Agriculturesuccess storyUncategorized

ಪ್ರಗತಿಪರ ಕೃಷಿಕನ ಹಿಂದಿನ ಕಥೆ

ಇದು ಎಂಟು ವರ್ಷದ ಅವಧಿಯಲ್ಲಿ ಕೃಷಿ ಕಾರ್ಮಿಕನೊಬ್ಬ ಪ್ರಗತಿಪರ ಕೃಷಿಕನಾದ ಕಥೆ. ಸೋಮವಾರಪೇಟೆಯ ದಾಸನಕೆರೆ ನಿವಾಸಿ ಕೆ ಸೋಮಾಜಿಯವರಿಗೆ 3.5 ಎಕರೆ ಕೃಷಿ ಭೂಮಿಯಿದ್ದರೂ ಅದು ಮಳೆಯಾಶ್ರಿತವಾದುದರಿಂದ ಅವರು ಕೂಲಿಯನ್ನೇ ಅವಲಂಭಿಸಿದ್ದರು. ಆದರೆ ನಂತರ ಅವರು ಸ್ವಾವಲಂಭಿ ಜೀವನದತ್ತ ಹೆಜ್ಜೆ ಹಾಕಿದ ರೀತಿ, ಅವಕಾಶಗಳನ್ನು ಬಳಸಿಕೊಂಡ ಬಗೆ ಅಚ್ಚರಿ ಹುಟ್ಟಿಸುತ್ತದೆ.

ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ತಂಡದ ಮಾಹಿತಿಯನ್ನು ಸಂಬಂಧಿಕರಿಂದ ತಿಳಿದುಕೊಂಡ ಸೋಮಾಜಿ, ಮೊದಲ ಹೆಜ್ಜೆಯಾಗಿ ಆಸಕ್ತ ಐವರು ರೈತರೊಂದಿದೆ ಸೇರಿ ‘ಸಮೃದ್ಧಿ’ ಪ್ರಗತಿಬಂಧು ತಂಡ ರಚಿಸಿಕೊಂಡರು. ಸೋಮಾಜಿ ಹಾಗೂ ತಂಡದ ಎಲ್ಲರಿಗೂ ಶ್ರಮವಿನಿಮಯದ ಲಾಭದ ಅನುಭವವಾಯಿತು. ರೂ. 5,000 ಸಾಲ ಪಡೆದು, ಯೋಜನೆಯ ಮಾರ್ಗದರ್ಶನದಲ್ಲಿ ತರಕಾರಿ ಕೃಷಿ ಮಾಡಿದರು.

ಮೊದಲ ಪ್ರಯತ್ನ ಯಶಸ್ವಿಯಾದ ನಂತರ ರೂ. 25,000 ಸಾಲ ಪಡೆದು ಒಂದು ಹಸು ಖರೀದಿಸಿ ಹೈನುಗಾರಿಕೆ ಆರಂಭಿಸಿದ್ದಾರೆ. ಪ್ರಸ್ತುತ ಮೂರು ಹಸುಗಳಿಂದ 15 ಲೀಟರ್ ಹಾಲು ಸಂಗ್ರಹಿಸಿ ಸ್ಥಳೀಯವಾಗಿ ಮಾರುತ್ತಿದ್ದಾರೆ. ಉತ್ತಮ, ವೈಜ್ಞಾನಿಕ ಹಟ್ಟಿ ರಚನೆಗೆ ರೂ. 40,000 ಪ್ರಗತಿನಿಧಿ ವಿನಿಯೋಗಿಸಿದ್ದಾರೆ. ಯೋಜನೆಯ ಮಾರ್ಗದರ್ಶನದಲ್ಲಿ ಗೋಬರ್ಗ್ಯಾಸ್ ಅಳವಡಿಸಿದ್ದಾರೆ. ಸ್ಲರಿಯನ್ನು ತರಕಾರಿ, ಕಾಫಿ, ಭತ್ತದ ಕೃಷಿಗೆ ಬಳಸಲಾಗುತ್ತಿದೆ.

ಬೋರ್ವೆಲ್ ಅಳವಡಿಸಿದ ನಂತರ. . .

ತಮ್ಮ ಮಳೆಯಾಧಾರಿತ ಕೃಷಿ ಭೂಮಿಯನ್ನು ಬಂಗಾರವಾಗಿ ಮಾಡಲು ಯಾವುದೆಲ್ಲಾ ವಿಧಾನಗಳಿವೆಯೋ ಅವನ್ನೆಲ್ಲಾ ಅಳವಡಿಸಿಕೊಳ್ಳಲು ಸೋಮಾಜಿ ಪ್ರಯತ್ನಿಸಿದ್ದಾರೆ. ಸುಮಾರು ರೂ. 80,000 ಪ್ರಗತಿನಿಧಿ ಪಡೆದು ತಮ್ಮ ಜಮೀನಿಗೆ ಬೋರ್ವೆಲ್ ಅಳವಡಿಸಿ ಸರ್ವಋತುಗಳಲ್ಲೂ ಕೃಷಿಗೆ ಯೋಗ್ಯವಾಗುವಂತೆ ಮಾಡಿಕೊಂಡಿದ್ದಾರೆ. ಎರಡು ಎಕ್ರೆ ಕಾಫಿ ತೋಟ, ಕಾಳುಮೆಣಸು, ಒಂದು ಎಕರೆ ಗದ್ದೆ, ಶುಂಠಿ, ತರಕಾರಿ, ಹಸಿರುಹುಲ್ಲು, ಬಾಳೆ ಬೆಳೆದಿದ್ದಾರೆ. ಇದೀಗ ಕೃಷಿ ಅಭಿವೃದ್ಧಿಗೆ ರೂ. 1,20,000 ಪ್ರಗತಿನಿಧಿ ಪಡೆದುಕೊಂಡಿದ್ದಾರೆ. ಮನೆಗೆ ಸೋಲಾರ್ ಅಳವಡಿಸಿಕೊಂಡಿದ್ದಾರೆ. ಕೃಷಿಹೊಂಡ ರಚನೆ ಮತ್ತು ಸ್ಲರಿಪಂಪ್ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಇವರು, ಸಧ್ಯದಲ್ಲೇ ಇವನ್ನು ಅಳವಡಿಸಿಕೊಳ್ಳುವ ಗುರಿ ಹೊಂದಿದ್ದಾರೆ.

ಸೋಮಾಜಿ ತಮ್ಮ ಪ್ರಗತಿಬಂಧು ತಂಡದೊಂದಿಗೆ ಶ್ರಮವಿನಿಮಯ ಕಾರ್ಯಕ್ರಮವನ್ನು ಪ್ರತಿ ಶನಿವಾರ ತಪ್ಪದೆ ನಡೆಸುತ್ತಾರೆ. ಇವರ ಮನೆಯಲ್ಲಿ ಶುಂಠಿಕೊಪ್ಪ ವಲಯದ ಕೃಷಿ ವಿಚಾರ ಸಂಕಿರಣವನ್ನು ಯಶಸ್ವಿಯಾಗಿ ನಡೆಸಲಾಯಿತು. ಈಗ ಒಬ್ಬ ಸಮಗ್ರ ಕೃಷಿಕರಾಗಿ ಎಲ್ಲಾ ಬಗೆಯ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಸವಲತ್ತುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

One thought on “ಪ್ರಗತಿಪರ ಕೃಷಿಕನ ಹಿಂದಿನ ಕಥೆ

  1. My mobiel no 8095200376
    Hi sir
    I’m Mallikarjuna s b
    Namage hospital work madabekagide plz help me

Leave a Reply

Your email address will not be published. Required fields are marked *