Agriculture

ಪ್ರಗತಿಪರ ಕೃಷಿಕನ ಹಿಂದಿನ ಕಥೆ

Posted on

ಇದು ಎಂಟು ವರ್ಷದ ಅವಧಿಯಲ್ಲಿ ಕೃಷಿ ಕಾರ್ಮಿಕನೊಬ್ಬ ಪ್ರಗತಿಪರ ಕೃಷಿಕನಾದ ಕಥೆ. ಸೋಮವಾರಪೇಟೆಯ ದಾಸನಕೆರೆ ನಿವಾಸಿ ಕೆ ಸೋಮಾಜಿಯವರಿಗೆ 3.5 ಎಕರೆ ಕೃಷಿ ಭೂಮಿಯಿದ್ದರೂ ಅದು ಮಳೆಯಾಶ್ರಿತವಾದುದರಿಂದ ಅವರು ಕೂಲಿಯನ್ನೇ ಅವಲಂಭಿಸಿದ್ದರು. ಆದರೆ ನಂತರ ಅವರು ಸ್ವಾವಲಂಭಿ ಜೀವನದತ್ತ ಹೆಜ್ಜೆ ಹಾಕಿದ ರೀತಿ, ಅವಕಾಶಗಳನ್ನು ಬಳಸಿಕೊಂಡ ಬಗೆ ಅಚ್ಚರಿ ಹುಟ್ಟಿಸುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ತಂಡದ ಮಾಹಿತಿಯನ್ನು ಸಂಬಂಧಿಕರಿಂದ ತಿಳಿದುಕೊಂಡ ಸೋಮಾಜಿ, ಮೊದಲ ಹೆಜ್ಜೆಯಾಗಿ ಆಸಕ್ತ ಐವರು ರೈತರೊಂದಿದೆ ಸೇರಿ ‘ಸಮೃದ್ಧಿ’ ಪ್ರಗತಿಬಂಧು ತಂಡ ರಚಿಸಿಕೊಂಡರು. ಸೋಮಾಜಿ […]

success story

ಕೂಲಿಯಿಂದ ಸ್ವಂತಿಕೆಯತ್ತ…

Posted on

ಕೂಲಿಯಿಂದ ಸ್ವಂತಿಕೆಯತ್ತ… ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಗೀತಾ ಬಿ. ಅವರದ್ದು ಮೂಲತಃ ಬಡ ಕುಟುಂಬ. ದಿನಗೂಲಿಯನ್ನು ಅವಲಂಭಿಸಿದ್ದ ಕುಟುಂಬಕ್ಕೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಹಾಗೆಂದು ಗೀತಾ ಅಥವಾ ಅವರ ಪತಿ ಆಕಾಶಕ್ಕೆ ಏಣಿ ಹಾಕಿದವರಲ್ಲ. ಹಂತ ಹಂತವಾಗಿ ಜೀವನದಲ್ಲಿ ಮೇಲೆ ಬರುವ ಪಣ ತೊಟ್ಟಿದ್ದರು. ಸುಗಟೂರು ವಲಯದ ಪ್ರಕೃತಿ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾದ ಗೀತಾ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ತಿಳಿದುಕೊಂಡರು. ಯೋಜನೆಯ ಬಾಪೂಜಿ ಸ್ವ-ಸಹಾಯ ಸಂಘಕ್ಕೆ ಸೇರಿಕೊಂಡ ಅವರು, ಮಹಿಳಾ […]

