Uncategorized

ಸಾಮಾಜಿಕ ಜವಾಬ್ಧಾರಿ ಎಂಬ ಮರೀಚಿಕೆ

ಲೇಖನ: ಶ್ರೀಮತಿ ಮಮತಾ ಹರೀಶ್ ರಾವ್,
ನಿದರ್ೆಶಕಿ, ಮಾನವ ಸಂಪನ್ಮೂಲ ಅಭಿವೃದ್ದಿ ವಿಭಾಗ.

ಈ ಸೃಷ್ಠಿಯಲ್ಲಿ ವಾಸಿಸುತ್ತಿರುವ ಎಲ್ಲಾ ಜೀವಿಗಳಿಗೂ ಮೂಲಭೂತ ಹಕ್ಕುಗಳು ಇವೆ ಅಂತೆಯೇ ಮೂಲಭೂತ ಜವಾಬ್ಧಾರಿಗಳು ಇವೆ. ಹೆಚ್ಚಾಗಿ ನಾವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಹೋರಾಟ, ಮುಷ್ಕರ ಮತ್ತು ಜಾಥಗಳನ್ನು ನಿರಂತರ ನೋಡುತ್ತೇವೆ. ಆದರೆ ಮೂಲಭೂತ ಜವಾಬ್ಧಾರಿಗಳ ಉಲ್ಲಂಘನೆಯಾದಾಗ ಎನೂ ಆಗದಂತೆ ಇವೆಲ್ಲವೂ ಸಾಮಾನ್ಯ ಎಂಬಂತೆ ಇರುತ್ತೇವೆ.

ಸಾಮಾಜಿಕ ಜವಾಬ್ಧಾರಿಯನ್ನು ನಾಗರೀಕರ ಸಾಮಾಜಿಕ ಜವಾಬ್ಧಾರಿ (civic social responsibility) ಮತ್ತು ಸಾಂಸ್ಥಿಕ ಸಾಮಾಜಿಕ ಜವಾಬ್ಧಾರಿ (corporate social responsibility (CSR)) ಗಳೆಂದು ಗುರುತಿಸಬಹುದು. ಸಮಾಜಕ್ಕೆ ಮತ್ತು ಪ್ರಕೃತಿಗೆ ಧಕ್ಕೆಯಾಗದ ರೀತಿಯಲ್ಲಿ, ಸ್ವಾಬಾವಿಕವಾಗಿ ಪ್ರಕೃತಿಯ ಮಡಿಲಲ್ಲಿ ಹುಟ್ಟುವ ಜೀವ ಜಂತುಗಳು, ಸಸ್ಯ ಸಿರಿಗಳಿಗೆ, ವನಸಿರಿಗಳಿಗೆ, ಬೆಟ್ಟಗುಡ್ಡಗಳಿಗೆ ದಕ್ಕೆಯಾಗದ ರೀತಿಯಲ್ಲಿ, ವಾಸಿಸುತ್ತಿರುವ ನಾಗರೀಕರ ಧಾಮರ್ಿಕ, ಸಾಂಸ್ಕ್ರತಿಕ ವಿಚಾರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ವ್ಯವಹಾರ ಮಾಡುವುದನ್ನು ಸಾಮಾಜಿಕ ಜವಾಬ್ಧಾರಿ ಹಾಗೂ ಕಳಕಳಿಯಿಂದ ಮಾಡುತ್ತಿದ್ದಾರೆ ಎನ್ನಬಹುದು. ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು, ಒಂದು ಸಮಾಜಕ್ಕೆ ಧಕ್ಕೆಯಾಗದ ರೀತಿಯಲ್ಲಿ ವ್ಯವಹಾರ ಮಾಡುವುದು. ಎರಡನೆಯದ್ದು ಸಾಧ್ಯವಾದಷ್ಟು ಸಮಾಜಕ್ಕೆ ಒಳಿತನ್ನು ಮಾಡುವ ವ್ಯವಹಾರವನ್ನು ಮಾಡುವುದು ಎಂದು.

