success storyUncategorized

ಅಪೂರ್ವ ಸಾಧಕ ಯುವ ಕಲಾವಿದ ಮಹೇಶ್ ಮಣರ್ೆ

chockpis art
ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪ ಕಲೆಗಳು ವೈವಿಧ್ಯ ಪೂರ್ಣವಾಗಿ ರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತಾ ಬಂದಿದೆ. ಒಬ್ಬ ಶಿಲ್ಪಿ ತನ್ನ ಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನು ಕೂಡ ಮೂರ್ತಿಯನ್ನಾಗಿ ಮಾಡಬಲ್ಲನು. ಅಲ್ಲದೇ ತನ್ನ ಕ್ರಿಯಾ ಶೀಲತೆಯಿಂದ ಯಾವ ವಸ್ತುವಿನಲ್ಲಿಯೂ ಕೂಡ ಕಲಾದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲರು. ಇಂತಹ ನೂರಾರು ಜನ ಹಿರಿಯ ಕಲಾವಿದರು ನಮ್ಮ ನಾಡಿನಲ್ಲಿದ್ದಾರೆ.

ಈ ಹಿರಿಯ ಕಲಾವಿದರಿ ಸರಿಸಾಟಿ ಎಂಬಂತೆ ಉಡುಪಿಯ, ಉದಯೋನ್ಮುಖ ಯುವ ಕಲಾವಿದ ರಲ್ಲಿ ಮಹೇಶ್ ಮಣರ್ೆ ಒಬ್ಬರು .ಉಡುಪಿಯಿಂದ ಸುಮಾರು 20ಕಿ.ಮೀ ದೂರದಲ್ಲಿರುವ ಮಣರ್ೆ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಮಹೇಶ್ಗೆ ಶಿಲ್ಪ ಕೆತ್ತನೆಯ ಹವ್ಯಾಸ ಹುಟ್ಟಿಕೊಂಡಿತು. ಮಣರ್ೆ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿ ಪುತ್ರರಾಗಿರುವ ಇವರು ಉನ್ನತ ವ್ಯಾಸಂಗ ಮಾಡಲು ಇಷ್ಟ ವಿದ್ದರೂ ಮನೆಯ ಅರ್ಥೀಕ ಪರಿಸ್ಥಿತಿಯಿಂದ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ.ಆದರೆ ತನ್ನ ಇಷ್ಟದ ಹವ್ಯಾಸವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ಆ ವೃತ್ತಿಯಲ್ಲಿರುವ ಕಲಾವಂತಿಕೆಯನ್ನು ನಾಡಿನ ಜನರಿಗೆ ಉಣಬಡಿಸುತ್ತಾರೆ. ಮಹೇಶ್ ಮಣರ್ೆಯಲ್ಲಿರುವ ಕಲಾವಿದ ಶಿಲ್ಪಿ ಉನ್ನತ ರೂಪ ಪಡೆದಿದ್ದು,ಖ್ಯಾತ ಶಿಲ್ಪಿ ಗುಣವಂತೇಶ್ವರ ಭಟ್ ರವರ ಮಾರ್ಗದರ್ಶನದಲ್ಲಿ ಬೆಳೆದ ಅವರು ಶಿಲ್ಪಕಲೆಯಲ್ಲಿ ಪರಿಪಕ್ವತೆಯನ್ನು ಸಾಧಿಸುತ್ತಾ ಹೋದರು. ಸಹೋದರರರಾದ ಸಂತೋಷ್ ಮತ್ತು ಉಮೇಶ್ ರವರ ಪ್ರೋತ್ಸಾಹದೊಂದಿಗೆ ಶಿಲ್ಪ ಕಲಾ ತರಬೇತಿಯನ್ನು ಪೂರ್ಣಗೊಳಿಸಿದರು.ಪ್ರತಿಭಾವಂತ ಕಲಾವಿದ ಗೋಪಾಡ್ಕರ್ ರವರ ಪರಿಚಯವಾದ ನಂತರ ಅವರಲ್ಲಿ ತನ್ನ ಕಲಾಸೇವೆಯನ್ನು ಮುಂದುವರಿಸಿದ ಮಹೇಶ್ರವರು ಈವರೆಗೆ ಸಾವಿರಾರು ಕಾಷ್ಟ ಹಾಗೂ ಶಿಲೆಗಳಿಂದ ಶಿಲ್ಪವನ್ನು ರಚಿಸಿರುತ್ತಾರೆ. ಥಮರ್ೋಫೋಮ್ ನಲ್ಲಿ 10 ಅಡಿ ಎತ್ತರದ ಸುಂದರ ನಟರಾಜನ ವಿಗ್ರಹ, ಏಳು ಅಡಿ ಎತ್ತರದ ನಟರಾಜನ ವಿಗ್ರಹ, ಥಮರ್ೋಕೋಲ್ನಲ್ಲಿ ಮಹಾಗಣಪತಿ ಮುಂತಾದ ಶಿಲ್ಪ ಕಲಾಕೃತಿಯನ್ನು ರಚಿಸಿರುತ್ತಾರೆ.