success story

ಸಂಸಾರಕ್ಕೆ ಆಧಾರವಾದ ಬಟ್ಟೆ ವ್ಯಾಪಾರ

Posted on

ಕಾರಣಾಂತರಗಳಿಂದ ತವರು ಮನೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಮದರಖಂಡಿ ಗ್ರಾಮದ ಶ್ರೀಮತಿ ಯಶೋಧಾ ವೆಂಕಪ್ಪ ಮಾಳೆದ ಸ್ವಾಭಿಮಾನಿ. ಯಾರ ಹಂಗೂ ಬೇಡ ಎಂದು ಹೊಲಿಗೆ ಮಾಡಿಕೊಂಡಿದ್ದ ಅವರಿಗೆ ಎಂಟು ಮಂದಿಯ ಕುಟುಂಬಕ್ಕೆ ಈ ಆದಾಯ ಸಾಲದೇನೋ ಅನಿಸಿತು. ಆಗ ಹೊಳೆದದ್ದೇ ಸ್ವ-ಸಹಾಯ ಸಂಘದ ಯೋಚನೆ. ಯಶೋಧಾರ 3 ವರ್ಷಗಳ ಹಿಂದೆ 10 ಮಂದಿ ಸದಸ್ಯರನ್ನು ಸೇರಿಸಿಕೊಂಡು ಶಾಂಭವಿ ಸ್ವ-ಸಹಾಯ ಸಂಘ ರಚಿಸಿ, ಗ್ರಾಮಾಭಿವೃದ್ಧಿ ಯೋಜನೆಯ ನಿಯಮದಂತೆ ಶಿಸ್ತುಬದ್ಧವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಂಘದ ಸಂಯೋಜಕರಾಗಿ ಆಯ್ಕೆಯಾಗಿರುವ ಅವರು, ಸಂಘದ ದಾಖಲಾತಿ […]

Agriculture

ಬಾಟಲಿ ಬಿಟ್ಟು ಬದುಕಿನತ್ತ ಚಿತ್ತ…

Posted on

ಕಾಲಕ್ಕೆ ತಕ್ಕಂತೆ ಬದುಕಬೇಕು ಎಂಬ ಮಾತು ರೈತರಿಗೂ ಅನ್ವಯಿಸುತ್ತದೆ. ಈ ಮಾತನ್ನು ಪಾಲಿಸಿ ಯಶಸ್ಸು ಕಂಡವರಲ್ಲಿ ಈಶ್ವರ್ ಕೂಡ ಒಬ್ಬರು. ಅಂದಹಾಗೆ ಈ ಈಶ್ವರ್ ಯಾರು ಎಂಬ ಕುತೂಹಲ ನಿಮಗೆ ಖಂಡಿತ ಇರಬೇಕಲ್ವೆ? ಮೈಸೂರು ಜಿಲ್ಲೆಯ ನಾರಾಯಣಪುರದ ಈಶ್ವರ್ ಒಂದು ವರ್ಷದ ಹಿಂದೆ ಮಹಾ ಮದ್ಯವ್ಯಸನಿ. ಕೃಷಿಯಿಂದ ಬಂದ ಹಣವೆಲ್ಲಾ ಇರೋದು ಹೆಂಡತಿ ಮಕ್ಕಳಿಗಲ್ಲ ಬದಲಿಗೆ ಹೆಂಡದ ಅಂಗಡಿಗೆ ಎಂದು ಬಲವಾಗಿ ನಂಬಿಕೊಂಡಿದ್ದಾತ. ಕುಡಿದು ಹೊಂಡ ಸೇರುತ್ತಿದ್ದ ಇವರನ್ನು ಉದ್ಧಾರ ಮಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ […]

success story

ರೊಕ್ಕ ತಂದುಕೊಟ್ಟ ರೊಟ್ಟಿ ವ್ಯಾಪಾರ

Posted on

ರಾಯಚೂರು ಜಿಲ್ಲೆಯ ಪಗಡದಿನ್ನಿ ತಾಲೂಕಿನ ಗುಡದೂರು ಗ್ರಾಮದ ಮಲ್ಕಜಮ್ಮನವರ ಸ್ವ-ಉದ್ಯೋಗದ ಕನಸು ಕನಸಾಗಿಯೇ ಉಳಿದಿತ್ತು. ಕೂಲಿ ಕೆಲಸದಿಂದ ಬರುತ್ತಿದ್ದ ಹಣದಿಂದ ಸಂಸಾರ ಸಾಗಿಸುವುದು ಕಷ್ಟವಾಗಿತ್ತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ. ರೊಟ್ಟಿ ವ್ಯಾಪಾರ ಅವರ ಕೈ ಹಿಡಿದಿದೆ. ಕೂಲಿ ಕೆಲಸಕ್ಕೆ ವಿರಾಮ ಹೇಳಿ ಸಂಘ ಸೇರಿದ ಮಲ್ಕಜಮ್ಮ ಅವರಿಗೆ ಪರ್ಯಾಯ ಆದಾಯ ಮೂಲ ಅನಿವಾರ್ಯವಾಗಿತ್ತು. ಆಗ ಅವರಿಗೆ ಹೊಳೆದಿದ್ದೇ ರೊಟ್ಟಿ ವ್ಯಾಪಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 50,000 ಪ್ರಗತಿನಿಧಿ ಪಡೆದು ರೊಟ್ಟಿ ವ್ಯಾಪಾರ ಆರಂಭಿಸಿದ […]

