success storyUncategorized

ಬಣ್ಣ ಬಣ್ಣದ ಕುರುಕುರೆ ಕೂಡು ಕುಟುಂಬದ ಜೀವನ ಆಸರೆ

ಬಣ್ಣ ಬಣ್ಣದ ‘ಕುರುಕುರೆ’ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಬಡವರಿಂದ ಶ್ರೀಮಂತರವರಿಗೂ ಮನಸ್ಸನ್ನು ಸೂರೆಗೊಂಡಿರುವ ಖಾದ್ಯವೇ ಕುರು ಕುರೇ. ಅತೀ ಕಡಿಮೆ ಬೆಲೆಯಲ್ಲಿ ದೊರೆಯುವ ಈ ತಿನಿಸು, ಪ್ರಯಾಣ, ಪಾಟರ್ಿ ಮುಂತಾದ ಸಂದರ್ಭದಲ್ಲಿಯೂ ಸುಲಭವಾಗಿ ಹಗುರವಾಗಿ ಹೊತ್ತು ಸಾಗಲು ಕೂಡಾ ಸಾಧ್ಯ. ಸಂಪೂರ್ಣ ಶಾಖಾಹಾರಿ ಪದಾರ್ಥಗಳಿಂದ ಮಾಡಬಹುದಾದ ಕುರುಕುರೆ ಎಲ್ಲರ ಹೃದಯವನ್ನು ಕದ್ದಿರುವದಲ್ಲದೇ ವಿವಿಧ ಸುವಾಸನೆಗಳ, ರುಚಿಗಳೊಂದಿಗೆ ಮತ್ತು ಬೇರೆ ಬೇರೆ ಲೇಬಲ್ ಹೊತ್ತು ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ. ಪೆಪ್ಸಿ ಕಂಪನಿಯವರು ಪ್ರಥಮ ಬಾರಿಗೆ 1995ರಲ್ಲಿ ಬಿಡುಗಡೆಗೊಳಿಸಿದ ಈ ಖಾದ್ಯದ ರುಚಿಗೆ ಹೋಲಿಕೆಯಾಗುವ ಅನೇಕ ಖಾದ್ಯಗಳು ಮಾರುಕಟ್ಟೆಯಲ್ಲಿ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಉತ್ಪಾದಿಸುವಲ್ಲಿ ಪ್ರೇರೇಪಿಸಿದ್ದು, ಅದೆಷ್ಟೋ ಜನರಿಗೆ ಉದ್ಯೋಗ ಅವಕಾಶದೊಂದಿಗೆ ಸ್ವಾವಲಂಭನೆಯ ಬದುಕಿಗೆ ದಾರಿ ದೀಪವಾಗಿರುವುದು.

