success storyWomen Empowerment

ಜ್ಞಾನವಿಕಾಸದ ಪ್ರೋತ್ಸಾಹ- ಕೃಷಿಗೆ ಬಲ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಾವತ್ತೂ ಜನರನ್ನು ಅವಲಂಭಿತರನ್ನಾಗಿ ಮಾಡುವುದಿಲ್ಲ. ಬದಲಾಗಿ ದುಡಿಯುವ ಮನಸ್ಸಿರುವವರಿಗೆ ಆರ್ಥಿಕ ನೆರವು ಮತ್ತು ತರಬೇತಿ ನೀಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಮಾನಸಿಕ ಸ್ಥೈರ್ಯ ತುಂಬುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ. ಇಂತಹ ಅನುಕೂಲಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಮುಂದೆ ಬಂದವರು ಹಲವರು…

ಬೇಬಿಯವರು ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ವಲಯದ ಗಣಗೂರಿ’ನ ಗೋಣಿಮಾರೂರು ಕಾರ್ಯಕ್ಷೇತ್ರದವರು. ‘ಅನ್ನಪೂರ್ಣೇಶ್ವರಿ’ ಸ್ವ-ಸಹಾಯ ಸಂಘ ಸೇರಿಕೊಂಡ ಇವರು, ‘ಜೀವನಜ್ಯೋತಿ’ ಜ್ಞಾನವಿಕಾಸ ಕೇಂದ್ರದ ಸದಸ್ಯರಾಗಿ ಯೋಜನೆಯ ಮೂಲಕ ಕೃಷಿ ಅಭಿವೃದ್ಧಿ ಮತ್ತು ಸೊಪ್ಪು ತರಕಾರಿ ಬೆಳೆಗೆ ಕೃಷಿಗಾಗಿ ಹಂತ ಹಂತವಾಗಿ ಪ್ರಗತಿನಿಧಿ ಪಡೆದುಕೊಂಡರು.

ತಮ್ಮ 3 ಎಕ್ರೆ ಜಮೀನಿನಲ್ಲಿ, 1 ಎಕ್ರೆಯಲ್ಲಿ ಕಾಫಿ, ಶುಂಠಿ, ಗೆಣಸು, ತರಕಾರಿ ಬೆಳೆಯಲು ಪ್ರಗತಿನಿಧಿಯನ್ನು ಬಳಸಿಕೊಂಡಿದ್ದಾರೆ. ಇನ್ನು 2 ಎಕ್ರೆ ಜಮೀನಿನಲ್ಲಿ ಕಾಫಿ, ಬಾಳೆಗಿಡ, ಕಾಳುಮೆಣಸು ಬೆಳೆಯುತ್ತಿದ್ದಾರೆ. ಬೇಬಿಯವರು ಯೋಜನೆಯ ಪ್ರಗತಿನಿಧಿಯಿಂದ ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದು, ಮುಂದಿನ ಯೋಜನೆಗಳಾದ ಹೆಚ್ಚಿನ ಕೃಷಿ ಅಭಿವೃದ್ಧಿ ಮತ್ತು ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿದ್ದಾರೆ.

ಪದ್ಮಾರಿಗೂ ಒಲಿದ ಯಶಸ್ಸು

ಪದ್ಮಾ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ವಲಯದ ಗಣಗೂರಿನ ಗೋಣಿಮಾರೂರು ಕಾರ್ಯಕ್ಷೇತ್ರದ ಸಮೃದ್ಧಿ ಸ್ವ-ಸಹಾಯ ಸಂಘದ ಸದಸ್ಯೆ ಪದ್ಮಾ, ‘ಜೀವನಜ್ಯೋತಿ’ ಜ್ಞಾನವಿಕಾಸ ಕೇಂದ್ರದ ಮೂಲಕ ಕೃಷಿ ನಡೆಸಲು ಪ್ರೇರಣೆ ಪಡೆದರು. ಯೋಜನೆಯ ಮೂಲಕ ಪ್ರಗತಿನಿಧಿ ಪಡೆದುಕೊಂಡು ಕಾಫಿ ಅಭಿವೃದ್ಧಿ, ತರಕಾರಿ ಬೆಳೆ ಬೆಳೆದಿದ್ದಾರೆ.

ತನ್ನ 4 ಎಕರೆ ಜಮೀನಿನಲ್ಲ್ಲಿ, 2 ಎಕ್ರೆ ಶುಂಠಿ, ಗೆಣಸು, ಮೆಣಸಿನಕಾಯಿ, ಗೆಡ್ಡೆ ಕೃಷಿ ಬೆಳೆಯಲು ಹಂತಹಂತವಾಗಿ 2 ಲಕ್ಷದವರೆಗೆ ಪ್ರಗತಿನಿಧಿ ಪಡೆದಿದ್ದಾರೆ. ಇನ್ನು 2 ಎಕರೆ ಜಮೀನಿನಲ್ಲಿ ಕಾಫಿ, ಕಾಳುಮೆಣಸು, ಸಿಲ್ವರ್ ಗಿಡಗಳನ್ನು ನಾಟಿ ಮಾಡಿದ್ದಾರೆ. ಅಲ್ಲದೆ ಗೊಬ್ಬರ ವ್ಯಾಪಾರ, ಜೆರಾಕ್ಸ್ ಅಂಗಡಿಗೆ ಪ್ರಗತಿನಿಧಿ ಸಾಲ ಪಡೆದು ವ್ಯಾಪಾರ ನಡೆಸಿ ಉತ್ತಮ ಆದಾಯ ಗಳಿಸುತ್ತಾರೆ. ಕೃಷಿ ಅಭಿವೃದ್ಧಿ, ವ್ಯಾಪಾರ ಇವರ ಮುಂದಿನ ಯೋಜನೆಯಾಗಿರುತ್ತದೆ.