Uncategorized

ಸಕಾರಾತ್ಮಕ ಜೀವನವಿಧಾನ

ಜೆರಿ ಒಂದು ರೆಸ್ಟೋರೆಂಟ್ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ ಅಂಶಗಳನ್ನೇ ಗುರುತಿಸುವ, ತಮ್ಮನ್ನು ಪ್ರೋತ್ಸಾಹಿಸುವ, ಪ್ರತಿಯೊಂದು ಸನ್ನಿವೇಶದ ಒಳ್ಳೆಯ ಮಗ್ಗುಲಿನತ್ತ ಗಮನ ಸೆಳೆಯುವ ಅಂಶವನ್ನು ಕಂಡರೆ ರೆಸ್ಟೋರೆಂಟ್ ನ ಕೆಲಸಗಾರರಿಗೆಲ್ಲ ತುಂಬ ಪ್ರೀತಿ. ಒಂದು ದಿನ ಜೆರಿಯನ್ನು ಒಬ್ಬರು ಕೇಳಿದರು. ನೀವು ಯಾವಾಗಲೂ ಸಕಾರಾತ್ಮಕವಾಗಿಯೇ ಆಲೋಚಿಸುತ್ತೀರಿ, ವತರ್ಿಸುತ್ತೀರಿ ಅದು ಹೇಗೆ? ಅದಕ್ಕೆ ಜೆರಿ ಹೇಳಿದನು ಪ್ರತಿದಿನ ಬೆಳಗ್ಗೆ ಏಳುವಾಗ ನನಗೆ ನಾನೇ ಹೇಳಿಕೊಳ್ಳುತ್ತೇನೆ.ಜೆರಿ ನಿನ್ನ ಮುಂದೆ ಎರಡು ಆಯ್ಕೆಗಳಿವೆ.ನೀನು ಸಂತೋಷವಾಗಿಯೂ ಇರಬಹುದು ಅಥವಾ ಕಿರಿಕಿರಿಯನ್ನು ಅನುಭವಿಸಲೂಬಹುದು ಎಂದು, ನಾನು ಸಂತೋಷವಾಗಿರುವುದನ್ನೇ ಆರಿಸಿಕೊಳ್ಳುತ್ತೇನೆ. ಏನಾದರೂ ಕೆಟ್ಟದ್ದು ಸಂಭವಿಸಿದಾಗಲೆಲ್ಲ ನಾನು ಅದಕ್ಕೆ ಬಲಿಪಶುವೂ ಆಗಬಹುದು ಅಥವಾ ಆ ಕೆಟ್ಟ ಅನುಭವದಿಂದ ಪಾಠವನ್ನೂ ಕಲಿಯಬಹುದು. ನಾನು ಅದರಿಂದ ಪಾಠ ಕಲಿತುಕೊಳ್ಳುವುದನ್ನೆ ಆರಿಸಿಕೊಳ್ಳತ್ತೇನೆ. ಯಾರಾದರೂ ನನ್ನಲ್ಲಿಗೆ ದೂರು ತಂದಾಗ, ನಾನು ಅವರ ದೂರನ್ನು ಅಂಗೀಕರಿ ಸಬಹುದು ಅಥವಾ ಜೀವನದಲ್ಲಿರುವ ಒಳಿತಿನ ಕಡೆ ಅವರ ಲಕ್ಷ್ಯವನ್ನೂ ಸೆಳೆಯಬಹುದು. ನಾನು ಜೀವನಕ್ಕಿರುವ ಒಳ್ಳೆಯ ಆಯಾಮದತ್ತ ಮನಸ್ಸು ಕೊಡುವುದನ್ನೇ ಆರಿಸಿಕೊಳ್ಳುತ್ತೇನೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದು ಪರಿಸ್ಥಿತಿಯಲ್ಲೂ ಇಂಥ ಆಯ್ಕೆಗಳಿವೆ. ಆಯ್ಕೆ ಮಾಡಿಕೊಳ್ಳುವವರು ಮಾತ್ರ ನಾವೇ. ವಿವಿಧ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ರೀತಿಯನ್ನು ಆರಿಸಿಕೊಳ್ಳುವವರು ನಾವೇ. ಇತರರು ನಮ್ಮ ಬದುಕಿನ ಮೇಲೆ ಎಂಥ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಆರಿಸಿಕೊಳ್ಳುವವರು ನಾವೇ. ಸಂತಸದಿಂದಿರುವುದು ಅಥವಾ ಸಂಕಟಪಡುವುದು-ಇದನ್ನು ಆರಿಸಿಕೊಳ್ಳುವವರು ನಾವೇ. ಕೊನೆಯ ಸತ್ಯ ಏನೆಂದರೆ ನಾವು ಹೇಗೆ ಬದುಕಬೇಕು ಎನ್ನುವುದನ್ನು ಆರಿಸಿಕೊಳ್ಳುವವರು ನಾವೇ.

