AgricultureUncategorized

ಅಡಿಕೆ, ಕಾಳುಮೆಣಸು,ಕೋಕೋ, ತೆಂಗು ಬೆಳೆಗಳ ಕೊಳೆರೋಗ ನಿಯಂತ್ರಣದಲ್ಲಿ ಬೋಡರ್ೋ ದ್ರಾವಣ

ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು,ಕಾಳುಮೆಣಸು, ಕೋಕೋಗಳಿಗೆ ಮಳೆಗಾಲದ ಸಮಯದಲ್ಲಿ ಕಪಳೆರೋಗ ತಗಲಿ ಪ್ರತೀ ವರ್ಷ ವ್ಯಾಪಕ ಹಾನಿಯನ್ನು ಉಂಟು ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಷಯವೇ. ಮಳೆಗಾಲದ ಸಮಯದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಈ ರೋಗ ಬಾಧೆ ವ್ಯಾಪಕವಾಗಿ ಹರಡುತ್ತ ಬಹಳಷ್ಟು ಸಲ ಕೃಷಿಕರು ಇದನ್ನು ನಿಯಂತ್ರಿಸಲು ಹರ ಸಾಹಸ ಪಡುತ್ತಿರುವುದು ಹಾಗೂ ಇದರಲ್ಲಿ ಸಫಲತೆ ಹಾಗೂ ವಿಫಲಗಳನ್ನು ಮುಶ್ರವಾಗಿ ಅನುಭವಿಸುತ್ತಿದ್ದಾರೆ. ಈ ರೀತಿಯಾಗಿ ನಷ್ಟ ತರುವ ಕೊಳೆ ರೋಗವನ್ನು ಹರಡುವ ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸಲು ಬಹಳಷ್ಟು ವಿಧಿ ವಿಧಾನಗಳು ಪ್ರಚಲಿತದಲ್ಲಿದ್ದರೂ ತಲೆತಲಾಂತರದಿಂದ ತಿಳಿದುಬಂದ ಸಮರ್ಪಕ , ಸಮ್ಮಿಶ್ರ ಬೋಡರ್ೋ ದ್ರಾವಣದಷ್ಟು ಉಪಯುಕ್ತ ಹಾಗೂ ಪರಿಣಾಮಕಾರಿಯಾದಷ್ಟು ಇತರೆ ವಿಧಾನಗಳು ದೀರ್ಘಕಾಲಿನ ಪರಿಣಾಮಗಳನ್ನು ಕೊಟ್ಟಿರುವುದು ಸಂಶೋಧನೆಗಳಿಂದ ದೃಢಪಟ್ಟಿರುವುದಿಲ್ಲ. ಈ ಔಷಧೀಯ ಬಳಕೆ ಅಷ್ಟೇ ಅಲ್ಲದೆ ಆ ರೋಗಾಣುವನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಿವಿಧಾನಗಳನ್ನು ಕೂಡಾ ಕೃಷಿಕರು ಅಥರ್ೈಸಿಕೊಂಡು ಅಷ್ಟೇ ಸಮರ್ಪಕ ಹಾಗೂ ಕ್ರಮಬದ್ದವಾಗಿ ಅನುಸರಿಸುವುದು ಅತೀ ಅಗತ್ಯವಾಗಿದೆ. ರೋಗ ನಿಯಂತ್ರಣದಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಅನುಸರಿಸುವ ಮುಂಜಾಗ್ರತಾ ಕ್ರಮಗಳಿಗೆ ಕೃಷಿಕರು ಪ್ರಾಮುಖ್ಯತೆ ಯನ್ನು ನೀಡಬೇಕಾದ ಬಗ್ಗೆ ಮನಗಾಣುವುದು ಅತೀ ಅಗತ್ಯ.

