success story

ಬದುಕು ಕಟ್ಟಿಕೊಟ್ಟ ಗ್ಯಾಸ್ ಸ್ಟೋವ್, ಬಟ್ಟೆ ವ್ಯಾಪಾರ


ಜಮಖಂಡಿ ತಾಲೂಕಿನ ಜಮಖಂಡಿ, ಗ್ರಾಮದ ಜಯಪ್ರದಾ ರಾಜಶೇಖರ್ ಹಿರೇಮಠ್ ಮೊದಲು ಚಿಕ್ಕಾಸಿಗೂ ತಮ್ಮ ಪತಿಯನ್ನೇ ಅವಲಂಭಿಸಿದ್ದರು. ಆದರೆ ಸ್ವಾವಲಂಭಿಯಾಗುವ ಕನಸು ಮೊಳೆತದ್ದೇ ತಡ, ಅವರು ಮೊದಲು ಮಾಡಿದ ಕೆಲಸ ಟೇಲರಿಂಗ್ ಅಭ್ಯಾಸ.

ನಂತರ ಶಿವಬಾಬಾ ಸ್ವ-ಸಹಾಯ ಸಂಘಕ್ಕೆ ಸೇರಿಕೊಂಡು ರೂ. 20,000 ಪ್ರಗತಿನಿಧಿ ಪಡೆದು ಗ್ಯಾಸ್ ಅಂಗಡಿ ಹಾಕಿದರು. ನಂತರ 40,000 ಪ್ರಗತಿನಿಧಿ ಗ್ಯಾಸ್ ಒಲೆಗಳನ್ನು ಖರೀದಿಸಿದರು. ಹೀಗೆ ಹಂತ ಹಂತವಾಗಿ ಬಂಡವಾಳ ತೊಡಗಿಸಿದ ಇವರು, ಮತ್ತೆ ರೂ 40,000 ಪ್ರಗತಿನಿಧಿ ಪಡೆದು ಗ್ಯಾಸ್ ಏಜೆನ್ಸಿ ಉದ್ಯೋಗವನ್ನು ಅಭಿವೃದ್ಧಿಪಡಿಸಿಕೊಂಡು ಉತ್ತಮ ವ್ಯವಹಾರ ನಡೆಸುತ್ತಿದ್ದಾರೆ.

ಜಯಪ್ರದಾ ಅವರು ಮುಂದಿನ ದಿನಗಳಲ್ಲಿ ಹೆಚ್ಚು ಸಾಲ ಪಡೆದು ದೊಡ್ಡ ಮಟ್ಟದಲ್ಲಿ ಗ್ಯಾಸ್ ಏಜೆನ್ಸಿ ಹಾಕುವ ಯೋಜನೆ ಹಾಕಿಕೊಂಡಿದ್ದಾರೆ. ಪ್ರಸ್ತುತ ಸ್ವ-ಉದ್ಯೋಗದಿಂದ ದಿನನಿತ್ಯ ರೂ. 400 ರಿಂದ ರೂ.600 ಆದಾಯ ಗಳಿಸುತ್ತಿರುವ ಇವರು, ಯೋಜನೆಯಿಂದ ನಮಗೆ ಯಾವುದೇ ಭೇಧಭಾವವಿಲ್ಲದೆ ಸಹಾಯ ದೊರೆತಿದೆ, ಎನ್ನುತ್ತಾರೆ.

ಬಟ್ಟೆ ವ್ಯಾಪಾರದ ತಳುಕು

ಒಬ್ಬರು ಗ್ಯಾಸ್ನಿಂದ ಬೆಳಕು ಕಂಡರೆ ಬಳ್ಳಾರಿಯ ಹೆಚ್.ಬಿ ಹಳ್ಳಿಯ ಪುಷ್ಪಲತಾ ಯೋಜನೆಯ ಸಹಾಯದಿಂದ ಬಟ್ಟೆ ವ್ಯಾಪಾರ ಮಾಡಿ ಬದುಕು ಕಳೆ ಕಟ್ಟುವಂತೆ ಮಾಡಿಕೊಂಡಿದ್ದಾರೆ.

ಹಾಗಂತ ಈ ಸಾಧನೆ ಸುಲಭವಾಗಿಲ್ಲ. ಇವರು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಳೇ ಹೆಚ್ ಬಿ ಕಾರ್ಯಕ್ಷೇತ್ರದಲ್ಲಿ ಸ್ಪಂದನಾ ಜ್ಞಾನವಿಕಾಸ ಕೇಂದ್ರದ ಸದಸ್ಯೆಯಾಗಿದ್ದು ಸಂಘ ಸೇರಿ ಮೂರು ವರ್ಷವಾಗಿದೆ. ಯೋಜನೆಯಿಂದ ರೂ.1,00,000 ಪ್ರಗತಿನಿಧಿ ಪಡೆದು ಬಟ್ಟೆ ವ್ಯಾಪಾರವನ್ನು ಸ್ವ-ಉದ್ಯೋಗವಾಗಿ ಆರಿಸಿಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಸೀರೆಗಳ ಜೊತೆಗೆ ವಿವಿಧ ವಿನ್ಯಾಸದ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವುದರಿಂದ ಉತ್ತಮ ವ್ಯಾಪಾರವಾಗುತ್ತಿದೆ.

ವ್ಯಾಪಾರಕ್ಕಾಗಿ ಯೋಜನೆಯಿಂದಲೇ ಸ್ವ- ಉದ್ಯೋಗದ ಮಾಹಿತಿಯನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರೇ ಗ್ರಾಹಕರಾಗಿದ್ದಾರೆ. ಪ್ರಸ್ತುತ ಸ್ವ-ಉದ್ಯೋಗದಿಂದ ಮಾಸಿಕ ರೂ.10,000 ಆದಾಯ ಬರುತ್ತಿದೆ. ಮಹಿಳಾ ಜ್ಞಾನವಿಕಾಸದ ಮಾಹಿತಿ ಕಾರ್ಯಕ್ರಮಗಳು ಜೀವನದಲ್ಲಿ ಆತ್ಮವಿಶ್ವಾಸ ಹುಟ್ಟು ಹಾಕಿದೆ, ಎನ್ನುತ್ತಾರೆ.

ಇದರೊಂದಿಗೆ ಪುಷ್ಪಲತಾ ಯೋಜನೆಯಿಂದ ರೂ. 35,000 ಪ್ರಗತಿನಿಧಿ ಪಡೆದುಕೊಂಡು ಸ್ಟೇಷನರಿ ಹಾಗೂ ಬ್ಯೂಟಿಪಾರ್ಲರ್ ಆರಂಭಿಸಿದ್ದಾರೆ. ಇದರೊಂದಿಗೆ ಟೈಲರಿಂಗ್ ವೃತ್ತಿಯನ್ನೂ ಹೊಂದಿದ್ದು, ತರಬೇತಿಯನ್ನೂ ಕೊಡುತ್ತಾರೆ. ಮಾಸಿಕ ಆದಾಯ ಸುಮಾರು ರೂ.8,000 ಬರುತ್ತಿದೆ ಎನ್ನುತ್ತಾರೆ. ಜನರಿಗೆ ಸ್ವ-ಉದ್ಯೋಗದ ಮಾಹಿತಿ ತಲುಪಿದರೆ ಎಲ್ಲರಿಂದಲೂ ಸಾಧನೆ ಸಾಧ್ಯ, ಎಂಬುದು ಅವರ ಅಭಿಪ್ರಾಯ.