ಒಮ್ಮೆ ದರೋಡೆಕೋರರು ಜೆರಿಯ ರೆಸ್ಟೋರೆಂಟ್ ನ ಒಳಗೆ ನುಗ್ಗಿ ಅವನತ್ತ ಹಲವು ಬಾರಿ ಗುಂಡುಹಾರಿಸಿದರು. ಜೆರಿ ಕೆಳಗೆ ಬಿದ್ದ. ಮತ್ತೆ ಅವನು ಕಣ್ತೆರೆದಾಗ ಅವನಿದ್ದದ್ದು ಆಸ್ಪತ್ರೆಯಲ್ಲಿ. ಹಲವಾರು ಜನ ಡಾಕ್ಟರ್ಗಳು ಮತ್ತು ನಸರ್್ಗಳು ಅವನ ಮಂಚವನನು ಸುತ್ತುವರಿದಿದ್ದರು. ಎಲ್ಲರೂ ಧೈರ್ಯದ ಮಾತುಗಳನ್ನು ಆಡುವವರೇ-ಎಲ್ಲ ಸರಿ ಹೋಗುತ್ತದೆ, ನೀನು ಬೇಗ ಗುಣ ಹೊಂದುತ್ತೀ. ಜೆರಿ ಸುಮ್ಮನೆ ಅವರನ್ನೆಲ್ಲ ಒಮ್ಮೆ ನೋಡಿದ. ಬಾಯಲ್ಲಿ ಅವರೆಲ್ಲ ಭರವಸೆಯ ಮಾತುಗಳನ್ನೇ ಆಡುತ್ತಿದ್ದರೂ ಅವರ ಕಣ್ಣುಗಳಲ್ಲಿ ಇನ್ನಿವನ ಕತೆ ಮುಗಿದ ಹಾಗೆ ಎನ್ನುವ ಭಾವನೆಯೇ ಮಿನುಗುತ್ತಿತ್ತು. ತಕ್ಷಣ ಜೆರಿ ಜಾಗೃತನಾದ. ಈಗ ತನ್ನ ಸುತ್ತಲ ಪರಿಸರದಲ್ಲಿ ಆಶಾವಾದೀ ಮನೋಭಾವನೆಯನ್ನು ತುಂಬದಿದ್ದರೆ ತಾನು ಬದುಕುಳಿಯುವ ಸಾಧ್ಯತೆ ಇಲ್ಲ ಎನ್ನುವುದನ್ನು ಮನಗಂಡ. ಅಷ್ಟರಲ್ಲಿ ನಸರ್್ ಒಬ್ಬಳು ಕೂಗಿ ಕೇಳಿದಳು.ನೀವು ಯಾವುದಕ್ಕಾದರೂ ಅಲಜರ್ಿಕ್ ಆಗಿದ್ದೀರಾ?ಜೆರಿ ಹೌದೆಂದ. ಡಾಕ್ಟರ್ ಗಳು ಅವನ ಉತ್ತರವನ್ನೇ ನಿರೀಕ್ಷಿಸುತ್ತಿರುವಾಗ ಜೆರಿ ಹೇಳಿದ:ಬುಲೆಟ್ಗಳಿಗೆ,ನೆರೆದ ವೈದ್ಯರ ತಂಡ ನಕ್ಕಿತು. ಈಗ ಜೆರಿ ನುಡಿದ ನಾನು ಜೀವಿಸಿರಲು ನಿರ್ಧರಿಸಿದ್ದೇನೆ. ಸಾವು ಬದುಕಿನ ನಡುವೆ ಬದುಕನ್ನು ಆರಿಸಿಕೊಂಡಿದ್ದೇನೆ. ನಾನೊಬ್ಬ ಜೀವಂತ ವ್ಯಕ್ತಿ ಎನ್ನುವಂತೆ ಆಪರೇಷನ್ ಮಾಡಿ, ಆಗಲೇ ಸಾವಿನ ಮನೆಯ ಬಾಗಿಲು ಬಡಿಯುತ್ತಿರುವವನಂತೆ ಅಲ್ಲ.