ಇಂತಹುದೇ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ರಾಣೆಬೆನ್ನೂರಿನ ಮೃತ್ಯುಂಜಯ ನಗರದ ಶ್ರೀಮತಿ ಲೀಲಾವತಿ ಮತ್ತು ಕುಟುಂಬದವರನ್ನು ನೋಡಿದಾಗ ನಮ್ಮ ಸಂಸಾರ ಆನಂದ ಸಾಗರ ಗೀತೆಯನ್ನೊಮ್ಮೆ ಮೆಲುಕು ಹಾಕುವಂತಾಯಿತು. ಏಕೆಂದರೆ ಶ್ರೀಮತಿ ಲೀಲಾವತಿ, ಪತಿ ಮುತ್ತಪ್ಪ, ಮಗಳು ಕವಿತಾ ಮಡಕಟ್ಟಿ, ಗಂಡು ಮಕ್ಕಳಾದ ರವಿ, ಲಕ್ಷ್ಮಣ ಹಾಗೂ ಸೊಸೆಯಂದಿರಾದ ಶ್ರೀಮತಿ ರೇಣುಕಾ ಮತ್ತು ಮಹಾದೇವಿ ಇವರು ಕೂಡಾ ಕೂಡು ಕುಟುಂಬದೊಂದಿಗೆ ಸಾತು ನೀಡುತ್ತಿದ್ದಾರೆ. ಒಂದು ಮನೆಯಲ್ಲಿ ಒಬ್ಬರು ಮಾತ್ರ ಉದ್ಯೋಗ ಅಥವಾ ವೃತ್ತಿಯಲ್ಲಿ ಹೋಗುತ್ತಿರುವ ಕಾಲ ಒಂದಿತ್ತು. ಮುಂದೆ ಕುಟುಂಬದ ಆಥರ್ಿಕ ಸವಾಲುಗಳಿಗೆ ಅನುಗುಣವಾಗಿ ಗಂಡ ಹೆಂಡತಿ ಇಬ್ಬರು ರಥದ ಎರಡು ಗಾಲಿಗಳಾಗಿ ಮುನ್ನಡೆಯುವ ಅಗತ್ಯತೆ ಮನಗಂಡಿದ್ದೆವು ಆದರೆ ಅದಕ್ಕೂ ಮಿಗಿಲಾಗಿ ಎರಡು ತಲೆಮಾರಿನ ಒಂದೇ ಮನೆಯ ನಾಲ್ಕು ಕುಟುಂಬಗಳು ಕೈ ಜೋಡಿಸಿರುವುದನ್ನು ಶ್ರೀಮತಿ ಲೀಲಾವತಿ ಶಿಗ್ಗಾಂವಿಯವರ ಕುಟುಂಬ ದಲ್ಲಿ ನೋಡಿದಾಗ, ಸಾಮರಸ್ಯದ ನೌಕೆಯ ಚುಕ್ಕಾಣಿ ಹಿಡಿದಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಉದ್ಯೋಗ ಪ್ರಾರಂಭಿಸುವ ಮೊದಲು ಶ್ರೀಮತಿ ಲೀಲಾವತಿ ಮತ್ತು ಶ್ರೀ ಮುತ್ತಪ್ಪ ದಂಪತಿಗಳ ಇಬ್ಬರು ಗಂಡು ಮಕ್ಕಳಲ್ಲಿ ಸಣ್ಣ ಮಗನಾದ ಶ್ರೀ ರವಿ ಶಿಗ್ಗಾಂವಿ ಇವರು ದೂರದ ಬೆಂಗಳೂರಿಗೆ ಉದ್ಯೋಗವನ್ನು ಅರಿಸಿಕೊಂಡು ವಲಸೆ ಹೋಗಿದ್ದರು. ಮೂರು ವರ್ಷ ಸತತ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ ಉದ್ಯೋಗ ಮಾಡಿ ನಮ್ಮ ಲೆಕ್ಕ ನಾವು ಬರೆಯುವುದು ಹೆಚ್ಚು ಅರ್ಥಪೂರ್ಣ ಆಗುವುದು ಎನ್ನುವ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧ್ಯೇಯ ವಾಖ್ಯವನ್ನು ಅನುಪಾಲಿಸಿದ ಶ್ರೀ ರವಿಯವರು ಮರಳಿ ಗೂಡಿಗೆ ಎಂಬಂತೆ ಸ್ವಂತ ಊರಿಗೆ ಬಂದರು. ಬಲವಾದ ಸ್ವ ಉದ್ಯೋಗದ ಯೋಜನೆಯ ರೂಪುರೇಷೆಗಳೊಂದಿಗೆ ಬಂದ ಶ್ರೀ ರವಿಯವರು, ಅದೆಷ್ಟೇ ಕಷ್ಟ ಬಂದರೂ ಛಲ ಬಿಡದೆ ಸ್ವ ಉದ್ಯೋಗದಲ್ಲಿ ಮುಂದೆ ಸಾಗುವ ನಿಧರ್ಾರವನ್ನು ಮಾಡಿಕೊಂಡಿದ್ದರು.