success story

ತಿಂಡಿ ಮಾರಾಟ ತಂದ ಯಶಸ್ಸು

Posted on

ಕಷ್ಟದಿಂದ ಪಾರಾಗಲು ಕೈಸಾಲ ಮಾಡಿ ಕೈಸುಟ್ಟುಕೊಂಡವರೆಷ್ಟೊ. ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಜ್ಯೋತಿ ಕೂಡ ಕೈಸಾಲದ ಸುಳಿಯಲ್ಲಿ ಸಿಲುಕಿದ್ದರು. ಪತಿ ಪಂಚಾಕ್ಷರಿಯವರು ಖಾಸಗಿ ಬಸ್ ನಿರ್ವಾಹಕರಾಗಿದ್ದರೂ ಜೀವನದ ಬಂಡಿ ಸಾಗುವುದೇ ಕಷ್ಟವಾಗಿತ್ತು. ಇಂತಹ ಸ್ಥಿತಿಯಲ್ಲಿ ಅವರ ನೆರವಿಗೆ ಬಂದಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸ್ವ- ಉದ್ಯೋಗದ ಆಲೋಚನೆ. ಮದ್ದೂರು ತಾಲೂಕಿನ ಬೆಸಗರಹಳ್ಳಿ ವಲಯದ (ಕಾರ್ಯಕ್ಷೇತ್ರ) ಜ್ಞಾನವಿಕಾಸ ಕೇಂದ್ರದ ಕೈವಲ್ಯರಾಮೇಶ್ವರ ತಂಡದ ಸದಸ್ಯೆಯಾದ ಜ್ಯೋತಿ, ಮೊದಲು ಮಾಡಿದ ಕೆಲಸವೆಂದರೆ ಯೋಜನೆಯಿಂದ ರೂ. 5000 ಸಾಲ […]

success story

ಮನಸ್ಸಿದ್ದರೆ ಮಾರ್ಗ ಎಂದರೆ ಇದೇನಾ. . .

Posted on

ಉಡುಪಿ ತಾಲೂಕಿನ ಬಬಿತಾ ಸುರೇಶ್ ಅವರ ಸ್ಥಿತಿ ಬಹುಪಾಲು ಬಡ ಮಧ್ಯಮ ವರ್ಗದ ಹೆಂಗಸರ ಪರಿಸ್ಥಿತಿಗಿಂತ ಭಿನ್ನವಾಗಿರಲಿಲ್ಲ. ಬಾರ್  ಒಂದರಲ್ಲಿ ದುಡಿಯುತ್ತಿರುವ ಗಂಡ. ತನಗೋ ಟೈಲರಿಂಗ್ ನಲ್ಲಿ ಬರುವ ಆದಾಯವಷ್ಟೇ ಗತಿ. ಬೆಳೆಯುತ್ತಿರುವ ಮಕ್ಕಳ ಮುಂದಿನ ವಿಧ್ಯಾಭ್ಯಾಸ ಹೇಗೆ ಎಂಬ ಚಿಂತೆ ಅವರನ್ನೂ ಕಾಡದೇ ಬಿಡಲಿಲ್ಲ. ಆದರೆ ಕಷ್ಟಪಡುವವರ ಸಹಾಯಕ್ಕೆ ದೇವರು ಬರುತ್ತಾನೆ ಎಂಬ ಮಾತು ಅವರ ವಿಷಯದಲ್ಲೂ ನಿಜವಾಯಿತು. ಬಬಿತಾ ಜೀವನದಲ್ಲಿ ಪವಾಡವೇನೂ ನಡೆಯಲಿಲ್ಲ. ಆಕೆ ಮೊದಲು ಮಾಡಿದ ಕೆಲಸವೇನೆಂದರೆ ಉಡುಪಿ ವಲಯದ ಉದ್ಯಾವರ ಕಾರ್ಯಕ್ಷೇತ್ರದ […]