ಅತ್ಯಂತ ದಕ್ಷ ವೈದ್ಯಕೀಯ ನೆರವಿನಿಂದ ಜೆರಿ ಬದುಕುಳಿದ. ಆದರೆ ಅವನು ಉಳಿದದ್ದು ತನ್ನ ಸಕಾರಾತ್ಮಕ ಚಿಂತನೆಯ ಪ್ರಚಂಡ ಶಕ್ತಿಯಿಂದ ಎನ್ನುವುದೂ ಅಷ್ಟು ನಿಜ.

ನಮ್ಮ ಮನೋಭಾವ ನಮ್ಮ ಬದುಕಿನಲ್ಲಿ ನಾವು ಅನುಭವಿಸುವ ಸುಖದು:ಖಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ನಮಗೆದುರಾಗುವ ಸೋಲು-ಗೆಲುವುಗಳು, ಲಾಭ-ನಷ್ಟಗಳು, ನಾವು ಪಡುವ ಸುಖ:ದುಖಗಳನ್ನು ನಿಶ್ಚಯಿಸುತ್ತದೆ ಎನ್ನುವಂತೆ ಮೇಲ್ನೋಟಕ್ಕೆ ತೋರಬಹುದು. ಆದರೆ ಸತ್ಯ ಎಂದರೆ ನಮ್ಮ ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುವ ಸಕಾರಾತ್ಮಕ ಅಥವಾ ನಕಾರಾತ್ಮಕ ಚಿಂತನೆ ನಮ್ಮ ಸುಖದು:ಖಗಳನ್ನು ನಿರ್ಧರಿಸುತ್ತದೆ. ದೃಷ್ಟಿ ಇದ್ದಂತೆ ಸೃಷ್ಟಿ.ಅಲ್ಲವೇ? ಜೀವನದಲ್ಲಿ ಒಂದಾದ ಮೇಲೆ ಒಂದರಂತೆ ಬಂದೊದಗುವ ಸಾಫಲ್ಯ-ವೈಫಲ್ಯಗಳನ್ನು ಪೂರ್ಣವಾಗಿ ನಿಯಂತ್ರಿಸುವುದು ಅಸಾಧ್ಯ. ಆದರೆ ನೋವನ್ನು ಕಡಿಮೆ ಮಾಡಿಕೊಂಡು ಸಕಾರಾತ್ಮಕ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

  1. ಮೊಟ್ಟ ಮೊದಲನೆಯದಾಗಿ ನಿಮ್ಮ ಬಗ್ಗೆ ನಿಮಗಿರುವ ನಕಾರಾತ್ಮಕ ಭಾವನೆಗಳನನು ನಿವಾರಿಸಿಕೊಳ್ಳಿ. ನಿಮ್ಮ ಬಗ್ಗೆ ಯಾರೇ ಎಂಥದೇ ಟೀಕೆಯನ್ನು ಮಾಡಿರಲಿ, ನೀವು ನಿಮ್ಮ ದೌರ್ಬಲ್ಯಗಳನ್ನು ಪರಿಹರಿಸಿಕೊಳ್ಳುವತ್ತ ಮಾತ್ರ ಗಮನ ಹರಿಸಿ ಮತ್ತು ನಿಮ್ಮ ಕುರಿತಾಗಿ ಸಕಾರಾತ್ಮಕವಾಗಿಯೇ ಭಾವಿಸಿ. ನಾನೊಬ್ಬ ಸಮರ್ಥ ವ್ಯಕ್ತಿ. ನಾನು ಒಳ್ಳೆಯ, ಅರ್ಥಪೂರ್ಣವಾದ, ಸುಸಂಸ್ಕೃತವಾದ ಜೀವನವನ್ನು ರೂಪಿಸಿಕೊಳ್ಳುತ್ತೇನೆ. ಯೋಗ್ಯವಾದ ಪ್ರಯತ್ನದ ಮೂಲಕ ಯಶಸ್ಸನ್ನು ನನ್ನದಾಗಿಸಿಕೊಳ್ಳುತ್ತೇನೆ ಎನ್ನುವ ಸಲಹೆಯನ್ನು ಬಲವಾಗಿ ನಿಮ್ಮ ಮನಸ್ಸಿಗೆ ಕೊಟ್ಟುಕೊಳ್ಳಿ. ಸಾಧ್ಯವಾದಾಗಲೆಲ್ಲ ಮಾನಸಿಕವಾಗಿ ಈ ಸೂಚನೆಯನ್ನು ಪುನಾರಾವತರ್ಿಸಿಕೊಳ್ಳಿ.
