ಸಾಧಿಸಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅದರಲ್ಲಿಯೂ ಕೃಷಿ ಎಂಬುದು ಹೆಚ್ಚಿನವರು ಅದರಲ್ಲಿ ಲಾಭವಿಲ್ಲ ಎಂದು ದೂರ ಸರಿದು ಇತರ ಉದ್ಯೋಗಗಳಿಗೆ ಮಾರುಹೋಗುವವರು ನಮ್ಮ ಮುಂದೆ ಬಹಳ ಮಂದಿ ಇದ್ದಾರೆ.ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ಅದರಲ್ಲಿ ಹೆಚ್ಚಿನ ಸಾಧನೆ ಮಾಡಿ ಇಂದು ಇತರ ಉದ್ಯೋಗಗಳಿಗಿಂತಲೂ ಸರಿಸಮಾನವಾದ ವೇತನ ಪಡೆಯುವವರು ನಮ್ಮಲ್ಲಿ ಇರುವುದು ಸಂತೋಷದ ವಿಚಾರ.ಅವರ ಹೆಸರು ಪ್ರಸಾದ್ ಪ್ರಸನ್ನ ಉಡುಪಿ ತಾಲೂಕು ಚೇಕರ್ಾಡಿ ಗ್ರಾಮದ ಪೇತ್ರಿ ಎಂಬಲ್ಲಿ ಅನ್ನಪೂರ್ಣ ಎಂಬ ಕೃಷಿಗೆ ಪೂರಕವಾದ ನರ್ಸರಿಯನ್ನು ಮಾಡಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ನರ್ಸರಿ ಉದ್ಯಮ ನಡೆಸಿಕೊಂಡು ಬರುತ್ತಿರುವ ಇವರು ಗಿಡಗಳ ಕಸಿಗಾಗಿ ಅತ್ಯಧುನಿಕ ಪ್ರಯೋಗಶಾಲೆಯನ್ನು ಹೊಂದಿದ್ದು ಈ ರೀತಿಯ ಪ್ರಯೋಗಶಾಲೆ ಹೊಂದಿರುವ ಜಿಲ್ಲೆಯ ಕೆಲವೇ ಕೆಲವು ನರ್ಸರಿಗಳಲ್ಲಿ ಇದು ಒಂದು.
ನರ್ಸರಿಯೊಂದಿಗೆ ತನ್ನ 4 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಕೃಷಿಯನ್ನು ಮಾಡಿಕೊಂಡಿದ್ದಾರೆ.ಅದರಲ್ಲಿ ಮಾವು,ಕಾಫಿ ಮುಂತಾದ ತೋಟಗಾರಿಕಾ ಬೆಳೆಗಳು ಸೇರಿವೆ ಮುಖ್ಯವಾಗಿ ಕಾಫಿಯನ್ನು ಮಲೆನಾಡ ಪ್ರದೇಶದಲ್ಲಿ ಬೆಳೆಯುತ್ತಾರೆ.ಪ್ರಸಾದ್ ರವರು ಇಲ್ಲ ಬೆಳೆದು ಈ ಭಾಗದಲ್ಲಿಯೂ ಕಾಫಿ ಉತ್ತಮವಾಗಿ ಬರುತ್ತದೆ ಎಂದು ತೋರಿಸಿದ್ದಾರೆ.ಅವರ ತೋಟದಲ್ಲಿ ಅಡಿಕೆ,ವೀಳ್ಯ,ಕಾಳು ಮೆಣಸು,ಸಂಬಾರ ಬೆಳೆಗಳಾದ ದಾಲ್ಚಿನಿ,ಮುಂತಾದ ಬೆಳೆಗಳನ್ನು ಉತ್ತಮವಾಗಿ ಬೆಳೆಸಿದ್ದಾರೆ.ವಿಶಾಲವಾದ ನೆಟ್ ಅಳವಡಿಸಿ ಅದರಲ್ಲಿ ಸುಮಾರು 2 ಲಕ್ಷಕ್ಕೂ ಮಿಕ್ಕಿ ಗಿಡಗಳನ್ನು ತಯಾರಿಸಿದ್ದಾರೆ.