Community HealthUncategorized

ಅಪೌಷ್ಠಿಕತೆಯನ್ನು ತಡೆಗಟ್ಟುವುದು

ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು ಮತ್ತು ನಿರೀಕ್ಷೆ ಎನ್ನಬಹುದಾಗಿದೆ. ಮಕ್ಕಳು ಮಾನವ ಕುಲಕ್ಕೆ ದೇವರು ನೀಡಿದ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಅವರ ರಾಷ್ಟ್ರಿಯತೆ, ಧರ್ಮ, ಜಾತಿ, ಜನಾಂಗ ಮತ್ತು ಲಿಂಗ ಯಾವುದೇಯಾಗಿದ್ದರೂ ಅವರು ದೇಶದ ಅಮೂಲ್ಯ ಆಸ್ತಿ. ಭವಿಷ್ಯದಲ್ಲಿ ಸ್ಪಂದಿಸಬಲ್ಲ ವ್ಯಕ್ತಿಯಾಗಿ ಅರಳಲು ಸಾಧ್ಯವಾಗುವಂತೆ ಮಗುವನ್ನು ಅದರ ಎಳೆವಯಸ್ಸಿನಲ್ಲಿ ಸರಿಯಾಗಿ ಬೆಳೆಸಬೇಕಾಗುತ್ತದೆ. ಸರಿಯಾದ ಸಮಯದಲ್ಲಿ ಮಗು ಪೌಪ್ಠಿಕ ಆಹಾರವನ್ನು ವೈದ್ಯಕೀಯ ಪಾಲನೆಯನ್ನು ಮತ್ತು ಸವರ್ಾಂಗೀಣ ಬೆಳವಣಿಗೆಗೆ ಪೂರಕವಾಗುವಂತಹ ಪರಿಸರವನ್ನು ಪಡೆಯಬೇಕಿರುತ್ತದೆ. ಇದರಿಂದಾಗಿ ಅವರು ಒಳ್ಳೆಯ ಧ್ಯೇಯ ಮತ್ತು ದೃಪ್ಠಿಯನ್ನು ಹೊಂದಿರುವ ಮಾನವರಾಗುತ್ತಾರೆ. ಮಕ್ಕಳು ದೈಹಿಕವಾಗಿ ಮತ್ತು ಜ್ಜಾನದಲ್ಲಿ ಶಕ್ತಿವಂತರಾಗಬೇಕು ಅಂತಹ ಮಕ್ಕಳು ಮಾತ್ರ ತಮ್ಮ ದೇಶವನ್ನು ಶ್ರೇಷ್ಠ ಮತ್ತು ಶಕ್ತಿವಂತ ದೇಶವನ್ನಾಗಿಸಬಲ್ಲರು.

ಮಕ್ಕಳು ಸಮಾಜದ ಬಹು ಮುಖ್ಯವಾದ ಮತ್ತು ದುರ್ಬಲವಾದ ಭಾಗವಾಗಿದ್ದು, ಅದಕ್ಕೆ ತುಂಬಾ ಜಾಗರುಕತೆಯ ಪಾಲನೆ ಅಗತ್ಯವಾಗಿದೆ. ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರುವ ಒಂದು ಶಕ್ತಿಯುತ ಅಂಶವಾಗಿದೆ. ಮಕ್ಕಳ ಆರೋಗ್ಯ ಪಾಲನೆ ಪೋಷಣೆ ಮತ್ತು ಶಿಕ್ಷಣದ ಮೇಲೆ ಜಾಣ್ಮೆಯಿಂದ ಹೂಡಲ್ಪಡುವ ಬಂಡವಾಳವು ಒಂದು ದೇಶದ ಸವರ್ಾಂಗಿಣ ಅಭಿವೃದ್ದಿಗೆ ತಳಹದಿಯಾಗಿರುತ್ತದೆ. ಮಕ್ಕಳ ಅಗತ್ಯತೆಗಳನ್ನು ನಿರ್ಲಕ್ಷಿಸಿದರೆ ಮಕ್ಕಳನ್ನು ಕಡೆಗಣಿಸಿದಂತಾಗುವುದು. ಅದು ಸಮಾಜದ ದಾರಿದ್ರ್ಯವೆಂದರೆ ತಪ್ಪಾಗಲಿಕ್ಕಿಲ್ಲ.

