DharmasthalaUncategorized

About Dharmasthala – Part 4

art 4 photo

ಧರ್ಮಸ್ಥಳದಲ್ಲಿರುವ ಇತರ ಮಂದಿರಗಳು

ಶ್ರೀ ಕ್ಷೇತ್ರ ಧರ್ಮಸ್ಥಳವು ಹಲವಾರು ಜಾತಿ ಮತಗಳ ಜನರಿಗೆ ನಂಬಿಕೆಯ ತಾಣವಾಗಿರುವುದರಿಂದ ಇಲ್ಲಿ ಮಂಜುನಾಥ ಸ್ವಾಮಿ ದೇವಾಲಯದ ಜೊತೆ ಜೊತೆಗೆ ಹಲವಾರು ಧಾಮರ್ಿಕ ಸ್ಥಳಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ನೋಡೋಣ ಬನ್ನಿ.

ಶ್ರೀ ಛತ್ರ ಗಣಪತಿ ದೇವಸ್ಥಾನ – ಶ್ರೀ ಅನ್ನಪೂರ್ಣ ಛತ್ರದ ಪ್ರವೇಶದ್ವಾರದಲ್ಲಿ ಬಲಗಡೆಗೆ

ಶ್ರೀ ಗಣಪತಿ ದೇವರ ಗುಡಿಯಿದೆ. ಇದು ಪಕ್ಕನೇ ಯಾರ ಗಮನಕ್ಕೂ ಬರುವುದಿಲ್ಲ. ದಿನದ ಮೂರು ಹೊತ್ತು ಇಲ್ಲಿಯೂ ಪೂಜೆ ನಡೆಯುತ್ತದೆ. ಗರ್ಭಗುಡಿಯಲ್ಲಿ ದೇವರ ಮುಂದೆ ಬೆಲ್ಲ ತೆಂಗಿನಕಾಯಿ ಮಿಶ್ರಿತ ಅವಲಕ್ಕಿಯ ರಾಶಿಯನ್ನು ಮಾಡಿ ದೇವರಿಗರ್ಪಿಸುವ ‘ರಾಶಿಪೂಜೆ’ ಇಲ್ಲಿಯ ವಿಶೇಷತೆ. ಹರಕೆ ಹೇಳಿಕೊಳ್ಳುವ ಭಕ್ತರು ರಾಶಿಪೂಜೆಗೆ ತಗಲುವ ವೆಚ್ಚವನ್ನು ಪೂಜೆಮಾಡಿಸಿದಂದು ಈ ದೇವಳದಲ್ಲಿ ನೀಡಿ ಅವಲಕ್ಕಿ ಪ್ರಸಾದವನ್ನು ಪಡೆಯಬಹುದು. ಕೆಲವು ತಿಂಗಳುಗಳ ಮುಂಚೆಯೇ ಇಲ್ಲಿ ಹರಕೆ ಸೇವೆಯ ಬಗ್ಗೆ ಹೆಸರು ನಮೂದಿಸಬೇಕು. ಸರತಿಯಲ್ಲಿ ಸೇವಾ ಅವಕಾಶ ಕಲ್ಪಿಸಲಾಗುತ್ತದೆ. ಸೇವಾ ಅವಕಾಶ ಸಿಕ್ಕಿದ ದಿನದಂದು ಸಂಜೆ 6ಗಂಟೆ ಮೊದಲು ಗುಡಿಗೆ ಬಂದು ಸಂಕಲ್ಪ ಕಾರ್ಯಕೈಗೊಳ್ಳಬೇಕು. ಮುಂಜಾನೆ 6-30 ಗಂಟೆಗೆ, ಮಧ್ಯಾಹ್ನ 12.00 ಗಂಟೆಗೆ ಮತ್ತು ರಾತ್ರಿ 8.30ಕ್ಕೆ ಇಲ್ಲಿ ಮಹಾಪೂಜೆ ನಡೆಯುತ್ತದೆ.

