Uncategorized

Students from LEAD Prayana visit Dharmasthala

“ವಿದ್ಯೆಯು ಬದಲಾವಣೆಯ ದಾರಿಯಾಗಿದೆ, ವಿದ್ಯೆಯನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಹಂತದಲ್ಲಿ ಯೋಜಿತ ರೀತಿಯಲ್ಲಿ ಆಧುನಿಕ ಬದಲಾವಣೆ ಮಾಡಿದಲ್ಲಿ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ಶ್ರೀ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಚರ್ತುದಾನಗಳ ಮೂಲಕ ಸಮಾಜದ ಉದ್ಧಾರಕ್ಕಾಗಿ ಸಮರ್ಪಣ ಭಾವದಿಂದ ಕೆಲಸವನ್ನು ನಿರ್ವಹಿಸಿದಾಗ ನಮ್ಮ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ, ಆದುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ವಾರ್ಥದ ಬದಲು ಸಮಾಜ ಸೇವೆಯೊಂದಿಗೆ ಕೆಲಸ ಮಾಡಿ” ಎಂಬುದಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೇಪಾಂಡೆ ಫೌಂಡೇಶನ್ ವತಿಯಿಂದ ಲೀಡ ಪ್ರಯಾಣ ಕಾರ್ಯಕ್ರಮದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ವಿವಿಧ ರಾಜ್ಯಗಳ ೧೩೫ ಮಂದಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಗವದ್ಗೀತೆ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಿರುವ ಮೌಲ್ಯಗಳು ಮನುಷ್ಯನ ಜೀವನದ ಪ್ರತಿ ಹೆಜ್ಜೆಗೂ ಅನ್ವಯವಾಗುತ್ತದೆ. ಯಶಸ್ಸಿನ ದಾರಿಯಲ್ಲಿ ಸವಾಲುಗಳು, ಸಮಸ್ಯೆಗಳು, ಸಂತೋಷಗಳು ಸಹಜ ಇವೆಲ್ಲವನ್ನೂ ಧೆರ್ಯದಿಂದ ಎದುರಿಸುವಂತೆ ಕರೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎ.ಎಚ್.ಮಂಜುನಾಥ್ರವರು ಕಾರ್ಯಕ್ರಮವನ್ನು ಉಧ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೆಖರಿ, ಕ್ಷೇತ್ರದ ಚರ್ತುದಾನಗಳ ಪರಂಪರೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಿಕೊಳ್ಳುವ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದೇಪಾಂಡೆ ಫೌಂಡೇಶನ ಶ್ರೀ ಅಭಿನಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾರಾವ್, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಂಶುಪಾಲರಾದ ಶ್ರೀ ಸುರೇಶ್ ಸಾಲಿಯಾನ್, ಕೇಂದ್ರ ಕಛೇರಿಯ ಪ್ರಬಂಧಕ ತೋಷತ್ ಕುಮಾರ್, ತರಬೆತಿ ಕೇಂದ್ರದ ಉಪನ್ಯಾಸಕರಾದ ಶ್ರೀ ಬಾಲಕೃಷ್ಣ, ಶ್ರೀ ರಾಜೇರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೇಪಾಂಡೆ ಫೌಂಡೇಶನ್ ವತಿಯಿಂದ ಪ್ರತಿವರ್ಷವೂ ನಡೆಸಿಕೊಡುವ ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯು ಆಯೋಜಿಸುತ್ತದೆ. ಲೀಡ ಪ್ರಯಾಣ ತಂಡವು ದಿನಾಂಕ ೧೭.೦೧.೨೦೧೭ ಹಾಗೂ ದಿನಾಂಕ.೧೮.೦೧.೨೦೧೭ ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದೇವಳ ಹಾಗೂ ಪ್ರೇಕ್ಷಣಿಯ ಸ್ಥಳಗಳು, ಸಿರಿ ಗ್ರಾಮೋದ್ಯೋಗ ಸಂಸ್ಥೆ, ರುಡಸೆಟಿ, ಕೃಷಿ ತಾಕುಗಳ ಭೆಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳು, ಜನಜಾಗೃತಿ ವೇದಿಕೆ ಭೆಟಿ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಲಿನ ಪರಿಸರದಲ್ಲಿ ವಿದ್ಯಾರ್ಥಿಗಳಿಂದ ನಗದು ರಹಿತ ವ್ಯವಹಾರ ಹಾಗೂ BHIM App ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ.

Leave a Reply

Your email address will not be published. Required fields are marked *