Uncategorized

ರೈತರೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳಬೇಡಿ..

ಉಡುಪಿ:- ನಮ್ಮ ರಾಜ್ಯದಲ್ಲಿ ಹೆಚ್ಚಿನ ಕಡೆಗಳಲ್ಲಿ ರೈತರ ಆತ್ಮ ಹತ್ಯೆ ಯ ಕುರಿತು ಸಾಕಷ್ಟು ಪ್ರಕರಣಗಳು ನಡೆಯುತ್ತಿವೆ.ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಗೆ ಆರ್ಥೀಕ ಕಾರಣಗಳಿವೆ ಎಂದು ಹೇಳಲಾಗುತ್ತಿದೆ.ಆದರೆ ವಾಸ್ತವವಾಗಿ ಅವರ ಆತ್ಮಹತ್ಯೆಗೆ ಕೇವಲ ಆರ್ಥಿಕ ಕಾರಣವಲ್ಲ.ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ ವಿರೇಂದ್ರ ಹೆಗ್ಗಡೆಯವರು ಗ್ರಾಮಾಭಿವರಧಿ ಯೋಜನೆಯ ಮೂಲಕ ಅನೇಕ ರೀತಿಯ ಕೃಷಿ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಪ್ರಕಾರ ರೈತರಿಗೆ ಆರ್ಥಿಕತೆಗಿಂತ ಮಾರ್ಗದರ್ಶನದ ತರಬೇತಿಯ ಅವಶ್ಯಕತೆಯಿದೆ. ಮುಖ್ಯವಾಗಿ ರೈತರ ಆಧಾಯಕ್ಕಿಂತ ಖರ್ಚು ಹೆಚ್ಚಾಗಿದೆ.ಇದಕ್ಕೆ ಜೀವನಶೈಲಿ ಅಥವಾ ಕೃಷಿ ಪದ್ದತಿ ಕಾರಣವಾಗಿರಬಹುದು.
ರೈತರನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಅನೇಕ ರೀತಿಯ ಉಪಾಯಗಳಿವೆ.
ಸಮಗ್ರ ಕೃಷಿ: ನಮ್ಮ ದೇಶದ ಜನಸಂಖ್ಯೆ ಸುಮಾರಿ 125 ಕೋಟಿ ಯಾಗಿದೆ.ಇಷ್ಟು ಜನರ ಹಸಿವು ನೀಗಿಸಲುಕೇವಲ ಸಾಂಪ್ರದಾಯಕವಾದ ಕೃಷಿ ಯಿಂದ ಸಾದ್ಯವಿಲ್ಲ.ಬದಲಾಗಿ ಆಧುನಿಕ ಕೃಷಿ ಪದ್ದತಿಯನ್ನು ಅನುಸರಿಸಿ ಸಮಗ್ರ ಬೆಳೆ ಪದ್ದತಿಯನ್ನು ಅನುಸರಿಸಬೇಕಾಗಿದೆ. ಮುಖ್ಯವಾಗಿ ಕೃಷಿಯಲ್ಲಿ ತಲೆದೋರಿರುವ ಕೃಷಿ ಕೂಲಿ ಆಳುಗಳ ಸಮಸ್ಯೆಗಳ ನಿವಾರಣೆಗೆ ಯಂತ್ರೋಪಕರಣಗಳ ಬಳಕೆ ಮಾಡಬೇಕಗಿದೆ ಇದಕ್ಕಾಗಿ ರಾಜ್ಯ ಸರ್ಕಾರ ಗ್ರಾಮಾಭಿವೃಧಿ ಯೋಜನೆಯ ಸಹಯೋಗದೊಂದಿಗೆ ರಾಜ್ಯದ 176 ಕಡೆಗಳಲ್ಲಿ ರೈತರಿಗೆ ನೆರವಾಗಲು ಕಡಿಮೆ ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರದ ಮೂಲಕ ಕೆಲಸ ನಿರ್ವಹಿಸುತ್ತಿದೆ ಇದರ ಪ್ರಯೋಜನವನ್ನು ರೈತರು ಪಡೆಯಬಹುದಾಗಿದೆ.ಮಣ್ಣಿನ ಪರೀಕ್ಷೆ ಮಾಡಿ ಅದರಲ್ಲಿ ಕೊರತೆಯಾಗಿರುವ ವಲಣಾಂಶವನ್ನು ಗೊಬ್ಬರದ ಮೂಲಕ ಹಾಕಬೇಕು ಇದರಿಂದ ಉತ್ತಮ ಕರಷಿ ಬರಲು ಸಾದ್ಯ. ಕೇವಲ ಒಂದು ಬೆಳೆಗ ಜೋತು ಬೇಳದೆ ಸಮಗ್ರವಾದ ಕೃಷಿ ಪದ್ದತಿ ಅಂದರೆ ಕೃಷಿಯೊಂದಿಗೆ ಕರಷಿಗೆ ಪುರಕವಾದ ಸ್ವ ಉದ್ಯೋಗ ಉದಾ: ಕೋಳಿ ,ಕುರಿ ಸಾಕಾಣಿ ಹೈನುಗಾರಿಕೆಯನ್ನು ಮಾಡಿದರೆ ಉತ್ತಮ.
