DharmasthalaUncategorized

About Dharmasthala – Part 3

 art 3 photo

ಶ್ರೀ ಮಂಜುನಾಥ ಸ್ವಾಮಿ ದೇವಾಲಯ

ಶ್ರೀ ಕ್ಷೇತ್ರ ಧರ್ಮಸ್ಥಳದ ನಿರ್ಮಾಣಕ್ಕೆ ಕಾರಣವಾದ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಪ್ರತಿನಿತ್ಯ ನಾಡಿನಾದ್ಯಂತದ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ದೂರದ ಊರುಗಳಿಂದ ಬಸ್ಸು, ವಾಹನಗಳಲ್ಲಿ ಬಂದು ಧರ್ಮಸ್ಥಳದ ಪ್ರವೇಶದ್ವಾರದಲ್ಲಿ ಇಳಿದು ಕೊಂಚ ನಡಿಗೆಯ ಮೂಲಕ ರಾಜಬೀದಿಯಲ್ಲಿ ಸಾಗಿ ಬಂದರೆ ಕುಡುಮಾಪುರ (ಧರ್ಮಸ್ಥಳ) ಪೂರ್ವಾಭಿಮುಖವಾಗಿ ಎದ್ದುನಿಂತು ಕಂಗೊಳಿಸುತ್ತದೆ.

ಶ್ರೀ ಮಂಜುನಾಥ ಸ್ವಾಮಿ ದೇಗುಲವನ್ನು ಭಕ್ತಗಡಣ ಒಳಹೊಕ್ಕಾಗ ಮೊದಲ ನೋಟ ಗರ್ಭಗುಡಿಯ ಹೊರಾಂಗಣದ ಸುತ್ತು ಪೌಳಿ, ಇಲ್ಲಿಂದ ಸಾಲಾಗಿ ಪ್ರದಕ್ಷಿಣೆ ಬಂದು ಗರ್ಭಗುಡಿಯ ಒಳಾಂಗಣಕ್ಕೆ ಕಾಲಿರಿಸಿದರೆ ಮೊದಲಿಗೆ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಭಾಗ್ಯ. ಸ್ವಣರ್ಾಭರಣಾಲಂಕೃತನಾಗಿ ಕಂಗೊಳಿಸುವ ಶ್ರೀ ಸ್ವಾಮಿಯನ್ನು ಮನದಣಿಯೇ ಕಣ್ತುಂಬಿಕೊಂಡು ಗಂಧ ತೀರ್ಥಪ್ರಸಾದವನ್ನು ಸ್ವೀಕರಿಸಿ ಮುಂದೆ ಹೋದರೆ ಎಡಪಾಶ್ರ್ವಕ್ಕೆ ಕ್ಷೇತ್ರರಕ್ಷಕ ಶ್ರೀ ಅಣ್ಣಪ್ಪ ಸ್ವಾಮಿಯ ಮಂಗಳಮೂರ್ತಿ. ಆತ ಕ್ಷೇತ್ರದ ಹಿಂದಿರುವ ಶಕ್ತಿ. ಅವನ ಆಣತಿಯಂತೆಯೇ ಇಲ್ಲಿ ಎಲ್ಲವೂ ನಡೆಯುತ್ತದೆ. ಸತ್ಯನಿಷ್ಠೆ, ಪ್ರಾಮಾಣಿಕತೆಯೊಂದಿಗೆ ಆತನನ್ನು ಆರಾಧಿಸುವ ಭಕ್ತರಿಗೆ ಆತ ಕರುಣಾಮಯಿ. ಆತನ ದರ್ಶನ ಪಡೆದು ಹಾಗೆಯೇ ಪ್ರದಕ್ಷಿಣಾಕಾರವಾಗಿ ಸರತಿ ಸಾಲಲ್ಲೇ ಮುಂದುವರಿದರೆ ಗರ್ಭಗುಡಿಯ ಹಿಂಭಾಗದಲ್ಲಿ ವಿಘ್ನ ನಿವಾರಕ ಮಹಾಗಣಪತಿಯ ದರ್ಶನ. ಅಲ್ಲಿಂದ ಮುಂದೆ ಬಂದರೆ ಧರ್ಮದೇವತೆಗಳು ಮತ್ತು ಶ್ರೀ ಅಮ್ಮನವರ ದಿವ್ಯಸಾನ್ನಿಧ್ಯ.