ಕ್ಷೇತ್ರ ರಕ್ಷಕನ ಸನ್ನಿಧಿ ಶ್ರೀ ಅಣ್ಣಪ್ಪಬೆಟ್ಟ

ಮಂಜುನಾಥ ಸ್ವಾಮಿಯ ನೆಚ್ಚಿನ ಸೇವಕ ಶ್ರೀ ಅಣ್ಣಪ್ಪ ಸ್ವಾಮಿಯ ಮಂದಿರವೇ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಖ್ಯ ಆಕರ್ಷಣೆ. ಅದೊಂದು ಕಿರಿದಾದ ಗುಡ್ಡ. ಏರಿಹೋಗಲು ಹಸನಾದ ಮೆಟ್ಟಿಲುಗಳಿವೆ. ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ತುದಿಯ ಬಯಲಿನಲ್ಲಿ ಧರ್ಮದೇವತೆಗಳಾದ ಕಾಳರಾಹು, ಕಾಳಕರ್ಾಯಿ, ಕುಮಾರಸ್ವಾಮಿ, ಕನ್ಯಾಕುಮಾರಿಯರ ಪುಟ್ಟ ಪುಟ್ಟ ಮಾಡಗಳಿವೆ. ಕಾಳಭೈರವ, ಪಂಜುರ್ಲಿಯರಿಗೂ ಅಲ್ಲಿ ಸ್ಥಾನಗಳಿವೆ. ಅಣ್ಣಪ್ಪ ಸ್ವಾಮಿಯ ಮಹಿಮಾತಿಶಯಗಳು ಎಲ್ಲರಿಗೂ ಗೊತ್ತು. ಪ್ರತಿ ತಿಂಗಳ ಸಂಕ್ರಮಣ ಹಾಗೂ ವಿಶೇಷ ದಿನಗಳಲ್ಲಿ ಅಣ್ಣಪ್ಪ ಸ್ವಾಮಿ ಮತ್ತು ಧರ್ಮದೇವತೆಗಳಿಗೆ ಇಲ್ಲಿ ತಂಬಿಲ ಸೇವೆ ಹಾಗೂ ‘ದರ್ಶನ’ ಸೇವೆ ನೆರವೇರುತ್ತದೆ. ದರ್ಶನ ಕಾಲದಲ್ಲಿ ಹೆಗ್ಗಡೆಯವರು ಹಾಜರಾಗುತ್ತಾರೆ. ಆಗ ನುಡಿಕಟ್ಟಾಗುತ್ತದೆ. ನಮ್ಮ ನಿಧಿ ಎಂದರೆ ತಳವಿಲ್ಲದ ಬಾವಿ, ನಮ್ಮ ಹತ್ತಿರ ನಿಮಗೆ ಕೆಲಸವುಂಟು, ನಿಮ್ಮ ಹತ್ತಿರ ನಮಗೆ ಕೆಲಸವುಂಟು. ಕಾಲಕಾಲಕ್ಕೆ ನೇಮ ನಡಾವಳಿಗಳನ್ನು ನಡೆಸಿಕೊಂಡು ಬನ್ನಿ ಮುಂತಾದ ಪ್ರೋತ್ಸಾಹದ, ಎಚ್ಚರಿಕೆಯ ಮಾತುಗಳನ್ನು ಧರ್ಮದೇವತೆಗಳು ಪಾತ್ರಿಗಳ ಮೂಲಕ ತಿಳಿಸಿಕೊಡುತ್ತಾರೆ. ಆ ಹೊತ್ತಿನಲ್ಲಿ ಧರ್ಮಧಿಕಾರಿಗಳು ತಲೆಗೆ ಮೈಸೂರುಪೇಟ ಸುತ್ತಿಕೊಂಡು ಶ್ವೇತ ಶುಭ್ರವಸನಧಾರಿಗಳಾಗಿ, ತಮ್ಮ ಹಸ್ತದ ಮೇಲೆ ಹಸ್ತವಿಟ್ಟು ನಿಂತಿರುತ್ತಾರೆ. ಅವರೇನೂ ಮಾತನಾಡುವುದಿಲ್ಲ. ಧರ್ಮದೇವತೆಗಳ ನುಡಿಗಟ್ಟಿನ ಒಂದೊಂದು ಅಭಿಪ್ರಾಯಕ್ಕೂ ತಮ್ಮ ಅಡಿಯ ಹಸ್ತವನ್ನು ಮೇಲಕ್ಕೂ, ಮೇಲಿನ ಹಸ್ತವನ್ನು ಅಡಿಗೂ ಬದಲಾಯಿಸುತ್ತ ತಮ್ಮ ಸಮ್ಮತಿ ಸೂಚಿಸುತ್ತಾರೆ.

Leave a Reply

Your email address will not be published. Required fields are marked *