ಬೀಜದುಂಡೆ ತಯಾರಿಸುವ ಕಾರ್ಯಕ್ರಮ
Posted onಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವನಮಹೋತ್ಸವ ಮತ್ತು ಪರಿಸರ ದಿನಾಚರಣೆಯ ಪ್ರಯುಕ್ತ ದಾವಣಗೆರೆಯ ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆಯಲ್ಲಿ ಮೇ 31 ರಂದು ಬೀಜದುಂಡೆ ತಯಾರಿಸುವ ಕಾರ್ಯಕ್ರಮ ಆಯೋಜಿಸಿತ್ತು. ಗ್ರಾಮದ 35 ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ 2058 ಬೀಜದುಂಡೆ ತಯಾರಿಸಿದರು. ಯೋಜನಾಧಿಕಾರಿ ಗಂಗಾಧರ್ ಡಿ. ಗ್ರಾಮಸ್ಥರಿಗೆ ಪರಿಸರ ರಕ್ಷಣೆಯಲ್ಲಿ ಬೀಜದುಂಡೆಯ ಪಾತ್ರದ ಕುರಿತಾಗಿ ತಿಳುವಳಿಕೆ ನೀಡಿದರು.