ಒಂದು ಆರೋಗ್ಯಕರ ಮಕ್ಕಳ ತಲೆಮಾರು ಆರೋಗ್ಯಕರ ಮತು ಫಲಕಾರಿಯಾದ ಯುವಕರ ತಲೆಮಾರಾಗಿ ಪರಿವತರ್ಿಸುತ್ತದೆ. ಪೋಷಕಾಂಶವು ಒಂದು ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಮತ್ತು ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅಪೌಷ್ಠಿಕತೆಯಿಂದ ವಿಶೇಷವಾಗಿ ಕಡಿಮೆ ಪೋಷಕಾಂಶಗಳಿಂದ ಕೂಸಗಳು ಮತ್ತು ಶಾಲೆಗೆ ಹೋಗುವ ಮುಂಚಿನ ಮಕ್ಕಳು ಬೆಳವಣಿಗೆಯಲ್ಲಿ ಹಿಂದೆ ಬೀಳುತ್ತಾರೆ.

ಭಾರತದಲ್ಲಿ ಬಾಲ್ಯವಾಸ್ಥೆಯ ಅಪೌಷ್ಠಿಕತೆಯು, ಸಾರ್ವಜನಿಕ ಆರೋಗ್ಯ ಮತ್ತು ಅಭಿವೃದ್ಧಿಗೆ ಒಂದು ಮುಖ್ಯ ಸವಾಲಾಗಿದೆ. ಕಡಿಮೆ ಪೋಷಕಾಂಶದಿಂದ ಬೆಳೆದ ಮಕ್ಕಳು ಸಾವು ಮತ್ತು ಅನಾರೋಗ್ಯಕ್ಕೆ ಬಹುಬೇಗ ತುತ್ತಾಗುವ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ಅಪೌಷ್ಠಿಕತೆಯು ಸಾವು ಮತ್ತು ಅನಾರೋಗ್ಯದ ಅಪಾಯವನ್ನು ಹೆಚ್ಚು ಮಾಡಿವುದಲ್ಲದೆ ಪೋಷಕಾಂಶವು ಕಡಿಮೆಯಾದಾಗ ಬೆಳವಣಿಗೆ ಕೂಡಾ ಊನಗೊಳ್ಳತ್ತದೆ. ತುಂಬಾ ತೀವ್ರವಾದ ಅಪೌಷ್ಠಿಕತೆಗೊಳಗಾದ ಮಕ್ಕಳು ಉತ್ತಮ ಪೋಷಕಾಂಶ ಹೊಂದಿದ ಬೆಳೆದ ಮಕ್ಕಳಿಂದ ಬೇಗ ಸಾಯುವ ಅಪಾಯವು ಎಂಟರಿಂದ ಒಂಬತ್ತು ಪಟ್ಟು ಜಾಸ್ತಿಯಾಗಿರುವುದು.

ಭಾರತದಲ್ಲಿ ಮಕ್ಕಳಲ್ಲಿರುವ ತೀವ್ರವಾದ ಅಪೌಷ್ಠಿಕತೆಯು ಒಟ್ಟಾರೆ ಆಥರ್ಿಕಾಭಿವೃದ್ದಿ ಹೊರತಾಗಿಯೂ ಹೆಚ್ಚಾಗಿಯೇ ಉಳಿದಿದೆ. ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ 3-5 ವರ್ಷಗಳಿಗೂ ಕಡಿಮೆ ವಯಸ್ಸಿನ ಮಕ್ಕಳ ಪೈಕಿ ಶೇಕಡಾ 6.4% ರಷ್ಟು ಮಕ್ಕಳ ತೂಕ ಎತ್ತರ ಕಳವಳಕಾರಿಯದ ರೀತಿಯಲ್ಲಿ ಕಡಿಮೆಯಾಗಿದೆಂದು ತಳಿಸಿದೆ.