  2. ನಿಮ್ಮ ಪರಿಚಿತರಲ್ಲಿ ಕೆಲವರು ಬುದ್ದಿವಂತರಲ್ಲದಿರಬಹುದು, ಪ್ರತಿಭಾವಂತರಲ್ಲದಿರಬಹುದು, ಅವರ ಬಳಿ ಸಂಭಾಷಣೆ ನಡೆಸುವಾಗಲೂ ಕೂಡ ಸರಿಯಾಗಿ ಪ್ರಯತ್ನಿಸಿ.ನೀವು ಗುರಿ ಸೇರುವುದು ಖಂಡಿತ ಎನ್ನುತ್ತ ಉತ್ತೇಜನ ನೀಡುವ ಮಾತುಗಳನ್ನೇ ಆಡಿ. ಎಂದೆಂದಿಗೂ ಅವರನ್ನು ಭಂಗಿಸುವ, ನಿಂದೆಯ ಮಾತುಗಳನ್ನು ಆಡಬೇಡಿ. ಇದರಿಂದ ಅವರಿಗೆ ಪ್ರಯೋಜನ ಆಗುತ್ತದೆ ಎನ್ನುವ ಮಾತು ಹಾಗಿರಲಿ, ಸಕಾರಾತ್ಮಕ ನಿಲುವು ನಿಮ್ಮಲ್ಲಿ ನೆಲೆ ನಿಲ್ಲಲು ಇದು ಅತ್ಯಂತ ಸಹಾಯಕಾರಿ.
  3. ಕಠಿಣ ಪರಿಸ್ಥಿತಿಗಳು ಹಾಗೂ ವಿಷಮ ಸನ್ನಿವೇಶಗಳು ಎದುರಾದಾಗ ಅಂತರಂಗದ ಶಾಂತಿಯನ್ನು, ಸ್ಥೈರ್ಯವನ್ನು ಕಾಪಾಡಿಕೊಳ್ಳುವ ಅಭ್ಯಾಸವನ್ನು ಈಗಿನಿಂದಲೇ ಮಾಡಿ. ಚಿಕ್ಕಪುಟ್ಟ ಕಷ್ಟಗಳನ್ನು ಶಾಂತವಾಗಿ ಎದುರಿಸುವ ಅಭ್ಯಾಸವನ್ನು ಮಾಡುತ್ತ ಮಾಡುತ್ತ ಎಂಥ ಭಯಂಕರ ಪರಿಸ್ಥಿತಿಯನ್ನೂ ಕೂಡ ಶಾಂತವಾಗಿ ಎದುರಿಸಬಲ್ಲ ಶಕ್ತಿ ನಿಮ್ಮಲ್ಲಿ ಬೆಳೆಯುತ್ತದೆ. ನಿಮ್ಮ ನೆಮ್ಮದಿಯನ್ನು ನೀವು ಕಾಪಾಡಿಕೊಳ್ಳಲು ಸಾಧ್ಯವಾದ ಮೇಲೆ ಎಂಥ ಕಷ್ಟ ಬಂದರೇನು?
