ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ತರಬೇತಿ
Posted onರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ತರಬೇತಿಯ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾನವಿ ತಾಲೂಕಿನ ಆಯ್ದ ಪ್ರಗತಿಬಂಧು ಸಂಘಗಳ ರೈತರಿಗೆ, JLG ಸದಸ್ಯರಿಗೆ ದೇಶೀ ಧಾನ್ಯಗಳಾದ ತೊಗರಿಬೀಜ, ಶೇಂಗ ಹಾಗೂ ಸಾವಯವ ಗೊಬ್ಬರವನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞೆ ಶ್ವೇತಾ, ಇಲಾಖೆಯ ಅಧಿಕಾರಿ ಗೀತಾಂಜಲಿ, ಮಾನವಿ ತಾಲೂಕಿನ ಯೋಜನಾಧಿಕಾರಿ ಕೆ. ವಿನಾಯಕ ಪೈ ಉಪಸ್ಥಿತರಿದ್ದರು.