ಬೋಡರ್ೋ ದ್ರಾವಣ ತಯಾರಿಕೆ: ಮೇಲೆ ಹೊಸದಾದ ಸ್ಟೀಲ್ ಬ್ಲೇಡ್ /ಚಾಕುವನ್ನು ದ್ರಾವಣದಲ್ಲಿ ಅದ್ದಿ ಪರೀಕ್ಷಿಸಿ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಅಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು(ತಾಮ್ರದ ಅಂಶವಿದ್ದಲ್ಲಿ ಬ್ಲ್ಯೂ ಲಿಟ್ಮಸ್ ಪೇಪರ್ ದ್ರಾವಣದಲ್ಲಿ ಅದ್ದಿದಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ಸ್ಟೀಲ್ ಬ್ಲೇಡ್/ಚಾಕುವಿನ ಹೊಳಪಾದ ಮೈಯಲ್ಲಿ ಕೆಂಪು ಬಣ್ಣದ ಲೇಪನ ಕಂಡುಬರುತ್ತದೆ). ಹೆಚ್ಚುವರಿ ತಾಮ್ರದ ಅಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು.ಲಿಟ್ಮಸ್ ಪರೀಕ್ಷೆಯನ್ನು ಪುನ: ಮಾಡಿ ದ್ರಾವಣವು ಆಮ್ಲೀಯತೆಯಿಂದ ಹೊರ ಬಂದು ನ್ಯೂಟ್ರಲ್ ರಸಸಾರ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ ಮೇಲೆ ತಿಳಿಸಿದಂತೆ ತಯಾರಿಸಲಾದ ಹೊಸದಾಗಿರುವ ಬೊಡರ್ೋ ಮಿಶ್ರಣವನ್ನು ಅಡಿಕೆ ಗೊನೆಗಳ ಮೇಲೆ ತೀರ ಹತ್ತಿರದಿಂದ ಸಣ್ಣ ಹನಿಗಳ ರೂಪದಲ್ಲಿ ಸಿಂಪರಣೆಯಾಗುವಂತೆ ಸಿಂಪಡಿಸುವುದು ಪ್ರಮುಖವಾದ ಅಂಶ. ಈ ದ್ರಾವಣಕ್ಕೆ ಅಂದಾಜು 45 ದಿನಗಳ ಕಾಲ ರೋಗವನ್ನು ತಹಬದಿಗೆ ತರುವ ಶಕ್ತಿ ಇದ್ದರೂ ಕೂಡ 30 ರಿಂದ 45 ದಿನಗಳ ಅಂತರದಲ್ಲಿ ವಾತಾವರಣದ ಲಕ್ಷಣಗಳನ್ನು ಅರಿತುಕೊಂಡು ಮರುಕೈಗೊಳ್ಳಬೇಕು. ಮುಂದೆ ಅಗತ್ಯ ಬಿದ್ದಲ್ಲಿ 3ನೇ ಸಿಂಪರಣೆಯನ್ನು ಕೈಗೊಳ್ಳಬೇಕು.

ಸುಮಾರು 1910 ರ ಸಂದರ್ಭದಲ್ಲಿ ಡಾ.ಕೊಲ್ಮನ್ ರವರಿಂದ ಅಡಿಕೆ ಕೊಳೆರೋಗವನ್ನು ಬೊಡರ್ೋ ಮಿಶ್ರಣದಿಂದ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ದೃಢಪಟ್ಟಲ್ಲಿಂದ ಇಲ್ಲಿಯವರೆಗೆ ಅಡಿಕೆ, ಕಾಳುಮೆಣಸಿಗೆ ಬರುವ ಕೊಳೆರೋಗವನ್ನು ನಿಯಂತ್ರಿಸಲು ಬೋಡರ್ೋ ಮಿಶ್ರಣವನ್ನು ಉಪಯುಕ್ತ ರೋಗನಾಶಕ ಬೇರೆ ಯಾವುದೂ ಕೂಡಾ ದೃಢಪಟ್ಟಿರುವುದಿಲ್ಲ. ಇಷ್ಟು ವರ್ಷಗಳ ಕಾಲ ಈ ಮಿಶ್ರಣವನ್ನು ಕೊಳೆರೋಗ ನಿಯಂತ್ರಣಕ್ಕೆ ವ್ಯಾಪಕವಾಗಿ ಕೃಷಿಕರು ಬಳಸುತ್ತಿದ್ದರೂ, ಇಂದಿಗೂ ಕೂಡ ಈ ಮಿಶ್ರಣ ರೋಗ ನಿಯಂತ್ರಣದಲ್ಲಿ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದೆ. ಪ್ರಸ್ತುತ ಬೇರೆ ಬೇರೆ ಖಾಸಗಿ ಕಂಪೆನಿಗಳಿಂದ ಸಸ್ಯಜನ್ಯ ಔಷಧಿ/ಮಿಶ್ರಣಗಳು ಮಾರುಕಟ್ಟೆಯಲ್ಲಿ ಕೊಳೆರೋಗ ನಿಯಂತ್ರಣ ಮಾಡುತ್ತದೆಂದು ಪ್ರಚಾರದಲ್ಲಿದ್ದರೂ ಅವುಗಳ ಉಪಯುಕ್ತತೆಯನ್ನು ಸಂಶೋಧನಾ ಸಂಸ್ಥೆಗಳ ಸಂಶೋಧನೆಗಳು ಪರಿಪೂರ್ಣವಾಗಿ ತಿಳಿಸಿದಂತೆ ಪರಿಣಾಮಕಾರಿಯಾದ ಬೋಡರ್ೋ ಮಿಶ್ರಣವನ್ನು ತಯಾರಿಸಲು ಅನುಸರಿಸಬೇಕಾದ ವಿಧಾನವನ್ನು ಈ ಕೆಳಗೆ ವಿವರಿಸಲಾಗಿದೆ. 100ಲೀ ಬೋಡರ್ೋ ಮಿಶ್ರಣ ತಯಾರಿಸಲು ಮೈಲುತುತ್ತು ಹರಳು 1 ಕೆ.ಜಿ, ಉತ್ತಮಗುಣಮಟ್ಟದ ಚಿಪ್ಪುಸುಣ್ಣ 1ಕೆ.ಜಿ, ನೀರು 100ಲೀ. ಪ್ಲಾಸ್ಟಿಕ್ /ಮಣ್ಣಿನ ಪಾತ್ರೆಗಳು ಮುಂತಾದ ಸಾಮಾಗ್ರಿಗಳು ಅವಶ್ಯಕವಾಗಿದೆ.

