ಬಿಡುವಿನ ಸಮಯದಲ್ಲಿ ಸ್ವ ಉದ್ಯೋಗವನ್ನು ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ಕಸ್ತೂರಿ ಭೋಪಾಲ್ ಬಿರಡಿ ಎಂಬುವವರು ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘ ಸದಸ್ಯರಾಗಿದ್ದು, ಮನೆಯಲ್ಲಿ ಶ್ಯಾವಿಗೆಯನ್ನು ತಯಾರು ಮಾಡಿ ವ್ಯಾಪಾರ ಮಾಡುತ್ತಿರುವರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿದ್ದು, ಬೆಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಸಂಘ ಸಂಸ್ಥೆಗಳಿದ್ದು, 2011ರಲ್ಲಿ ಪ್ರಾರಂಭವಾದ ಈ ಯೋಜನೆಯನ್ನು ತೆಗೆದುಕೊಂಡು, ಹತ್ತು ಜನರನ್ನೊಳಗೊಂಡ ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘವನ್ನು ರಚಿಸಿದರು. ಈ ಗ್ರಾಮವು ಹೆಚ್ಚು ಮಳೆಯಾಶ್ರಿತ ಪ್ರದೇಶವಾದ್ದರಿಂದ ಇಲ್ಲಿ ಕೆಲಸ ಸಿಗುವುದು ಕಡಿಮೆ. ಈ ಸಂದರ್ಭದಲ್ಲಿ ಯಾರೇ ಪ್ರಗತಿನಿಧಿಯನ್ನು ತೆಗೆದುಕೊಳ್ಳುವ ವಿಚಾರ ಮಾಡುತ್ತಿರಲಿಲ್ಲ.
ಸ್ವ ಉದ್ಯೋಗದೆಡೆಗೆ
ಶ್ರೀ ರಾಘವೇಂದ್ರ ಸ್ವ ಸಹಾಯ ಸಂಘ ಸೇರಿದ ಪ್ರಥಮದಲ್ಲಿ ರೂ. 5,000/- ಪ್ರಗತಿನಿಧಿಯನ್ನು ಪಡೆದುಕೊಂಡು, ಅದನ್ನು ಕೃಷಿಯಲ್ಲಿ ಉಪಯೋಗಿಸಿದರು. ನಂತರ ಸ್ವ ಉದ್ಯೋಗವನ್ನು ಮಾಡಬೇಕೆಂಬ ಪರಿಕಲ್ಪನೆಯನ್ನು ಮಾಡಿಕೊಂಡು, ಅವರ ಗಂಡನಾದ ಭೂಪಾಲರವರ ಸಹಕಾರದಿಂದ ರೂ. 10,000/- ಪ್ರಗತಿನಿಧಿಯನ್ನು ಪಡೆದುಕೊಂಡು, ಶ್ಯಾವಿಗೆ ಮೆಷಿನ್ ಖರೀದಿ ಮಾಡಿ, ಅದಕ್ಕೆ ತಕ್ಕಂತೆ ತರಬೇತಿಯನ್ನು ಕೂಡಾ ಪಡೆದುಕೊಂಡರು. ಅದಕ್ಕೆ ಬೇಕಾಗುವ ಕಚ್ಚಾ ಸಾಮಾಗ್ರಿಯನ್ನು ಹುಕ್ಕೇರಿಯಿಂದ ಪಡೆದುಕೊಂಡು, ಒಂದು ಕೆ.ಜಿ. ರೂ. 35/-ರಂತೆ ಶ್ಯಾವಿಗೆಯನ್ನು,ದಿನಕ್ಕೆ ಸುಮಾರು40-50 ಕೆ.ಜಿ.ಶಾವಿಗೆಯನ್ನು ಮಾಡುವರು ಕೆ.ಜಿ. ಶಾವಿಗೆಗೆ ರೂ. 12/- ಲಾಭ ಬರುವುದು. ಈ ಗ್ರಾಮದಲ್ಲಿ ಲೋಡ್ ಶೆಡ್ಡಿಂಗ್ ಇದ್ದು, ಪ್ರತಿದಿನ ಆರು ಗಂಟೆ ನಂತರ ಈ ಕೆಲಸವನ್ನು ಮಾಡುತ್ತಾರೆ. ಸ್ಥಳೀಯರು ಹೆಚ್ಚಾಗಿ ಈ ಶ್ಯಾವಿಗೆಯನ್ನು ಆಸಕ್ತಿಯಿಂದ ಪಡೆಯುತ್ತಿರುವರು.
ಕಸ್ತೂರಿರವರ ಆತ್ಮವಿಶ್ವಾಸ
ಕಸ್ತೂರಿರವರಿಗೆ ಹೆಚ್ಚಿನ ಮಾಹಿತಿ ಮಾಗದರ್ಶನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ನೀಡಿದ್ದು, ಅವರ ಈ ಶ್ರೇಯಸ್ಸಿಗೆ ಕಾರಣರಾಗಿರುವರು. ಈ ವರ್ಷದಲ್ಲಿ ಹಪ್ಪಳ ತಯಾರು ಮಾಡುವ ಯಂತ್ರಕ್ಕೆ ರೂ. 30,000/- ಪ್ರಗತಿನಿಧಿ ಬೇಡಿಕೆ ಸಲ್ಲಿಸಿದ್ದು, ಇವೆರಡೂ ಸ್ವ ಉದ್ಯೋಗದ ವ್ಯಾಪಾರವನ್ನು ಉತ್ತಮವಾಗಿ ಮುನ್ನೆಡೆಸಿಕೊಂಡು ಹೋಗುವ ಅಭಿಲಾಷೆಯನ್ನು ಹೊಂದಿರುವರು.
ಶ್ರೀ ಗುರುಬಸಪ್ಪ ವೀರಾಪೂರ