success storyUncategorizedWomen Empowerment

ಸಾಧನೆಗೆ ವಯಸ್ಸಿನ ಹಂಗಿಲ್ಲ ಅನ್ನೋರಿವರು


ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಲವರನ್ನು ಯಾರ ಹಂಗಿಲ್ಲದ ಅಭಿವೃದ್ಧಿ ಪಥದಲ್ಲಿ ಮುಂದಡಿಯಿಡುವಂತೆ ಮಾಡಿದೆ. ಇಂತವರಲ್ಲಿ ಕುಣಿಗಲ್ ತಾಲೂಕಿನ ಅಮೂಲ್ಯ ಜ್ಞಾನವಿಕಾಸ ಕೇಂದ್ರದ ಹುಚ್ಚಮ್ಮ ತಂಡದ ಸದಸ್ಯೆ ಮೀನಾಕ್ಷಮ್ಮ ಕೂಡ ಒಬ್ಬರು.
ಮೀನಾಕ್ಷಮ್ಮ ಪ್ರತಿ ತಿಂಗಳು ಜ್ಞಾನವಿಕಾಸ ಕೇಂದ್ರದಲ್ಲಿ ನೀಡುವ ಮಾಹಿತಿಯನ್ನೇ ಅರ್ಥೈಸಿಕೊಂಡು ತಮ್ಮ 55ನೇ ವಯಸ್ಸಿನಲ್ಲಿ ಸ್ವಾವಲಂಭಿಯಾಗಿ ಬದುಕಬೇಕು ಎಂದು ಕನಸು ಕಟ್ಟಿಕೊಂಡವರು.
ಮೊದಲ ಕಂತಿನಲ್ಲಿ ರೂ 10,000 ಪ್ರಗತಿನಿಧಿ ಪಡೆದುಕೊಂಡ ಇವರು ಚಿಲ್ಲರೆ ಅಂಗಡಿ ತೆರೆದು ಪ್ರತಿದಿನ ರೂ 300 ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಈಗಿನ ತಂಡದಲ್ಲಿ ರೂ 1,00,000 ಸಾಲ ಪಡೆದುಕೊಂಡು ಕಾರು ಖರೀದಿಸಿ ಬಾಡಿಗೆಗೆ ನೀಡಿದ್ದಾರೆ. ಉತ್ತಮ ಬಾಡಿಗೆ ದೊರೆಯುತ್ತಿದ್ದು ತಪ್ಪದೇ ಮರುಪಾವತಿ ಮಾಡುತ್ತಿರುವ ಮೀನಾಕ್ಷಮ್ಮ, ಮಕ್ಕಳಿಗೆ ಹೊರೆಯಾಗದೆ ಜೀವನ ನಡೆಸುತ್ತಿದ್ದಾರೆ. ಅವರೀಗ ಜ್ಞಾನ ವಿಕಾಸ ಕೇಂದ್ರದ ಮಾದರಿ ಸದಸ್ಯೆಯಾಗಿದ್ದು, ಇತರರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ.

ಕೈಬಿಡದ ತಿಂಡಿ ಉದ್ಯಮ

ಪದ್ಮಿನಿಯವರದ್ದು ಇನ್ನೊಂದು ರೀತಿಯ ಸಾಹಸಗಾಥೆ. ಬಿ.ಎಸ್ಸಿ ಪದವೀಧರೆಯಾದರೂ ಈಕೆ ಮದುವೆಯ ನಂತರ ಸಂಸಾರದ ನೊಗ ಹೊರಬೇಕಾಯಿತು. ನಂತರವಂತೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗಂಡನ ರೂ 1000 ಮಾಸಾಶನದಲ್ಲೇ ಸಂಸಾರದ ಬಂಡಿ ಸಾಗಬೇಕಾಗಿತ್ತು. ಇಲ್ಲವಾದರೆ ಮಗಳ ಉನ್ನತ ಶಿಕ್ಷಣ ಅರ್ಧದಲ್ಲೇ ಉಳಿಯುವ ಅಪಾಯ.

ಅವರಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾಯೋಜಕತ್ವದಲ್ಲಿ ರಚನೆಯಾದ ಲಕ್ಷ್ಮೀ ಸ್ವ- ಸಹಾಯ ಸಂಘದ ಸದಸ್ಯರಾಗಿ ತರಬೇತಿ ಪಡೆದಿದ್ದರು. ಮೊದಲ ರೂ 10,000 ಪ್ರಗತಿನಿಧಿಯನ್ನು ಚಕ್ಕುಲಿ ತಯಾರಿಗೆ ಬಳಸಿಕೊಂಡು, ನಂತರ 25 ಸಾವಿರ ಬಳಸಿ ಪ್ರತಿ ವಾರ ನಾಲ್ಕರಿಂದ ಐದು ಸಾವಿರದವರೆಗೆ ವ್ಯಾಪಾರ ಮಾಡುತ್ತಿದ್ದಾರೆ. ಮೊದಲು ಗ್ರಾಹಕರೇ ಚಕ್ಕುಲಿ ಪಡೆದುಕೊಳ್ಳುತ್ತಿದ್ದರೂ, ಈಗ ಪತಿಯ ಸಹಾಯದಿಂದ ಇವರೇ ಬೇಡಿಕೆ ಪೂರೈಸುತ್ತಿದ್ದಾರೆ. ಯೋಜನೆ ಸಕಾಲದಲ್ಲಿ ನೀಡಿದ ಆರ್ಥಿಕ ಸಹಾಯಕ್ಕೆ ಅವರು ಧನ್ಯವಾದ ಸಲ್ಲಿಸಲು ಮರೆಯುವುದಿಲ್ಲ.

Leave a Reply

Your email address will not be published. Required fields are marked *