ತಯಾರಿಕೆ: ಬೋಡರ್ೋ ಮಿಶ್ರಣ ತಯಾರಿಸುವಾಗ ಮೈಲುತುತ್ತು ಹರಳು ಹಾಗೂ ಸುಣ್ಣವನ್ನು ಸಂಪೂರ್ಣವಾಗಿ ನೀರಿನಲ್ಲಿ ಕರಗಿಸುವ ಸಲುವಾಗಿ ಒಂದು ಪಾತ್ರೆಯಲ್ಲಿ 10ಲೀ ನೀರಿನಲ್ಲಿ 1 ಕೆ.ಜಿ ಮೈಲುತುತ್ತಿನ ಹರಳುಗಳನ್ನು ಪ್ರತ್ಯೇಕವಾಗಿ ಕರಗಿಸಿ ದ್ರಾವಣ ತಯಾರಿಸಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ 10 ಲೀ ನೀರಿನಲ್ಲಿ 1 ಕೆ.ಜಿ ಉತ್ತಮಗುಣಮಟ್ಟದ ಚಿಪ್ಪುಸುಣ್ಣವನ್ನು ಕರಗಿಸಿ ಸುಣ್ಣದ ನೀರನ್ನು ತಯಾರಿಸಬೇಕು. ನಂತರ ಈ ಎರಡು ಪಾತ್ರೆಗಳ ದ್ರಾವಣವನ್ನು 80ಲೀ ನೀರಿರುವ ಮೂರನೆಯ ದೊಡ್ಡ ಪಾತ್ರೆಗೆ ನಿಧಾನವಾಗಿ, ಮರದ ಕೋಲಿನ ಸಹಾಯದಿಂದ ದ್ರಾವಣವನ್ನು ತಿರುಗಿಸುತ್ತಾ ಸುರಿಯಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣವನ್ನು ಬ್ಲ್ಯೂಲಿಟ್ಮಸ್ ಪೇಪರ್ ನಿಂದ ಅಥವಾ ಸಿಂಪರಣೆ ಮಾಡುವುದು ಸೂಕ್ತವಾಗಿರುತ್ತದೆ. ಬೋಡರ್ೋ ಮಿಶ್ರಣವು ಬೇರಾವುದೇ ರಾಸಾಯನಿಕಗಳೊಂದಿಗೆ ಅಥವಾ ಮಿಶ್ರಣದೊಂದಿಗೆ ಹೊಂದಾಣಿಕೆಯನ್ನು ಹೊಂದಿಲ್ಲವಾದ ಕಾರಣ ಬೇರೆ ಯಾವುದೇ ಕೀಟನಾಶಕವನ್ನು ಇದರೊಂದಿಗೆ ಬೆರೆಸಿ ಸಿಂಪರಣೆ ಮಾಡಬಾರದು.