IMG-20151006-WA0028 IMG-20151006-WA0032

ಅಪೂರ್ವ ವೇದಿಕೆ ನಿಮರ್ಾಣ: ಕೇವಲ ಶಿಲ್ಪ ಕಲೆ ಅಲ್ಲದೇ ಅತ್ಯುತ್ತಮವಾದ ಪಾರಂ ಪಾರಿಕ ವೇದಿಕೆ ನಿಮರ್ಾಣದಲ್ಲಿಯೂ ಮಹೇಶ್ ಮಣರ್ೆಯವರದ್ದು ಎತ್ತಿದ ಕೈ. ತನ್ನ ಅಧ್ಬುತ ಕಲಾಕೃತಿಯಿಂದ ಹಲವಾರು ಸಂದರ ಕಾರ್ಯಕ್ರಮಗಳಲ್ಲಿ ವೇದಿಕೆ ನಿಮರ್ಾಣ ಮಾಡಿದ್ದಾರೆ. ಈ ವೇದಿಕೆಯನ್ನು ನೋಡಿದ ಹಲವಾರು ಜನ ಕಲಾಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Icecream ganapa

ಐಸ್ ಕ್ರೀಂ ಕಡ್ಡಿಯಿಂದ ಅರಳಿದ ಗಣಪ: ಪ್ರತಿ ವರ್ಷ ಗಣೇಶ ಚತುರ್ತಿ ಸಂದರ್ಭ ಸೃಜನಾತ್ಮಕವಾಗಿ ಗಣಪತಿ ಕಲಾಕೃತಿಯನ್ನು ರಚಿಸುತ್ತಾರೆ. ಈ ಬಾರಿ ಐಸ್ ಕ್ರೀಂ ತಿನ್ನಲು ಬಳಸುವ ಕಡ್ಡಿಯನ್ನು ಫೆವಿಕೋಲ್ ಗಂನಿಂದ ಅಂಟಿಸಿ ದಪ್ಪ ಮಾಡಿಕೊಂಡು ಅದರಿಂದ ಗಣಪ ತಿಯ ಮುಖ, ಹೊಟ್ಟೆ ಕೈಕಾಲುಗಳನ್ನು ಕೆತ್ತನೆಯ ಮೂಲಕ ಮೂಡಿಸಿದ್ದಾರೆ. ಕಡ್ಡಿಯನ್ನು ಕ್ರಮವಾಗಿ ಜೋಡಿಸಿ ಪ್ರಭಾವಳಿ, ಗಣಪತಿ ಪೀಠ ರಚಿಸಿದ್ದಾರೆ. ಇದಕ್ಕೆ 3500 ಐಸ್ ಕ್ರೀಂ ಕಡ್ಡಿ ಉಪಯೋಗಿಸಲಾಗಿದೆ. ಗಣಪತಿ ಪ್ರಭಾವಳಿ, ಆಭರಣಗಳ ಅಲಂಕಾರಕ್ಕಾಗಿ ಕೆಂಪು ಮತ್ತು ಕಪ್ಪು ಬಣ್ಣದ 750 ಬೆಂಕಿ ಕಡ್ಡಿ ಬಳಸಿದ್ದು, 24 ಇಂಚು ಎತ್ತರ ಮತ್ತು 17 ಇಂಚು ಅಗಲವಿರುವ ಈ ಕಲಾಕೃತಿ 15 ದಿನಗಳ ಕಠಿಣ ಪರಿಶ್ರಮದಿಂದ ರೂಪುಗೊಂಡಿದೆ ಎಂದು ಅವರು ಹೇಳುತ್ತಾರೆ.

ಈ ಹಿಂದೆ ಬಾಟಲಿಯೊಳಗೆ ಗಣಪತಿ, ತರಕಾರಿಯಲ್ಲಿ ಗಣಪತಿ, ಸೀಮೆಯ ಸುಣ್ಣದಲ್ಲಿ ಗಣಪತಿಯ ಕಲಾಕೃತಿಯನ್ನು ರಚಿಸಿದ್ದಾರೆ. ಈಗಾಗಲೇ ಹತ್ತಾರು ಕಡೆಗಳಲ್ಲಿ ಇವರ ಸಾಧನೆ ಯನ್ನು ಗಮನಿಸಿ ಸನ್ಮಾನ ದೊರಕಿದೆ. ಈ ಕಲಾವಿದನನ್ನು ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದೇ ಆದಲ್ಲಿ ರಾಷ್ಟ್ರ ಮಟ್ಟದ ಕಲಾವಿದನಾಗುವಲ್ಲಿ ಸಂದೇಹವಿಲ್ಲ. ತನ್ನ ಎಲ್ಲಾ ಬಗೆಯ ಕಲಾಪ್ರಕಾರಗಳಲ್ಲಿ ಸಾಧನೆಯನ್ನು ಮಾಡಿ ಹವ್ಯಾಸ ಮತ್ತು ಉದ್ಯೋಗದಲ್ಲಿ ಹೊಸ ಪರಿಕಲ್ಪನೆಯನ್ನು ತಂದ ಮಹೇಶ್ ಮಣರ್ೆ ಅಭಿನಾಂದನಾರ್ಹರು.ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮಣರ್ೆ ಕಾರ್ಯಕ್ಷೇತ್ರದ ವಿಶ್ವಕರ್ಮ ಸ್ವ ಸಹಾಯ ಸಂಘದಲ್ಲಿ ಸದಸ್ಯರಾಗಿರುವ ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭ ಹಾರೈಕೆ.

ರಾಘವೇಂದ್ರ ಪ್ರಭು, ಕವರ್ಾಲು.
ಉಪನ್ಯಾಸಕರು ಉಡುಪಿ ತರಬೇತಿ ಸಂಸ್ಥೆ(ಎಸ್.ಕೆ.ಡಿ.ಅರ್.ಡಿ.ಪಿ)

stage setting

Leave a Reply

Your email address will not be published. Required fields are marked *