ಅಪೌಷ್ಠಿಕತೆಯು ನಮ್ಮ ರಾಜ್ಯದಲ್ಲಿ ಹೈದರಾಬಾದ ಕನರ್ಾಟಕದ ಕೆಲವು ಜಿಲ್ಲೆಯಲ್ಲಿ ಜಾಸ್ತಿಯಿದೆ. ಅವಕಾಶ ವಂಚಿತರಲ್ಲಿ ತುಂಬಾ ಹೆಚ್ಚಾಗಿದ್ದು, ಅಪೌಷ್ಠಿಕತೆಯ ಪರಿಣಾಮವು ತುಂಬಾ ತೀವ್ರವಾದುದು ದೀರ್ಘಕಾಲ ಇರುವಂತಹುದೂ ಆಗಿದೆ. ಉತ್ತಮ ಪೋಷಕಾಂಶ ಹೊಂದಿ ಬೆಳೆದ ಮಕ್ಕಳಿಗೆ ಹೋಲಿಸಿದರೆ, ಅಪೌಷ್ಠಿಕತೆಯಿಂದ ಮಕ್ಕಳು ದೀರ್ಘ ಕಾಲದ ಮತ್ತು ತೀವ್ರತರದ ಅನಾರೋಗ್ಯ ಮತ್ತು ಸಾವಿಗೀಡಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಅಪೌಷ್ಠಿಕತೆಯು ಅದಕ್ಕೆ ಗುರಿಯಾದವರ ಮೇಲೆ ಋಣಾತ್ಮಕ ಪರಿಣಾಮ ಬೀರುವುದರ ಜೊತೆಗೆ ಅವರ ಮಕ್ಕಳ ಮೇಲೂ ಪರಿಣಾಮ ಉಂಟುಮಾಡುತ್ತದೆ.

ಹಲವು ಕಾರಣಗಳು ಒಂದಕ್ಕೊಂದು ತಳಕು ಹಾಕಿಕೊಂಡಿದ್ದು ಶ್ರೇಣೀಯಲ್ಲಿ ಪರಸ್ಪರ ಸಂಬಂಧವನ್ನು ಹೊಂದಿದವುಗಳಾಗಿವೆ.

ಅಪೌಷ್ಠಿಕತೆಗೆ ತುಂಬಾ ಹತ್ತಿರದ ಕಾರಣವೆನೆಂದರೆ,

  • ಕಡಿಮೆ ಪೋಷಕಾಂಶದ ಆಹಾರ
  • ಅನಾರೋಗ್ಯ

ಒಂದು ಕುಟುಂಬಕ್ಕೆ ದೊರೆಯುವ ಆಹಾರ ಮತ್ತು ಹೆರಿಗೆ ಸಮಯದಲ್ಲಿನ ಪಾಲನಾ ಪದ್ದತಿಗಳು ಒಳಗೊಂಡಂತೆ ಹಲವು ಸಂಗತಿಗಳಿಂದಾಗುತ್ತದೆ. ಅಂತಿಮವಾಗಿ, ಈ ಹಿಂದಿರುವ ಸಂಗತಿಗಳು ಮಕ್ಕಳನ್ನು ಪುಷ್ಟಿಕರ ಆಹಾರ ನೀಡಿ ಬೆಳೆಸಲು ಶ್ರಮಪಡುತ್ತಿರುವ ಬಡ ಕುಟುಂಬಗಳ ಮೇಲೆ ಸಾಮಾಜಿಕ ಆಥರ್ಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಬೀರುವ ಪರಿಣಾಮದಿಂದ ಪ್ರಭಾವಿತವಾಗಿರುತ್ತದೆ. ಅಪೌಷ್ಠಿಕತೆಯು ಈ ವಿವಿಧ ಕಾರಣಗಳ ನಡುವಣ ಸಂಬಂಧವನ್ನು ಮತ್ತು ಪ್ರತಿಯೊಂದು ಕಾರಣವೂ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಹಾಗೂ ಅಪೌಷ್ಠಿಕತೆ ಮತ್ತು ಅದರ ಪರಿಣಾಮಗಳನ್ನು ರೂಪಿಸಲು ಅತ್ಯಗತ್ಯವಾಗಿರುತ್ತದೆ.

