Agriculturesuccess storyUncategorized

(SSI) ಸುಸ್ಥಿರ ಕಬ್ಬಿನ ಬೇಸಾಯದಿಂದ ಯಶಸ್ಸು ಸಾಧಿಸಿದ ಚಿಕ್ಕೋಡಿಯ ಬಾಳಪ್ಪ

1 NIST 151109

ಬೆಳಗಾವಿ : ವಿಶ್ವದಲ್ಲಿ ಭಾರತವು ಸಕ್ಕರೆ ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದೆ. ದೇಶದ ವಾಣಿಜ್ಯ ಬೆಳೆಗಳಲ್ಲಿ ಕಬ್ಬು ಪ್ರಮುಖ ಸ್ಥಾನವಹಿಸಿದೆ. ಸಾಕಷ್ಟು ಆಥರ್ಿಕ ಲಾಭವನ್ನು ಹಾಗೂ ವಿದೇಶಿ ವಿನಿಮಯ ಗಳಿಕೆಯಲ್ಲಿಯೂ ಹೌದು, ಕನರ್ಾಟಕ ಮಹಾರಾಷ್ಟ್ರ ತಮಿಳುನಾಡು ಉತ್ತರಪ್ರದೇಶ ಆಂದ್ರಪ್ರದೇಶ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಾಗಿವೆ ಕನರ್ಾಟಕದಲ್ಲಿ ಸುಮಾರು 13 ಜಿಲ್ಲೆಗಳಲ್ಲಿ ಕಬ್ಬಿನ ಬೇಸಾಯವನ್ನು ಮಾಡುತ್ತಿದ್ದು.ಅದರಲ್ಲಿ ಕೂಡಾ ಬೆಳಗಾವಿ ಜಿಲ್ಲೆಯಲ್ಲಿ ಅಧಿಕ ಕಬ್ಬಿನ ಉತ್ಪಾದನೆಯನ್ನು ಮಾಡುತ್ತಿರುವುದು.

ಕಬ್ಬಿನಿಂದ ಹಲವಾರು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಇದನ್ನು ಕೇವಲ ಸಕ್ಕರೆ ಮತ್ತು ಬೆಲ್ಲ ತಯಾರಿಕೆಯಲ್ಲದೆ ಇಥೆನಾಲ ಜೈವಿಕ ಇಂಧನಗಳು, ಸ್ಪೀರಿಟ್ ಮತ್ತು ಇತರೆ ಮದ್ಯಗಳ ತಯಾರಿಕೆಯಲ್ಲಿ ನೇರವಾಗಿ ಬಳಕೆಯಲ್ಲಿದೆ. ಕಬ್ಬಿನ ಉಪ ಉತ್ಪನ್ನಗಳಾದ ಸಿಪ್ಪೆಯಿಂದ ಕಾಗದ ಮರದ ಹಲಗೆ ಮರಮುಟ್ಟುಗಳು, ವಿದ್ಯುತ್ ಮತ್ತು ಕಾಕಂಬಿಯಿಂದ ಜೈವಿಕ ಗೊಬ್ಬರ ಪಶು ಆಹಾರ ಮತ್ತು ರಸಾಯನಿಕಗಳನ್ನು ತಯಾರಿಸಲಾಗುತ್ತದೆ. ಹೀಗೆ ಕಬ್ಬು ರಾಷ್ಟ್ರದ ವಿವಿಧ ರಂಗಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು ನೇರವಾಗಿ ಹಾಗೂ ಪರೋಕ್ಷವಾಗಿ ಕೃಷಿಯಲ್ಲಿ ಅತ್ಯಧಿಕ ಜನರಿಗೆ ಉದ್ಯೋಗವನ್ನು ಕಲ್ಪಿಸುತ್ತಿರುವ ಏಕೈಕ ವಾಣಿಜ್ಯ ಬೆಳೆಯಾಗಿದೆ.

ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಕಬ್ಬಿನ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಲೇ ಇದೆ ಶರವೇಗದಲ್ಲಿ ಬೆಳೆಯುತ್ತಿರವ ಜನಸಂಖ್ಯೆಯ ಬೇಡಿಕೆಯನ್ನು ಪೂರೈಸಲು ಅತ್ಯಂತ ಶೀಘ್ರಗತಿಯನ್ನು ಸಹ ಹೆಚ್ಚಿಸುವುದು ಅವಶ್ಯಕವಾಗಿದೆ ಆಧುನಿಕ ಹಾಗೂ ವ್ಶೆಜ್ಞಾನಿಕವಾದ ಬೇಸಾಯ ಮತ್ತು ಸಸ್ಯ ಸಂರಕ್ಷಣೆ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳಬೇಕಾಗಿರುವ್ಯದರಿಂದ ಈ ಸುಸ್ಥಿರ ಬೇಸಾಯ ಕ್ರಮವನ್ನು ಅನುಷ್ಠಾನಗೋಳಿಸಿರುವುದು.

ಸಾಮಾನ್ಯ ಪದ್ಧತಿಯಂತೆ ಬೆಳೆಯದೆ, ಸುಸ್ಥಿರವಾಗಿ ಬೆಳೆದರೆ ಅಧಿಕ ಲಾಭವಾಗುವುದು. ಕಬ್ಬಿನ ಕಣ್ಣುಗಳನ್ನು ಬಳಸಿ ಗಿಡಗಳನ್ನು ತಯಾರಿಸಿ ಕಡಿಮೆ ನೀರು ಬೀಜ ಗೊಬ್ಬರ ಮತ್ತು ಕೂಲಿ ಆಳುಗಳ ಬಳಕೆ ಮಾಡಿ ಅಂತರ ಬೆಳೆಗಳನ್ನು ಮಾಡಿ, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಅಧಿಕ ಇಳುವರಿಯನ್ನು ಹೆಚ್ಚಿಸುವ ನೂತನ ವಿಧಾನವನ್ನು ಸುಸ್ಥಿರ ಕಬ್ಬಿನ ಬೇಸಾಯ ಎಂದು ಕರೆಯುತ್ತಾರೆ

ಬಾಳಪ್ಪ ಗುಂಡಪ್ಪ ಈಟಿ ಮೂಲತಃ ಕೃಷಿ ಕುಟುಂಬದವರಾಗಿದ್ದು 4 ಜನ ಅಣ್ಣ ತಮ್ಮರನ್ನೋಳಗೊಂಡ 5 ಜನರಿರುವ ಒಂದು ಅವಿಭಕ್ತ ಕುಟುಂಬವಾಗಿದೆ. ಅದರಲ್ಲಿ 03 ಜನ ಕೃಷಿಯನ್ನು ಮಾಡುತ್ತಿದ್ದು, ಒಬ್ಬರು ವಕೀಲಿಕೆ ವೃತ್ತಿಯನ್ನು ಮಾಡುತ್ತಿದ್ದು ಒಬ್ಬರು ಬೆಲ್ಲದ ಆಣವನ್ನು (ಕಾಖರ್ಾನೆ)ಯನ್ನು ನಡೆಸುತ್ತಿರುವರು. 10 ಎಕರೆ ತೋಟವಿದ್ದು ಕಬ್ಬಿನ ಬೇಸಾಯವನ್ನು ಮಾಡುತ್ತಿರುವರು. ಕಳೆದ 03 ವರ್ಷದಿಂದ ಹನಿ ನೀರಾವರಿ ಮೂಲಕ ಸುಸ್ಥಿರ ಕಬ್ಬಿನ ಬೇಸಾಯವನ್ನು ಮಾಡುತ್ತಿದ್ದ, ಸುಮಾರು 10ಏಕರೆ ಪ್ರದೇಶದಲ್ಲಿ ಈ ವಿಧಾನವನ್ನು ಅಳವಡಿಸಿದ್ದಾರೆ. ಇದರಿಂದ ಅವರಿಗೆ ಅಧಿಕ ಲಾಭವಾಗಿದೆ. ಏಕರೆಗೆ 100 ಟನ್ ಕ್ಕೂ ಮಿಕ್ಕಿ ಕಬ್ಬು ಬರುವುದು. ಇದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿನಿಧಿಯೊಂದಿಗೆ ನಬಾರ್ಡದಿಂದ 50,000 ಸಾಲದೊಂದಿಗೆ ಈ ಕಾರ್ಯಕ್ರಮವನ್ನು ಮಾಡುತ್ತಿದ್ದು ಎಲ್ಲಾ ಕಬ್ಬನ್ನು ಸಕ್ಕರೆ ಕಾಖರ್ಾನೆ ಕಳುಹಿಸದೆ ತಮ್ಮದೇ ಆದ ಬೆಲ್ಲದ ಗಾಣಕ್ಕೆ ಕಳುಹಿಸುತ್ತಾರೆ. ಈ ಕಬ್ಬಿಗೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಕೊಡದೆ ಕೊಟ್ಟಿಗೆ ಗೊಬ್ಬರವನ್ನು ಕೊಡುವುದು ವಿಶೇಷವಾಗಿದೆ. ಅಂತರ ಬೆಳೆಯಾಗಿ ಜೋಳವನ್ನು ಮಾಡುತ್ತಾರೆ 5 ಹಸುಗಳಿದ್ದು ಗೊಬ್ಬರ ಗ್ಯಾಸ್ ತಯಾರಿ ಮಾಡಿಕೊಂಡಿರುವುದು. ಅದರ ಜೊತೆಗೆ 4 ಆಡುಗಳನ್ನು ಸಾಕಾಣಿಕೆಯ ಜೋತೆಗೆ ಸಮಗ್ರ ಕೃಷಿಯನ್ನು ಮಾಡಿ ಪ್ರಗತಿ ಪರ ಕೃಷಿಕರಾಗಿರುವರು.