  4. ಕಷ್ಟಗಳು ಮುತ್ತಿಕೊಂಡಾಗ ನೀವು ಗಟ್ಟಿಯಾಗಿ, ಅವುಗಳ ಕಾಡುವ ಶಕ್ತಿಗಿಂತ, ನಿಮ್ಮಲ್ಲಿ ಎದುರಿಸುವ, ಸಹಿಸುವ ಶಕ್ತಿ ಹೆಚ್ಚಿದಾಗ ಕಷ್ಟಗಳ ಕುಲುಮೆಯ ಮೂಲಕ ನೀವು ಯಶಸ್ವಿಯಾಗಿ ಹಾದು ಬರಬಲ್ಲಿರಿ. ರೋಮ್ ದೇಶದ ಸಿಸ್ಟೈನ್ ಚಾಪೆಲ್ ನ ಗೋಡೆಗಳು ಮತ್ತು ಸೂರಿನಲ್ಲಿ ಮೈಕೆಲೆಂಜೆಲೋ ರಚಿಸಿದ ಅಧ್ಬುತ ಕಲಾಕೃತಿಗಳಿವೆ. ಆ ಕೆಲವು ಅಪರೂಪದ ಚಿತ್ರಗಳನ್ನು ಸೂರಿನ ಮೇಲೆ ರಚಿಸುವಾಗ ಮೈಕೆಲೆಂಜೆಲೋ ಅಟ್ಟಣಿಗೆಯ ಮೇಲೆ ಒರಗಿಕೊಂಡು ಕಾರ್ಯನಿರತನಾಗಬೇಕಾಗುತ್ತಿತ್ತು. ಅವನಿಗಾದರೋ, ವಿಪರೀತ ಬೆನ್ನು ನೋವು. ಆ ಭಂಗಿಯಲ್ಲಿ ಅವನಿಗೆ ಉಸಿರಾಡುವುದೂ ಕಷ್ಟ ಎನಿಸುತಿತ್ತು. ಆದರೆ ಅವನು ತನ್ನ ನಿಧರ್ಾರವನ್ನು ವಜ್ರಸಮವಾಗಿ ಗಟ್ಟಿಯಾಗಿಸಿಕೊಂಡು, ಇಪ್ಪತ್ತು ತಿಂಗಳ ಕಾಲ, ಪ್ರತಿದಿನ ಒರಗಿಸಿಕೊಂಡು ಚಿತ್ರ ಬಿಡಿಸಿದ. ಮೈಕೆಲೆಂಜೆಲೋ ಕಷ್ಟಗಳ ಸಮ್ಮುಖದಲ್ಲಿ ಕಲ್ಲಾದ, ಅವನಿಂದ ಅಪೂರ್ವ ಕಲಾಕೃತಿಗಳು ಅರಳಿಬಂದವು. ಕಷ್ಟಗಳನ್ನು ಸವಾಲುಗಳಾಗಿ ಸ್ವೀಕರಿಸಿ, ಅವುಗಳನ್ನು ಗೆದ್ದು ವಿಜಯಿಗಳಾಗಿ ಹೊರಬರಲೇಬೇಕು ಎನ್ನುವುದನ್ನು ನಿಮ್ಮ ಮನಸ್ಸಿಗೆ ತಿಳಿಸಿಕೊಡಿ. ನೀವು ಕಷ್ಟಗಳನ್ನು ದಾಟುವುದು ಮಾತ್ರವಲ್ಲ, ಅದಕ್ಕೂ ಮಿಗಿಲಾದುದನ್ನು ಸಾಧಿಸುತ್ತೀರಿ.
