NewsUncategorized

SKDRDP SHG App launched

Introduction of technology is a boon to SHGs: NABARD Chairman

Dharmasthala: Dr D Veerendra Heggade overcame the barriers in technical, financial  solutions to poverty and has become a guiding force to people towards achievement on the basis of religion, opined NABARD Chairman Dr Harsh Kumar Bhanwala.

He spoke after launching SKDRDP App in an event organised by the Shri Kshethra Dharmasthala Rural Development Project at Amruthavarshini Hall in Dharmasthala on Wednesday. Using e-Shakti, in collaboration with SKDRDP the bank is trying to reach people. The bank is in connection with the central government to expand the project across the nation. Helping farmers over drip and micro irrigation is another aspect, he said.

Corporation Bank Executive Director M G Bhagath distributed tablet phones to the beneficiaries. Implementation of technology is a boon to the development of SHGs. The relationship between the Corporation bank and SKDRDP is good and the bank would like to continue it, he said.

SKDRDP Executive Director Dr L H Manjunath said that the Corporation Bank and SKDRDP have been cooperating each other in seven districts. SKDRDP has opened 80,000 accounts in the bank. SKDRDP has opened 3.70 lakh SHGs across the state. One cannot beat this record for time being. It also distributed around 5,000 tablet phones worth Rs 4 crore.

Dharmadhikari of Dharmasthala Dr D Veerendra Heggade said that works can be performed faster with new technology and transparency is an additional benefit. In modern days expenditure has been increased. So, people should be serious about additional income and savings. They should maintain day-to-day expenditure, he said.

Hemavathi Heggade  said that in SHG exchange of information, integrity is important. The president, office-bearers  should utilize the two years of tenure to conduct most number of activities. Meanwhile, she stressed on limited use of water to save it for this summer.

Broshure released

Earlier Dr Harshakumar Banwala also released a brochure related to SKDRDP SHG app. Installation of office bearers of 12 federations on Dharmasthala region followed the event. All federations had achieved A+ and A grades in their tenure. Various groups and individuals of the groups were felicitated for their achievements. Dr Veerendra Heggade couple was felicitated by the group members on the occasion.

In past two years

Belthangady taluk has 4,066 self help groups or joint liability groups (JLG) comprising of 33,299 members. In Dharmasthala region under 12 federations there are 303 SHGs comprising of 2,392 members. In the current financial year, under micro credit programme the group has borrowed Rs 3.30 crore loan from the bank and utilized for solar systems, gobar gas plants, construction of houses, renovation or repair of houses. In Dharmasthala region, 2,700 members from 1820 families were covered under Sampoorna Suraksha.

In this year the region has conducted 12 agriculture trainings and demonstrations, 4 study visits, 43 capacity building programmes and distributed seeds to 863 families. A subsidy of Rs 56,000 has been given to purchase agriculture equipments. The region is also providing monthly scholarship to 18 students in this year. So far Rs 1.76 lakh has been spent for the purpose. The region is taking care of 21 destitute families. Under Swachhatha Abhiyana 7 religious institutions.

MLA Vasanth Bangera, Nabard Chief General Manager M I Ganagi were  present among others. Cultural programmes, Stalls of SKDRDP, Siri and others attracted the attention of onlookers.