ಭಾರತದ ಸಂವಿಧಾನದ ಅನುಚ್ಛೇದನದ ಪ್ರಕಾರ ಮಕ್ಕಳ ಸ್ವಾತಂತ್ರ್ಯ ಮತ್ತು ಗೌರವದ ವಾತಾವರಣದಲ್ಲಿ ಆರೋಗ್ಯಕರ ರೀತಿಯಲ್ಲಿ ಅಭಿವೃದ್ದಿ ಹೊಂದಲು ಅವಕಾಶಗಳು ಮತ್ತು ಸಕಲ ಸೌಕರ್ಯಗಳನ್ನು ಒದಗಿಸಬೇಕೆಂದು ಹೇಳುತ್ತದೆ. ಬಾಲ್ಯ ಮತ್ತು ಯೌವನವು ಶೋಷಣೆಯ ವಿರುದ್ಧ ಮತ್ತು ನೈತಿಕ ಮತ್ತು ವಾಸ್ತವ ಪರಿತ್ಯಾಗದ ವಿರುದ್ಧ ರಕ್ಷಿಸಲ್ಪಡುತ್ತಾರೆಂದು ಹೇಳುತ್ತದೆ.

ಸೂರು, ಬಟ್ಟೆ, ಪೋಷಕಾಂಶಗಳುಳ್ಳ ಆಹಾರ ಶುದ್ಧ ಕುಡಿಯುವ ನೀರು ಮತ್ತು ಅಗತ್ಯವಾದಾಗ ವೈದ್ಯಕೀಯ ಚಿಕಿತ್ಸೆ ಇವನ್ನು ಒದಗಿಸುವಲ್ಲಿ ಕೇಂದ್ರ ರಾಜ್ಯ ಸಕರ್ಾರಗಳು ವಿಫಲವಾಗಬಾರದು ಮತ್ತು ಅವು ಈ ಬಗ್ಗೆ ಅಲಕ್ಷ್ಯ ತೋರುವಂತಿಲ್ಲ. ಮಕ್ಕಳ ಸವರ್ಾಂಗಿಣ ಬೆಳವಣಿಗೆಗೆ ಉತ್ತಮವಾದ ಹಿತಕರವಾದ ಪರಿಸರವನ್ನು ನಿಮರ್ಾಣ ಮಾಡಬೇಕಾದುದು ಸಂವಿಧಾನ ಸಕರ್ಾರಕ್ಕೆ ಹೊರಿಸಿದ ಕರ್ತವ್ಯವಾಗಿದೆ. ಮಕ್ಕಳನ್ನು ಪಾಲನೆ ಮಾಡಬೇಕು, ಪ್ರೀತಿಸಬೇಕು ಮತ್ತು ಮೂಲ ಅಗತ್ಯಗಳನ್ನು ಒದಗಿಸಿ ರಕ್ಷಿಸಬೇಕು. ಪೋಷಕಾಂಶವು ತುಂಬಾ ಮುಖ್ಯವಾದ ಅಂಶವಾಗಿದ್ದು, ಮಗುವಿನ ದೇಹ ಮತ್ತು ಮನಸ್ಸಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಅತಿ ಹೆಚ್ಚಿನ ಪೋಷಕಾಂಶವು ತುಂಬಾ ಮುಖ್ಯವಾದ ಅಂಶವಾಗಿದ್ದು ಮಗುವಿನ ದೇಹ ಮತ್ತು ಮನಸ್ಸಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ, ಅತಿ ಹೆಚ್ಚಿನ ಪೋಷಕಾಂಶವಿರುವ ಸಸಾರಜನಕ ಜೀವಸತ್ವಗಳು