ಈ ಸಮಾಜದಲ್ಲಿ ನಾಗರೀಕರು ವಾಸ ಮಾಡುತ್ತಿದ್ದರೂ, ಅವರು ಸಾಮಾನ್ಯ ನಾಗರೀಕರಾಗಿ ಮತ್ತು ಜೀವನೋಪಾಯಕ್ಕಾಗಿ ಯಾವ ಕಸುಬು ಕೈಗೊಂಡಿರುತ್ತಾರೋ ಅದೇ ಜವಾಬ್ಧಾರಿ ಹೊಂದಿರುತ್ತಾರೆ. ವಿದ್ಯಾಥರ್ಿಗಳು ಪ್ರಬುದ್ದರಾಗುವ ತನಕ ವಿದ್ಯಾಥರ್ಿಗಳ ಜವಾಬ್ಧಾರಿ ಹೊಂದಿರುತ್ತಾರೆ. ಸ್ವದ್ಯೋಗಿಗಳು, ವ್ಯಾಪಾರಸ್ಥರು, ಉದ್ಯೋಗಿಗಳು, ವಿತ್ತ ಸಂಸ್ಥೆಗಳು, ಕೂಲಿ ಕಾಮರ್ಿಕರು, ಕರಕುಶಲ ಕಮರ್ಿಗಳು ವೃತ್ತಿ ಪರರಾದ ಡಾಕ್ಟರ್ ಗಳು, ಇಂಜಿನಿಯರ್ಗಳು, ವಕೀಲರು, ಕನ್ಸಲ್ಟಂಟ್ಗಳು, ಸಾಹಿತಿಗಳು, ಜನಪರ ಸಂಘ ಸಂಸ್ಥೆಗಳು, ಜಾತಿ ಸಂಘಟನೆಗಳು, ಧಾಮರ್ಿಕ ಮುಖಂಡರುಗಳು ನಿವೃತ್ತಿ ಹೊಂದಿದದವರು, ರಾಜಕೀಯ ಪಕ್ಷಗಳು, ದೃಶ್ಯ ಮಾಧ್ಯಮಗಳು, ಮುದ್ರಣಗಾರರು, ಹಿರಿಯ ನಾಗರೀಕರು, ಸಿನಿಮಾ ನಟರು, ಕಂಪನಿ ಮಾಲೀಕರು, ಬಿಲ್ಡರ್ಗಳು, ಭೂ ಮಾಲೀಕರು, ಭೂಮಿ ವ್ಯವಹಾರಸ್ಥರು, ಲೇವಾದೇವಿದಾರರು, ಸಹಕಾರ ಸಂಸ್ಥೆಗಳು, ಕೋಟರ್ುಗಳು, ಸರಕಾರಿ ಇಲಾಖೆಗಳು, ಸ್ಟಾಟ್ಯೂಟರಿ ಸಂಸ್ಥೆಗಳು, ಪ್ರಾಧಿಕಾರಗಳು, ನಿಗಮ ಮಂಡಳಿಗಳು ಎಲ್ಲರಿಗೂ ತಮ್ಮದೇ ಆದ ಸಾಮಾಜಿಕ ಜವಾಬ್ಧಾರಿಗಳು ಇವೆ.

ಪ್ರಸಕ್ತವಾಗಿ ನಮಗೆ ಕಾಣುತ್ತಿರುವ ಸಾಮಾಜಿಕ ಬೇಜವಾಬ್ಧಾರಿತನ ನಮ್ಮ ಸಂಸತ್ತಿನಲ್ಲಿ. ಮಳೆಗಾಲದ ಅಧಿವೇಶನವನ್ನು ಶೂನ್ಯವನ್ನಾಗಿಸಿ, ಚಳಿಗಾಲದ ಅಧಿವೇಶನದಲ್ಲಿ ಅನಗತ್ಯ ಗದ್ದಲಗಳನ್ನು ಮಾಡಿ ಅಧಿವೇಶನಕ್ಕೆ ತಡೆಯೊಡ್ಡಿ, ಪ್ರಸ್ತುತ ಬಜೆಟ್ ಆಧಿವೇಶನದಲ್ಲಿ ದೇಶದ ಅಬಿವ್ರದ್ದಿಗೆ ಪೂರಕವಾದ ವಿಚಾರಗಳನ್ನು ಮರೆತು, ಇನ್ನಿತರ ವಿಚಾರಗಳನ್ನೇ ಪ್ರಮುಖವಾಗಿ ಕೈಗೆತ್ತಿಕೊಂಡು ಗದ್ದಲ ಮಾಡುತ್ತಿರುವ ನಾವೇ ಆಯ್ಕೆಮಾಡಿ ಕಳುಹಿಸಿರುವ ಸಂಸದರು ಬೇಜವಾಬ್ಧಾರಿತನವನ್ನು ಪ್ರದಶರ್ಿಸಿರುತ್ತಾರೆ. ತಮ್ಮ ಪಕ್ಷದ ಪ್ರತಿಷ್ಠೆ ಇವರಿಂದ ಹೆಚ್ಚಾಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಆಡಳಿತ ಪಕ್ಷಕ್ಕೆ ಆಧಿವೇಶನ ನಡೆಸಲು ಬಿಡುವುದಿಲ್ಲ ಎಂಬ ಧೋರಣೆ. ಇದರಿಂದ ಸಮಾಜದ ಮೇಲೆ ಎನು ಪರಿಣಾಮವಾಯಿತು? ಎಷ್ಟೊ ವಿಚಾರಗಳ ಬಗ್ಗೆ ಮಂಡನೆ, ಚಚರ್ೆ, ಅನುಷ್ಠಾನಗಳು ಆಗದಿರುವುದರಿಂದ ಅಭಿವೃದ್ಧಿ ಪರ ಕೆಲಸಗಳು ಮುಂದೂಡಲ್ಪಟ್ಟವು. ಸಂಸತನಲ್ಲಿ ಹೀಗೂ ಮಾಡಬಹುದು ಎಂಬ ಪಾಠ ಸಂಸತ್ತಿನ ಮುಂದಿನ ಪೀಳಿಗೆಗೆ ತಿಳಿಸಿದಂತಾಯಿತು. ಜನರಿಗೆ ಸಂಸತ್ತಿನ ಮೇಲೆ ಇದ್ದಂತಹ ಗೌರವಕ್ಕೆ ಬೆಲೆ ಇಲ್ಲದಂತಾಯಿತು. ನಮ್ಮ ವಿಧಾನ ಸಭೆಯ ಅಧಿವೇಶನವು ಮುಖ್ಯಮಂತ್ರಿಗಳ ವಾಚ್ ಪುರಾಣದಲ್ಲಿ ಕಳೆದು ಹೋಯಿತು. ನಿಜವಾಗಿಯೂ ಅಭಿವ್ರೃದ್ದಿಯ ಕಳಕಳಿಯು ನಮ್ಮ ನೇತಾರರಲ್ಲಿ ಇದೆಯೇ?

