success storyUncategorized

ಬರಿಗೈಯಲ್ಲೀಗ ಭರಪೂರ ಆದಾಯ

ಮೂರೇ ವರ್ಷಗಳ ಹಿಂದೆ ಮರಿಯಮ್ಮ, C/o ಅಂಜನಪ್ಪನವರು ಅಕ್ಷರಶಃ ನಿರುದ್ಯೋಗಿ. ಉದ್ಯೋಗವಿಲ್ಲದೆ ದುಡ್ಡಿನ ಮಾತೆಲ್ಲಿ. ಚಿಕ್ಕಾಸಿಗೂ ಬೇರೆಯವರನ್ನು ಅವಲಂಬಿಸಿದ್ದ ಇವರಿಗೆ ಸಾಲ ಕೊಡಲು ಯಾವ ಸಂಘ ಸಂಸ್ಥೆಗಳೂ ಮುಂದೆ ಬರಲಿಲ್ಲ. ಹೀಗಾಗಿ ಹೊಸದುರ್ಗ ತಾಲೂಕಿನ ಕಸಬಾ ವಲಯದ ಎಂ.ಜಿ ದಿಬ್ಬ ಗ್ರಾಮದ ಮರಿಯಮ್ಮರ ಬದುಕು ಬವಣೆಯಾಗಿತ್ತು. ಆದರೆ ಇವತ್ತು ಎಲ್ಲಾ ಬದಲಾಗಿದೆ.

ಮರಿಯಮ್ಮರ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು ಮೂರು ವರ್ಷಗಳ ಹಿಂದೆ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಆಸ್ಮಿತ ಸ್ವ-ಸಹಾಯ ಸಂಘದ ಸದಸ್ಯರಾಗಿ ಸೇರ್ಪಡೆಯಾದ ನಂತರ. ಅವರ ಉಳಿತಾಯ ಆರಂಭವಾಗಿದ್ದು ವಾರಕ್ಕೆ ರೂ.10 ರಂತೆ. ಈ ಉಳಿತಾಯವೇ ಈಗ ರೂ 1,800 ಅಗಿದೆ. ಪ್ರಗತಿಯ ಎರಡನೆಯ ಮೆಟ್ಟಿಲು ಎಂಬಂತೆ, ಯೋಜನೆಯ ಮೂಲಕ ಸ್ವ-ಉದ್ಯೋಗದ ತರಬೇತಿ ಪಡೆದು ಬ್ಯಾಂಕ್ನಿಂದ ದೊರೆತ ರೂ. 1,10,000 ಸಾಲವನ್ನು ಕೋಳಿಫಾರಂ ಮತ್ತು ತರಕಾರಿ ಕೃಷಿಗೆ ಬಳಸಿಕೊಂಡಿದ್ದಾರೆ.

ಭರಪೂರ ಆದಾಯ

ಕಾಸಿಗೆ ಆಕಾಶ ನೋಡಬೇಕಿದ್ದ ಮರಿಯಮ್ಮನ ಪರಿಸ್ಥಿತಿ ಬದಲಾಗಿದೆ. ವಾರಕ್ಕೆ 2 ರಿಂದ 3 ಸಾವಿರ ಆದಾಯ ಪಡೆಯುತ್ತಿರುವ ಇವರು, ತಿಂಗಳಿಗೆ ರೂ. 10,000 ದಿಂದ ರೂ. 15,000 ದವರೆಗೆ ಸಂಪಾದನೆ ಮಾಡುತ್ತಾರೆ. ಇಷ್ಟಾದರೂ ಅವರು ವಾರದ ಉಳಿತಾಯ ಮತ್ತು ಮರುಪಾವತಿಯನ್ನು ಮರೆಯದೇ ಮಾಡುತ್ತಾರೆ. ಮರಿಯಮ್ಮ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿನಿಧಿ ಸಾಲ ಪಡೆದು ಕೃಷಿ ಚಟುವಟಿಕೆಯ ಜೊತೆಗೆ ಕೋಳಿ ಫಾರಂ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ

Leave a Reply

Your email address will not be published. Required fields are marked *