Uncategorized

ಭಲೇ ಹಲ್ಲು,ಉಗುರು ಮತ್ತು ಕಾಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದು ದಾಖಲೆ ಮಾಡಿದ ರಾಜೇಶ ಪ್ರಭು

1508555_836832959762671_8483598872305841648_n
ಸಮಾಜದಲ್ಲಿ ಹಲವಾರು ಜನ ವಿವಿಧ ಸಾಧಕರು ಇದ್ದಾರೆ.ಅದರಲ್ಲಿಯೂ ಆ ಸಾಧನೆಯಿಂದಲೆ ಹೆಸರು ವಾಸಿಯಾಗುವವರು ಬಹಳ ಕಡಿಮೆ ಮಂದಿ ಹೀಗಾಗಿ ಸಾಧನೆಗೆ ಸರಿಯಾದ ಮಾನ್ಯತೆ ದೊರೆಯದಿದ್ದರೆ ಅದು ಅಲ್ಲಿಯೇ ಕಮರಿ ಹೋಗಬಹುದು. ಆದರೆ ಉಡುಪಿ ತಾಲೂಕಿನ ಶಿರ್ವ ಸಮೀಪದ ಪೆನರ್ಾಲಿನ ರಾಜೇಶ ಪ್ರಭು ಎಂಬವರು ತನ್ನ ವಿಶೇಷ ಸಾಧನೆಯಿಂದ ಇಂದು ವಿಶ್ವ ದಾಖಲೆ ಮಾಡುವತ್ತ ದಾಪುಗಾಲು ಹಾಕುತ್ತಿದ್ದಾರೆ.

ಹಲ್ಲು 30 ಸೆಕೆಂಡ್,ಕಾಲು 46,ಉಗುರು 33 ಸೆಕೆಂಡ್ ಇದು ವರು ವಲ್ಡ್ ಇಂಡಿಯಾ ರೆಕರ್ಾಡ್ಗೆ ತೆಂಗಿನಕಾಯಿ ಸುಲಿಯುದಕ್ಕೆ ವ್ಯಯಿಸಿದ ಸಮಯ. ನಿಮಗೆ ಆಶ್ಚರ್ಯವಾಗಬಹುದು ತೆಂಗಿನಕಾಯಿಯನ್ನು ಕತ್ತಿಯಿಂದ ಅಥವಾ ಇತರ ಸಾಧನದಿಂದ ಸುಲಿಯಲು ಕಷ್ಟ ಪಡುವ ನಾವು,ಕೇವಲ ಹಲ್ಲು,ಉಗುರು ಕಾಲಿನಿಂದ ಸಿಪ್ಪೆ ಸುಲಿಯುವುದು ದೂರದ ಮಾತು ಆದರೆ ರಾಜೇಶ ಪ್ರಭು ರವರು ಇದನ್ನು ಅತ್ಯಂತ ಚಮತ್ಕಾರದಲ್ಲಿ ಮುಗಿಸುತ್ತಾರೆ.

ಮಹರಾಷ್ಟದ ನಾಸಿಕ್ ನಲ್ಲಿ 28 ಇಂಚು ಸುತ್ತಳತೆಯ 4.477 ಕೆ,ಜಿ ತೂಕದ ತೆಂಗಿನಕಾಯಿಯನ್ನು ಉಗುರು,ಕಾಲು ಮತ್ತು ಹಲ್ಲಿನಿಂದ ಸುಲಿದು ದಾಖಲೆ ಮಾಡಿದ್ದಾರೆ.ಈಗಾಗಲೇಋ ವಿವಿಧ ಕಡೆಗಳಲ್ಲಿ ಈ ಪ್ರದರ್ಶನವನ್ನು ನೀಡಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರಗಾಗಿದ್ದಾರೆ.ಅದರಲ್ಲಿಯೂ ಭಾರತದಲ್ಲಿ ಬರೇ ಕಾಲಿನಿಂದ ತೆಂಗಿನಕಾಯಿ ಸುಲಿಯುವವರು ಬಹಳ ಕಡಿಮೆ ಆದರೆ ಇವರು 3 ವಿಭಾಗದಲ್ಲಿಯೂ ಈ ಸಾಧನೆ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ.ಈಗಾಗಲೇ ಲಿಮ್ಕಾ ದಾಖಲೆಯನ್ನು ಮಾಡಿರುವ ಇವರು ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ.

