success storyUncategorized

2 ವರ್ಷದಿಂದ ಬಿರುಕುಗೊಂಡಿದ್ದ ಸಂಸಾರವನ್ನು ಒಂದಾಗಿಸಿದ ಧರ್ಮಸ್ಥಳದ 943 ನೇ ಮದ್ಯ ವರ್ಜನ ಶಿಬಿರ

20160618_162551

ಯೌವನದ ಹೊಳೆಯಲ್ಲಿ ಈಜಾಡುವಾಗ ಬಹಳ ಎಚ್ಚರಿಕೆ ಬೇಕು. ಎಷ್ಟೆ ಜಾಗರೂಕವಾಗಿದ್ದರೂ ಆ ವಯಸ್ಸು ಹೇಗೆ ಎಂದರೆ, ನೀರಿನಲ್ಲಿ ಮುಳುಗುತ್ತಿದ್ದೇವೆಯೇ ಅಥವಾ ತೇಲುತ್ತಿದ್ದೇವೆಯೇ ಎಂಬುದು ಗಮನಕ್ಕೆ ಬರುವುದಿಲ್ಲ. ಇಂತದೇ ಕಥೆ ನಮ್ಮ ಶಿಬಿರಾಥರ್ಿಯಾದ ಈರಪ್ಪ ಮಾದೇವಪ್ಪ ಕಾನಮನಿ ಇದರದ್ದು.

