success storyUncategorized

Sujnana Nidhi becomes ladder for knowledge

The Sujnana Nidhi scholarship programme started as a memory of the commencement of Shri Dharmasthala Gramabhivrudhi Yojane turned to be a milestone programme of Dr D Veerendra Heggade. Distributing a scholarship of Rs 86,89,400 within few months (till February) is not at all an easy job.

There are more than 7,720 students who got benefitted by the scheme. This includes Naveen K M of Arakere who purchased books and study materials with the help of Sujnana Nidhi and continued his study, Akash K R who is studying ITI with the help of Sujnana Nidhi. It also includes Hanumanthamma, who says that education would have been a dream without this scholarship, engineering student Abhishek, BAMS (Ayurvedik) degree holder Sachin and many others.

Words tell all

One can make out the greatness of Sujnana Nidhi with the humble words of beneficiaries. Here is one such example. Jeevithashri of Peelmadka house in Bantwala taluk got engineering seat in a prestigious college of the region. However, her parents were in search of ideas to provide money for her bus charge and college fees. But under Sujnana Nidhi scholarship scheme, she is getting  a scholarship of Rs 1000 per month. Now she is studying in third year.

Though Priya Pika was quick in grasping teaching, but with her poor financial conditions  earning a law degree was a day dream. Daily wage of parents, their earnings with beedi rolling and sewing cloths was not at all enough for college fees. However, with the help of Sujnana Nidhi scholarship programme, she overcame all problems and now she is at last phase of five-year LLB course.

Vimalesh Kumar  K S was  hopeless about his dream law degree as his family was  completely dependent  on beedi rolling. However, he came to know about the scholarship programme of Shri Kshethra. He applied and got scholarship for the future studies. Now he is just about to complete his law study.

Ajith of Honnali taluk is talented who is studying engineering with the help of Sujnana Nidhi fund. According to his mother Shanthamma, after  SSLC Ajith got a seat in college near Shimoga. The hectic schedule from morning 6 am and college fees became a burden for the boy. But, Sujnana Nidhi of Rs 10,000 per year from past three years helped him to stay in Shimoga and continue study.

Mechanical engineering degree holder, now a graduate engineer in a prestigious company in Gujarath- Rithesh K also expressed heartful thanks to SKDRDP or Sujnana Nidhi scheme which evaporated his financial hurdles.

The scholarship programme which was a part of ‘vidyadhanam’ of Dharmasthala has become a model even for governments. The dream of becoming educated has become a reality for thousands.

ಜ್ಞಾನಾರ್ಥಿಗಳ ಕನಸಿಗೆ ಏಣಿಯಾದ ಸುಜ್ಞಾನನಿಧಿ ಯೋಜನೆ

ಸುಜ್ಞಾನನಿಧಿ ಶಿಷ್ಯವೇತನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಿನೆನಪಿಗಾಗಿ ರೂಪಿಸಿದ ಒಂದು ಮಹತ್ವಾಕಾಂಕ್ಷಿ ಯೋಜನೆಯೇ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮ. ಕೆಲವೇ ವರ್ಷಗಳಲ್ಲಿ ತಿಂಗಳಿಗೆ ರೂ 400 ಹಾಗೂ ರೂ 1000 ದಂತೆ ಈ ಫೆಬ್ರವರಿವರೆಗೆ ರೂ 86, 89, 400 ವಿದ್ಯಾರ್ಥಿ ವೇತನ ವಿತರಿಸಿರುವುದು ಕಡಿಮೆ ಸಾಧನೆಯೇನಲ್ಲ.

ತಂದೆಗೆ ಅಕ್ಷರ ಜ್ಞಾನವಿಲ್ಲದಿದ್ದರೂ ಪಿ.ಯು.ಸಿ ಯಲ್ಲಿ 72 ಶೇಕಡಾ ಪಡೆದು ಸುಜ್ಞಾನ ನಿಧಿಯ ಸಹಾಯದಿಂದ ವಿದ್ಯಾಭ್ಯಾಸ ಮುಂದುವರಿಸಿದ ಅರಕೆರೆಯ ನವೀನ ಕೆ. ಎಮ್, ವಿದ್ಯಾ‍ರ್ಥಿ ವೇತನದ ಸಹಾಯದಿಂದಲೇ ಪುಸ್ತಕಗಳನ್ನು ಖರೀದಿಸಿ ಐಟಿಐ ಓದುತ್ತಿರುವ ಆಕಾಶ್ ಕೆ ಆರ್, ಸುಜ್ಞಾನ ನಿಧಿಯಿಲ್ಲದೆ ವಿಧ್ಯೆ ಕಷ್ಟವಾಗುತ್ತಿತ್ತು ಎನ್ನುವ ಬಿ. ಎಡ್ ವಿದ್ಯಾರ್ಥಿನಿ ಹೊನ್ನಾಳಿಯ ಹನುಮಂತಮ್ಮ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಅಭಿಷೇಕ್, ಬಿಎಎಮ್ಎಸ್ (ಆಯುರ್ವೆದಿಕ್) ಪದವೀಧರ ಸಚಿನ್ ಹೀಗೆ ಯೋಜನೆಯ ನೆರವು ಪಡೆದವರ ಸಂಖ್ಯೆ 7,000 ದಾಟುತ್ತದೆ.