ಇತ್ತೀಚಿಗಷ್ಟೇ ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬ ಬಗ್ಗೆ ಕಾಳಜಿ ವಹಿಸಿ ಹಲವಾರು ದಿಗ್ಗಜರು ತಮ್ಮ ಪಾರಿತೋಷಕವನ್ನು ಹಿಂದಕ್ಕೆ ನೀಡಿದರು. ಮಾಧ್ಯಮದವರನ್ನು ಕರೆಸಿ ಅಸಹಿಷ್ಣುತೆಗಾಗಿ ನಾವು ನಮ್ಮ ಪ್ರಶಸ್ತಿಯನ್ನು ಹಿಂದಕ್ಕೆ ನೀಡುತ್ತಿದ್ದೇವೆ, ಎಂಬ ಮಾತನ್ನು ಹೇಳಿ ಸಾಮನ್ಯ ಜನರಿಗೆ ಆಶ್ಚರ್ಯ ಅಸಹಿಷ್ಣುತೆ ಎಲ್ಲಿದೆ ಅಂತ? ಇದು ಯಾವ ಸಾಮಾಜಿನ ಜವಾಬ್ಧಾರಿ? ಸಮಾಜಕ್ಕೆ ದಾರಿ ತೋರಬೇಕಾದವರೇ ದಿಕ್ಕು ತಪ್ಪಿಸುವ ಪರಿಯನ್ನು ಸಾಮಾಜಿಕ ಜವಾಬ್ಧಾರಿ ಎನ್ನಬಹುದೆ? ಒಂದಷ್ಟು ಸಮಯ ಗೋಮಾಂಸ ತಿನ್ನುವ ಬಗ್ಗೆ ದೇಶದಲ್ಲಿ ವ್ಯಾಪಕವಾಗಿ ಮಾತುಕತೆಗಳು ನಡೆದವು, ದೃಶ್ಯ ಮಾಧ್ಯಮಗಳಲ್ಲಿಈ ಬಗ್ಗೆ ಬಹಳ ಚಚರ್ೆಗಳು ಆದವು. ಈ ಭೂಮಂಡಲದಲ್ಲಿ ಕಾಮಧೇನು ಎಂದು ಕರೆಸಿಕೊಂಡು ಇದ್ಯಾವುದರ ಪರಿವೆ ಇಲ್ಲದವನಾಗಿ ಕರೆದಾಗ ಹಾಲು ನೀಡಿ, ಸೆಗಣಿ, ಮೂತ್ರಗಳಿಂದ ಕೃಷಿಗಳಿಗೆ ಬರುವ ಯಾವುದೇ ಕೀಟಗಳನ್ನು ನಾಶಮಾಡುವ ಶಕ್ತಿ ಇರುವ ಈ ನಿರುಪದ್ರವಿ ಮೂಕ ಪ್ರಾಣಿಯ ಬಗ್ಗೆ ಇಲ್ಲಸಲ್ಲದ ಚಚರ್ೆಗಳು ನಡೆದವು. ಈ ಪ್ರಪಂಚಕ್ಕೆ ಬಂದ ನಂತರ ನಾವು ಎನು ಬೇಕಿದ್ದರೂ ತಿನ್ನುತ್ತೇವೆ ಎನು ಬೇಕಿದ್ದರೂ ಮಾಡುತ್ತೇವೆ, ನಮ್ಮನ್ನು ಯಾರೂ ಕೇಳುವಂತಿಲ್ಲ ಎಂದು ನಮ್ಮ ಕನರ್ಾಟಕದ ಮುಖ್ಯಮಂತ್ರಿಗಳು ಸಾರಿದರು. ಕೆಲವೊಂದು ಕಡೆ ಗೋಮಾಂಸದ ಪಾಟರ್ಿಗಳನ್ನು ನಮ್ಮ ರಾಜಕಾರಣಿಗಳ ನೇತ್ರತ್ವದಲ್ಲಿ ನಡೆಸಲಾಯಿತು. ಇದು ಎಂಥಹ ಸಾಮಾಜಿಕ ಜವಾಬ್ಧಾರಿ. ಸರಣಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ನಮ್ಮ ಮುಖ್ಯಮಂತ್ರಿಗಳಿಗೆ ಈ ವಿಚಾರ ಪ್ರಮುಖವಾಗಿ ಕಂಡಿತೆ?