ಪರ್ಯಾಯ ಬೆಳೆ:-
ರೈತರಿಗೆ ವರ್ಷದ ಎಲ್ಲಾ ಕಾಲದಲ್ಲಿಯೂ ಆಧಾಯ ಬರುತ್ತಿಬೇಕು ಎಂದಾದರೆ ಏಕ ಬೆಳೆ ಪದ್ದತಿಯನ್ನು ಕೈಬಿಟ್ಟು ಪರ್ಯಾಯ ಬೆಳೆಗೆ ಹೆಚ್ಚು ಒತ್ತು ನೀಡಬೇಕು.ಕೇವಲ ಕಬ್ಬು ಬೆಳೆದು ಅಧಾಯಕ್ಕಾಗಿ ವರ್ಷವಿಡೀ ಕಾಯುವ ಬದಲು ತರಕಾರಿ ನಾಟಿ,ಅಲ್ಪಾವಧಿ ಬೆಳೆಗಳು,ಬಾಳೆ,ಹಸಿರು ಸೊಪ್ಪುಗಳನ್ನು ಬೆಳೆಯಬಹುದು ಇದರಿಂದ ಭೂಮಿಯ ಫಲವತ್ತತೆ ಕೂಡ ಹೆಚ್ಚಾಗುತ್ತದೆ ಅಲ್ಲದೆ ರೈತರಿಗೆ ಉತ್ತಮ ಆಧಾಯವನ್ನು ತರಬಲ್ಲದು.
ಮಿಶ್ರ ಬೆಳೆ ಬೇಸಾಯ:
ನಮ್ಮ ದೇಶದಲ್ಲಿವರ್ಷಕ್ಕೆ ಒಂದು ಬೇಳೆ ಅಥವಾ ಹೆಚ್ಚಂದರೆ ಎರಡು ಬೆಳೆ ತೆಗೆಯುವುದು ವಾಡಿಕೆ.ಮಿಶ್ರ ಬೇಸಾಯವು ನಮ್ಮವರಿಗೆ ಗೊತ್ತು.ಹನಿ ನೀರಾವರಿ ಪದ್ದತಿಯಲ್ಲಿ ಈ ಬೇಸಾಯ ಮಾಡುದರಿಂದ ಕಡಿಮೆ ವೆಚ್ಚ ಅಧಿಕ ಇಳುವರಿ.ಈ ಪದ್ದತಿಯಲ್ಲಿ 2-3 ರೀತಿಯ ಬೆಳೆಗಳನ್ನು ಒಟ್ಟಿಗೆ ಬೆಳೆಯಲಾಗುತ್ತದೆ.ಉದಾ:ಮಿಶ್ರ ಬೆಳೆಯಾಗಿ ಜೋಳ,ತೊಗರಿ,ಟೊಮೆಟೋ,ಮೆಣಸಿನಕಾಯಿ,ಸೊಪ್ಪು ತರಕಾರಿಗಳುಮತ್ತು ದವಸ ದಾನ್ಯಗಳನ್ನು ಬೆಳೆಯಬಹುದಾಗಿದೆ.ಇಂತಹ ಬೆಳೆ ಬೆಳೆಯುದರಿಂದ ಕಡಿಮೆ ಮಳೆಯಾಗಿ ಬೆಳೆ ಬರದಿದ್ದರೆ ಒಮದು ಬೆಳೆಯಾದರು ರೈತರಿಗೆ ಅದಾಯ ತಂದು ಕೊಡಬಲ್ಲದು. ಅದೇ ರೀತಿ ಭತ್ತ ಬೇಸಾಯದಲ್ಲಿ “ಶ್ರೀ” ಬೆಳೆ ವಿದಾನದಲ್ಲಿ ಭತ್ತ ಬೆಳೆಯುದರಿಂದ ಕಡಿಮೆ ಬೀಜವನ್ನು ಬಳಕೆ ಮಾಡಿ ಹೆಚ್ಚಿನ ಇಳುವರಿ ಗಳಿಸಬಹುದಾಗಿದೆ.ಯೋಜನೆಯ ವತಿಯಿಂದ ಶ್ರೀ” ಪದ್ದತಿಯ ಬೇಸಾಯಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ರೈತರುಉತ್ತಮ ಆಧಾಯ ಪಡೆಯುತ್ತಿದ್ದಾರೆ.ಇತ್ತಿಚೆಗೆ ಕಬ್ಬುನ್ನು ಕುಡ ಶ್ರೀ ಮಾದರಿಯಲ್ಲಿ ಬೆಳೆದು ಯಶಸ್ವಿಯಾಗಿ ಮುಂದುವರೆಯುತ್ತಿದೆ.