ಮಾತೇ ಸಾಕ್ಷಿ
ಸುಜ್ಞಾನ ನಿಧಿ ಜ್ಞಾನಾರಾಧಕರಿಗೆ ಹೇಗೆ ಸಹಾಯ ಮಾಡಿದೆ ಎನ್ನುವುದು ಅವರ ಮಾತಲ್ಲೇ ವ್ಯಕ್ತವಾಗುತ್ತದೆ. ಉದಾಹರಣೆಗೆ ಬಂಟ್ವಾಳ ತಾಲೂಕಿನ ಪೀಲ್ಯಡ್ಕ ಮನೆಯ ಜೀವಿತಾಶ್ರೀಗೆ ಪ್ರತಿಷ್ಠಿತ ಕಾಲೇಜ್ನಲ್ಲಿ ಸೀಟ್ ಏನೋ ಸಿಕ್ಕಿತ್ತು, ಆದರೆ ಹೆತ್ತವರಿಗೆ ಇವಳ ಬಸ್ ಫೀಸ್ ಒದಗಿಸುವುದೇ ತಲೆನೋವಿನ ಕೆಲಸವಾಗಿತ್ತು. ಆದರೆ ಸುಜ್ಞಾನ ನಿಧಿ ಆಕೆಯ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆಶಾವಾದ ಮೂಡಿಸಿದೆ. ಕಳೆದ ಎರಡು ವರ್ಷಗಳಿಂದ ತಿಂಗಳಿಗೆ ಒಂದು ಸಾವಿರದಂತೆ ವಿದ್ಯಾನಿಧಿ ಪಡೆಯುತ್ತಿರುವ ಜೀವಿತಾಶ್ರೀ ಸಧ್ಯ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾಳೆ.

ಪ್ರಿಯಾ ಪೈಕಾ ವಿದ್ಯಾಭ್ಯಾಸದಲ್ಲಿ ಚುರುಕಿದ್ದರೂ ಕನಸಿನ ಕಾನೂನು ಪದವಿ ಪಡೆಯುವುದು ಕಷ್ಟಸಾಧ್ಯವೇ ಆಗಿತ್ತು. ಅಪ್ಪ- ಅಮ್ಮನ ಕೂಲಿ ಮಾಡಿದ, ಬೀಡಿ ಕಟ್ಟಿದ, ಹೊಲಿಗೆಯ ಹಣದಿಂದ ಖಾಸಗಿ ಕಾಲೇಜಿನ ಫೀಸ್ ತುಂಬುವುದು ಕಷ್ಟದ ಕೆಲಸವಾಗಿತ್ತು. ಈ ಸಮಸ್ಯದಲ್ಲಿ ಪ್ರಿಯಾ ನೆರವಿಗೆ ಬಂದಿದ್ದು ಸುಜ್ಞಾನ ನಿಧಿ ವಿಧ್ಯಾಥರ್ಿ ವೇತನ. ಈಗ ಐದು ವರ್ಷಗಳ ಕಾನೂನು ಪದವಿಯ ಅಂತಿಮ ಘಟ್ಟದಲ್ಲಿರುವ ಈಕೆ ಯೋಜನೆಯ ಸಹಾಯವನ್ನು ನೆನೆಯುತ್ತಾರೆ.

