News

ವಾಹನ ಅಪಘಾತದಲ್ಲಿ ಕಾಲು ಮುರಿದ ಶೀನರಿಗೆ ಸಂಪೂರ್ಣ ಸುರಕ್ಷಾ ವತಿಯಿಂದ ಚೆಕ್‍

ವಾಹನ ಅಪಘಾತದಲ್ಲಿ ಕಾಲು ಮುರಿದುಕೊಂಡು ಒಂದು ವರ್ಷ ನಡೆಯಲಾಗದ ಸ್ಥಿತಿಯಲ್ಲಿರುವ ಕಾರ್ಕಳ ತಾಲೂಕಿನ ಬಜಗೋಳಿ ವಲಯದ ನೆಲ್ಲಿಕಾರು ಕಾರ್ಯಕ್ಷೇತ್ರದ ಶೀನರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ವತಿಯಿಂದ ರೂ.50,000 ಮೊತ್ತದ ಚೆಕ್‍ನ್ನು ವಲಯದ ಮೇಲ್ವಿಚಾರಕಿ ಶ್ರೀಮತಿ ವಾರಿಜ ವಿ.ಶೆಟ್ಟಿಯವರು ಹಸ್ತಾಂತರಿಸಲಾಯಿತು. ಇವರು ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಕಳೆದ 8 ವರ್ಷಗಳಿಂದ ಪಾನಮುಕ್ತರಾಗಿ ಜೀವನ ಮಾಡುತ್ತಿದ್ದರು. ನೆಲ್ಲಿಕಾರು ‘ಬಿ’ ಒಕ್ಕೂಟ ಶೀನರಿಗೆ ರೂ. 8,600 ಮೊತ್ತದ ಸಹಾಯ ನೀಡಿದ್ದು, ಸದಸ್ಯರು ಪಾನಮುಕ್ತರಾದ ನೆಲೆಯಲ್ಲಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ರೂ.10,000 ಅನುದಾನ ನೀಡಿದ್ದಾರೆ. ಈ ಸಂದರ್ಭ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಅನಿಲ್ ರೋಡ್ರಿಗಸ್, ಒಕ್ಕೂಟದ ಉಪಾಧ್ಯಕ್ಷ ಮಾದವ ಆಚಾರ್ಯ, ಸೇವಾಪ್ರತಿನಿಧಿ ಗೀತಾ ಪಿ ಜೈನ್ ಉಪಸ್ಥಿತರಿದ್ದರು.