AgricultureNews

‘ರೈತ ಕೃಷಿಯಿಂದ ವಿಮುಖನಾಗಬಾರದು’

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೊರಬ ಯೋಜನಾ ಕಛೇರಿ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಹಭಾಗಿತ್ವದಲ್ಲಿ ಆನವಟ್ಟಿ ವಲಯದ ನೆಲ್ಲಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ವಿಚಾರ ಸಂಕಿರಣದ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ಮಾತನಾಡಿದ ಯೋಜನೆಯ ಅಧಿಕಾರಿ ಮಹಾಂತೇಶ್, ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಜನಸಾಮಾನ್ಯರಿಗೆ ಅವುಗಳಿಂದಾಗುವ ಲಾಭವನ್ನು ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ವೀರೇಶ್ ಕೊಟಗೇರ್, ರೈತ ಕೃಷಿಯಿಂದ ವಿಮುಖನಾಗದಂತೆ ನೋಡಿಕೊಳ್ಳಲು, ಎಲ್ಲಾ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳು ಕೃಷಿಕರಿಗೆ ಉತ್ತೇಜನ ನೀಡಬೇಕು. ರೈತರು ವಾತಾವರಣಕ್ಕೆ, ತಮ್ಮ ಭೂಮಿಗೆ ಹೊಂದುವ ಕೃಷಿಯನ್ನು ಆಯ್ಕೆ ಮಾಡಿಕೊಂಡು, ಮಾರುಕಟ್ಟೆಯನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಎದೆಗುಂದದೆ ಮುಂದುವರಿಯಬೇಕು, ಎಂದರು.

ತರಕಾರಿ ಕೃಷಿಯ ಬಗ್ಗೆ ಮಾತನಾಡಿದ ತೋಟಗಾರಿಕಾ ಅಧಿಕಾರಿ ದೊರೆರಾಜ್, ಬೀಜದ ಆಯ್ಕೆ, ಮಡಿ ತಯಾರಿ, ನೀರಿನ ನಿರ್ವಹಣೆ, ಕೀಟ ಮತ್ತು ರೋಗಗಳೂ ಸೇರಿದಂತೆ ಕೃಷಿ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ದೇವರಾಜ್, ರೈತರಲ್ಲಿ ಸಂಘಟನೆ ಅನಿವಾರ್ಯ ಎಂದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಘುನಾಥ್, ಸದಸ್ಯೆ ಪಾರ್ವತಮ್ಮ, ಪ್ರಗತಿಪರ ಕೃಷಿಕರಾದ ದೊಡ್ಡ ಪುಟ್ಟಪ್ಪ, ಪ್ರಭಾಕರ್, ಮೀನಾಕ್ಷಮ್ಮ ಮೊದಲಾದವರು ಉಪಸ್ಥಿತರಿದ್ದರು.