ಇಂದು ಯಾವುದೇ ರಾಜ್ಯದ ವಿಧಾನಸಭೆಯ ಚುನಾವಣೆ ಬಂತೆಂದರೆ ಪಕ್ಷಗಳ ನಾಯಕರುಗಳ ವಾಗ್ಧಾಳಿಗಳನ್ನು ಅವರು ಬಳಸುವ ಪದಗಳನ್ನು ಕೇಳುವಾಗ ಇವರು ಜನ ಸಾಮಾನ್ಯರಿಗೆ ಮಾದರಿಯೇ,ಇವರು ನಮ್ಮ ನಾಯಕರೇ ? ಎಂದು ನಾಚಿಕೆಪಟ್ಟುಕೊಳ್ಳುವಂತಾಗಿದೆ. ತನ್ನ ಸರಕಾರ ಬಂದರೆ ರಾಜ್ಯದ ಒಳಿತಿಗಾಗಿ ಎನು ಮಾಡುತ್ತೇವೆ, ಪ್ರಸ್ತುತ ಇರುವ ಸಮಸ್ಯೆಗಳಿಗೆ ಪರಿಹಾರ ಇದುವೇ ಎಂಬ ಸ್ಪಷ್ಟವಾದ ಮಾತು ನಮ್ಮ ನಾಯಕರಿಂದ ಬರುತ್ತಿಲ್ಲ. ಒಮ್ಮೆ ನಮಗೆ ಅಧಿಕಾರ ಕೊಡಿ ಇನ್ನಿಲ್ಲದಂತೆ ಅಭಿವೃದ್ಧಿ ಮಾಡುತ್ತೇನೆ ಎಂದು ಬೇಡಿ ನಂತರ ಸದ್ದಿಲ್ಲದೆ ತನ್ನ ಮನಸ್ಸಿಗೆ ಬಂದಂತೆ ಮಾಡುವ ಪರಿಯನ್ನು ನಮ್ಮ ನಾಯಕರು ಕಲಿಸಿದ್ದಾರೆ. ಜನರಿಗೆ ಸಂಕಷ್ಟಗಳಿವೆ ಎಂದು ನೂರಾರು ಯೋಜನೆಗಳನ್ನು ಹುಟ್ಟು ಹಾಕಿ ಈ ಯೋಜನೆಗಳು ಜನರಿಗೆ ತಲುಪದೆ ಅರ್ಧ ದಾರಿಯಲ್ಲಿ ಮರೆಯಾಗಿ ಅಧಿಕಾರಿಗಳಿಗೆ, ನಾಯಕರುಗಳಿಗೆ ಭೃಷ್ಟಚಾರ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ.ಇಂದು ಸರಕಾರ ಹೊರತಂದ ಎಲ್ಲಾ ಯೋಜನೆಗಳು ಅನುಷ್ಠಾನ 75% ಆಗಿದ್ದರೂ ಕೂಡ ನಮ್ಮ ದೇಶ ಅಭಿವೃದ್ಧಿಯಾಗಬಹುದಿತ್ತು. ಎಲ್ಲಿದೆ ಸಮಾಜಿಕ ಜವಾಬ್ಧಾರಿ? ಒಂದು ವೇಳೆ ಯೋಜನೆ ಅನುಷ್ಠಾನಕ್ಕೆ ಪಲಾನುಭವಿಗಳು ಇಲ್ಲವೇಂದಾದಲ್ಲಿ ಯೋಜನೆ ತಯಾರಿ ಮಾಡುವುದಾದರೂ ಎಕೆ? ತಮ್ಮ ಉದ್ಯೋಗದ ಗಳಿಕೆಯ ನೂರಾರು ಪಟ್ಟುವಿಗಿಂತಲು ಅಧಿಕ ಸಂಪತ್ತನ್ನು ಹೊಂದಿರುವ ಎಷ್ಟು ನಾಯಕರು ಎಷ್ಟೂ ಅಧಿಕಾರಿಗಳು ಇದ್ದಾರೆ? ಇವರೆಲ್ಲಾ ಮೇಲೆ ಹೋಗುವಾಗ ಸಂಪತ್ತನ್ನು ಕೊಂಡೊಯ್ಯುತ್ತಾರೆಯೇ?

ಭಾರತೀಯ ಜನಾತಾ ಪಾಟರ್ಿ, ಕೋಮುವಾದಿ ಪಕ್ಷ, ಹಿಂದೂ ಸಂಘಟನೆಗಳೆಲ್ಲವೂ ಕೋಮುವಾದ ಹಬ್ಬಿಸುತ್ತಿದ್ದಾರೆ. ನಮ್ಮದು ಜಾತ್ಯತೀತ ಪಕ್ಷವೆಂದು ಡಂಗುರ ಸಾರುವ ಪಕ್ಷಗಳು ತಮ್ಮ ಸೀಟು ಹಂಚಿಕೆ, ಇತರ ಕೆಲಸಗಳಿಗಾಗಿ ಮತ್ತು ಮತಗಳನ್ನು ಬಾಚಿಕೊಳ್ಳಲು ಜಾತಿ ಲೆಕ್ಕಾಚಾರ ಹಾಕುವುದನ್ನು ನಾವು ನೋಡಿಲ್ಲವೇ? ನಾಯಕರ ಸಾಮಥ್ರ್ಯ ನೋಡಿ ಕೊಂಡು ಯಾಕೆ ಅವಕಾಶ ನೀಡಬಾರದು? ಹೇಳುವುದು ಒಂದು ಮಾಡುವುದು ಇನ್ನೊಂದು ಇದು ಯಾವ ನ್ಯಾಯ?.

