Uncategorized

ಭರವಸೆಯ ಯುವ ಕೃಷಿಕ ಗುರುನಂದ ನಾಯಕ್ ಹಿರೇಬೆಟ್ಟು

1 NIST 160111

ಉಡುಪಿ: ಹೆಚ್ಚಿನ ಕೃಷಿಕರು ಕೃಷಿಯಿಂದ ತಮಗೆ ಲಾಭ ಇಲ್ಲ ಎಂಬ ನಂಬಿಕೆಯಿಂದ ಕೃಷಿಗೆ ಬೈ ಹೇಳಿ ಬೇರೆ ಕೂಲಿ ಕೆಲಸಕ್ಕೆ ಹೋಗುವ ಅದೆಷ್ಠೋ ಜನ ನಮ್ಮ ಮುಂದೆ ಇದ್ದಾರೆ.ಆದರೆ ಕೃಷಿಯಿಂದ ಅಭಿವೃಧಿ ಸಾದ್ಯ ಎಂಬ ನಂಬಿಕೆಯಡಿ ದುಡಿಯುತ್ತಿರುವ ಯುವ ಕೃಷಿಕ ಹಿರೇಬೆಟ್ಟು ಗುರುನಂದ ನಾಯಕ್ ಇದಕ್ಕೆ ಹೊರತ್ತಾಗಿದ್ದಾರೆ.

ತರಕಾರಿ ಕೃಷಿ,ಭತ್ತ,ತೆಂಗು,ಹೈನುಗಾರಿಕೆ ಮುಂತಾದ ಬೆಳೆ ಮಾಡುತ್ತಿರುವ ನಾಯಕ್ ರವರು ಇದರಿಂದ ನೆಮ್ಮದಿಯ ಬದುಕು ಕಂಡಿದ್ದಾರೆ.10 ವರ್ಷದ ಹಿಂದೆ ಮುಂಬಯಿ ನಗರಕ್ಕೆ ವಲಸೆ ಹೋಗಿ ಹೋಟೆಲ್ ಕೆಲಸ ಮಾಡುತ್ತಿದ್ದವರು ತಮ್ಮ ಗ್ರಾಮಕ್ಕೆ ಬಂದು ತಮ್ಮ ಸ್ವಂತ 4 ಎಕರೆ ಭೂಮಿಯನ್ನು ಅಭಿವೃಧಿ ಮಾಡಿ ಉತ್ತಮವಾದ ಕೃಷಿ ಮಾಡಿ ಬೇರೆಯವರಿಗೆ ಮಾದರಿಯಾಗಿದ್ದಾರೆ.ಧ.ಗ್ರಾ.ಯೋಜನೆಯ ಪ್ರಗತಿಬಂದು ರೈತರ ಗುಂಪು ರಚನೆ ಮಾಡಿ ಅದರ ಮೂಲಕ ಬೇರೆ-ಬೇರೆ ಉದ್ದೆಶಗಳಿಗೆ ಸಾಲ ಪಡೆದು ಕೃಷಿ ಅಬಿವೃದಿ ಮಾಡಿ ಕೃಷಿಯಿಂದ ಲಾಭ ಗಳಿಸಲು ಸಾದ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.ಡಾ|| ವೀರೇಂದ್ರ ಹೆಗ್ಗಡೆಯವರ ಮಾತಿನಂತೆ-3 ವರ್ಷ ಪದವಿ ಅಬ್ಯಾಸ ಮಾಡಿ ಬೇರೆಯವರ ಲೆಕ್ಕ ಬರೆಯುದಕ್ಕಿಂತ ಸ್ವ ಉದ್ಯೋಗ ಮಡಿ ನಮ್ಮ ಲೆಕ್ಕ ನಾವು ಬರೆಯುವುದು ಒಳಿತು ಎಂಬುದನ್ನು ಸಾಧಿಸಿದ್ದಾರೆ.