1997 ರಲ್ಲಿ ಪ್ರಾರಂಭವಾದ ಈ ಹವ್ಯಾಸ ಅಥವಾ ದಾಖಲೆಯ ಪಯಣ ಇಂದಿನವಿಗೆ ಸಾಗಿದೆ.ಈ ಬಗ್ಗೆ ಅವರೊಂದಿಗೆ ಮಾತನಾಡಿದಾಗ ಮೊದಲು ಬಹಳ ಕಷ್ಟವಾಗುತ್ತಿತ್ತು ಒಂದು ತೆಂಗಿನಕಾಯಿಯ ಸಿಪ್ಪೆ ಸುಲಿಯಲು ಹಲ್ಲು,ಉಗುರು,ಕಾಲಿನಿಂದ ಬಹಳ ಸಮಯ ತೆಗೆದುಕೊಳ್ಳುತ್ತಿದ್ದೆ ಆದರೆ ಇಂದು ಕೆಲವೇ ಸೆಕೆಂಡುಗಳಲ್ಲಿ ಇದನ್ನು ಮಾಡಲು ಸಾದ್ಯವಾಗಿದೆ.ಮಂಗಗಳು ತಮ್ಮ ಬೆರಳನ್ನು ಉಪಯೋಗಿಸಿ ಅಥವಾ ಹಲ್ಲಿನಿಂದ ಸಿಪ್ಪೆ ಸುಲಿಯುದನ್ನು ಗಮನಿಸಿ ಯಾಕೆ ನಾನು ಪ್ರಯತ್ನ ಮಾಡಬಾರದು ಎಂದು ಇದನ್ನು ಪ್ರಾರಂಭಿಸಿದೆ.ಮೊದಲಿನಿಂದಲೇ ಸಾಹಸ ಕಲೆಯಲ್ಲಿ ಆಸಕ್ತಿ ಹೊಂದಿದ ಕಾರಣ ನನಗೆ ಇದನ್ನು ಮಾಡಲು ಸಾದ್ಯವಾಯಿತು ಎಂದು ವರು ಹೇಳುತ್ತಾರೆ.

ಇದಲ್ಲದೆ 2 ಕೈಯಿಂದಲೂ ಕನ್ನಡಿ ಬರಹವನ್ನು ಬರೆಬಲ್ಲರು ಇವರು.ಸಾಮಾನ್ಯ ಹಳ್ಳಿ ಪ್ರದೇಶದಲ್ಲಿ ಬೆಳೆದರೂ ಸ್ಥಳೀಯ ಜನರ ಪ್ರೇರಣೆಯಿಂದ ಈ ಸಾಧನೆ ಸಾದ್ಯವಾಯಿತು ಎನ್ನತ್ತಾರೆ.

ಮಂಗಳೂರಿನ ಖಾಸಗಿ ಟ್ರಾವೆಲ್ಸ್ ನಲ್ಲಿ ಉದ್ಯೋಗ ಮಾಡುತ್ತಿರುವ ಇವರು ಇದನ್ನು ಹವ್ಯಾಸವನ್ನಾಗಿ ಮಾಡಿದ್ದಾರೆ. ಮನೆಯಲ್ಲಿ ತೆಂಗಿನಕಾಯಿ ಸುಲಿಯಲು ಕತ್ತಿ ಸಿಗದಿದ್ದಾಗ ಅವರು ಬರೇ ಕೈಂದ ಸಿಪ್ಪೆ ಸುಲಿದು ಮನೆಯವರಿಗೆ ಸಹಾಯ ಮಾಡುತ್ತಾರೆ