ಮಳೆ ನಿರು ಸಂಗ್ರಹ:-
ನಾನಾ ಕಾರಣಗಳಿಗೆ ಕೃಷಿಗೆ ಇಂದು ನೀರಿನ ಕೊgತೆ ಉಂಟಾಗಿದೆ.ಜಮೀನಿನಲ್ಲಿ ರೈತರು ಹಣ್ಣಿನ ಮರಗಳನ್ನು ಬೆಳೆಯುದರಿಂದ ತಮಗೆ ಪೌಷ್ಟೀಕ ಆಹಾರವನ್ನು ಪಡೆಯಬಹುದುಮತ್ತು ಹಸಿರನ್ನು ಪಡೆಯಬಹುದಾಗಿದೆ.ಉತ್ತರ ಕರ್ನಾಟಕದ ಹೆಚ್ಚಿನ ಕಡೆಗಳಲ್ಲಿ ಕಾಡನ್ನು ನಾಶ ಮಾಡಿದ ಪರಿಣಾಮ ಮಳೆ ಕೊರತೆಯಾಗಿ ರೈತರು ಕಷ್ಟ ಪಡೆಬೇಕಾಗಿದೆ.ಅಂತರ್ಜಲ ಸುಧಾರಿಸುವ ನಿಟ್ಟಿನಲ್ಲಿ ಚೆಕ್ ಡ್ಯಾಂ,ನಾಲಾ ಬದು,ಇಂಗುಕೊಳ,ಕೃಷಿ ಹೊಂಡ,ನೀರು ಸಂಗ್ರಹಣಾ ತೋಟ್ಟಿಗಳನ್ನು ನಿರ್ಮಿಸಿಕೊಂಡು ಹಾಗೂ ತಮ್ಮಜಮೀನಿನಲ್ಲಿ ಏರಿಗಳನ್ನು ನಿರ್ಮಾಣ ಮಾಡಿಮಳೆ ನೀರು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಮಾಡಬೇಕು.ಇದರಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದು ರೈತರು ತಮ್ಮ ಇಚ್ಚಾ ಶಕ್ತಿ ಪ್ರದರ್ಶಸಿದರೆಬಂಜರು ಭೂಮಿಯನ್ನು ಫಲವತ್ತಾಗಿ ಮಾಡಬುದಾಗಿದೆ.
ಹಣ ಉಳಿತಾಯ:
ರೈತರು ತಮ್ಮ ಆಧಾಯದಲ್ಲಿ ಸ್ವಲ್ಪ ಪ್ರಮಾಣzಲ್ಲಿಯಾದರೂ ಉಳಿತಾಯ ಮಾಡಬೇಕು ಹಣ ಬಂದಾಗಿ ಅದನ್ನು ಮನಸ್ಸೋ ಇಚ್ಚಾ ಖರ್ಚು ಮಾಡದೆ ಮುಂದಿನ ಪೀಳಿಗೆಗೆ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಅಥವಾ ನಿರಖು ಠೇವಣಿ ಮಾಡಬೇಕು.ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಮೂಲಕ ಸ್ಥಾಪಿತವಾದ ರೈತರ ಪ್ರಗತಿಬಂಧು ಗುಂಪುಗಳ ಮೂಲಕ ಉಳಿತಾಯ ಮನೋಭಾವನೆ ಅಧೇ ರೀತಿ ಅವರಿಗೆ ಕೃಷಿ ತರಬೇತಿಯ ಮೂಲಕ ಕೃಷಿ ಹಣಕಾಸಿನ ವ್ಯವಸ್ಥೆ ಮೂಂತಾದ ಕಾರ್ಯಗಳನ್ನು ಮಾಡಲಾಗುತ್ತಿದೆ.ಅದೇ ರೀತಿ ಬೆಳೆ ವಿಮೆಗೆ ಹೆಚ್ಚಿನ ಆದ್ಯತೆ ನೀಡಬೇಕು ಇದರಿಂದ ರೈತರಿಗೆ ನಷ್ಟವಾಗುವ ಪ್ರಮಾಣದಲ್ಲಿ ಉಳಿತಾಯ ಮಾಡಬಹುದಾಗಿದೆ.