News

ಸಾಲ ಬಾಕಿ ಮೊತ್ತದ ಚೆಕ್ ವಿತರಣೆ

ಇತ್ತೀಚೆಗೆ ನಿಧನರಾದ ಕಾರ್ಕಳ ನಗರ ವಲಯದ ಪೆರ್ವಾಜೆ ಕಾರ್ಯಕ್ಷೇತ್ರದ ಮಣಿಕಂಠ ಸ್ವ-ಸಹಾಯ ಸಂಘದ ಸದಸ್ಯ ನಾಗರಾಜ್‍ರ ಪತ್ನಿ ರೇಣುಕಾ ಅವರಿಗೆ, ಅವರು ಪಡೆದುಕೊಂಡ ರೂ. 1,25,000 ಸಾಲದಲ್ಲಿ ಬಾಕಿಯಿರುವ ರೂ. 43,633 ಮೊತ್ತದ ಚೆಕ್‍ನ್ನು ಯೋಜನಾಧಿಕಾರಿ ಕೃಷ್ಣ ಟಿ. ಇತ್ತೀಚೆಗೆ ವಿತರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ, ಮೇಲ್ವಿಚಾರಕ ಯಶೋಧ, ಪ್ರಬಂಧಕ ಗೋಪಾಲ್ ಆಚಾರ್ಯ, ಸೇವಾ ಪ್ರತಿನಿಧಿ ಮಮತಾ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿಬಂಧು ಸ್ವ-ಸಹಾಯ ಸಂಘದ ಸದಸ್ಯರು ಪಡಕೊಂಡ ಸಾಲದ ಮರುಪಾವತಿ ಸಂದರ್ಭದಲ್ಲಿ ಸಾಲಗಾರ ಮತ್ತು ವಿನಿಯೋಗದಾರ ಮರಣಹೊಂದಿದ ಸಂದರ್ಭದಲ್ಲಿ ಮರುಪಾವತಿಗೆ ಬಾಕಿ ಇರುವ ಸಾಲ ಮನ್ನಾ ಮಾಡುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, Bajaj Allianz Insurance Company. ಜೊತೆ ಒಪ್ಪಂದ ಮಾಡಿಕೊಂಡಿದೆ.