ಕೃಷಿ ಇಲಾಖೆ.ಗ್ರಾ.ಯೋಜನೆಯ ವಿವಿಧ ಸೌಲಬ್ಯವನ್ನು ಪಡೆದು 15 ಜಾನುವಾರು ಸಾಕಾಣೆ ಮಾಡಿದ್ದದಾರೆ.ಅದರ ಮೂಲಕ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.ಅದರೊಂದಿಗೆ ವಿಶéೇವಾಗಿ ಬಸಳೆ(ಅವಿಭಜಿತ ಜಿಲ್ಲೆಯ ಪ್ರಮುಖ,ಜನಪ್ರಿಯ ತರಕರಿ)ಬೆಳೆಸಿ ಅದರಲ್ಲಿ 1 ಬಳ್ಳಿಗೆ 7 ರೂ.ಯಂತೆ ದಿನಪ್ರತಿ ಸರಿಸುಮಾರು 100 ಬಸಳೆ ಬಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ.ಹಾಲನ್ನು ಡೈರಿಗೆ ಹಾಕುವ ಸಂದರ್ಭದಲ್ಲಿಯೆ ತಮ್ಮ ಬಸಳೆಯನ್ನು ಮಾರಾಟ ಮಾಡುವ ವಿಶೇಷತೆಯನ್ನು ಬೆಳೆಸಿದ್ದಾರೆ.ಅವರ ತರಕಾರಿಗೆ ಉತ್ತಮವಾದ ಬೇಡಿಕೆಯಿರುವ ಕಾರಣ ಮಾರುಕಟ್ಟೆಯ ತೊಂದರೆಯನ್ನು ನಿವಾರಿಸಿ ರೈತ ಯಾವ ರೀತಿ ಸಂಪಾದನೆ ಮಾಡಬಹುದು ಎಂಬುದನ್ನು ಪ್ರಸ್ತುತಪಡಿಸಿದ್ದಾರೆ.ಬಸಳೆಯಲ್ಲದೆ,ವಿವಿಧ ರೀತಿಯ ತರಕಾರಿ ಬೇಸಾಯ ಮಾಡುವ ನಾಯಕ್ ರು ಸಾವಯವ ಮಾದರಿಯಲ್ಲಿ ತಮ್ಮ ಕೃಷಿಯನ್ನು ಅಬಿವೃಧಿ ಪಡಿಸಿದ್ದಾರೆ.ಕಾಂಪೋಸ್ಟ್,ಎರೆಗೊಬ್ಬರ,ಕೋಳಿ ಗೊಬ್ಬರ ವನ್ನು ಬಳಸಿ ತರಕಾರಿ ಅದೇ ರೀತಿ ಭತ್ತ ವನ್ನು ಬೆಳೆಯುತ್ತಿದ್ದಾರೆ.ಇದರಿಂದ ಅವರ ಉತ್ಪಾದಕತೆ ಹೆಚ್ಚಾಗಿದೆ ಎಂಬುದು ಅವರ ಮಾತು.ತಮ್ಮ ಅಡಿಕೆ ತೊಟದಲ್ಲಿ ಮಿಶ್ರ ಬೆಳೆಯಾಗಿ ಕೋಕೋ,ಬಾಳೆ ಬೆಳೆದು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.ಎಲ್ಲಾ ರೀತಿಯ ಸಮಗ್ರ ಕೃಷಿಕನಾಗಿ ಪ್ರಸಿದ್ದರಾಗಿರುವ ನಾಯಕ್ ರವರಿಗೆ ವಿವಿಧ ರೀತಿಯ ಕೃಷಿ ಪ್ರಶಸ್ಥಿಗಳು ಬಂದಿವೆ.ಬೇರೆ ಯಾವ ಕೆಲಸಕ್ಕೆ ಸಿಗುವ ಸಂಬಳಕ್ಕಿಂತ ಹೆಚ್ಚಿನ ಆದಾಯವನ್ನು ಪಡೆದು ನೆಮ್ಮದಿಯ ಬದುಕು ಕಂಡಿದ್ದಾರೆ,ಅವರ ಮಾತಿನಂತೆ ಹೇಳುದಾದರೆ.ಕೃಷಿಕ ಸದಾ ಚಿಂತನಶೀಲರಾಗಬೇಕು,ಒಂದೇ ಬೆಳೆಯನ್ನು ನಂಬದೆ ವಿವಿಧ ರೀತಿಯ ಮಿಶ್ರ ಬೆಳೆ,ಅದೇರೀತಿ ಹೈನುಗಾರಿಕೆ ಮುಂತಾದುಗಳನ್ನು ಮಾಡಿದರೆ ಸಮಾಜದಲ್ಲಿ ಉತ್ತಮವಾದ ಜೀವನ ಅದು ಕೃಷಿಕನ ಜೀವನವಾಗಲು ಸಾದ್ಯ.

ಕೇವಲ 10 ನೇ ತರಗತಿ ನಡೆಸಿದರೂ ಒಬ್ಬ ಕೃಷಿ ವಿದ್ವಾಂಸರಿಗಿಂತ ಕಡಿಮೆಯಿಲ್ಲದೆ ಅನುಭವ ಪಡೆದಿದ್ದಾರೆ.ಹೀಗಾಗಿ ಅವರ ಕೃಷಿ ತಾಕು ನೋಡಲು ವಿವಿಧ ಕಡೆಯಿಂದ ರೈತರು ಆಗಮಿಸಿರುತ್ತಾರೆ.ಯುವಕರು ಕೃಷಿಯತ್ತ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಗುರುನಂದ ನಾಯಕ್ ರವರು ಮಾದರಿಯಾಗಿದ್ದಾರೆ.ನಮ್ಮ ಕೃಷಿಕರು ಮನಸ್ಸು ಮಾಡಿದರೆ ಎನ್ನನೂ ಮಾಡಲು ಸಾದ್ಯ ಎಂಬ ನಾಯಕ್ ರವರ ಮಾತಿನಂತೆ ಕೃಷಿಯತ್ತ ಜನರು ಆಸಕ್ತಿ ಕಳೆದುಕೊಳದೆ ಮನ್ನಡೆಯಬೇಕು ಎಂಬು ನಮ್ಮೆಲರ ಆಶಯ ಅದೇರೀತಿ ಶ್ರೀಯುತರು ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮ ಹಾರೈಕೆ.

ಶ್ರೀ ರಾಘವೇಂದ್ರ ಪ್ರಭು ಕವರ್ಾಲು ಉಡುಪಿ

Leave a Reply

Your email address will not be published. Required fields are marked *