NewsUncategorized

ಹೆತ್ತೇನಹಳ್ಳಿ ಗ್ರಾಮ ದೇವತೆ ಜಾತೆಯಲ್ಲಿ ಅಪಘಾತಕ್ಕೀಡಾದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೆರವು

IMG-20160311-WA0016

ಮೊನ್ನೆ ಮಂಗಳವಾರ ತುಮಕೂರು ಜಿಲ್ಲೆಯ ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿ ಮಾರಮ್ಮ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಗಾಯಗೊಂಡ ಭಕ್ತರಿಗೆ ಧರ್ಮಸ್ಥಳದ ಧಮರ್ಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ತುತರ್ು ಪರಿಹಾರ ಘೋಷಿಸಿದ್ದಾರೆ.

ಈ ಸಂಬಂಧ ತುಮಕೂರು ಜಿಲ್ಲಾ ನಿದರ್ೆಶಕರಾದ ಶ್ರೀ ಗಂಗಾಧರ್ ರೈಯವರು ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಆಧರಿಸಿ ಗಾಯಗೊಂಡ ಅರುವತ್ತೊಂದು ಮಂದಿ ಗಾಯಾಳುಗಳಿಗೆ ತುತರ್ಾಗಿ ತಲಾ ರೂ. 4,000/- ದಂತೆ ವಿತರಿಸಲು ಪೂಜ್ಯ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಗೆ ಆದೇಶಿಸಿದ್ದಾರೆ.

ಅದರಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿದರ್ೆಶಕರಾದ ಶ್ರೀ ಆನಂದ ಸುವರ್ಣರವರು ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ, 49 ಮಂದಿ ಗಾಯಾಳುಗಳನ್ನು ಮಾತನಾಡಿಸಿ, ಸಾಂತ್ವನ ನೀಡಿದರು. ಇವರು ಕ್ಷೇತ್ರದ ಪರವಾಗಿ ಶೀಘ್ರ ಗುಣಮುಖರಾಗುವಂತೆ ಗಾಯಾಳುಗಳಿಗೆ ಹಾರೈಸಿದರು. ಧಮರ್ಾಧಿಕಾರಿಗಳ ಆದೇಶದಂತೆ ಸ್ಥಳದಲ್ಲಿಯೇ ಸಹಾಯಧನ ವಿತರಣೆಯನ್ನು ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟಗಳ ಪದಾಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದರ್ೆಶಕರು ಮತ್ತಿತರ ಗಣ್ಯರು ಈ ಸಂದರ್ಭ ಹಾಜರಿದ್ದರು.

ಇನ್ನು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ 12 ಮಂದಿ ಗಾಯಾಳುಗಳನ್ನು ಇದೇ ಸಂದರ್ಭ ಸಂದಶರ್ಿಸಿದ ತುಮಕೂರು ಜಿಲ್ಲಾ ನಿದರ್ೆಶಕರಾದ ಶ್ರೀ ಗಂಗಾಧರ್ ರೈಯವರು ಮತ್ತು ಪ್ರಗತಿಬಂಧು ಒಕ್ಕೂಟಗಳ ಪದಾಧಿಕಾರಿಗಳು ಗಾಯಾಳುಗಳಿಗೆ ಧೈರ್ಯ ತುಂಬಿದರು. ಧರ್ಮಸ್ಥಳ ಕ್ಷೇತ್ರದಿಂದ ನೀಡಲಾದ ಸಹಾಯಧನವನ್ನು ವಿತರಿಸಿ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದರು.

ಈ ಸಂದರ್ಭ ಹೇಳಿಕೆ ನೀಡಿರುವ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಜಾತ್ರೆಯಲ್ಲಾದ ಅವಘಡದ ಕುರಿತಂತೆ ತೀವ್ರ ಸಂತಾಪ ವ್ಯಕ್ತಪಡಿಸಿ, ಹೆಚ್ಚಾಗಿ ದುಡಿಯುವ ವರ್ಗಕ್ಕೆ ಸೇರಿರುವ ಗಾಯಾಳುಗಳಿಗೆ ಸರ್ವರ ಸಹಕಾರವನ್ನು ಕೋರಿದ್ದಾರೆ. ಈ ಸಂಬಂಧ ಗಾಯಾಳುಗಳ ಚಿಕಿತ್ಸೆಗೆ ಸಹಕರಿಸಿದ ಆಸ್ಪತ್ರೆಯ ವೈದ್ಯರುಗಳು ಮತ್ತು ಸಹಾಯಕರುಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಅವರು ಅಭಿನಂದಿಸಿದ್ದಾರೆ. ಈ ಸಂಬಂಧ ಶ್ರಮಪಟ್ಟ ಎಲ್ಲರಿಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀವರ್ಾದವನ್ನು ಅವರು ಕೋರಿದ್ದಾರೆ

Leave a Reply

Your email address will not be published. Required fields are marked *