ಸಮಾಜದ ಪ್ರಮುಖ ಅಂಗ ಬಹುಶ: ಮನುಷ್ಯನ ದೇಹದ ಕಣ್ಣುಗಳಿಗೆ ಮಾಧ್ಯಮಗಳನ್ನು ಹೋಲಿಸಬಹುದು. ಕಣ್ಣು ಏನನ್ನು ನೋಡುತ್ತದೆಯೋ ಅದನ್ನು ಮೆದುಳಿಗೆ ರವಾನಿಸುತ್ತದೆ, ಅಲ್ಲಿಂದ ದೇಹದ ಅಂಗಾಂಗಗಳಲ್ಲಿ ಪ್ರತಿಕ್ರಿಯೆಗಳು ಮೂಡುತ್ತದೆ. ಇಂದು ನಮ್ಮ ದೇಶದಲ್ಲಿ ದೃಶ್ಯ ಮಾಧ್ಯಮಗಳು ತಮ್ಮ ಮೂಲಭೂತ ಜವಾಬ್ಧಾರಿಗಳನ್ನು ನಿಭಾಯಿಸುತ್ತಿವೆಯೇ? ಪಕ್ಷಾತೀತನಾಗಿ ಸಮಾಜಿಕ ನ್ಯಾಯಕ್ಕೋಸ್ಕರ ಕೆಲಸ ಮಾಡುವ ದೃಶ್ಯ ಮಾಧ್ಯಮಗಳು ಎಷ್ಟು ಇವೆ? ದೂರದರ್ಶನದ ಮಾಧ್ಯಮಗಳನ್ನು ಬಿಟ್ಟು, ಚಾನೆಲ್ ಜನಪ್ರಿಯವಾಗಬೇಕೆಂಬ ದೃಷ್ಠಿಯಿಂದ ಅನಗತ್ಯ ಜನರ ಮನ ಕದಡುವ, ಸಮಾಜದಲ್ಲಿ ತಪ್ಪು ಭಾವನೆಗಳು ಬರುವ ರೀತಿಯಲ್ಲಿ, ಜನರಲ್ಲಿ ಗೊಂದಲವನ್ನು ಸೃಷ್ಠಿ ಮಾಡುವಂತಹ ಸುದ್ದಿಗಳನ್ನು ಬಿತ್ತರಿಸಿ ಸಾಮಾನ್ಯ ಜನರನ್ನು ಕನ್ಪ್ಯೂಸ್ ಮಾಡುತ್ತ ಭಯಬೀತರನ್ನಾಗಿಸುತ್ತಿದೆ. ಯಾವುದೇ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಮಾನಹಾನಿ, ವ್ಯಕ್ತಿತ್ವಕ್ಕೆ ಧಕ್ಕೆ ಬರುವ ಹಾಗೆ ಮಾಡಬೇಕಾದರೆ ಮಾಧ್ಯಮ ಮಿತ್ರರನ್ನು ಕರೆಯಿಸಿ ಪ್ರೆಸ್ ಕಾನ್ಫರೆನ್ಸ್ ಮಾಡಿದರೆ ಆಯಿತು. ಒಮ್ಮೆಗೆ ಆ ವ್ಯಕ್ತಿ ಜನಪ್ರಿಯನಾಗ್ತಾನೆ. ವ್ಯಕ್ತಿಯ ಮಯರ್ಾದೆ ಬೀದಿ ಪಾಲು. ನಂತರದ ಪರಿಣಾಮ ಅದು ಮಾಧ್ಯಮದವರಿಗೂ ಬೇಡ. ಮಹಿಳೆಯರು ಈ ಮಾಧ್ಯಮಗಳನ್ನು ಬಹಳವಾಗಿ ಬಳಕೆ ಮಾಡಿದ್ದಾರೆ. ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪಗಳನ್ನು ಮಾಡಿ ತಾವೇ ಮಾಧ್ಯಮದ ಎದುರು ಬಂದು ಇವರೇ ಅಪರಾಧಿ ಎಂದು ಘೋಷಿಸಿ ಇಂದು ಬಿಗ್ ಬಾಸ್ ನಂತಹ ರಿಯಾಲಿಟಿ ಶೋನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಾಧ್ಯಮದವರೂ ಕೂಡ ತಾವೇ ತನಿಖಾ ಅಧಿಕಾರಿಗಳಂತೆ ವತರ್ಿಸಿ ಆರೋಪಿಯನ್ನು ಅಪರಾಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಜನರಿಗೆ ನ್ಯಾಯ ಒದಗಿಸಿ ಕೊಡುತ್ತೇವೆ ಎಂಬ ಭಾವನೆಯಲ್ಲಿ ಜನರ ಭಾವನೆಗಳನ್ನು ಗಾಳಿಗೆ ತೂರಿ ಗೊಂದಲ ಸೃಷ್ಠಿ ಮಾಡುತ್ತಾ ಇರುವುದು ಮಾತ್ರ ಸತ್ಯ.

ದೃಶ್ಯ ಮಾಧ್ಯಮದ ಇನ್ನೂಂದು ಮಗ್ಗಲು ಧಾರವಾಹಿಗಳು ಹಳ್ಳಿ ಹಳ್ಳಿಗಳ ಮಹಿಳೆಯರನ್ನು ತನ್ನ ಬಂಧನದಲ್ಲಿಟ್ಟುಕೊಂಡು ಧಾರವಾಹಿಯಲ್ಲಿ ಬರುವ ಮಹಿಳೆಯರ ಉಡುಗೆ, ತೊಡುಗೆ, ಆಭರಣ, ಹಾವಭಾವ, ಪ್ಯಾಶನ್ ಗಳನ್ನು ಆದಿ ಅಂತ್ಯ ಇಲ್ಲದ, ಸಂಭಂಧ ಇಲ್ಲದ ಮೌಲ್ಯಗಳಿಲ್ಲದ ಕಥೆಗಳನ್ನು ತೋರಿಸುತ್ತಾ ಇದುವೇ ಸತ್ಯ ಇದುವೇ ನಿತ್ಯ ಎಂಬಂತಾಗಿ ಬಿಟ್ಟಿದೆ. ಧಾರವಾಹಿ ತಯಾರಕರು, ಕಲಾವಿದರಿಗೆ ಉದ್ಯೋಗವನ್ನು ಇದು ಒದಗಿಸಿದೆಯಾದರೂ, ಕಥೆಯ ತಿರುಳು, ಪ್ರಸಿಧ್ಧಿಯಾಗಬೇಕೆಂಬ ಅಪೇಕ್ಷೆಯಿಂದ ನೈಜತೆಯನ್ನು ಕಳೆದುಕೊಂಡು, ಆಡಂಬರದ ಅಪ್ರಸ್ತುತ ವಿಚಾರಗಳನ್ನೊಳಗೊಂಡ ಕಥೆಗಳ ಮೂಲಕ ಸಾಮಾನ್ಯ ಜನರ ಭಾವನೆಗಳ ಮೇಲೆ ಪರಿಣಾಮ ಬೀರುವುದಂತೂ ಸತ್ಯ. ದೃಶ್ಯ ಮಾಧ್ಯಮಗಳು ಸಾಮಾಜಿಕ ಜವಾಬ್ಧಾರಿಯನ್ನು ಮರೆತೆರೆ ಸಮಾಜದ ಮೇಲೆ ದುಷ್ಪರಿಣಾಮಗಳೇ ಹೆಚ್ಚು.