ಎಲ್ಲಾ ಜಾತಿಯ ಹಣ್ಣಿನ ಗಿಡಗಳು,ವಾಣಿಜ್ಯ ಬೆಳೆಗಳ ಗಿಡಗಳನ್ನು ತಯಾರಿ ಮಾರಾಟ ಮಾಡುತ್ತಾರೆ.ಅವರ ಗಿಡಗಳು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೂ ಕೂಡ ಬೇಡಿಕೆಯಿದೆ.ವರ್ಷಂಪ್ರತಿ ಸರಿಸುಮಾರು 4 ಲಕ್ಷಕ್ಕಿಂತಲೂ ಅಧಿಕ ಗಿಡಗಳನ್ನು ತಯಾರಿಸಿ ಮಾರಾಟ ಮಾಡುವ ಇವರು ಒಬ್ಬ ಪ್ರಗತಿಪರ ಕೃಷಿಕರಾಗಿ ಬೆಳೆದಿದ್ದಾರೆ.ಸಾವಯವ ಮಾದರಿಯಲ್ಲಿ ಕೃಷಿ ನಡೆಸಿ ಅದರಲ್ಲಿ ಯಶಸ್ಸು ಗಳಿಸಿದ್ದಾರೆ.ಅವರ ಸಾಧನೆಯ ಹಿಂದೆ ಪತ್ನಿಯವರ ಸಹಕಾರ ಇದೆ.ಅಲ್ಲದೆ ಸುಮಾರು 60 ಮಂದಿ ಜನರಿಗೆ ಕೆಲಸ ನೀಡುತ್ತಿದ್ದಾರೆ.ಹೈನುಗಾರಿಕೆಯನ್ನು ಕೂಡ ನಡೆಸಿ ಅದರಲ್ಲಿಯೂ ಉತ್ತಮ ಲಾಭ ಗಳಿಸುತ್ತಿದ್ದಾರೆ. ತನ್ನ ಜಾಗದಲ್ಲಿ ಒಂದು ಇಂಚು ಭೂಮಿಯನ್ನು ಖಾಲಿ ಬಿಡದೆ ಅದರಲ್ಲಿ ಕೃಷಿ ನಡೆಸಿ ಒಂದು ಮಾದರಿ ಕೃಷಿ ತಾಕು ತಯಾರಿಸಿದ್ದಾರೆ.ಅವರ ಕೃಷಿ ತಾಕನ್ನು ವೀಕ್ಷಿಸಲು ವಿವಿಧ ಕಡೆಗಳಿಂದ ರೈತರು ಆಗಮಿಸುತ್ತಾರೆ.ಅವರ ಗಿಡಗಳಿಗೆ ಬೇಡಿಕೆಗೆ ಅನುಗುಣವಾಗಿ ಅವರಿಗೆ ಪೂರೈಕೆ ಮಾಡಲು ಆಗದಷ್ಟು ಅವರಿಗೆ ಕೆಲಸವಿದೆ.ಅವರ ಮಾತಿನಂತೆ ತನ್ನ ಕೃಷಿ ತಾಕು ವೀಕ್ಷಿಸಿ ಅದರಂತೆ ನರ್ಸರಿ ಮಾಡಿದವರು ಬಹಳ ಮಂದಿ ಇದ್ದಾರೆ ಆದರೆ ಸರಿಯಾದ ಮಾಹಿತಿ ಇಲ್ಲದ ಪರಿಣಾಮ ಮಾರುಕಟ್ಟೆ ಸೃಷ್ಟಿಸಲು ಸಾದ್ಯವಿಲ್ಲದೆ ಅವರು ಸೋತಿದ್ದಾರೆ.ಮುಖ್ಯವಾಗಿ ರೈತ ಯಾವುದೇ ಬೆಳೆ ಬೆಳೆಯುವ ಮೊದಲು ಸರಿಯಾದ ಮಾಹಿತಿಯನ್ನು ಪಡೆಯಬೇಕು.ಮುಖ್ಯವಾಗಿ ಮಾರುಕಟ್ಟೆಯ ಲಭ್ಯತೆಯ ಅನುಗುಣವಾಗಿ ಪೂರೈಕೆ ಮಾಡಬೇಕಾಗುತ್ತದೆ.ಈ ರೀತಿಯಲ್ಲಿ ನಡೆಸಿದರೆ ಕೃಷಿಯು ಅತ್ಯಂತ ಲಾಭದಾಯಕವಾಗಲು ಸಾದ್ಯ ಎಂದು ಅವರು ಹೇಳುತ್ತಾರೆ.