ಶರ್ಕರಪಿಷ್ಟಗಳು, ಮೈಕ್ರೋನ್ಯೂಟ್ರಿಯೆಂಟ್ಗ್ಳು ಕಬ್ಬಿಣಾಂಶ ಹಾಗೂ ಇತರ ಮೂಲವಸ್ತುಗಳು. ಪೋಷಕಾಂಶ ಆಹಾರದ ಅವಿಭಾಜ್ಯ ಅಂಗವಾಗಿದ್ದು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿರುತ್ತದೆ. ಮೇಲೆ ಹೇಳಿದ ಅಂಶಗಳನ್ನು ಒಳಗೊಂಡ ಆಹಾರವು ಸಂಪೂರ್ಣ ಆಹಾರವಾಗಿತ್ತದೆ. ಮೇಲ್ಕಂಡ ಆಹಾರಾಂಶಗಳ ಪೈಕಿ ಒಂದರ ಕೊರತೆ ಉಂಟಾದರೂ ಸಹ ಅದು ಮಗುವಿನ ಸವರ್ಾಂಗೀಣ ಬೆಳವಣಿಯನ್ನು ಕುಂಠಿತಗೊಳಿಸತ್ತದೆ. ಸರಿಯದ ಪೋಷಕಾಂಶವನ್ನು ನಿರಾಕರಿಸಿದಾಗ ಮಗು ವಾಸ್ತವವಾಗಿ ಅಂಗವಿಕಲವಾದಂತೆಯೇ ಸರಿ ಎಂದರೆ ತಪ್ಪಾಗಿರಲಿಕ್ಕಿಲ್ಲ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೂಡಾ ಮಹಿಳೆ/ ಮಕ್ಕಳ ಅಪೌಷ್ಠಿಕತೆಯನ್ನು ತಡೆಗಟ್ಟಲು ಕಾರ್ಯಪ್ರವೃತ್ತವಾಗಿದೆ. ರಾಯಚೂರ ಜಿಲ್ಲೆಯ ದೇವದುರ್ಗ, ಮಾನ್ವಿ. ರಾಯಚೂರ ಲಿಂಗಸೂರ, ಮತ್ತು ರಾಯಚೂರ ತಾಲೂಕಿನಲ್ಲಿ 50 ಅಪೌಷ್ಠಿಕ ಮಕ್ಕಳನ್ನು ಗುರುತಿಸಿ ಪ್ರಾಯೋಗಿಕವಾಗಿ ಸಿರಿ ಸಂಸ್ಥೆಯ ಪುಷ್ಠಿಯನ್ನು ತಿಂಗಳಿಗೆ 02 ಪಾಕಿಟಿನಂತೆ ಸತತವಾಗಿ 06 ತಿಂಗಳು ಉಚಿತವಾಗಿ ನೀಡುವುದರ ಜೊತೆಗೆ ನಿರಂತರ ಮನೆ ಭೇಟಿ ಮಾಡಿ ಬದಲಾವಣೆಗೆ ಪ್ರಯತ್ನಿಸುತ್ತಿದೆ.

ಪುಷ್ಠಿಯಲ್ಲಿ ಒಳಗೊಂಡಿವರ ವಸ್ತುಗಳು:

ಏಕದಳ ಧಾನ್ಯಗಳಾದ ಹೆಸರು ಕಾಳು, ರಾಗಿ, ಅಕ್ಕಿ, ಹಾಗೂ ಸೋಯಾವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ತಯಾರಿಸಿದ ಒಂದು ಪುಡಿಯೇ ಪುಷ್ಠಿಯಾಗಿದೆ.