ಸುಸ್ಥಿಯ ಕಬ್ಬಿನ ಬೇಸಾಯಕ್ಕೆ ಪ್ರೇರಣೆ : ಕಬ್ಬು ಒಂದು ವಾಣಿಜ್ಯ ಬೆಳೆಯಾಗಿದ್ದು, ಬಾಳಪ್ಪರವರು ಸಾಮಾನ್ಯ ಪದ್ದತಿಯಲ್ಲಿ ಕಬ್ಬನ್ನು ಬೆಳೆಯುತ್ತಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳಗಾವಿ ಜಿಲ್ಲೆಗೆ ಪಾದಾರ್ಪಣೆಯನ್ನು ಮಾಡಿದಾಗ, ಚಿಕ್ಕೋಡಿ ತಾಲೂಕಿನ ನಾಗರ ಮುನವಳ್ಳಿ ಗ್ರಾಮದಲ್ಲಿ 05 ಜನರನ್ನು ಒಳಗೊಂಡ ನೇಗಿಲ ಯೋಗಿ ಪ್ರಗತಿ ಬಂಧು ಗುಂಪನ್ನು ಮಾಡಿಕೊಂಡು ಉಳಿತಾಯವನ್ನು ಮಾಡುತ್ತಿದ್ದರು. ಯೋಜನೆಯ ಕೃಷಿ ಅಧಿಕಾರಿಯಿಂದ ಪ್ರೇರಣೆಯನ್ನು ಪಡೆದುಕೊಂಡು ಅಧ್ಯಯನ ಪ್ರವಾಸದ ಮೂಲಕ ಮೊದಲು 2012ರಲ್ಲಿ ಈ ಸುಸ್ಥಿರ ಕಬ್ಬಿನ ಬೇಸಾಯವನ್ನು ಮಾಹಿತಿಯನ್ನು ಪಡೆದುಕೊಂಡ ಪರಿಣಾಮ ಪ್ರತಿವರ್ಷವು ಕೂಡಾ ಈ ಪದ್ಧತಿಯಲ್ಲಿ ಕೃಷಿಯನ್ನು ಮಾಡುತ್ತಿರುವರು.(Sustainable Sugarcane Initiative – SSI)