‘ಸ್ವ ಉದ್ಯೋಗಕ್ಕೆ ಶಿಕ್ಷಣ ಜ್ಞಾನವಿಲ್ಲದಿದ್ದರೂ ವ್ಯವಹಾರಿಕ ಜ್ಞಾನ ಸಾಕು’ ಎನ್ನುವುದಕ್ಕೆ ಶ್ರೀಮತಿ ಲೀಲಾವತಿ ಶಿಗ್ಗಾಂವಿಯವರೇ ಸಾಕ್ಷಿ. ಕೇವಲ 1ನೇ ತರಗತಿಯಲ್ಲಿ ಓದಿದ ಇವರು ಮಗನ ಯೋಜನೆಗಳಿಗೆ ಸಕಾರಾತ್ಮಕವಾದ ಒಪ್ಪಿಗೆ ನೀಡಿ 2010ರಲ್ಲಿ ಗೃಹ ಉದ್ಯೋಗವನ್ನು ಹುಟ್ಟು ಹಾಕಿದರು. ಈ ಉದ್ಯೋಗಕ್ಕಾಗಿ ಮನೆಯ ಮದ್ಯದಲ್ಲಿದ್ದ ಖಾಲಿ ಜಾಗ ಸುಮಾರು 2500 ಚ.ಮೀಟರ್ ಜಾಗೆಯನ್ನು ಬಳಸಿಕೊಂಡರು. ಪಕ್ಕದ ಹಳೆಯ ಮನೆಯನ್ನು ಕೂಡಾ ಈ ಉದ್ಯಮಕ್ಕೆ ಬಳಸಿಕೊಂಡರು. ಇವರು ತಮ್ಮಲ್ಲಿರುವ ರೂ.50 ಸಾವಿರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದಲ್ಲಿ ದೊರೆತ ರೂ. 50 ಸಾವಿರ ಸಾಲವನ್ನು (ಪ್ರಗತಿನಿಧಿ) ಮತ್ತು ಖಾಸಗಿ ಹಣಕಾಸು ಸಂಸ್ಥೆಗಳಿಂದ ರೂ. 3 ಲಕ್ಷ ಒಟ್ಟುಗೂಡಿಸಿ, ರೂ.4 ಲಕ್ಷ ಬಂಡವಾಳದಿಂದ ಪ್ರಾರಂಭಿಸಿದರು. ಪ್ರಥಮದಲ್ಲಿ ಇವರು ಉದ್ಯೋಗದಲ್ಲಿ ರೊಟ್ಟಿ, ಕುರುಕುರೆ ಯಂತ್ರಗಳನ್ನು ಅಳವಡಿಸಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರು.

‘ಸಾಧನೆಗೆ ಸಂಕಷ್ಟಗಳು ವಿಪರೀತ’ ಎನ್ನುವಂತೆ ಉತ್ಪಾದನೆಗೆ ಅನೇಕ ಅಡಚಣೆಗಳು ಬಂದು ಆರು ತಿಂಗಳ ಅವಧಿಯವರೆಗೂ ಮಾರುಕಟ್ಟೆಯಲ್ಲಿ ಇವರ ಉದ್ಯೋಗವು ತೊಂದರೆಯನ್ನು ಅನುಭವಿಸಬೇಕಾಯಿತು. ಆದರೆ ಮತ್ತೇ ಕೈಬಿಡದೇ ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ಉತ್ಪಾದನೆಗಳನ್ನು ಜೋಡಿಸಿಕೊಂಡರು. ತಾಸಿಗೆ 200 ರೊಟ್ಟಿಗಳನ್ನು ತಯಾರಿಸುವ ಯಂತ್ರದಿಂದ ಅನೇಕ ರೊಟ್ಟಿಗಳ ಬೇಡಿಕೆಗೆ ಪೂರೈಸುವಲ್ಲಿ ತೊಡಗಿದರು. ಜೊತೆಗೆ ಕುರುಕುರೆ, ಉಪ್ಪಿನಕಾಯಿ, ಚಟ್ಟಣಿ, ಚಕ್ಕಲಿ ಮುಂತಾದ ಪದಾರ್ಥಗಳನ್ನು ಸಿದ್ಧಪಡಿಸಲು ಕೂಡಾ ಮಾಡಿಕೊಂಡರು. ಸುತ್ತಮುತ್ತಲಿನ ಜಿಲ್ಲೆಗಳಾದ ಡಾವಣಗೇರೆ, ಶಿವಮೊಗ್ಗ, ಚಿಕ್ಕಮಂಗಳೂರು, ಕೊಪ್ಪಳ, ಧಾರವಾಡ, ಉತ್ತರ ಕನ್ನಡ ಹೀಗೆ ಸಾಲು ಸಾಲಾಗಿ ಬೇಡಿಕೆಗಳು ಸಾಗಿದವು. ಈ ಬೇಡಿಕೆಗೆ ಪೂರಕವಾಗಿ ಸಾಗಾಟಕ್ಕಾಗಿ ಖಾಸಗಿ ವಾಹನಗಳನ್ನು ಬಾಡಿಗೆಯಲ್ಲಿ ಪಡೆದು ಪೂರೈಸ ತೊಡಗಿದರು. ಸುಮಾರು 3 ವರ್ಷದಲ್ಲಿ ರೂ.2 ರಿಂದ 2.5 ಲಕ್ಷ ರೂಪಾಯಿಗಳು ಉತ್ಪಾದನೆಯ ಸಾಗಾಟಕ್ಕಾಗಿ ಖಚರ್ಾಗಿರುವುದು ಎಂದು ಶ್ರೀ ರವಿಯವರು ತಿಳಿಸಿರುತ್ತಾರೆ. ಮನೆಯ 7 ಸದಸ್ಯರನ್ನು ಒಳಗೊಂಡು ಕೆಲಸಕ್ಕಾಗಿ ಕಾಲೇಜು ವಿದ್ಯಾಥರ್ಿಗಳಿಗೆ ಅವಕಾಶ ನೀಡಿದರು. ಇವರ ಸ್ವ ಉದ್ಯೋಗದ ಬೆಳವಣಿಗಾಗಿ ಕೆನರಾ ಬ್ಯಾಂಕಿನವರು ಹಣಕಾಸು ಸಹಕಾರವನ್ನು ನೀಡಲು ಮುಂದೆ ಬಂದರು.