ಇನ್ನು ಬೀಡಿ ಕಾರ್ಮಿಕರ ಮನೆಯಲ್ಲಿ ಜನಿಸಿದ ವಿಮಲೇಶ್ ಕುಮಾರ್ ಕೆ ಎಸ್ ತಮ್ಮ ಕಾನೂನು ಪದವಿಯ ಆಸೆಗೆ ತಿಲಾಂಜಲಿಯಿಟ್ಟು ಉದ್ಯೋಗ ಹುಡುಕುವ ಮನಸ್ಸು ಮಾಡಿದ್ದರು. ಈ ವೇಳೆ ಸುಜ್ಞಾನ ನಿಧಿಯ ಬಗ್ಗೆ ತಿಳಿದುಕೊಂಡ ಅವರು ಹೆತ್ತವರ ಜೊತೆಸೇರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕುವ ಮನಸ್ಸು ಮಾಡಿದ್ದರು. ವಿದ್ಯಾರ್ಥಿ ವೇತನದ ಸಹಾಯದ ಸಹಾಯದಿಂದ ಅವರೀಗ ತಮ್ಮ ಕಾನೂನು ಪದವಿಯನ್ನು ಮುಗಿಸುವ ಹಂತಕ್ಕೆ ಬಂದಿದ್ದಾರೆ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅಜಿತ್ ಸುಜ್ಞಾನ ನಿಧಿಯ ಸಹಾಯ ಪಡೆದು ವೃತ್ತಿಶಿಕ್ಷಣ ಪಡೆದ ಪ್ರತಿಭಾವಂತ. ಈತನ ತಾಯಿ ಶಾಂತಮ್ಮ ಹೇಳುವಂತೆ, ಎಸ್ಎಸ್ಎಲ್ಸಿಯಲ್ಲಿ 89.92 % ಪಡೆದ ಅಜಿತ್ಗೆ ಉನ್ನತ ಶಿಕ್ಷಣ ಪಡೆಯುವ ಕನಸಿತ್ತು. ಅದರಂತೆ ದೂರದ ಶಿವಮೊಗ್ಗದ ಖಾಸಗಿ ಕಾಲೇಜಿಗೆ ಸೇರಿಕೊಡ ಈತನಿಗೆ ಬೆಳಗ್ಗೆ ಆರು ಘಂಟೆಗೆ ಎದ್ದು ಹೋಗುವ ದಣಿವು, ಜೊತೆಗೆ ಕಾಲೇಜ್ ಫೀಸ್ ಭಾರವಾಗತೊಡಗಿದವು. ಈ ವೇಳೆ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ಸಹಾಯಕ್ಕೆ ಬಂತು. ಮೂರು ವರ್ಷಗಳಿಂದ ವರ್ಷಕ್ಕೆ ಹತ್ತು ಸಾವಿರದಂತೆ ಪಡೆದ ಅಜಿತ್, ಶಿವಮೊಗ್ಗದಲ್ಲೇ ಉಳಿದುಕೊಂಡು ಕೊನೆಯ ವರ್ಷದ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ.

ಕಾರ್ಕಳ ತಾಲೂಕು ಬೈಲೂರು ವಲಯ ಕುಕ್ಕಂದೂರಿನ ಸತ್ಯನಾರಾಯಣ ಪದ್ಮಶಾಲಿ ಕಳೆದೊಂದು ವರ್ಷದಿಂದ ವಿದ್ಯಾರ್ಥಿವೇತನ ಪಡೆಯುತ್ತಿದ್ದಾನೆ. ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಸಿವಿಲ್ ಡಿಪ್ಲೊಮೊ ಕಲಿಯುತ್ತಿರುವ ಈತ ಮೊದಲ ವರ್ಷ 87 % ಅಂಕ ಗಳಿಸಿದ್ದಾನೆ. ಸತ್ಯನಾರಾಯಣ ಪದ್ಮಶಾಲಿ ಮತ್ತು ಆತನ ಕುಟುಂಬ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಆರ್ಥಿಕ ನೆರವು ಮಾತ್ರವಲ್ಲ, ಅದು ದೇವರ ಪ್ರಸಾದವೆಂದೇ ನಂಬಿದ್ದಾರೆ.

ಸೂಳ್ಯ ಕೆ.ವಿ.ಜಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪಡೆದ ರಿತೇಶ್ ಕೆ ನಾಲ್ಕು ವರ್ಷದಲ್ಲಿ ರೂ 40,000 ಸಾವಿರ ರೂಪಾಯಿ ಪಡೆದಿದ್ದಾರೆ. ವಿದ್ಯಾಭ್ಯಾಸದಲ್ಲಿ ಚುರುಕಾಗೇ ಇದ್ದ ರಿತೇಶ್, ತಮಗೆ ಎದುರಾದ ಆರ್ಥಿಕ ಮುಗ್ಗಟ್ಟನ್ನು ಯೋಜನೆಯ ಧನ ಸಹಾಯ ನಿವಾರಿಸಿದೆ, ಎಂದು ನೆನಪು ಮಾಡಿಕೊಳ್ಳುತ್ತಾರೆ. ಇವರು ಸದ್ಯ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಗ್ರಾಜುಯೇಟ್ ಎಂಜಿನಿಯರ್ ಟ್ರ್ರೈನಿಯಾಗಿದ್ದಾರೆ.

ಕ್ಷೇತ್ರದ ವಿದ್ಯಾದಾನದ ಭಾಗವಾಗಿ ಆರಂಭವಾದ ಸುಜ್ಞಾನ ನಿಧಿ ಈಗ ಮಾದರಿ ಯೋಜನೆಯಾಗಿ ರೂಪುಗೊಂಡಿದೆೆ. ಸಾವಿರಾರು ಮಂದಿಯ ವಿದ್ಯಾರ್ಜನೆಯ ಕನಸು ನನಸಾಗಿದೆ.

5 thoughts on “Sujnana Nidhi becomes ladder for knowledge

  1. Hi,im arvind magerimath I’m from gadag ,im not getting How to apply sslc and diploma scholarship?

  2. I am shivakumarnaik from hosadurga
    I am complete bcom 60% aggregate

    Next studied MBA from G T institution management studies
    I. Have fees 2 years 2 Lack rs donation

    I am apply madbahuda ee scholarship ge

Leave a Reply

Your email address will not be published. Required fields are marked *