Kannada Report

ತಾಂತ್ರಿಕತೆ ಸ್ವ- ಸಸಹಾಯ ಗುಂಪುಗಳಿಗೆ ವರದಾನ: ನಬಾರ್ಡ್ ಮುಖ್ಯಸ್ಥ

ಧರ್ಮಸ್ಥಳ: ಬಡತನದ ಎದುರಿಸಲು ಬೇಕಿರುವ ತಾಂತ್ರಿಕ ಮತ್ತು ಆರ್ಥಿಕ ಕ್ರಮಗಳಲ್ಲಿ ಇರುವ ತೊಂದರೆಗಳನ್ನು ಮೀರಿ ನಿಂತಿರುವ ಧರ್ಮಸ್ಥಳದ ಧಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ, ಸಾಧನೆಯ ಪಥದಲ್ಲಿ ಜನಸಾಮಾನ್ಯರಿಗೆ ದಾರಿದೀಪವಾಗಿದ್ದಾರೆ ಎಂದು ನಬಾರ್ಡ ಮುಖ್ಯಸ್ಥ ಡಾ ಹರ್ಷ ಕುಮಾರ್ ಬನ್ವಾಲ್ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ
ಆಯೋಜಿಸಿದ್ದ skdrdp ಆಪ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ನಬಾರ್ಡ ಇ-ಶಕ್ತಿ ಯೋಜನೆಯನ್ನು skdrdp ಸಹಯೋಗದೊಂದಿಗೆ ದೇಶದಾದ್ಯಂತ ವಿಸ್ತರಿಸುವ ಗುರಿಯಿದೆ. ಈ ಬಗ್ಗೆ ಬ್ಯಾಂಕ್ ಈಗಾಗಲೇ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದೆ. ರೈತರಿಗೆ ಹನಿ ನೀರಾವರಿ ಮತ್ತು ಅತಿ ಸಣ್ಣ ನೀರಾವರಿಯ ಕುರಿತು ಸಹಾಯ ಮಾಡುವುದು ಇನ್ನೊಂದು ಉದ್ದೇಶ, ಎಂದು ಅವರು ಹೇಳಿದರು.

ಕಾರ್ಪೋರೇಶನ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೆಶಕ ಎಂ ಜಿ ಭಗತ್ ಫಲಾನುಭವಿಗಳಿಗೆ ಟ್ಯಾಬ್ಲೆಟ್ ಪೋನ್ ವಿತರಿಸಿದರು. ತಾಂತ್ರಿಕತೆಯ ಅಳವಡಿಕೆ ಸ್ವ ಸಹಾಯ ಸಂಘಗಳ ಬೆಳವಣಿಗೆಗೆ ದೊಡ್ಡ ಬಲ ನೀಡುತ್ತದೆ. ಕಾರ್ಪೋರೇಶನ್ ಬ್ಯಾಂಕ್ ಮತ್ತು ಸಂಘದ ಭಾಂಧವ್ಯ ಹಲವು ವರ್ಷಗಳಿಂದಲೂ ಉತ್ತಮವಾಗಿದೆ. ಬ್ಯಾಂಕ್ ಇದನ್ನೇ ಮುಂದುವರಿಸಿಕೊಂಡು ಹೋಗಲು ಬಯಸುತ್ತದೆ, ಎಂದು ಅವರು ಹೇಳಿದರು.

ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕಾರ್ಪೋರೇಶನ್ ಬ್ಯಾಂಕ್ ಗಳು ರಾಜ್ಯದ ಏಳು ಜಿಲ್ಲೆಗಳಲ್ಲಿ ಪರಸ್ಪರ ಸಹಕರಿಸುತ್ತಿವೆ. ಸಂಘ ಬ್ಯಾಂಕ್ ನಲ್ಲಿ ಸುಮಾರು 80,000 ಎಕೌಂಟ್ಗಳನ್ನು ತೆರೆದಿದೆ. ಇದು ರಾಜ್ಯದ ಮಟ್ಟಿಗೆ ಸರಿಗಟ್ಟಲಾಗದ ದಾಖಲೆ. ಈಗಾಗಲೇ ಸುಮಾರು ರೂ 4 ಕೋಟಿ ಮೊತ್ತದ 5,000 ಟ್ಯಾಬ್ಲೆಟ್ ಫೋನ್ ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ, ಎಂದು skdrdp ಕಾರ್ಯನಿರ್ವಾಹಕ ನಿರ್ದೆಶಕ ಡಾ ಎಲ್ ಹೆಚ್ ಮಂಜುನಾಥ್ ಹೇಳಿದರು.

‘ದುಡ್ಡು ನೀರು ಪೋಲು ಬೇಡ’
ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ತಾಂತ್ರಿಕತೆಯ ಸಹಕಾರದಿಂದ ಕೆಲಸಗಳನ್ನು ವೇಗವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಲು ಸಾಧ್ಯ. ಈಗಿನ ದಿನಗಳಲ್ಲಿ ಖರ್ಚು ಹೆಚ್ಚುತ್ತಿರುವುದರಿಂದ ಜನರು ಹೆಚ್ಚಿನ ಗಳಿಕೆಯತ್ತ ಮನಸ್ಸು ಮಾಡಬೇಕು ಮತ್ತು ಉಳಿಕೆಯೂ ತುಂಬಾ ಅಗತ್ಯ. ಜನರು ತಮ್ಮ ದಿನನಿತ್ಯದ ಖರ್ಚುವೆಚ್ಚಗಳನ್ನು ಬರೆದಿಡುವ ಹವ್ಯಾಸ ಮರೆಯಬಾರದು, ಎಂದು ಹೇಳಿದರು.