60 ಕೆ.ಜಿ ಭಾರವನ್ನು ಹಲ್ಲಿನಿಂದ ಎತ್ತುವುದು ಮುಂತಾದ ಸಾಹಸವನ್ನು ಅವರು ಮಾಡಬಲ್ಲರು.ಈಗಾಗಲೇ ವಲ್ಡ್ ರೆಕಾಡರ್್ ಇಂಡಿಯಾಕ್ಕೆ ಸೇರ್ಪಡೆಯಾದ ಇವರು ಪ್ರವಾಸ ಹೋದ ಕಡೆಗಳಲ್ಲಿ ರಂಜನೆಗಾಗಿ ಈ ರೀತಿಯ ಪ್ರದರ್ಶನ ಮಾಡುತ್ತಾರೆ.29 ಸೆಕೆಂಡ್ ನಲ್ಲಿ ಹಲ್ಲಿನಿಂದ ತೆಂಗಿನಕಾಯಿ ಸುಲಿದಿರುವುದು ಈಗಿನ ದಾಖಲೆಯಾಗಿದೆ.ಇದನ್ನು ಇವರು ಮಾಡಬಲ್ಲರು ಆದರೆ ಅದಕ್ಕಾಗಿ ಲಕ್ಞಾಂತರ ರೂಪಾಯಿ ವ್ಯಯಿಸಬೇಕಾಗಿದೆ. ಅಷ್ಟೋಂದು ಹಣವನ್ನು ಹಣವನ್ನು ಹೋದಾಣಿಕೆ ಮಾಡುವುದು ಕಷ್ಟವಾಗಿದೆ ಎನ್ನುತ್ತಾರೆ ಅವರು.

ದಾನಿಗಳು ಮುಂದೆ ಬಂದರೆ ಗಿನ್ನಸ್ ದಾಖಲೆ ಖಂಡಿತವಾಗಿಯೂ ಮಾಡುದಾಗಿ ಹೇಳುವ ಅವರು ತನ್ನ ಈ ರೀತಿಯ ಸಾಧನೆಗೆ ಹಳ್ಳಿಯ ಪರಿಸರ ಕಾರಣವಾಗಿದೆ ಪಟ್ಟಣ ಪ್ರದೇಶವಾದರೆ ನಾನು ಈ ಸಾಧನೆ ಮಾಡಲಾಗುತ್ತಿರಲ್ಲಿಲ್ಲ ಇಲ್ಲಿರುವ ವಾತಾವರಣ ಮತ್ತು ಕಾಡು ಮಂಗಗಳು ನನಗೆ ಪ್ರೇರಣೆ ಎನ್ನುತ್ತಾರೆ.

11659333_815732301872737_7143894671878919406_n

ಈಗಾಗಲೇ ಅವರು ದೇಶದ ವಿವಿಧ ಕಡಗಳಲ್ಲಿ ಪ್ರದರ್ಶನ ನೀಡಿದ್ದಾರೆ.ಅಲ್ಲದೆ ಶ್ರೀ.ಕ್ಷೇ.ಧ.ಗ್ರಾ ಯೋಜನೆಯ ಒಕ್ಕೂಟಗಳ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿರುವ ಅವರಿಗೆ ಮತ್ತಷ್ಟು ಪ್ರೋತ್ಸಾಹ ಸಿಗಲಿ ಅಲ್ಲದೆ ಅವರು ಈ ದಾಖಲೆಯನ್ನು ಆದಷ್ಟು ಬೇಗನೇ ನೆರವೇರಿಸಿ ದೇಶಕ್ಕೆ ಕೀತರ್ಿ ತರಲಿ ಎಂಬ ಹಾರೈಕೆ ನಮ್ಮದು.

ಶ್ರೀ ರಾಘವೇಂದ್ರ ಪ್ರಭು,ಕವರ್ಾಲ

Leave a Reply

Your email address will not be published. Required fields are marked *