  5. ಕಷ್ಟಗಳು ಅಡರಿಕೊಂಡಾಗ ಕಿರಿಚಾಡುವುದು, ಸಿಡಿಮಿಡಿಗೊಳ್ಳುವುದು ಯತ್ನಪೂರ್ವಕವಾಗಿ ಬಿಟ್ಟುಬಿಡಿ. ಬದಲಿಗೆ ಶಾಂತವಾಗಿ ಕುಳಿತು ತರ್ಕಬದ್ದವಾಗಿ ಯೋಚಿಸಿ ಮತ್ತು ಕಷ್ಟವನ್ನು ಪರಿಹರಿಸಿಕೊಳ್ಳುವತ್ತ ಕಾರ್ಯಪ್ರವೃತ್ತರಾಗಿ. ಸನ್ನಿವೇಶ ಎಷ್ಟೇ ಗಂಭೀರವಾಗಿರಲಿ, ನಾನು ಮೇಲೇಳಲು ಸಾಧ್ಯವಾಗದಷ್ಟು ಕೆಳಗೆ ಬಿದ್ದುಬಿಟ್ಟಿದ್ದೇನೆ ಎನ್ನುವ ಹತಾಶೆಯ ಮಾತುಗಳನ್ನು ಮಾತ್ರ ಆಡಲೇಬೇಡಿ. ಬದಲಿಗೆ ಕಷ್ಟಗಳು ಕಾಡುವಷ್ಟು ಕಾಲವೂ ಎಲ್ಲವೂ ಸರಿಹೋಗುತ್ತದೆ. ಸರಿ ಹೋಗಲೇಬೇಕು, ಎನ್ನುವ ಮಾತುಗಳನ್ನು ಪದೇಪದೇ ಹೇಳಿಕೊಳ್ಳಿ. ಸಕಾರಾತ್ಮಕ ಚಿಂತನೆಯ ಪ್ರತಿಪಾದಕರಾದ ಡಾ.ನಾರ್ಮನ್ ವಿನ್ಸೆಂಟ್ ಪೀಲ್ ಅವರ ಬಳಿಗೆ ಬಂದ ಯುವಕನೊಬ್ಬ ಯಾತನೆ ತುಂಬಿದ ದನಿಯಲ್ಲಿ ಹೇಳಿದ:ಸರ್, ನಾನು ಎಷ್ಟು ಆಳಕ್ಕೆ ಬಿದ್ದುಬಿಟ್ಟಿದ್ದೇನೆಂದರೆ ಇನ್ನು ಕೆಳಕ್ಕೆ ಹೋಗಲು ಸಾಧ್ಯವೇ ಇಲ್ಲ. ಅವರು ಮುಗುಳ್ನಗುತ್ತ ಕಂಗ್ರಾಚ್ಯುಲೇಶನ್ಸ್ ಎಂದರು. ಮಾತಿನ ಮರ್ಮ ಅರ್ಥವಾಗದೆ ಯುವಕ ಕಕ್ಕಾಬಿಕ್ಕಿಯಾಗಿ ಅವರನ್ನೇ ದಿಟ್ಟಿಸಿದ. ಆಗ ಡಾ.ಪೀಲ್ ಹೇಳಿದರು;ನೀನು ಅಷ್ಟೊಂದು ಕೆಳಗೆ ಬಿದ್ದುಬಿಟ್ಟಿದ್ದೀ ಎಂದ ಮೇಲೆ ಈಗ ನಿನಗಿರುವುದು ಒಂದೇ ದಾರಿ-ಮೇಲೆ ಬರುವುದು, ಅಲ್ಲವೇ? ಕಷ್ಟಗಳನ್ನು ನೀವು ಖಂಡಿತ ಮೆಟ್ಟಿ ನಿಲ್ಲಬಲ್ಲಿರಿ.ಖಂಡಿತವಾಗಿ.
  6. ಸಕಾರಾತ್ಮಕ ಜೀವನ ಸದಾ ಅರ್ಥಪೂರ್ಣ ಚಟುವಟಿಕೆಗಳಿಂದ ಸಮೃದ್ಧವಾಗಿರುತ್ತದೆ. ಬಹಳ ಜನರ ನಕಾರಾತ್ಮಕ ಧೋರಣೆಗಳಿಗೆ ಪ್ರಮುಖವಾದ ಕಾರಣ ಏನೆಂದರೆ ಅವರಿಗೆ ಯಾವುದರಲ್ಲೂ ಆಸಕ್ತಿ ಇಲ್ಲದಿರುವುದು. ಇಂಥ ಅಸಹನೀಯ ಮನ:ಸ್ಥಿತಿಯಿಂದಲೇ ಅವರು ನಮ್ಮ ಬದುಕೆಲ್ಲ ಶೂನ್ಯ, ಖಾಲಿಯನ ನಮ್ಮನ್ನು ಕಾಡುತ್ತದೆ ಎಂದು ದೂರುತ್ತಾರೆ. ಉತ್ತಮವಾದ ಯಾವುದಾದರೂ ಕೆಲವು ವಿಷಯಗಳಲ್ಲಿ ಹೃತ್ಪೂರ್ವಕವಾಗಿ ಆಸಕ್ತಿ ತಳೆಯಿರಿ. ನಿಮ್ಮ ಬದುಕು ಆನಂದದಿಂದ ತುಂಬಿಕೊಳ್ಳುತ್ತದೆ. ತಮ್ಮ ಇಳಿವಯಸ್ಸಿನಲ್ಲೂ ಕೆಲವರು ತಮಗೆ ಆಸಕ್ತಿ ಇರುವ ಒಳ್ಳೆಯ ಹವ್ಯಾಸಗಳಲ್ಲಿ ನಿರತವಾಗಿ ತುಂಬಿದ ಬದುಕನ್ನು ಬಾಳುವುದು ಕಂಡುಬರುತ್ತದೆ. ಅಲ್ಲವೆ?