2013ರಲ್ಲಿ ಕೆನರಾ ಬ್ಯಾಂಕಿನಿಂದ ಈ ಉದ್ಯೋಗಕ್ಕೆ ಬಂಡವಾಳದ ಆಥರ್ಿಕ ಸಹಾಯಕ್ಕಾಗಿ ರೂ. 15 ಲಕ್ಷ ಗಳ ಓವರ್ ಡ್ರಾಫ್ಟ್ ವ್ಯವಸ್ಥೆಯನ್ನು ಕಲ್ಪಿಸಿಕೊಂಡರು. ಜೊತೆಗೆ ಸ್ವ ಸಹಾಯ ಸಂಘದಿಂದ ಕಚ್ಛಾ ಸಾಮಾಗ್ರಿಗಳ ಖರೀದಿ ಮತ್ತು ಇತರೆ ನಿರ್ವಹಣೆಗಾಗಿ ಹಾಗೂ ಟಾಟಾ ಎಸಿ. ಖರೀದಿಯನ್ನು ಮಾಡಲು ಒಟ್ಟು ಗೂಡಿ ರೂ.4 ಲಕ್ಷ ಸಾಲವನ್ನು 7 ವರ್ಷದಲ್ಲಿ ಪಡೆದುಕೊಂಡಿರುತ್ತಾರೆ. ಹಂತ ಹಂತವಾಗಿ ಪಡೆದ ಈ ಸಾಲದಲ್ಲಿ ಒಂದು ವಾರದ ಕಂತನ್ನು ಬಾಕಿ ಇಡದೆ ಸರಿಯಾಗಿ ತುಂಬುತ್ತಿದ್ದಾರೆ. ‘ಪ್ರಯತ್ನಕ್ಕೆ ಫಲವಿದೆ’ ಎಂಬಂತೆ, ಮತ್ತೇ ಹಿಟ್ಟಿನ ಗಿರಣಿ ಮಿಷನ್, ತಾಸಿಗೆ 600 ರೊಟ್ಟಿಗಳನ್ನು ತಯಾರಿಸುವ ಸಂಪೂರ್ಣ ಯಂತ್ರ ಚಾಲಿತ ರೊಟ್ಟಿ ಮತ್ತು ಚಪಾತಿ ತಯಾರಿಕಾ ಮಿಷನ್, ಕುರುಕುರೆ ಪಾಕೇಟ್ ಪ್ಯಾಕಿಂಗ ಮಿಷನ್ ಬಂಡವಾಳವನ್ನು ವಿನಿಯೋಗಿಸುತ್ತಾ ತುಂಬಿದರು ಯಂತ್ರಗಳನ್ನು ಮನೆಯ ಸುತ್ತ ಮುತ್ತ.
ವಿದ್ಯುತ್ ಪ್ರವಾಹದ ವ್ಯಥೆಯಿಂದ ಮನೆಯ ಸದಸ್ಯರು ರಾತ್ರಿಯಲ್ಲಿಯೇ ಉತ್ಪಾದನೆಗೆ ತೊಡಗಿಸಿಕೊಳ್ಳುವರು. ಮನೆಯಲ್ಲಿಯೇ ಈ ಉದ್ಯೋಗದ ನಿರ್ವಹಣೆಯನ್ನು ತಂದೆಯವರು ಮಾಡುತ್ತಿದ್ದರೆ, ಮನೆಯ ಅಚ್ಚುಕಟ್ಟು ಸಂಸಾರದೊಟ್ಟಿಗೆ ಉದ್ಯೋಗದ ಉತ್ಪಾದನೆಯಲ್ಲಿ ಮಾರ್ಗದಶರ್ಿಸುತ್ತಿರುವ ತಾಯಿ, ಮಾರುಕಟ್ಟೆಯ ವ್ಯವಸ್ಥೆಗೆ ಸಾತು ನೀಡುತ್ತಿರುವ ಗಂಡು ಮಕ್ಕಳು, ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎನ್ನುವ ಗಾದೆ ಮಾತನ್ನು ಸುಳ್ಳು ಮಾಡಿದ ಮಗಳು, ತಾವು ಕೂಡಾ ಪರರ ಮನೆಯ ಹೆಣ್ಣುಮಕ್ಕಳು ಎನ್ನುವುದನ್ನು ಮರೆಸಿರುವಂತಹ ಆದರ್ಶ ಸೊಸೆಯಂದಿರು ಒಟ್ಟು ಗೂಡಿ ಈ ಸ್ವ ಉದ್ಯೋಗದ ರಥವನ್ನು ಸಾಮರಸ್ಯದೊಂದಿಗೆ ಎಳೆಯುತಿಹರು.

