ಕೈಬಿಡದ ಅರಿಶಿನ ಕೃಷಿ

Posted on Posted in success story

ಬೇಡಿಕೆಗೆ ತಕ್ಕಂತೆ ಬೆಳೆಯನ್ನು ಬದಲಾಯಿಸಿಕೊಂಡರೆ, ಆಧುನಿಕತೆಯನ್ನು ಅಳವಡಿಸಿಕೊಂಡರೆ
ಮಣ್ಣು ಯಾವತ್ತೂ ರೈತನ ಕೈಬಿಡುವುದಿಲ್ಲ. ಮೈಸೂರು ಜಿಲ್ಲೆಯ ದೊಡ್ಡೇಕೊಪ್ಪಲು ಗ್ರಾಮದ ಜಗದೀಶ್ ಈ ಮಾತಿಗೊಂದು ನಿದರ್ಶನ.

ಜಗದೀಶ್ ಗಿರುವುದು ಎರಡೇ ಎಕರೆ ಜಮೀನು. ಆದರೆ ಅದರಲ್ಲೇ ಅರಿಶಿನ ಕೃಷಿ ಮಾಡಿ ಇಂದು ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸದಸ್ಯರಾಗಿರುವ ಇವರು, ಯೋಜನೆಯ ಸಲಹೆಯಂತೆ ಅರಿಶಿನ ಬೆಳೆದು ಕೆ.ಜಿ ಗೆ ರೂ. 100 ರಂತೆ ಎಕರೆಗೆ ರೂ.2,50,000 ಸಂಪಾದಿಸಿ ಸಮೃದ್ಧ ಜೀವನಕ್ಕೆ ಅಡಿಪಾಯ ಹಾಕಿದ್ದಾರೆ.

ಯೋಜನೆಯ ಪ್ರಗತಿನಿಧಿಯಿಂದ ಈ ಲಾಭ ಗಳಿಸಲು ಸಾಧ್ಯವಾಯಿತು, ಎಂದು ಹೆಮ್ಮೆಯಿಂದ ಹೇಳುವ ಜಗದೀಶ್, ಹಲವು ರೈತರಿಗೆ ಮಾದರಿಯಾಗಬಲ್ಲರು.