ಇನ್ನು ನಮ್ಮ ಸೆಲೆಬ್ರಿಟಿಗಳು ಇವರು ನಮ್ಮ ವಿಶೇಷ ಕೌಶಲ್ಯಗಳಿಂದ ಜನರಿಂದ ಗುರುತಿಸಿಕೊಂಡವರಾಗಿದ್ದಾರೆ. ಜನರು ಇವರಿಗೆ ವಿಶೇಷ ಪ್ರೀತಿ ನೀಡಿ ಗೌರವಿಸುತ್ತಾರೆ .ಈ ಸೆಲೆಬ್ರಿಟಿಗಳು ಆ ಸ್ಥಾನಕ್ಕೆ ಬಂದ ನಂತರ ತಾವು ಎನು ಬೇಕಿದ್ದರೂ ಮಾಡಬಹುದು ನನ್ನ ಫ್ಯಾನ್ಸ್ ಗಳು ನನ್ನನ್ನು ಹಿಂಬಾಲಿಸುತ್ತಾರೆ, ಬೆಂಬಲಿಸುತ್ತಾರೆ ಎಂಬ ಭಾವನೆ ಹೊಂದಿರುತ್ತಾರೆ. ತನ್ನ ಪ್ರಸಿಧ್ಧಿಯಿಂದ ಯಾವ ಜಾಹಿರಾತನ್ನು ಕೂಡಾ ಮಾಡಬಹುದು. ಸೆಲೆಬ್ರಿಟಿಗಳು ಶಾಂಪೂ ,ಫೇಸ್ ಕ್ರೀಂ, ಪೇಸ್ ವಾಶ್, ಹೇರ್ ಕಲರ್, ಹೇರ್ ಆಯಿಲ್,ಟೂಥ್ ಪೇಸ್ಟ್, ಹೇರ್ ರೀಮೂವಲ್ ಕ್ರೀಮ್, ಲಿಫ್ ಸ್ಟೀಕ್, ಪಾನೀಯಗಳು, ಕರುಕುಲು ತಿಂಡಿಗಳು ಹೀಗೆ ಎಲ್ಲಾ ರೀತಿಯ ವಸ್ತುಗಳಿಗೆ ತಮ್ಮ ಪೋಸ್ ನೀಡುತ್ತಾರೆ. ಇದರಿಂದ ಸಮಾಜಕ್ಕೆ ದುಶ್ಪರಿಣಾಮವಿದೆಯೇ ಎಂಬುದು ಇಲ್ಲಿ ನಗಣ್ಯ. ಆದರೆ ನಿಜ ಜೀವನದಲ್ಲಿ ಈ ಅವರು ಈ ವಸ್ತುಗಳನ್ನು ಬಳಕೆ ಮಾಡುತ್ತಾರೆಯೆ? ಅವರು ಪ್ರತಿಪಾದನೆ ಮಾಡುವ ಉತ್ಪನ್ನಗಳು ಉತ್ಕ್ರಷ್ಟವಾದರೆ ಅವರಿಗೆ ಎಕ್ಸಾಟ್ರಾ ಮೇಕ್ ಆಪ್ ಯಾಕೆ ಬೇಕು? ಶಾಂಪೂಗಳ ಜಾಹೀರಾತಿನಲ್ಲಿ ಅವರು ತಮ್ಮ ನಿಜವಾದ ಕೂದಲನ್ನು ತೋರಿಸುತ್ತಾರೆಯೇ? ತಾವೇ ರೆಕಮೆಂಡ್ ಮಾಡಿದ ಉತ್ಪಾದನೆಗಳನ್ನು ತಾವು ಬಳಸುತ್ತಾರೆಯೇ? ಸೆಲೆಬ್ರಿಟಿಗಳು ಯಾವುದೇ ಮೌಲ್ಯಗಳನ್ನು ಇಟ್ಟುಕೊಳ್ಳಬೇಕಿಲ್ಲವೆ? ತಾನು ಮಾರುಕಟ್ಟೆಯಲ್ಲಿ ಇರುವಷ್ಟು ಸಮಯ ಗರಿಷ್ಠ ಮೊತ್ತ ಸಂಪಾದನೆ ಮಾಡಿಬಿಡಬೇಕು ಎಂಬ ತುಡಿತದಲ್ಲಿ ತನ್ನ ವೈಯುಕ್ತಿಕ ಜೀವನವನ್ನು ಕಡೆಗಣಿಸುತ್ತಾರೆ. ದೇಶದ ಪರಿಸ್ಥಿತಿಯ ಬಗ್ಗೆ ದೊಡ್ಡದಾಗಿ ಮಾತಾನಾಡುವ ಇವರು ತಾವು ಸೆಲೆಬ್ರಿಟಿಗಳಾಗ ಬೇಕಾದರೆ ಸಾಮಾನ್ಯ ಜನರು ತೋರಿಸಿದ ಪ್ರೀತಿಯನ್ನೇ ಮರೆಯುತ್ತಾರೆ. ಹಣದ ದಾಹದಲ್ಲಿರುವ ಇರುವ ಇವರಿಗೆ ಜೀವನದ ಮೌಲ್ಯಗಳಿಗೆ ಬೆಲೆ ಇಲ್ಲ. ಇವರಲ್ಲಿ ಸಾಮಾಜಿಕ ಜವಾಬ್ಧಾರಿ ಇರುವವರು ಇಲ್ಲವೆಂದಲ್ಲ ಆದರೆ ಇವರ ಸಂಖ್ಯೆ ಬಹಳ ಕಡಿಮೆ ಇದೆ.