ಹೆಸರುಕಾಳು : ಜೀರ್ಣ ಕ್ರಿಯೆಗೆ ಉತ್ತಮವಾಗಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ ಅಂಶವನ್ನು ಹೆಚ್ಚಿಸಲು ಸಹಕಾರಿಯಾಗಿರುವುದು.

ಗೋಧಿ : ಹೆಚ್ಚಾಗಿ ಕಬ್ಬಿನಾಂಶ ಮತ್ತು ಕ್ಯಾಲ್ಸಿಯಮ್ ಅಂಶಗಳಿದ್ದು, ರಕ್ತದಲ್ಲಿ ಹಿಮೋಗ್ಲೋಬಿನ ಅಂಶ ಹೆಚ್ಚಿಸಲು ಮತ್ತು ಮೂಳೆ ಮತ್ತು ಹಲ್ಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

ಅಕ್ಕಿ : ಹೆಚ್ಚಿನಾಂಶ ಕಬ್ಬಿನಾಂಶವಿರುವುದರಿಂದ ದೇಹಕ್ಕೆ ರಕ್ತ ಉತ್ಪತ್ತಿ ಮಾಡಲು ಸಹಾಯಕಾರಿಯಾಗಿದೆ.

ಸೋಯಾ : ಸೋಯಾದಲ್ಲಿ ಕೊಬ್ಬಿನಾಂಶ ಒಳಗೊಂಡಿದ್ದು, ಉತ್ತಮ ಆರೋಗ್ಯವನ್ನು ಕಾಪಾಡಲು ಸಹಕರಿಸುತ್ತದೆ.

ಪ್ರಯೋಜನ :

  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಮಹಿಳೆ / ಮಕ್ಕಳಿಗೆ ವಿಟಮಿನ್ ಮತ್ತು ಕಬ್ಬನಾಂಶ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸಿ ಆರೋಗ್ಯವಾಗಿರುವಂತೆ ಮಾಡುವುದು.

ಮಹಿಳೆ / ಮಕ್ಕಳ ಅಪೌಷ್ಠಿಕತೆಯನ್ನು ತಡೆಗಟ್ಟಲು ಮಹಿಳೆಯರ ಜೀವನ ಶೈಲಿ ಸುತ್ತ ಮುತ್ತ ಪರಿಸರ ಅವರ ಆಚಾರ ವಿಚಾರ ಆಹಾರ ಸೇವನೆ ಸಂಸ್ಕ್ರತಿ ಕುಟುಂಬ / ಮಹಿಳೆ ಮಕ್ಕಳ ಪ್ರಧಾನ್ಯತೆ ತರಕಾರಿ ಆಹಾರ ಸೇವನೆಗೆ ಬೇಕಾದ ಆಥರ್ಿಕ ಶಕ್ತಿ ಮುಖ್ಯವಾಗಿರುವುದು.

ಈ ಕೆಳಗೆ ಸೂಚಿಸಿದ ಕ್ರಮಗಳಿಂದ ಅಪೌಷ್ಠಿಕತೆಯನ್ನು ತಡೆಗಟ್ಟಬಹುದು.

  • ಕೌಟುಂಬಿಕ ಸಮಾಲೋಚನೆ
  • ಅರಿವು (ಕಾರ್ಯಕ್ರಮಗಳ ಮೂಲಕ)
  • ಮಕ್ಕಳ ಪರೀಕ್ಷೆ
  • ಅರೋಗ್ಯ ಪರೀಕ್ಷೆ
  • ಅನುಪಾಲನೆ

ಗುರುಬಸಪ್ಪ ವೀರಾಪೂರ
ಉಪನ್ಯಾಸಕರು ಉಡುಪಿ

Leave a Reply

Your email address will not be published. Required fields are marked *