ಸಿಂಪರಣಾ ವಿಧಾನ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ನಿಂದ ಆಗಸ್ಟ್ ವರೆಗೆ ತೀವ್ರತರಹದ ಮಳೆ ಇರುವ ಕಾರಣ ಮುಂಗಾರು ಆರಂಭಕ್ಕೆ ಮುನ್ನ ಒಂದೆರಡು ಮಳೆಬಿದ್ದ ಕೂಡಲೆ ಅಡಿಕೆ, ಕಾಳುಮೆಣಸು,ಕೋಕೋ, ತೆಂಗು ಬೆಳೆಗಳಿಗೆ ಬೋಡರ್ೋ ದ್ರಾವಣವನ್ನು ಮುಂಜಾಗರೂಕತಾ ಸಿಂಪರಣೆ ಮಾಡುವುದು ರೋಗನಿಯಂತ್ರಣದಲ್ಲಿ ಬೆಳೆಗಾರನು ಅನುಸರಿಸಬೇಕಾದ ಪ್ರಥಮ ಹಾಗೂ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಕೈಗೊಳ್ಳಲು ಉದಾಸೀನ ಮಾಡಿದಲ್ಲಿ ಬೆಳೆಗಾರರಿಗೆ ಬೋಡರ್ೋ ದ್ರಾವಣ ಸಿಂಪಡಿಸಲು ಯೋಗ್ಯ ವಾತಾವರಣ ಸಿಕ್ಕದೇ ಹೋಗಿ ಬೆಳೆ ರೋಗಕ್ಕೆ ತುತ್ತಾಗಿ ಹಾನಿ ಸಂಭವಿಸುವುದು ನಿಶ್ಚಿತ. ಮೊದಲ ಸಿಂಪರಣೆ ನಂತರ 35-40 ದಿನಗಳ ಅಂತರದಲ್ಲಿ ವಾತಾವರಣವನ್ನು ಅನುಸರಿಸಿಕೊಂಡು ಇನ್ನೊಂದು ಸುತ್ತಿನ ಸಿಂಪರಣೆ ಅಗತ್ಯವಾಘಿ ದೃಢಪಡಿಸಿರುವುದಿಲ್ಲ. ಅಡಿಕೆ ಬೆಳೆಗಾರರು ಈ ವಾಸ್ತವಿಕತೆಯನ್ನು ಅಥರ್ೈಸಿಕೊಂಡು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಸಮರ್ಪಕ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುವುದು ಮಹತ್ವಪೂರ್ಣ ಅಂಶವಾಗಿರುತ್ತದೆ.

ಕೃಷಿಕರು ಪ್ರಸ್ತುತ ಮಾರುಕಟ್ಟೆಯಲ್ಲಿನ ವಿವಿಧ ಪ್ರಲೋಭನೆಗಳಿಗೆ ಒಳಗಾಗು ಸಂಶೋಧನೆಗಳಿಂದ ಪರಿಪೂರ್ಣವಾಗಿ ದೃಢಪಡದ ಖಾಸಗಿ ಕಂಪೆನಿಗಳ ಸಸ್ಯಜನ್ಯ ಔಷಧಿ/ ಮಿಶ್ರಣವನ್ನು ಬಳಸಿ ಮುಂದೆ ಕಷ್ಟ ನಷ್ಟವನ್ನು ತಂದುಕೊಂಡಲ್ಲಿ ಅದು ಕೃಷಿಕರದೇ ಜವಾಬ್ದಾರಿಯಾಗಿರುತ್ತದೆ. ಈ ಹಿನ್ನಲೆಯಲ್ಲಿ ತೋಟಗಾರಿಕೆ ಇಲಾಖೆಯು 2015 ಮುಂಗಾರು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅಡಿಕೆ, ಕಾಳುಮೆಣಸು,ಕೋಕೋ ತೆಂಗು ಬೆಳೆಗಾರರನ್ನು ತಮ್ಮ ಬೆಳೆಗಳಿಗೆ ಹರಡುವ ಕೊಳೆರೋಗ ನಿಯಂತ್ರಣಕ್ಕೆ ಮೇಲೆ ತಿಳಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಕಾಲಿಕ ಸೂಕ್ತ ನಿಯಂತ್ರಣ ಕ್ರಮಗಳನ್ನು ಹಮ್ಮಿಕೊಳ್ಳಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ತಾಲೂಕು ತೋಟಗಾರಿಕೆ ಇಲಾಖಾ ಕಚೇರಿಗಳನ್ನು ಸಂಪಕರ್ಿಸಬಹುದು.
ರಾಘವೇಂದ್ರ ಪ್ರಭು ಉಪನ್ಯಾಸಕರು
ಉಡುಪಿ ತರಬೇತಿ ಸಂಸೆ

Leave a Reply

Your email address will not be published. Required fields are marked *