ಬಾಳಪ್ಪರವರು ಮಾತನಾಡುತ್ತಾ ಈ ಸುಸ್ಥಿರ ಬೇಸಾಯದಿಂದ ರೈತರಿಗಾಗುವ ಉಪಯೋಗ ತಿಳಿಸಿದರು

 • ಕಡಿಮೆ ಬಿತ್ತನೆ ಬೀಜಗಳ ಬಳಕೆ
 • ಕಡಿಮೆ ನೀರಿನ ಬಳಕೆ
 • ಗಿಡಕ್ಕೆ ಹೆಚ್ಚು ಗಾಳಿ / ಬೆಳಕು ಲಭ್ಯತೆ
 • ರೋಗ ಭಾದೆ ಕಡಿಮೆ
 • ಅಂತರ ಬೆಳೆಗಳನ್ನು ಬೆಳೆಯಲು (ಉದಾ : ಅಲಸಂಡೆ ಬೆಂಡೆ ಮೆಣಸು ಮುಂತಾದವುಗಳು)
 • ಕಬ್ಬಿನಲ್ಲಿ ಜಾಸ್ತಿ ಸಕ್ಕರೆ ಅಂಶ ಮತ್ತು ನೀರಿನ ಅಂಶವಿರುವುದು.
 • ರೈತರ ಶ್ರಮ ಕಡಿಮೆಯಾಗುವುದು

ಸುಸ್ಥಿಯ ಕಬ್ಬಿನ ಬೇಸಾಯ ಪದ್ಧತಿಯಲ್ಲಿ ಅಡಕವಾಗಿರುವ ಅಂಶಗಳು :

 • ಸಾಲಿನಿಂದ ಸಾಲಿಗೆ ಅಂತರ
 • ನೀರಿನ ಉಳಿತಾಯ / ಮಣ್ಣಿನ ಫಲವತ್ತತೆ.
 • ಒಂದು ಕಣ್ಣಿನ ಸಸಿ ಬೆಳೆಸಿ 30-45 ದಿನ ಪ್ರಾಯದ ಸಸಿ ನಾಟಿ ಮಾಡುವುದು.
 • ಅಂತರ ಬೆಳೆಯನ್ನು ಮಾಡುವಂತದ್ದು.

ಪ್ರತಿ ವರ್ಷವು 100 ಟನಗೂ ಅಧಿಕ ಕಬ್ಬು ಬೆಳೆಯುವ ಬಾಳಪ್ಪರವರು ಕಬ್ಬಿನ ಮಧ್ಯದಲ್ಲಿ ಅಲ್ಪಾವಧಿ ಬೆಳೆಗಳಾದ ಅಲಸಂಡೆ ಬೆಂಡೆ ಮೆಣಸು ಹೀಗೆ ಬಗೆ ಬಗೆಯ ಬೆಳೆಗಳನ್ನು ಬೆಳೆಯುವ ಇವರು ತರಕಾರಿಯಿಂದ ಆದಾಯ ಗಳಿಸುವ ಒಂದು ಮಾದರಿ ಕುಟುಂಬ ಎನ್ನುದರಲ್ಲಿ ಎರಡು ಮಾತಿಲ್ಲ ತಮ್ಮ ಕೃಷಿ ಕೆಲಸಕ್ಕೆ ಹೆಂಡತಿ ಮತ್ತು ತಮ್ಮಂದಿರ ಸಹಕಾರ ಹೆಚ್ಚಿನ ಕೆಲಸಗಳನ್ನು ಪ್ರಗತಿ ಬಂಧುವಿನ ಶ್ರಮವಿನಿಮಯದ ಮೂಲಕ ಮಾಡಿ ಮುಗಿಸುತ್ತಾರೆ. ದುಡಿಮೆಯೇ ಜೀವನ ಎನ್ನುತ್ತಾರೆ ಬಾಳಪ್ಪ…..

2 NIST 151109

-ಗುರುಬಸಪ್ಪ.ವೀರಾಪೂರ

Leave a Reply

Your email address will not be published. Required fields are marked *