ತನ್ನ ಬೆಳೆಗಳಿಗೆ ಬೇಕಾದ ಎಲ್ಲಾ ರೀತಿಯ ಸಾವಯವ ಗೊಬ್ಬರವನ್ನು ತನ್ನಲಿಯೇ ತಯಾರಿಸಿಕೊಂಡು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮುಂಚಿತವಾಗಿ ತಯಾರಿಸುತಾರೆ.ಇದರಿಂದ ಗೊಬ್ಬರಕ್ಕೆ ಹಣ ಖಚರ್ಾಗುವುದು ಉಳಿತಾಯವಾಗುತ್ತದೆ.ತೋಟದ ಮದ್ಯದಲ್ಲಿ ಮನೆ ರಚನೆ ಮಾಡಿ ಉತ್ತಮ ಜೀವನ ಅವರು ಸಾಗಿಸುತಿದ್ದಾರೆ.ಅವರ ಸಾಧನೆಗೆ ಅನೇಕ ಸಂಘ ಸಂಸ್ಥೆಯವರು ಅವರನ್ನು ಗುರುತಿಸಿ ಗೌರವಿಸಿವೆ.ಶ್ರೀ.ಕ್ಷೇ.ಧ ಗ್ರಾ ಯೋಜನೆ ವತಿಯಿಂದ ನಡೆಯುತ್ತಿರುವ ಕೃಷಿ ಮೇಳದಲ್ಲಿ ಕೂಡ ಪ್ರಶಸ್ತಿ ನೀಡಲಾಗಿದೆ.ತನ್ನ ಪದವಿ ಶಿಕ್ಷಣದ ಬಳಿಕ ಇತರ ಉದ್ಯೋಗಕ್ಕೆ ತೆರಳದೆ ತನ್ನಲಿರುವ ಜಮೀನಿನಲ್ಲಿ ಕೃಷಿ ಅದರೊಂದಿಗೆ ನರ್ಸರಿ ಉದ್ಯಮ ನಡೆಸಿ ತನ್ನ ಗ್ರಾಮದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸಾಧನೆ ಹಿಂದೆ ಬಹಳಷ್ಟು ನೋವು ಇದೆ ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಇಂದು ಕೃಷಿಯಿಂದಾಗಿ ಸಂತೃಪ್ತ ಜೀವನ ಸಾಗಿಸುತ್ತಿರುವ ಪ್ರಸಾದ್ ರವರು ಇತರ ಕೃಷಿಕರಿಗೆ ಆದರ್ಶರಾಗಿದ್ದಾರೆ ಎಂದರೆ ತಪ್ಪಗಲಾರದು. ಅವರ ಸಾಧನೆ ತಿಳಿಯಲು ಒಂದು ಬಾರಿ ಅವರ ಮನೆಗೆ ಭೇಟಿ ನೀಡಬೇಕು.
ರಾಘವೇಂದ್ರ ಪ್ರಭು,ಕವರ್ಾಲು ಉಡುಪಿ