ಮಾತೃಶ್ರೀ ಹೇಮಾವತಿ ಹೆಗ್ಗಡೆ ಮಾತನಾಡಿ ಯೋಜನೆಯ ನಾಯಕರ ನಡುವೆ ಮಾಹಿತಿಯ ವಿನಿಮಯ, ಒಗ್ಗಟ್ಟು ಮತ್ತು ಜವಾಬ್ದಾರಿ ಅಗತ್ಯ. ಎರಡು ವರ್ಷಗಳ ಅಧಿಕಾರಾವಧಿಯನ್ನು ಬಳಸಿಕೊಂಡು ಅನುಭವ ಬೆಳೆಸಿಕೊಳ್ಳಬೇಕು. ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ನೀರಿನ ದುರ್ಬಳಕೆ ಬೇಡ, ಎಂದರು.

ಅಮ್ಮ ಹೇಳಿದ ಹೊಟ್ಟೆಯ ಕಥೆ…
ಸಮಾಜದಲ್ಲಿ ಎಲ್ಲರೂ ಮುಖ್ಯ ಎನ್ನುವುದನ್ನು ಹೇಮಾವತಿ ಹೆಗ್ಗಡೆ ಹೊಟ್ಟೆಯ ಕಥೆಯ ಮೂಲಕ ವಿವರಿಸಿದರು. ಒಮ್ಮೆ ಶರೀರದಲ್ಲಿ ಯಾವ ಅಂಗ ಹೆಚ್ಚು ಕೆಲಸ ಮಾಡುವುದು ಮತ್ತು ಯಾವುದು ಕೆಲಸಗಳ್ಳ ಎನ್ನುವುದರ ಬಗ್ಗೆ ದೇಹದ ಅಂಗಗಳ ನಡುವೆ ತೀವ್ರ ಚರ್ಚೆ ನಡೆಯಿತಂತೆ. ಕೊನೆಗೆ ಕೈ, ಕಾಲು, ತಲೆ ಎಲ್ಲಾ ಅಂಗಗಳು ಸೇರಿ ಹೊಟ್ಟೆಯೇ ಕೆಲಸಗಳ್ಳ ಎಂದು ನಿರ್ಧರಿಸಿದವಂತೆ. ಇದರಿಂದ ನೊಂದ ಹೊಟ್ಟೆ ತಾನು ಒಂದೆರಡು ದಿನ ಕೆಲಸ ಮಾಡಲು ನಿರ್ಧರಿಸಿತಂತೆ. ಹೊಟ್ಟೆ ಖಾಲಿಯಾದಂತೆ ಕೈ, ಕಾಲು, ತಲೆ ಎಲ್ಲಕ್ಕೂ ಕೆಲಸ ಕಷ್ಟವಾಗತೊಡಗಿತು. ಹೊಟ್ಟೆಯ ಮಹತ್ವ ತಿಳಿಯಿತು ಎಂಬುದು ಸಾರಾಂಶ.

ಇದಕ್ಕೂ ಮೊದಲು ಡಾ ಹರ್ಷಕುಮಾರ್ ಬನ್ವಾಲಾ ಆ‍ಪ್ ಗೆ ಸಂಬಂಧಿಸಿದ ಮಾಹಿತಿಪತ್ರ ಬಿಡುಗಡೆಗೊಳಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ವಲಯದ 12 ಒಕ್ಕೂಟಗಳ ಹೊಸ ಅಧ್ಯಕ್ಷರು ಮತ್ತು ಪಧಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಎಲ್ಲಾ ಒಕ್ಕೂಟಗಳು ಎ+ ಅಥವಾ ಎ ಗ್ರೇಡ್ ಸಾಧಿಸಿದ್ದು ವಿಶೇಷವಾಗಿತ್ತು. ವಿವಿಧ ಗುಂಪುಗಳಿಗೆ ಮತ್ತು ವೈಯುಕ್ತಿಕ ಸಾಧಕರಿಕೆ ಬಹುಮಾನ ನೀಡಿ ಗೌರವಿಸಲಾಯಿತು. ಹೊಸ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು. ಇದೇ ವೇಳೆ ಸ್ವ ಸಹಾಯ ಗುಂಪುಗಳ ಸದಸ್ಯರು ಡಾ ಡಿ ವೀರೇಂದ್ರ ಹೆಗ್ಗಡೆ ದಂಪತಿಯನ್ನು ಗೌರವಿಸಿದರು.