ಅಲ್ಲಿಂದ ತೀರ್ಥಪ್ರಸಾದ ಸ್ವೀಕರಿಸಿ ಮುಂದೆ ಸಾಗಿದರೆ ಹೊರಾಂಗಣಕ್ಕೆ ಮರುಪ್ರವೇಶ. ಹಿಂತಿರುಗುವ ಮುನ್ನ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ ಗರ್ಭಗುಡಿಯ ಮೇಲ್ಛಾವಣಿಗೆ ಹೊದಿಸಿದ ಬಂಗಾರದ ಹೊದಿಕೆಯ ಮನಮೋಹಕ ನೋಟವನ್ನು ಕಣ್ತುಂಬಿಕೊಳ್ಳದೆ ಇದ್ದರೆ ದೇಗುಲದ ದರ್ಶನ ಅಪೂರ್ಣವೆನಿಸಬಹುದು. ಹಾಗೆಯೇ ಒಳಾಂಗಣ ಹಾಗೂ ಗರ್ಭಗುಡಿಯ ಆಕರ್ಷಕ ಕಾಷ್ಟ ಶಿಲ್ಪ ಕೆತ್ತನೆಗಳ ವಾಸ್ತುಶೈಲಿಯ ಸೊಬಗನ್ನು ವೀಕ್ಷಿಸದೇ ಹೋದರೂ ಅದೊಂದು ಅಪೂರ್ವ ಅವಕಾಶವನ್ನು ಕಳೆದುಕೊಂಡಂತಾಗುವುದು. ಧರ್ಮಾಧಿಕಾರಿ ಶ್ರೀ ಹೆಗ್ಗಡೆಯವರ ಶಿಲ್ಪಕಲಾ ಸೌಂದರ್ಯಾಸಕ್ತಿಗೆ ಅದೊಂದು ನಿದರ್ಶನ.

ಭಕ್ತರು ಅಪೇಕ್ಷಿಸಿದರೆ ವಿವಿಧ ವಿಶೇಷ ಸೇವೆಗಳನ್ನು ಸಲ್ಲಿಸಲು ದೇಗುಲದಲ್ಲಿ ಅವಕಾಶ ಉಂಟು. ದೇವರ ದರ್ಶನ ಪಡೆದು ಹೊರಾಂಗಣಕ್ಕೆ ಪ್ರವೇಶಿಸಿದ ಬಳಿಕ ಮುಂದೆ ಸಾಗಿದಂತೆ ಎಡಗಡೆಗೆ ದೇವಳದ ‘ಖರ್ಚು ಉಗ್ರಾಣ‘ ವಿಭಾಗ. ದೇವಳದ ಆಯಾಯ ದಿನದ ಪೂಜಾ ಕೈಂಕರ್ಯಗಳಿಗೆ ಬಳಸಲಾಗುವ ಸಕಲ ಪರಿಕರಗಳ ದಾಸ್ತಾನು ಹಾಗೂ ಅವುಗಳ ಖರ್ಚಿನ ಲೆಕ್ಕಾಚಾರವನ್ನು ಇಲ್ಲಿ ನಿರ್ವಹಿಸಲಾಗುತ್ತಿದೆ. ಹಾಗೆಯೇ ಮುಂದೆ ಸಾಗಿದಂತೆ ಸೇವಾಪ್ರಸಾದ ಚೀಟಿ ಪಡೆಯುವ ಕೌಂಟರ್. ಅಲ್ಲಿ ಪ್ರಸಾದ ಚೀಟಿ ಪಡೆದುಕೊಂಡು ಮುನ್ನಡೆದರೆ ಪ್ರಸಾದ ನೀಡುವ ಕೌಂಟರ್ಗಳು. ಅಲ್ಲೇ ಪಕ್ಕದಲ್ಲಿ ತೀರ್ಥಸ್ನಾನದ ತೊಟ್ಟಿ. ಕಾಯಿಲೆ ನಿವಾರಣೆಗಾಗಿ ಕಷ್ಟಕಾರ್ಪಣ್ಯಗಳ ನಿರ್ಮೂಲನಕ್ಕಾಗಿ ಶ್ರೀ ಸ್ವಾಮಿಗೆ ಹರಿಕೆ ಹೇಳಿಕೊಂಡವರಿಗೆ, ಇಲ್ಲಿ ದೇವಳದ ಅರ್ಚಕ ಸಿಬ್ಬಂದಿಗಳಲ್ಲೊಬ್ಬರು ದೇವರ ಅಭಿಷೇಕದ ಪವಿತ್ರ ಜಲವನ್ನು ತಲೆಮೇಲೆ ಸುರಿಯುತ್ತಾರೆ. ಹೀಗೆ ಅಭಿಷೇಕದ ಪವಿತ್ರ ಜಲಸ್ನಾನದಿಂದ ಸರ್ವರೋಗ ಪರಿಹಾರವಾಗುತ್ತದೆ ಎಂಬುದು ಭಕ್ತ ಜನಸಮೂಹದ ನಂಬಿಕೆ. ನಂತರ ಪ್ರಸಾದ ಪಡೆದುಕೊಂಡು ಮುಂದೆ ಬಂದು ಹೊರಾಂಗಣದ ನೆಲಹಾಸಿನಲ್ಲಿ ಕೊಂಚಹೊತ್ತು ಕುಳಿತು (ಜನಸಂದಣಿ ಇಲ್ಲದ ಪಕ್ಷದಲ್ಲಿ) ಶ್ರೀ ದೇವರನ್ನು ಧ್ಯಾನಿಸಬಹುದು.