ಈಗ ಆರು ವರ್ಷಗಳ ಪೂಣರ್ಾವಧಿಯಲ್ಲಿ ಸಾಗಿದ ಇವರ ಗೃಹದ್ಯೋಗವು ಹಂತ ಹಂತವಾಗಿ ಬೆಳೆಯುತ್ತ ರೂ.3 ಲಕ್ಷ ಬಂಡವಾಳದಿಂದ ರೂ.30 ಲಕ್ಷ ಬಂಡವಾಳದವರೆಗೂ, ಖಾಲಿ ಇದ್ದ ಮನೆಯ ಸುತ್ತಮುತ್ತಲಿನ ಜಾಗೆಯಲ್ಲಿ ಯಂತ್ರಗಳ ಬಿತ್ತನೆಯ ಸಾಲು ಸಾಲುಗಳು, ಕೆಲಸ ಹಂಚುವಿಕೆಯೊಂದಿಗೆ ಆಳುಗಳ ಚಲನವಲನತೆಯು ತುಂಬಿ ಸ್ವ ಉದ್ಯೋಗವು ಉದ್ಯಮವಾಗಿ ಬೆಳೆದು ನಿಂತಿರುವುದನ್ನು ನೋಡಿದರೆ ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. 15 ಜನರಿಗೆ ಉದ್ಯೋಗವನ್ನು ಪ್ರಾರಂಭದಲ್ಲಿ ನೀಡಿದ ಇವರು ಈಗ ಪ್ಯಾಂಕಿಂಗ್ ಯಂತ್ರದ ಮಿಷನ್ ಅಳವಡಿಸಿದ್ದು, ಅರ್ಧದಷ್ಟು ಕೆಲಸದ ಆಳುಗಳು ಕಡಿಮೆ ಆಗಿರುವರು. ಈಗ ಸಧ್ಯದಲ್ಲಿ 3 ಗಂಡು ಮಕ್ಕಳು ಮತ್ತು 4 ಜನ ಹೆಣ್ಣುಮಕ್ಕಳು ಈ ಉದ್ಯೋಗದಲ್ಲಿ ಜೀವನವನ್ನು ರೂಪಿಸಿಕೊಂಡಿರುವರು. ಪ್ಯಾಕಿಂಗ್ ಸಂಖ್ಯೆಯ ಆದಾರದಲ್ಲಿ ಕೂಲಿಯನ್ನು ಕೆಲವರಿಗೆ ಗುತ್ತಿಗೆ ಆಧಾರದಲ್ಲಿ ಕೆಲವರಿಗೆ ಹೀಗೆ ಸುಮಾರು ರೂ.3000/- ಸಾವಿರದಿಂದ ರೂ.9000/- ವರೆಗೂ ವೇತನವನ್ನು ಮಾಸಿಕವಾಗಿ ಪಡೆಯುತ್ತಿರುವರು. ಪ್ರತಿ ತಿಂಗಳು ರೂ.3 ರಿಂದ 4 ಲಕ್ಷದವರೆಗಿನ ವ್ಯಾಪಾರ ವಹಿವಾಟುಗಳನ್ನು ಈ ಕುಟುಂಬದ ಎಲ್ಲ ಸದಸ್ಯರೊಂದಿಗೆ ನಡೆಸುತ್ತಿದ್ದು, ತಿಂಗಳಿಗೆ ರೂ.75 ಸಾವಿರದಿಂದ ರೂ.1 ಲಕ್ಷದವರೆಗೂ ಆದಾಯದತ್ತ ಸಾಗಿರುವರು.