  7. ದ್ವೇಷ,ಅಸೂಯೆ ಮೊದಲಾದ ನಕಾರಾತ್ಮಕ ಧೋರಣೆಗಳು ಮನಸ್ಸಿನಲ್ಲಿ ತಲೆ ಎತ್ತಿದೊಡನೆ ನಿದರ್ಾಕ್ಷಿಣ್ಯವಾಗಿ ಕೊಚ್ಚಿ ಹಾಕಿ. ದ್ವೇಷ, ಹಿಂಸೆ, ಮತ್ಸರಗಳ ಕಿಡಿ ಹೊತ್ತಿಸುವ ಘಟನೆಗಳು ಜೀವನದಲ್ಲಿ ಆಗಾಗ ತಲೆದೋರುವುದು ಸಹಜ. ಆದರೆ ಅವುಗಳಿಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಪ್ರವೃತ್ತಿಯನ್ನು ಬೆಳೆಯಗೊಟ್ಟರೆ ಅವು ನಮ್ಮ ಭಾವನಾತ್ಮಕ ಬದುಕನ್ನು ಛಿದ್ರಗೊಳಿಸಿಬಿಡುತ್ತದೆ. ಈ ಭಾವನೆಗಳು ತೀವ್ರಗೊಂಡಾಗ, ಅವು ಶಾರೀರಿಕ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಾಸಿಯಾಗಲು ಕಠಿಣವಾದ ಕಾಯಿಲೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಇಂಥ ಭಾವನೆಗಳು ಉದ್ಭವಿಸಿದೊಡನೆ ಶಾಂತಿ ಮತ್ತು ಪ್ರೀತಿಯ ಲಹರಿಯನ್ನು ಪ್ರಯತ್ನಪಟ್ಟು ಮನಸ್ಸಿನಲ್ಲಿ ತಂದುಕೊಳ್ಳಿ. ಈ ತೆರನಾದ ಸದ್ಬಾವನೆಗಳು ನಿಮ್ಮ ಇಡೀ ವ್ಯಕ್ತಿತ್ವದ ಮೇಲೆ ಸತ್ಪರಿಣಾಮವನ್ನು ಬೀರುತ್ತದೆ. ದು:ಖಿಸುವ, ಅಶಾಂತಿಯಿಂದ ಕೂಡಿರುವ ಕೀಳರಿಮೆಯಿಂದ ತುಂಬಿರುವ ಮನಸ್ಸು ನಕಾರಾತ್ಮಕ ಭಾವನೆಗಳ ಚಟವನ್ನು ಬಲವಾಗಿ ಅಂಟಿಸಿಕೊಂಡಿರುತ್ತದೆ. ಅದರಿಂದ ಬಿಡಿಸಿಕೊಳ್ಳಿ, ಮನಸ್ಸನ್ನು ಉದಾತ್ತವಾದ ಹಾಗೂ ಪ್ರಯೋಜನಕಾರಿ ಯಾದ ಚಿಂತನೆಗಳಿಂದ ತುಂಬಿಕೊಳ್ಳಿ.