ಹೌದು, ಮಾರನಬೀಡ ಗ್ರಾಮದ ಈರಪ್ಪ ಮಾದೇವಪ್ಪ ಕಾನಮನಿ 26 ವರ್ಷ ವಯಸ್ಸಿನ ಯುವಕ ತನ್ನ ಈ ವಯಸ್ಸಿನಲ್ಲಿ ಊರಿನ ಗೆಳೆಯರ ಜೊತೆ ಫನ್ಗೆಂದು ಕುಡಿತದ ಚಟ ಶುರು ಹಚ್ಚಿಕೊಂಡ. ಈ ನಡುವೆ ಈರಪ್ಪನ ತಂದೆ ತಾಯಿ ಮಗನ ಮದುವೆ ವ್ಯವಸ್ಥೆ ಮಾಡಿ ಕೂಸನೂರು ಗ್ರಾಮದ ಪುಷ್ಪ -25 ವರ್ಷ ಇವಳೊಂದಿಗೆ ಸಂಸಾರ ನಡೆಸಲು ಆರಂಭಿಸಿದ. ಮನೆಯ ಸಮಸ್ಯೆ/ ಆಥರ್ಿಕ ಸಮಸ್ಯೆಯೂ ಸೇರಿ ಒತ್ತಡಕ್ಕೆ ಸಿಲುಕಿಕೊಂಡು ತನ್ನ ಕುಡಿತದ ಚಟ ಮಿತಿಮೀರಿ ಬೆಳದಾಗ ಕೈ ಹಿಡಿದ ಧರ್ಮಪತ್ನಿ ಗಂಡನನ್ನು ತೊರೆದು ತವರು ಮನೆಯ ದಾರಿ ಹಿಡಿದಳು. ಈ ಮದ್ಯೆ 2 ಮಗುವಿನ ತಂದೆಯಾದ ( ಹೆಣ್ಣು-4 ವರ್ಷ, ಗಂಡು-2 ವರ್ಷ) ಗಂಡು ಮಗುವಿನ ಜನನ ತವರು ಮನೆಯಲ್ಲಿ ಆಗಿ ಕಳೆದ 2 ವರ್ಷದಿಂದ ಮಗುವಿನ ಮುಖ ನೋಡದ ತಂದೆಯಾದ ಈರಪ್ಪ ತನ್ನ ಕುಡಿತದ ಚಟದಿಂದ ಮಗು ಇವತ್ತು ತಂದೆಯನ್ನು ಗುರುತು ಹಿಡಿಯದ ಪರಿಸ್ಥಿತಿ. ತನ್ನ ಹಾಗೂ ತನ್ನ ಪತ್ನಿಯ ತವರು ಮನೆಯ ಕಿತ್ತು ತಿನ್ನುವ ಬಡತನ ಇಡಿ ಕುಟುಂಬದ ಪರಿಸ್ಥಿತಿ ಶೋಚನೀಯವಾಗಿದೆ. ಪತ್ನಿ ಗಂಡನ ಮನೆ ಬಿಟ್ಟು ಹೋದ ನಂತರದಲ್ಲಿ ಈರಪ್ಪ ಒಂದು ಸಲ ಪಾನಮುಕ್ತನಾಗಿ ಪತ್ನಿಯನ್ನು ಕರೆದುಕೊಂಡು ಬರಲು ಕೂಸನೂರಿಗೆ ತೆರಳಿದ್ದು, ಗಲಾಟೆ ಮಾಡಿ ಹಿಂತಿರುಗಿದ್ದಾನೆ. ಈ ಮಧ್ಯೆ ಇವನ ಚಟ ಬಿಡಿಸಲು ಹಲವು ರೀತಿಯ ಚಿಕಿತ್ಸೆ, ದೈವ ದೆವರಿಗೆ ಹರಕೆ ಮಾಡಿದರೂ ಫಲಪ್ರದ ಆಗದೆ ಕುಡಿತದ ಚಟ ದಿನೇ-ದಿನೇ ಹೆಚ್ಚಾಗುತ್ತ ಬಂದಿದೆ. ಈ ಮದ್ಯೆ ಎಲ್ಲರ ಬದುಕಿನಲ್ಲೂ ಒಂದು ಟನರ್ಿಂಗ್ ಪಾಯಿಂಟ್ ಇರುತ್ತದೆ. ಆತನ ವಿಷಯದಲ್ಲಿಯೂ ಹಾಗೇ ಆಯಿತು. ಅದೇ ಮಾರನಬೀಡದಲ್ಲಿ ಧರ್ಮಸ್ಥಳದ ಮುಖೇನ ನಡೆಯುವ 943 ನೇ ಮದ್ಯವರ್ಜನ ಶಿಬಿರದ ಬಗ್ಗೆ ಮಾಹಿತಿ ಪಡಕೊಂಡು ಶಿಬಿರಾಥರ್ಿಯಾಗಿ ನೋಂದಾಯಿಸಿಕೊಂಡು ಈರಪ್ಪ ಮನದೊಳಗೆ ಇದ್ದ ಕತ್ತಲೆಯನ್ನು ಹೊಡೆದೊಡಿಸುವಲ್ಲಿ ಶಿಬಿರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈರಪ್ಪನಿಂದ ಕಳೆದ 2 ವರ್ಷದಿಂದ ದೂರವಾಗಿದ್ದ ಪುಷ್ಪಳನ್ನು ದೂರದ ಕೂಸನೂರಿಗೆ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ತೆರಳಿ ಪುಷ್ಪ ಹಾಗೂ ಅವರ ತಂದೆ/ ತಾಯಿ ಮನವೊಲಿಸಿ ಮಾರನಬೀಡ ಶಿಬಿರಕ್ಕೆ ಮಗುವಿನ ಸಮೇತ ಕರೆಸಿ ಗಂಡ ಹೆಂಡತಿಯ ಮನದಲ್ಲಿದ್ದ ದ್ವಂದ್ವಗಳನ್ನು ನಿವಾರಿಸಿ, ತಿಳುವಳಿಕೆ ನೀಡಿ ಒಡೆದು ಹೋಗಿದ್ದ ಮನಸ್ಸುಗಳನ್ನು ಒಂದಾಗಿಸಿ ಗಂಡ ಹೆಂಡತಿಯನ್ನು ಒಟ್ಟು ಸೇರಿಸಿ ಹೊಸ ಜೀವನಕ್ಕೆ ನಾಂದಿ ಹಾಡಿ ಸಾರ್ಥಕತೆ ಮೆರೆದಿದೆ. ಕೊನೆಯದಾಗಿ ಸಮಾಜದ ಜನರಿಗೆ ಈರಪ್ಪನ ಕಿವಿಮಾತು ಮನಸ್ಸಿನ ಪರಿಸ್ಥಿತಿಗೆ ಹಲವಾರು ಮಾದಕ ಚಟಗಳ ದಾಸರಾಗುತ್ತಾರೆ. ಆ ಜಾಲದಲ್ಲಿ ಸಿಲುಕುತ್ತಾರೆ. ನಂತರ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಆದರೆ ಇದರಿಂದ ಯಾವ ಸುಖವೂ ಸಿಗುವುದಿಲ್ಲ. ಯಾವುದೋ ಭ್ರಮೆಯಲ್ಲಿ ಸಿಲುಕಿ ಬಂಗಾರದಂತಹ ಬದುಕನ್ನು ಕೈಯಾರೆ ಹಾಳು ಮಾಡಿಕೊಳ್ಳಬೇಡಿ.

Leave a Reply

Your email address will not be published. Required fields are marked *