ಗುಲಾಬಿ ಕೃಷಿಯಲ್ಲಿ ಮಿಂಚಿದ ಕುಮಾರ

Posted on Posted in success story

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕುಮಾರ ನೆಚ್ಚಿಕೊಂಡಿದ್ದು ಗುಲಾಬಿ ಕೃಷಿಯನ್ನು ಶ್ರೀ ಮಂಜುನಾಥ ಪ್ರಗತಿ ಬಂಧು ಸಂಘ, ಮೂಲೇ ಕಾಳೇನಹಳ್ಳಿಯ ಸದಸ್ಯರೂ ಆಗಿರುವ ಕುಮಾರ್, ಯೋಜನೆಯ ನೆರವನ್ನು ಪಡೆದು ಮಿರಾಬುಲ್ಲಾ ಗುಲಾಬಿ ಕೃಷಿ ಮಾಡಿದರು.

ತಮ್ಮ 30 ಗಂಟೆ ಜಾಗದಲ್ಲಿ ಸುಮಾರು ರೂ.75,000 ಘಟಕ ವೆಚ್ಚದಲ್ಲಿ ಗುಲಾಬಿ ಗಿಡ ನೆಟ್ಟ ಇವರಿಗೆ ರೂ. 10,000 ಪ್ರಗತಿನಿಧಿಯೂ ದೊರೆಯಿತು. “1200 ಗುಲಾಬಿ ಗಿಡಗಳನ್ನು ನಾಟಿಮಾಡಿದ್ದು 9 ತಿಂಗಳ ಅವಧಿಯಲ್ಲಿ ದಿನಕ್ಕೆ 8-10 ಕಿಲೋ ಹೂವು ಸಿಗುತ್ತಿದೆ. ಕನಿಷ್ಠ ರೂ. 100 ನಂತೆ ರೂ.800 ನಿಂದ ರೂ.1000 ಅದಾಯ ದೊರೆಯುತ್ತಿದೆ,” ಎನ್ನುವ ಕುಮಾರ್, ಸಹಾಯವನ್ನು ಸ್ಮರಿಸುತ್ತಾರೆ.