‘ಗುಣಮಟ್ಟದ ಖಾದ್ಯದೊಂದಿಗೆ ಉತ್ತಮ ಸೇವೆಯನ್ನು ಒದಗಣೆ’ ಇವರ ಉದ್ಯೋಗದ ಧ್ಯೇಯವಾಗಿರುವುದು. ಗ್ರಾಮಾಭಿವೃದ್ಧಿ ಯೋಜನೆಯು 2009ರಂದು ಹಾವೇರಿ ಜಿಲ್ಲೆಯಲ್ಲಿ ವಿಸ್ತರಣೆ ಆದಾಗ ಪ್ರಾರಂಭಿಸಿದ ಶ್ರೀ ಆಂಜನೇಯ ಸ್ವ ಸಹಾಯ ಸಂಘದಲ್ಲಿ ಶ್ರೀಮತಿ ಲೀಲಾವತಿಯವರನ್ನು ಒಳಗೊಂಡು ಒಟ್ಟು 15 ಜನ ಸದಸ್ಯರು ಈಗಲು ಮುಂದುವರೆಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆದಿರುವರು. ಇದರಲ್ಲಿ 9 ಸದಸ್ಯರು ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿಕೊಂಡಿರುವರು. ಕಂತು ಬಾಕಿ ಇಲ್ಲದೇ ಆಥರ್ಿಕ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಆದರ್ಶ ಸಂಘವಾಗಿರುವುದು. ಉತ್ತಮ ಸಂಘದ ವ್ಯವಹಾರ ಮತ್ತು ಆದರ್ಶ ಮಾರ್ಗದರ್ಶದೊಂದಿಗೆ ಮುನ್ನಡೆಸುತ್ತಿರುವ ಮೃದು ಸ್ವಭಾವದ ಶ್ರೀಮತಿ ಲೀಲಾವತಿಯವರು ಸಂಘದಲ್ಲಿ ಎಲ್ಲರಿಗೂ ತುಂಬಾ ಅಚ್ಚುಮೆಚ್ಚಿನ ನಾಯಕಿಯೂ ಕೂಡಾ ಆಗಿರುವುದನ್ನು ಹೆಮ್ಮೆಯಿಂದ ಹೇಳಿಕೊಂಡರು.

ಹತ್ತು ಮನಸುಗಳು ಒಂದಾಗಿ ಸೇರಿ ಆತ್ಮಿಯತೆಯಿಂದ ದುಡಿದಲಿ,್ಲ ಆಥರ್ಿಕ ಸ್ವಾವಲಂಭನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ. ಎನ್ನುವ ಪೂಜ್ಯರ ನುಡಿಯು ಇಲ್ಲಿ ಅರ್ಥಗಭರ್ಿತವಾಗಿದೆ.

Author: Smt. Vishala B Mallapur

Leave a Reply

Your email address will not be published. Required fields are marked *