  8. ಪ್ರತಿಯೊಂದು ಸಾರಿ ನಿಮ್ಮ ಮನಸ್ಸು ಅತೃಪ್ತಿಯಿಂದ ಅಥವಾ ಹತಾಶೆಯಿಂದ ಹಳಹಳಸಿದಾಗಲೂ, ನಿಮ್ಮ ಬಳಿಯಿರುವ ಬೆಲೆ ಕಟ್ಟಲಾಗದ ಸಂಪತ್ತನ್ನು ನೆನಪಿಗೆ ತಂದುಕೊಳ್ಳಿ. ದೃಢವಾದ ಶರೀರ, ಸುಸ್ಥಿಯಲ್ಲಿರುವ ಅಂಗಾಂಗಗಳು, ಉತ್ತಮ ಆರೋಗ್ಯ, ವೈಕಲ್ಯವಿಲ್ಲದ ಮನಸ್ಸು, ಒಳ್ಳೆಯ ತಂದೆತಾಯಿಯರು, ವಿದ್ಯಾಭ್ಯಾಸಕ್ಕೆ ಅವಕಾಶ, ಉತ್ತಮ ಸ್ನೇಹಿತರು-ಹೀಗೆ ಇಲ್ಲಿಯವರೆಗೆ ಸಂಪತ್ತು ಎಂದು ನೀವು ಆಲೋಚಿಸಿಯೇ ಇಲ್ಲದ ನೂರಾರು ಭಾಗ್ಯಗಳು ನಿಮ್ಮ ಮನ:ಪಟಲದ ಮುಂದೆ ಬಂದು ನಿಲ್ಲುತ್ತದೆ. ಇಷ್ಟಲ್ಲ ಸೌಲಭ್ಯಗಳು ನಿಮ್ಮ ಬಳಿ ಅದಾಗಲೇ ಇರುವುದನ್ನು ಗುರುತಿಸಿದಾಗ ಮನಸ್ಸು ಶಾಂತವಾಗುತ್ತದೆ, ಧನ್ಯತೆಯನ್ನು ಅನುಭವಿಸುತ್ತದೆ. ಈ ಮನ:ಸ್ಥಿತಿಯಲ್ಲಿ ನಿಮ್ಮ ಧ್ಯೇಯದತ್ತ ಮನಸ್ಸನ್ನು ಹರಿಸಿ, ಈಗ ಯಶಸ್ಸು ನಿಮ್ಮದಾಗಲೇಬೇಕು.

ಜೀವನದಲ್ಲಿ ಎಡರುತೊಡರುಗಳು, ಜಯಅಪಜಯಗಳು, ಸನ್ಮಾನ-ಅವಮಾನಗಳು ಬರುವುದನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಅವುಗಳನ್ನು ಸ್ವೀಕರಿಸುವ ರೀತಿಯನ್ನು ಮತ್ತು ಅವುಗಳಿಂದ ಪಾಠ ಕಲಿಯುವ ಸಾಧ್ಯತೆಯನ್ನು ಆರಿಸಕೊಳ್ಳುವ ಸ್ವಾತಂತ್ರ್ಯ ಮಾತ್ರ ನಮಗಿದೆ. ಪರಿಸ್ಥಿತಿ ಎಷ್ಟೇ ನಿರಾಶದಾಯಕವಾಗಿರಲಿ, ನಮ್ಮ ಮನಸ್ಸು ಒಳಿತನ್ನೇ ಭಾವಿಸುವ ಮತ್ತು ನಿರೀಕ್ಷಿಸುವ ಬಗೆಯನ್ನು ಸಕಾರಾತ್ಮಕ ಜೀವನವಿಧಾನ ಕಲಿಸಿಕೊಡುತ್ತದೆ. ಇದನ್ನು ನಾವು ಕಲಿಯಬೇಕು. ಸಕಾರಾತ್ಮಕ ಧೋರಣೆಯನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸ ಮಾಡಬೇಕು. ಜೀವನವನ್ನು ಅತ್ಯುತ್ತಮವಾಗಿ ನಡೆಸಬೇಕು, ಅತ್ಯುತ್ಕೃಷ್ಟವಾದುದನ್ನು ಗಳಿಸಿಕೊಳ್ಳಬೇಕು. ಈ ಪ್ರತಿಜ್ಞೆಯನ್ನು ಇಂದೇ ಮಾಡೋಣ! ಶುಭಪ್ರದವಾದ ಬದುಕನ್ನು ಸ್ವಾಗತಿಸೋಣ!

ಶ್ರೀ ರಾಘವೇಂದ್ರ ಪ್ರಭು,ಕವರ್ಾಲು

Leave a Reply

Your email address will not be published. Required fields are marked *