಳಿ ಬಂದು ಅವಹೇಳನ ಮಾಡುವುದೂ
  ಹಳ್ಳಿಯ ಮುಗ್ಧ ಜನರನ್ನು ಹಿಂಸಿಸುವುದು, ಬಲವಂತ ಹಣ ವಸೂಲಿ
  ತಿಳುವಳಿಕೆ ಇಲ್ಲದ ಹಳ್ಳಿಯ ಜನರು ಯಾವುದನ್ನು ಅವಲೋಕಿಸಿದ ಧರ್ಮಸ್ಥಳ ಸಂಘ ದಲ್ಲಿ ಸಾಲ ಮಾಡಿ ಅದನ್ನ ತೀರಿಸಲಾಗದೆ ಊರು ಬಿಟ್ಟು ಹೋಗಿರುವ ಉದಾಹರಣೆ ತುಂಬಾ ಇದೇ..

  ದೇವರ ಹೆಸರಿನಲ್ಲಿ ದುಡ್ಡು ಮಾಡುವ ಒಂದು ಕಲೆ ಇದು. ಬಡವರಿಗೆ ಮೋಸ ಮಾಡಿ ತಿಂದರೆ ನಿಮ್ಮ ಮಂಜುನಾಥ ಶಿಕ್ಷಿಸದೆ ಬಿಡುವನೆ.??

  ನಿಮ್ಮ ಸಂಘ ಬಡವರನ್ನು ಮೇಲೆ ತಂದಿರುವ ಉದಾಹರಣೆ ಕೊಡಿ..

Leave a Reply

Your email address will not be published. Required fields are marked *