ಎರಡು ವರ್ಷಗಳಲ್ಲಿನ ಸಾಧನೆ
ಧರ್ಮಸ್ಥಳ ವಲಯದಲ್ಲಿ 12 ಒಕ್ಕೂಟಗಳ ಅಡಿಯಲ್ಲಿ ಒಟ್ಟು 303 ಸ್ವ ಸಹಾಯ ಸಂಘಗಳಿವೆ ಮತ್ತು 2392 ಸದಸ್ಯರಿದ್ದಾರೆ. ಪ್ರಸ್ತುತ ವರ್ಷ 3.34 ಕೋಟಿ ಪ್ರಗತಿ ನಿಧಿಯನ್ನು ಮನೆರಿಪೇರಿ, ಕೃಷಿ ಅಭಿವೃದ್ಧಿ, ಸ್ವ ಉದ್ಯೋಗ, ಗಾಡಿ ಖರೀದಿ, ಚಿನ್ನ ಖರೀದಿ, ಕೊಟ್ಟಿಗೆ ರಚನೆ ಮೊದಲಾದ ಕೆಲಸಗಳಿಗೆ ಬಳಸಿಕೊಳ್ಳಲಾಗಿದೆ. ಪ್ರತಿ ತಿಂಗಳು 21 ಕುಟುಂಬಗಳಿಗೆ ಮಾಸಾಶನ ನೀಡಲಾಗುತ್ತಿದೆ. ಒಟ್ಟು 18 ಮಂದಿ ವಿದ್ಯಾರ್ಥಿಗಳು ಸುಜ್ಞಾನನಿಧಿ ಶಿಷ್ಯವೇತನ ಪಡೆಯುತ್ತಿದ್ದಾರೆ. 25 ಕುಟುಂಬಗಳಿಗೆ ಸೋಲಾರ್ ಹಾಗೂ 17 ಕುಟುಂಬಗಳಿಗೆ ಗೋಬರ್ ಗ್ಯಾಸ್ ಅಳವಡಿಸಿಕೊಡಲಾಗಿದೆ.

ಈ ವರ್ಷ ವಲಯದಲ್ಲಿ 12 ಕೃಷಿ ತರಬೇತಿ ಮತ್ತು ಪ್ರಾತ್ಯಕ್ಷಿಕೆ, 4 ಕೃಷಿ ಅಧ್ಯಯನ ಪ್ರವಾಸಗಳು, 43 ತಾಂತ್ರಿಕ ತರಬೇತಿ ಕಾರ್ಯಕ್ರಮಗಳು, ರೂ 56,000 ದಷ್ಟು ಕೃಷಿ ಸಬ್ಸಿಡಿ ಮೊದಲಾದ ಯೋಜನೆಗಳು ಕಾರ್ಯಗತವಾಗಿವೆ. 1800 ಕುಟುಂಬಗಳ 2700 ಮಂದಿ ಸಂಪೂರ್ಣ ಸ್ವರಕ್ಷಾ ಯೋಜನೆಯ ಫಲಾನುಭವಿಗಳಾಗಿದ್ದಾರೆ. ರೂ 10.18 ಲಕ್ಷ ಮೊತ್ತವನ್ನು ದೇವಸ್ಥಾನ ಜೀಣೋದ್ಧಾರ, ಶಾಲೆಗಳಿಗೆ, ಶೌಚಾಲಯ ರಚನೆ, ಬ್ರಹ್ಮಕಲಶ ಮತ್ತು ಧಾರ್ಮಿಕ ಕೆಲಸಗಳಿಗೆ ಮುಡಿಪಾಗಿಡಲಾಗಿದೆ.

ಸ್ಥಳೀಯ ಶಾಸಕ ವಸಂತ ಬಂಗೇರ, ನಬಾರ್ಡ ಮುಖ್ಯ ಮಹಾ ಪ್ರಬಂಧಕ ಎಮ್ ಐ ಗಣಗಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು, skdrdp, ಸಿರಿ ಮೊದಲಾದ ಸಂಸ್ಥೆಗಳ ಮಳಿಗೆಗಳು ಗಮನ ಸೆಳೆದವು.

Leave a Reply

Your email address will not be published. Required fields are marked *