ಯುವ ಪೀಳಿಗೆಯ ಬಗ್ಗೆ ಹೇಳುವುದಾದರೆ, ನಮ್ಮ ದೇಶದ ಒಟ್ಟು ಜನಸಂಖ್ಯೆಯ 60% ರಷ್ಟು ಯವಕರು ಇದ್ದಾರೆ. ಯುವಕರು ಎತ್ತ ಸಾಗುತ್ತಿದ್ದಾರೆ? ಓದುವ ಸಂಧರ್ಭದಲ್ಲಿ ಮೋಜು ಮಸ್ತಿಯ ಗುಂಗಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದು ಹೋಗಿ ತನ್ನ ಜೀವನದ ನೌಕೆಯ ಗುರಿ ತಪ್ಪುತ್ತಿರುವುದನ್ನು ನೋಡಬಹುದಾಗಿದೆ, ಓದು ಮುಗಿದ ಮೇಲೆ ಇನ್ನೇನು ಎಂಬಂತೆ ಯಾವುದಾದರೂ ಕೆಲಸಕ್ಕೆ ಸೇರಿ ತನ್ನ ಮೋಜಿನ ಜೀವನಕ್ಕೆ ತಕ್ಕಷ್ಟು ಸಂಬಳ ಸಿಕ್ಕರೆ ಸಾಕು ಎಂಬ ಭಾವನೆಯೊಂದಿಗೆ ಇದ್ದಾರೆ. ಯಾವುದೋ ಸಿನಿಮಾ ನಟರ, ಪಾಪ್ ಗಾಯಕರ ಫ್ಯಾನ್ಸ್ ಆಗಿದ್ದುಕೊಂಡು ಅವರಿಗೆ ಎನಾದರೂ ಆದಲ್ಲಿ ನೋವನ್ನು ಅನುಭವಿಸುತ್ತಾರೆ. ಮೊನ್ನೆ ತಾನೆ ಹುಚ್ಚ ವೆಂಕಟನ ಆಭಿಮಾನಿಗಳು ಪ್ರತಿಭಟನೆ ಮಾಡುವುದನ್ನು ನಾವೆಲ್ಲರೂ ನೋಡಿದ್ದೇವೆ. ಇನ್ನೊಂದು ಆಂತಕಕಾರಿ ಬೆಳವಣಿಗೆ ಎಂದರೆ ಯವಕರು ಐ.ಎಸ್. ಐ.ಎಸ್ ಕಡೆಗೆ ಒಲವು ತೋರಿಸಿ ಆ ಸಂಘಟನೆಗೆ ಸೇರಿಕೊಳ್ಳುತ್ತಿರುವುದು. ಆತಂಕಿಗಳ ಸಂಘಟನೆಗಳಿಗೆ ಸೇರಿಕೊಳ್ಳುತ್ತಿರುವುದು. ಕೋಮು ಸೌಹಾರ್ದ ಕದಡುವಂತೆ ಮಾಡುತ್ತಿರುವುದು. ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಆಗುತ್ತಿರುವ ಬೆಳವಣಿಗೆಗಳು ಆಂತಕವನ್ನು ಸ್ರಷ್ಟಿಸುತ್ತಿದೆ. ವಿದ್ಯಾಥರ್ಿಗಳು ಯಾ ಯುವಕರು ರಾಜಕೀಯ ಪಕ್ಷಗಳ ದಾಳಗಳಾಗುತ್ತಿರುವುದು ದುರಂತ. ಯುವ ಜನತೆ ಸಾಮಾಜಿಕ ಜಬಾಬ್ಧಾರಿತನವನ್ನು ಅರಿತು ರಚನಾತ್ಮಕ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ಸಾಮಾಜದ ಒಳಿತಿಗೋಸ್ಕರ ಮಾಡಿದಲ್ಲಿ ದೇಶವು ಶೀಘ್ರಗತಿಯಲ್ಲಿ ಅಭಿವೃದ್ಧಿ ಯಾಗುವುದರಲ್ಲಿ ಎರಡು ಮಾತಿಲ್ಲ.