ಇನ್ನು ಶ್ರೀ ಮಂಜುನಾಥ ಸ್ವಾಮಿಯ ಒಳಾಂಗಣದ ದ್ವಾರದಲ್ಲಿ ಓರ್ವರು ಕಾಯಿಕೊಡುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಅವರನ್ನು ಶ್ರೀ ಹೆಗ್ಗಡೆಯವರ ಪ್ರತಿನಿಧಿಗಳೆಂದು ಅಥವಾ ನಾಲ್ವಿಕೆಯವರು ಎಂದು ಸಂಬೋಧಿಸುತ್ತಾರೆ. ವಾಕ್ದೋಷ, ಆಣೆ ಪ್ರಮಾಣ ಇತ್ಯಾದಿಗಳ ಕುರಿತಾಗಿ ಅವರಲ್ಲಿ ನಿವೇದನೆ ಮಾಡಿಕೊಂಡರೆ ಆಣೆ ಸ್ವಾಮಿಯ ಪದತಳಕ್ಕೆ ಸಂದಾಯವಾಯಿತು ಎಂದು ಧೈರ್ಯದ ನುಡಿಗಳನ್ನು ಅವರು ಕೊಡುತ್ತಾರೆ. ಮನೆಗೆ ರಕ್ಷೆಯಾಗಿ ತೆಂಗಿನ ಕಾಯಿಯನ್ನು ಅಲ್ಲಿಂದಲೇ ಪಡೆದು ಕೊಳ್ಳಬಹುದು.

ಜಾತ್ರೆ, ಸಾರ್ವತ್ರಿಕ ರಜಾದಿನಗಳಲ್ಲಿ, ವಿಶೇಷ ಹಬ್ಬ ಹರಿದಿನಗಳ ಸಮಯದಲ್ಲಿ ಜನಸಂದಣಿ ಹೆಚ್ಚಾಗುವ ಕಾರಣ ಮಕ್ಕಳು, ವಯೋವೃದ್ಧರಿಗೆ ದೇವರ ದರ್ಶನಕ್ಕೆ ವಿಶೇಷ ರಿಯಾಯಿತಿ ಇರುತ್ತದೆ. ಅಂತಹವರು ದೇಗುಲದ ಎದುರಿನ ವಿಚಾರಣಾ ಕೌಂಟರ್ನಲ್ಲಿ ವಿಶೇಷ ದರ್ಶನ ರಶೀದಿ ಪಡೆದು ಬೇಗನೇ ದೇವರ ದರ್ಶನ ಪಡೆಯುವ ಅವಕಾಶ ಕಲ್ಪಿಸಲಾಗುತ್ತದೆ. ಹಾಗೆಯೇ ತುಲಾಭಾರ ಸೇವೆ ನಡೆಸುವವರೂ ದೇವಳ ಪ್ರವೇಶಿಸುವ ಮುನ್ನ ದೇವಳದ ಎದುರಿನ ವಿಚಾರಣಾ ಕೌಂಟರ್ ಪಕ್ಕದಲ್ಲಿರುವ ತುಲಾಭಾರ ಸೇವೆ ಚೀಟಿ ಕೊಡುವಲ್ಲಿ ಚೀಟಿ ಮಾಡಿಸಿಕೊಂಡೇ ಒಳಹೊಕ್ಕರೆ ಹೆಚ್ಚು ಅನುಕೂಲವಾಗುತ್ತದೆ. ವಾಹನ ಪೂಜಾ ಚೀಟಿಯೂ ಇಲ್ಲೇ ಲಭ್ಯವಿರುತ್ತದೆ.

ಹೊರಗೆ ಬಂದ ಬಳಿಕ ದೇವರ ಅನ್ನ ಪ್ರಸಾದ ಸ್ವೀಕಾರಕ್ಕಾಗಿ ಅನ್ನಪೂರ್ಣ ಛತ್ರಕ್ಕೆ ಸಾಗಬಹುದು. ದೇಗುಲದ ಹಿಂಭಾಗದ ಕ್ಯೂ ಕಾಂಪ್ಲೆಕ್ಸ್ ಪಕ್ಕದಿಂದ ಸರತಿ ಸಾಲಿನಲ್ಲಿ ಹೋಗಿ ದೇಗುಲದ ಬಲಗಡೆಗಿರುವ ಶ್ರೀ ಅನ್ನಪೂರ್ಣ ಛತ್ರಕ್ಕೆ ಪ್ರವೇಶಿಸಬಹುದು

Leave a Reply

Your email address will not be published. Required fields are marked *