ಹೆಚ್ಚಿನ ಭಾಗಳಲ್ಲಿ ಜಾತ್ರೆ ಮುಂತಾದ ಹಬ್ಬ ಹರಿದಿನಗಳಿಒಗೆ ಲೆಕ್ಕಕಿಂತ ಹೆಚ್ಚು ಖರ್ಚು ಮಾಡಲಾಗುತ್ತಿದೆ ಹಬ್ಬ ಆಚರಣೆಗೆ ಸಾಲ ಪಡೆಯುವ ಹಂತಕ್ಕೂ ನಮ್ಮ ರೈತರು ಬಂದಿದ್ದಾರೆ. ಇದು ಸರಿಯಲ್ಲ. ಆ ಹಣವನ್ನು ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡಬಹುದಾಗಿ ಇದರಿಂದ ರೈತನಿಗೆ ಆರ್ಥಿಕ ಪ್ರೇರಣೆ ನಿಡಿದಂತಾಗುತ್ತದೆ.
ಸರ್ಕಾರದ ಪಾತ್ರ:
ಸರ್ಕಾರ ಕೇವಲ ಜನ ಪ್ರೀಯ ಯೋಜನೆಗಳನ್ನು ಜಾರಿಗೆ ತಂದರೆ ಸಾಲದು ಬದಲಾಗಿ ಅದನ್ನುರೈತರಿಗೆ ಸಿಗುವಂತೆ ಮಾಡಬೇಕು.ಮುಖ್ಯವಾಗು ದಳ್ಳಾಳಿಗಳ ಹಾವಳಿ ತಡೆಯಲು ಕಠಿಣ ಕ್ರಮ/ಕಾನೂನು ಜಾರಿಗೆ ತರಬೇಕು.ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಿದ ಬೆಳೆ ಪದ್ದತಿ ಮುಂತಾದುಗಳನ್ನು ಸರ್ಕಾರ ರೈತರಿಗೆ ತಲುಪುವಂತೆ ಮಾಡಬೇಕಾಗಿದೆ.ರೈತರಿಗೆ ಬೆಳೆಗಳ ಬಗ್ಗೆ ತರಬೇತಿ ಶಿಬಿರಗಳನ್ನು ಮಾಡುವುದು ಹೊಸ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿದರೆ ಕೃಷಿಕರು ಉತ್ತಮ ರೀತಿಯಲ್ಲಿ ಜೀವನ ಸಾಗಿಸಬಹುದು.ಸಾವಯವ ಕೃಷಿಯೊಂದಿಗೆ ಮಾದರಿಯಾದ ಕೃಷಿಯನ್ನು ಬೆಳೆಯಳು ರೈತರಿಗೆ ಸಹಾಯ ಧನ ವಿತರಿಸಬೇಕು.ಈ ನಿಟ್ಟಿನಲ್ಲಿ ಸರ್ಕಾರ ಕೆ.ಕಿಸಾನ್ ಮೂಲಕ ರೈರಿಗೆ ಪಾರದರ್ಶಕವಾದ ಸೇವೆ ನಿಡಲು ಮೂಂದಾಗಿರುವುದು ಉತ್ತಮ ವಿಚಾರ ಆದರೆ ಈ ರೀತಿಯ ಯೋಜನೆಗಳನ್ನು ಹಮ್ಮಿಕೊಂಡು ರೈತರ ಬದುಕನ್ನು ಹಸನು ಮಾಡಬೇಕಾಗಿದೆ.
ಈ ಗ್ರಾಮಾಭಿವೃಧಿ ಯೋಜನೆಯ ಕಾರ್ಯವನನು ನೆನಪು ಮಾಡಬೇಕಾಗಿದೆ.
ಕೃಷಿಯೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಕೃಷಿ ಇಲ್ಲದಿದ್ದರೆ ಜೀವನ ಇಲ್ಲಾವಾಗುತ್ತೆ.
ಶ್ರೀ ರಾಘವೇಂದ್ರ ಪ್ರಭು, ಉಪನ್ಯಾಸಕರು ಉಡುಪಿ ತರಬೇತಿ ಸಂಸೆ

Leave a Reply

Your email address will not be published. Required fields are marked *