ವಿದೇಶ ಪ್ರಯಾಣ ಮಾಡಿ ಬಂದಿರುವ ಯಾರೇ ಆದರೂ ಪ್ರಪ್ರಥಮವಾಗಿ ಉಲ್ಲೇಖಿಸುವ ವಿಚಾರ ಅಲ್ಲಿಯ ಸ್ವಚ್ಚತೆ. ಬಹುಶ: ಇಂದು ಪ್ರತಿಯೊಬ್ಬ ನಾಗರೀಕನೂ ಬಯಸುವುದು ತನ್ನ ಮನೆ, ರಸ್ತೆ, ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿರಬೇಕೆಂದು. ನಮ್ಮ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು 2019 ರಲ್ಲಿ ಅಖಂಡ ಭಾರತವು ಸ್ವಚ್ಚತೆಯಿಂದ ಕೂಡಿರಬೇಕು ಎಂದು ಸಂಕಲ್ಪ ಮಾಡಿರುತ್ತಾರೆ. ಇದಕ್ಕೆ ಬಹಳ ಪ್ರಾಧಾನ್ಯತೆಯನ್ನೂ ನೀಡುತ್ತಿದ್ದಾರೆ. ಆದರೆ, ನಮ್ಮ ಮನೆ, ನಮ್ಮ ರಸ್ತೆ, ನಮ್ಮ ಸುತ್ತ ಮುತ್ತಲ ಪ್ರದೇಶ ಹೇಗಿದೆ?. ವಾಹನದಲ್ಲಿ ಪ್ರಯಾಣ ಮಾಡುತ್ತಿರುವಾಗ ತ್ಯಾಜ್ಯಗಳನ್ನು ಮಾರ್ಗಕ್ಕೆ ಎಸೆಯುವುದು, ಕಂಡ ಕಂಡಲ್ಲಿ ಕಸಗಳನ್ನು ಎಸೆಯುವುದು, ಅಲ್ಲಲ್ಲಿ ಉಗುಳುವುದು, ಮನೆಯ ತ್ಯಾಜ್ಯಗಳು, ಹೋಟೇಲ್, ಅಂಗಡಿಗಳ ತ್ಯಾಜ್ಯಗಳನ್ನು ರಸ್ತೆ ಬದಿಗೆ ಹಾಕುವುದು ನಿಂತಿದೆಯೇ? ನಮ್ಮ ಪರಿಸರ ಸ್ವಚ್ಚವಾಗಿರಬೇಕಾದರೆ ಎರಡನೇ ವ್ಯಕ್ತಿಯಿಂದ ಸಾದ್ಯವೇ? ನಮ್ಮಿಂದ/ ನನ್ನಿಂದ ಸಾದ್ಯವಿಲ್ಲವೇ?

ಬಹುಶ: ಸಾಮಜಿಕ ಜವಾಬ್ದಾರಿ ಮತ್ತು ನಾಗರಿಕ ಪ್ರಜ್ನೆಯ ಬಗ್ಗೆ ಬರೆಯುತ್ತಾ ಹೋದರೆ ಇದಕ್ಕೆ ಅಂತ್ಯವಿಲ್ಲ. ಸಮಾಜದ ನರನಾಡಿಗಳಂತಿರುವ ಪ್ರತಿಯೊಂದು ವ್ಯವಸ್ಥೆಗಳಲ್ಲಿ, ಸ್ತರಗಳಲ್ಲಿ ಜವಾಬ್ಧಾರಿಯುತವಾದಂತಹ ಕೆಲಸಗಳು ನಡೆದಲ್ಲಿ ಆಭೂತ ಪೂರ್ವವಾದಂತಹ ಸಾಧನೆ ನಮ್ಮ ರಾಷ್ಟ್ರದಲ್ಲಿ ಆಗಲು ಸಾಧ್ಯವಿದೆ. ಇಲ್ಲಿ ಗಮನಿಸಬೇಕಾದದ್ದು ಇವೆಲ್ಲವೂ ಮಾನವನಿಂದ ಮಾತ್ರ ಸಾಧ್ಯ. ಪ್ರಕೃತಿ ಮುನಿಯುವುದು, ಹವಾಮಾನ ಬದಲಾವಣೆಯಾಗುವುದು, ಪ್ರಾಕೃತಿಕ ಅನಾಹುತಗಳು ಆಗುವುದು ಇವೆಲ್ಲವೂ ಮಾನವ ನಿಮರ್ಿತ ಅಸಮತೋಲನಗಳಿಂದ. ಮಾನವನನ್ನು ಬಿಟ್ಟರೆ ಬೇರೆ ಯಾವ ಪ್ರಾಣಿಗೆ ಬುದ್ಧಿ ಇದೆ ಹೇಳಿ? ಪ್ರಾಣಿಗಳು ತಮ್ಮ ಹೊಟ್ಟೆ ತುಂಬಿದರೆ ಇನ್ಯಾರ ತಂಟೆಗೂ ಹೋಗುವುದಿಲ್ಲ. ತನಗೆ ಅನ್ಯಾಯವಾದರೆ ಮಾತ್ರ ಪ್ರತೀಕಾರ ತೀರಿಸಿ ಕೊಳ್ಳುತ್ತವೆ. ಹಾಗಾಗಿ ಪ್ರಪಂಚದ ಯಾವುದೇ ವಿಷಮ ಸ್ಥಿತಿಗಳಿಗೆ ಮನುಷ್ಯನೇ ಜವಾಬ್ಧಾರಿ. ಇಷ್ಟು ಜವಾಬ್ಧಾರಿ ಹೊತ್ತಿರುವ ನಾವು ಮುಂದಿನ ಪೀಳಿಗೆಗೆ ಎಂಥಹ ಸಮಾಜವನ್ನು ಬಿಟ್ಟು ಹೋಗುತ್ತಿದ್ದೇವೆ ಎಂಬ ಬಗ್ಗೆ ಜವಾಬ್ಧಾರಿಯುತವಾಗಿ ಯೋಚಿಸೋಣ !

Leave a Reply

Your email address will not be published. Required fields are marked *